/newsfirstlive-kannada/media/post_attachments/wp-content/uploads/2024/11/bbk.jpg)
ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್ ಸೀಸನ್​ 11 ಐದನೇ ವಾರಕ್ಕೆ ಕಾಲಿಟ್ಟಿದೆ. ಇದೀಗ ಬಿಗ್​ಬಾಸ್​ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಮನೆಯಲ್ಲಿರೋ ಸ್ಪರ್ಧಿಗಳಿಗೆ ಅತಿ ದೊಡ್ಡ 6 ಆಫರ್​ ನೀಡಿದ್ದಾರೆ.
/newsfirstlive-kannada/media/post_attachments/wp-content/uploads/2024/11/bbk117.jpg)
ಹೌದು, 13 ಮಂದಿ ಇರುವ ಬಿಗ್​ಬಾಸ್​ ಸೀಸನ್​ 11ರಲ್ಲಿ ಇದೇ ಮೊದಲ ಬಾರಿಗೆ ಇಂತಹದೊಂದು ಆಫರ್ ನೀಡಲಾಗಿದೆ. ಬಿಗ್​ಬಾಸ್​ ಕೊಟ್ಟ ಟಾಸ್ಕ್​ನಲ್ಲಿ ಯಾವ ಟೀಮ್​ ಗೆಲ್ಲುತ್ತದೆಯೋ ಅವರು ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ. ಹೀಗಾಗಿ ನಾಲ್ಕು ತಂಡವನ್ನು ರಚಿಸಿದ ಬಿಗ್​ಬಾಸ್​ ಈ ಟಾಸ್ಕ್​ಗಳನ್ನು ನೋಡಿದ್ದಾರೆ. ಟಾಸ್ಕ್​ ಗೆದ್ದ ತಂಡಕ್ಕೆ ಬಿಗ್​ಬಾಸ್​ ಮನೆಯಲ್ಲಿರೋ ಅಧಿಕಾರವನ್ನು ಏಕಾಕಾಲದಲ್ಲಿ ಪಡೆಯಲು, ಅನುಭವಿಸಲು ಹಾಗೂ ಈ ಮನೆಯ ಮೇಲಿನ ಅಧಿಕಾರವನ್ನು ಸಾಧಿಸಲು ಒಂದೇ ವಾರದಲ್ಲಿ ಅನುಭವಿಸಬಹುದಾಗಿದೆ.
/newsfirstlive-kannada/media/post_attachments/wp-content/uploads/2024/11/bbk118.jpg)
ಟಾಸ್ಕ್​ ಗೆದ್ದ ತಂಡಕ್ಕೆ ಬಿಗ್​ಬಾಸ್​ ಕೊಟ್ಟ ಆಫರ್​ ಏನು?
1. ಇಮ್ಯೂನಿಟಿ ಕಾರ್ಡ್​: ಈ ವಾರದ ನಾಮಿನೇಷನ್​ನಿಂದ ಇಮ್ಯೂನಿಟಿ.
2. ಕ್ಯಾಪ್ಟನ್ಸಿ ಕಂಟೆಂಡರ್ ಕಾರ್ಡ್: ಗೆದ್ದವರಿಗೆ ಕ್ಯಾಪ್ಟನ್ಸಿ ಓಟಕ್ಕೆ ನೇರ ಪ್ರವೇಶ.
3. ಲಕ್ಷುರಿ ಕಾರ್ಡ್​: ಗೆದ್ದವರಿಗೆ ಬಾಯಿ ಚಪ್ಪರಿಸುವ ಆನಂದ.
4. ಗುಡ್​ನೈಟ್​ ಕಾರ್ಡ್​: ಗೆದ್ದವರಿಗೆ ಈ ಮನೆಯಲ್ಲಿನ ನಿದ್ದೆ ಹಾಗೂ ಮಂಚಗಳ ಮೇಲಿನ ಅಧಿಕಾರದ ಸುಖ.
5. ಕಿಕ್​ ಔಟ್​ ಕಾರ್ಡ್​: ಗೆದ್ದವರಿಗೆ ಮುಂದಿನ ಟಾಸ್ಕ್​ನಿಂದ ಒಂದು ತಂಡವನ್ನು ಹೊರಗೆ ಇಡುವ ಅಧಿಕಾರ.
6. ಪನಿಶ್ಮೆಂಟ್ ಕಾರ್ಡ್​: ಗೆದ್ದವರಿಗೆ ಮನೆ ಕೆಲಸದಿಂದ ಸಂಪೂರ್ಣ ಮುಕ್ತಿ. ಸೋತವರಿಗೆ ಹೆಚ್ಚುವ ಮನೆಕೆಲಸ ಹಾಗೂ ಒಂದು ತಂಡಕ್ಕೆ ಗೆದ್ದ ತಂಡದಿಂದ ಸೇವಾ ಭಾಗ್ಯಾ.
/newsfirstlive-kannada/media/post_attachments/wp-content/uploads/2024/11/bbk115.jpg)
ಪ್ರತಿ ತಂಡ ತಮ್ಮ ಎದುರಾಳಿ ತಂಡಗಳ ವಿರುದ್ಧ ಮುನ್ನಡೆ ಸಾಧಸುವುದು ತುಂಬಾ ಮುಖ್ಯ ಅಂತ ಬಿಗ್​ಬಾಸ್​ ಅನೌನ್ಸ್​ ಮಾಡಿದ್ದಾರೆ. ಇನ್ನೂ ಬಿಗ್​ಬಾಸ್​ ಕೊಟ್ಟ ತವರಿನ ಸಿರಿ ಟಾಸ್ಕ್​ನಲ್ಲಿ ಗೌತಮಿ ಅವರ ಟೀಮ್​ ಗೆದ್ದಿದೆ. ಹೀಗಾಗಿ ಅವರು ಇಮ್ಯೂನಿಟಿ ಕಾರ್ಡ್ ಆನ್ನು ಆಯ್ಕೆ ಮಾಡಿ ಅನುಷಾ ಅವರನ್ನು ನಾಮಿನೇಷ್​ನಿಂದ ಸೇಫ್ ಮಾಡಿದ್ದಾರೆ. ಅಲ್ಲದೇ ಮನೆಯ ಕ್ಯಾಪ್ಟನ್​ ಹನುಮಂತ ಅವರ ಆಯ್ಕೆ ಅನುಸಾರ ಧನರಾಜ್​, ಗೋಲ್ಡ್​ ಸುರೇಶ್​ ಹಾಗೂ ಮೋಕ್ಷಿತಾ ಪೈ ಈ ವಾರ ಮನೆಯಿಂದ ಆಚೆ ಹೋಗಲು ನೇರವಾಗಿ ನಾಮಿನೇಟ್​ ಆಗಿದ್ದಾರೆ. ಮುಂದಿನ ಸಂಚಿಕೆಯಲ್ಲಿ ಯಾರ ತಂಡ ಯಾವ ಅಧಿಕಾರವನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ ಅಂತ ಕಾದು ನೋಡಬೇಕಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us