ಮಧ್ಯರಸ್ತೆಯಲ್ಲಿ ಮೈಮರೆತ ಯುವಕ, ಯುವತಿಯರ ವಿಡಿಯೋ ವೈರಲ್!
ಸ್ಕೂಟರ್ ಮೇಲೆ ಸ್ಟಂಟ್ ಮಾಡಲು ಹೋಗಿ ಮಕಾಡೆಯಾಗಿ ಬಿದ್ದ ಹುಡುಗಿ
ಸಾರ್ವಜನಿಕ ಸ್ಥಳದಲ್ಲಿ ಅಸಭ್ಯವಾಗಿ ವರ್ತಿಸಿದ್ದಕ್ಕೆ 30,000 ರೂಪಾಯಿ ದಂಡ
ನೋಯ್ಡಾ: ಹೋಳಿ ಹಬ್ಬದ ಸಂಭ್ರಮದಲ್ಲಿ ಯುವಕ, ಯುವತಿಯರು ಮೈ ಮರೆತು ಹುಚ್ಚಾಟ ಮೆರೆದಿರೋ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ನಡುರೋಡಲ್ಲಿ ರೀಲ್ಸ್ ಮಾಡಲು ಇಬ್ಬರು ಯುವತಿಯರು ಅಸಭ್ಯವಾಗಿ ವರ್ತಿಸಿದ್ದು, ಸೋಷಿಯಲ್ ಮೀಡಿಯಾದಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ.
ಇತ್ತೀಚೆಗೆ ಯುವಕರ ರೀಲ್ಸ್ ಮಾಡೋ ಹುಚ್ಚಾಟಕ್ಕೆ ಕೊನೆಯೇ ಇಲ್ಲದಾಗಿದೆ. ಹೋಳಿ ಹಬ್ಬದ ಸಂದರ್ಭದಲ್ಲಿ ಸ್ಕೂಟರ್ ಮೇಲೆ ಸ್ಟಂಟ್ ಮಾಡಲು ಹೋಗಿ ಯುವತಿಯರು ಯಡವಟ್ಟು ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಕುಡಿದು ಶಾಲೆಗೆ ಬರ್ತಿದ್ದ ಶಿಕ್ಷಕನಿಗೆ ಚಪ್ಪಲಿ ಎಸೆದು ಪಾಠ ಕಲಿಸಿದ ಮಕ್ಕಳು; ವಿಡಿಯೋ ವೈರಲ್!
ನೋಯ್ಡಾದಲ್ಲಿ ಈ ಘಟನೆ ನಡೆದಿದ್ದು, ಹುಡುಗ ಸ್ಕೂಟರ್ ಓಡಿಸುತ್ತಾ ಇದ್ರೆ ರೀಲ್ಸ್ಗಾಗಿ ಹಿಂದೆ ಕೂತಿದ್ದ ಯುವತಿಯರು ಬಣ್ಣದ ಜೊತೆ ಪೋಲಿಯಾಟ ಆಡಿದ್ದಾರೆ. ಇದೇ ಹುಡುಗ ಸ್ಕೂಟರ್ ಓಡಿಸುತ್ತಿದ್ರೆ, ಹುಡುಗಿ ಹಿಂಬದಿ ನಿಂತು ಡ್ಯಾನ್ಸ್ ಮಾಡಲು ಮುಂದಾಗುತ್ತಾಳೆ. ಸ್ವಲ್ಪ ಮುಂದೆ ಸಾಗುತ್ತಿದ್ದಂತೆ ಹುಡುಗ ಬ್ರೇಕ್ ಹಿಡಿದಿದ್ದಾನೆ. ತಕ್ಷಣವೇ ರಸ್ತೆಯಲ್ಲಿ ಹುಡುಗಿ ಮಕಾಡೆ ಬಿದ್ದು ಎದ್ದಿದ್ದಾಳೆ.
So the serial offenders have been finally fined Rs 33,000 by Noida police, after this video went viral
This shit is not even hot https://t.co/VOhTz3IDSC pic.twitter.com/w9LBzoya2u
— Nabila Jamal (@nabilajamal_) March 25, 2024
ಬರೋಬ್ಬರಿ 30,000 ರೂ. ದಂಡ
ಸೋಷಿಯಲ್ ಮೀಡಿಯಾದಲ್ಲಿ ಈ ಹುಡುಗಿಯ ಹುಚ್ಚಾಟಕ್ಕೆ ಭಾರೀ ಟೀಕೆಗಳು ವ್ಯಕ್ತವಾಗಿದೆ. ಈ ವಿಡಿಯೋ ಗಮನಿಸಿರುವ ಉತ್ತರ ಪ್ರದೇಶ ನೋಯ್ಡಾ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಅಸಭ್ಯವಾಗಿ ವರ್ತಿಸಿದ್ದಕ್ಕೆ 30,000 ರೂಪಾಯಿ ದಂಡ ಹಾಕಲು ಮುಂದಾಗಿದ್ದಾರೆ. ರೀಲ್ಸ್ ಮಾಡೋ ಹುಚ್ಚಾಟದಲ್ಲಿ ಬೈಕ್ ಸವಾರ ಹೆಲ್ಮೆಟ್ ಧರಿಸಿಲ್ಲ. ಇದರ ಜೊತೆಗೆ ಅಸುರಕ್ಷಿತ ಪ್ರಯಾಣ ಮತ್ತು ಸಾರ್ವಜನಿಕ ಪ್ರದೇಶದಲ್ಲಿ ಅಸಭ್ಯವಾಗಿ ವರ್ತಿಸಿದ್ದಕ್ಕೆ ಕಾನೂನು ಕ್ರಮ ಜರುಗಿಸಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ