/newsfirstlive-kannada/media/post_attachments/wp-content/uploads/2024/09/CURRENT-METER.jpg)
ನಿಮ್ಮ ಅನುಭವಕ್ಕೆ ಯಾವತ್ತಾದ್ರೂ ನಿಮ್ಮ ಮನೆಯ ವಿದ್ಯುತ್ ಬಿಲ್ ಬೇರೆಯವರು ಕಟ್ಟಿದ್ದರ ಬಗ್ಗೆ ಬಂದಿದೆಯಾ. ಇಲ್ಲ ಅಲ್ವಾ, ಪ್ರತಿಬಾರಿ ಒಂದೇ ಒಂದು ಯುನಿಟ್ ಹೆಚ್ಚಿನ ಕರೆಂಟ್ ಬಿಲ್ ಬಂದರೂ ಸಂಬಂಧಪಟ್ಟ ಇಲಾಖೆಗೆ ತೆರಳಿ ಏನಾಯ್ತು, ಯಾಕೆ ಹೀಗಾಯ್ತು ಅಂತ ನೂರೆಂಟು ಪ್ರಶ್ನೆಗಳನ್ನು ಮಾಡುತ್ತಿರಾ ಅಲ್ವಾ. ಆದ್ರೆ ಅಮೆರಿಕಾದಲ್ಲೊಬ್ಬ ವ್ಕಕ್ತಿ ಅವರಿಗೆ ಗೊತ್ತಿಲ್ಲದಂತೆ ಸುಮಾರು 18 ವರ್ಷಗಳ ಕಾಲ ನೆರೆಮನೆರಯವ ವಿದ್ಯುತ್ ಬಿಲ್ ಕಟ್ಟಿದ್ದಾರೆ. 2009ರಿಂದಲೂ ವಿದ್ಯುತ್ ಬಿಲ್ ಕಟ್ಟುತ್ತಾ ಬಂದ ವ್ಯಕ್ತಿಗೆ ಇತ್ತೀಚೆಗೆ ತಾನು ಇಷ್ಟು ವರ್ಷ ಕಟ್ಟಿದ್ದು ಬೇರೆಯವರ ಮನೆಯ ವಿದ್ಯುತ್ ಬಿಲ್ ಎಂಬುದು ಗೊತ್ತಾಗಿದೆ.
ಇದನ್ನೂ ಓದಿ:ಪಾಕಿಸ್ತಾನವನ್ನು ಸೋಲಿಸಿದ ತಂಡವನ್ನು ಹೊಗಳಿದ ಮೋದಿ.. ಅಮೆರಿಕದಲ್ಲಿ ಪ್ರಧಾನಿ ಕ್ರಿಕೆಟ್ ಬಗ್ಗೆ ಮಾತು
ವೆಕಾವಿಲ್ಲೆ ಪಟ್ಟಣದ ಕೆನ್ ವಿಲ್ಸನ್ ಅನ್ನುವ ವ್ಯಕ್ತಿ ಪೆಸಿಫಿಕ್ ಗ್ಯಾಸ್ ಆ್ಯಂಡ್ ಎಲೆಕ್ಟ್ರಿಕ್ ಕಂಪನಿಯಿಂದ ವಿದ್ಯುತ್ ಸೇವೆಯನ್ನು ಪಡೆದಿದ್ದರು. ಈ ಕಂಪನಿ ಇತ್ತೀಚೆಗೆ ನಿಮ್ಮ ಮನೆಯ ವಿದ್ಯುತ್ ಬಿಲ್ನ ಬಾಕಿ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ ಎಂದು ನೋಟಿಸ್ ನೀಡಿದ್ದರು. ಇದರಿಂದ ಗೊಂದಲಕ್ಕೆ ಬಿದ್ದಿದ್ದರು ಕೆನ್ ವಿಲ್ಸನ್ ಪ್ರತಿ ತಿಂಗಳು ನಾನು ವಿದ್ಯುತ್ ಬಿಲ್ನ್ನು ಸರಿಯಾಗಿ ಕಟ್ಟುತ್ತಿದ್ದೇನಲ್ಲ ಎಂದುಕೊಂಡಿದ್ದ ಕೆನ್ ವಿಲ್ಸನ್, ಕೊನೆಗೆ ಏನಾಗುತ್ತಿದೆ ಎಂದು ಪತ್ತೆ ಹಚ್ಚಲು ಸಜ್ಜಾದರು.
ಇವರು ವಿದ್ಯುತ್ ಬಳಕೆಯ ಪ್ರಮಾಣವನ್ನು ಪತ್ತೆ ಹಚ್ಚು ಸಾಧನವನ್ನು ತೆಗೆದುಕೊಂಡು ಬಂದು ಮೀಟರ್ಗೆ ಅದನ್ನು ಅಳವಡಿಸಿ ನೋಡಿದಾಗ ಕಂಪನಿಯವರು ಹೇಳಿದ ಮಾತೆ ಸತ್ಯವಾಗಿತ್ತು. ಕೊನೆಗೆ ವಿದ್ಯುತ್ ಸೇವೆ ನೀಡುತ್ತಿದ್ದ ಕಂಪನಿಯನ್ನು ಸಂಪರ್ಕಿಸಿ ಸರಿಯಾಗಿ ಪರೀಕ್ಷೆ ಮಾಡುವಂತೆ ಕೋರಿಕೊಂಡಿದ್ದಾರೆ.
ಇದನ್ನೂ ಓದಿ: ಲೆಬನಾನ್ ಪೇಜರ್ ಬ್ಲಾಸ್ಟ್‌ಗೂ ಕೇರಳ ಲಿಂಕ್.. ಭಾರತ ಮೂಲದ ಟೆಕ್ಕಿಗೆ ಈಗ ಅಪಾಯ! ಯಾರಿವರು?
ಕಂಪನಿಯವರು ಬಂದು ಎಲ್ಲವನ್ನೂ ಪರಿಶೀಲಿಸಿ ನೋಡಿದಾಗ ಬೆಚ್ಚಿ ಬೀಳವು ಸಂಗತಿಯೊಂದು ಗೊತ್ತಾಗಿದೆ. ಕಳೆದ 18 ವರ್ಷಗಳಿಂದ ಅಂದ್ರೆ 2009ನೇ ಇಸ್ವಿಯಿಂದ ಕೆನ್ ವಿಲ್ಸನ್ ತನ್ನ ಪಕ್ಕದ ಅಪಾರ್ಟ್ಮೆಂಟ್ ಮನೆಯ ವಿದ್ಯುತ್ ಬಿಲ್ನ್ನು ಕಟ್ಟುತ್ತಲೇ ಬಂದಿದ್ದಾರೆ. ಕಂಪನಿಯವರು ಹೇಳುವ ಪ್ರಕಾರ ಕೆನ್ ವಿಲ್ಸನ್ ಅವರ ಮೀಟರ್ ನಂಬರ್ ಬದಲು ಪಕ್ಕದ ಮೀಟರ್ ನಂಬರ್ ಬಿಲ್ ಅವರಿಗೆ ಬರುತ್ತಿತಂತೆ ಕೆಲವು ವರ್ಷಗಳ ಹಿಂದಷ್ಟೇ ಅವರು ಬೇರೆ ಅಪಾರ್ಟ್ಮೆಂಟ್ಗೆ ಶಿಫ್ಟ್ ಆಗಿದ್ದರು. ಕಂಪನಿ ಕೊಟ್ಟ ಬಿಲ್ನ್ನೇ ಕೆನ್ ವಿಲ್ಸನ್ ತುಂಬುತ್ತಲೇ ಬಂದಿದ್ದಾರೆ. ಆದ್ರೆ ಇತ್ತ ಕಡೆ ಅವರ ಮನೆಯ ಕರೆಂಟ್ ಬಿಲ್ ಏರುತ್ತಲೇ ಹೋಗಿದೆ. ಇದೆಲ್ಲವನ್ನು ಗಣನೆಗೆ ತೆಗೆದುಕೊಂಡಿರುವ ಪಿಜಿ ಅಂಡ್ ಇ ಕಂಪನಿ ಸಮಸ್ಯೆಯನ್ನು ಬಗೆಹರಿಸುವುದಾಗಿ ಕೆನ್ ವಿಲ್ಸನ್ಗೆ ಭರವಸೆ ನೀಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ