newsfirstkannada.com

ಅಯೋಧ್ಯೆಗೆ ಉತ್ತರ ಪ್ರದೇಶ ಬಜೆಟ್‌ನಲ್ಲಿ ಭಾರಿ ಮೊತ್ತದ ಅನುದಾನ ಹಂಚಿಕೆ; ಎಷ್ಟು ಕೋಟಿ?

Share :

Published February 5, 2024 at 1:00pm

    ಅಯೋಧ್ಯೆಯ ಸರ್ವಾಂಗೀಣ ಅಭಿವೃದ್ದಿಗಾಗಿ 100 ಕೋಟಿ ರೂಪಾಯಿ

    ಮಹರ್ಷಿ ವಾಲ್ಮೀಕಿ ಏರ್‌ಪೋರ್ಟ್ ಅಭಿವೃದ್ದಿಗಾಗಿ 150 ಕೋಟಿ ಹಂಚಿಕೆ

    ಅಯೋಧ್ಯೆಗೆ ಆಗಮಿಸೋ ಭಕ್ತರಿಗಾಗಿ ಹಲವು ಯೋಜನೆಗಳು ಘೋಷಣೆ

ಲಕ್ನೋ: ಉತ್ತರ ಪ್ರದೇಶದ ಬಜೆಟ್‌ನಲ್ಲಿ ಈ ಬಾರಿ ರಾಮಜನ್ಮಭೂಮಿ ಅಯೋಧ್ಯೆ ಅಭಿವೃದ್ಧಿಗೆ ಭಾರಿ ಮೊತ್ತ ಅನುದಾನ ಹಂಚಿಕೆ ಮಾಡಲಾಗಿದೆ. ಉತ್ತರ ಪ್ರದೇಶದ ವಿಧಾನಸಭೆಯಲ್ಲಿ ಹಣಕಾಸು ಸಚಿವ ಸುರೇಶ್ ಖನ್ನಾ ಅವರು ಬಜೆಟ್ ಮಂಡಿಸಿದರು.

ಪ್ರಮುಖವಾಗಿ ಅಯೋಧ್ಯೆಯ ಸರ್ವಾಂಗೀಣ ಅಭಿವೃದ್ದಿಗಾಗಿ 100 ಕೋಟಿ ರೂಪಾಯಿ ಹಣವನ್ನು ಬಜೆಟ್‌ನಲ್ಲಿ ಹಂಚಿಕೆ ಮಾಡಲಾಗಿದೆ. ಅಯೋಧ್ಯೆ ಏರ್‌ಪೋರ್ಟ್ ಅಭಿವೃದ್ದಿಗಾಗಿ 150 ಕೋಟಿ ರೂಪಾಯಿ, ಪ್ರಯಾಗರಾಜ್ ಮಹಾಕುಂಭ ಮೇಳಕ್ಕಾಗಿ 2,500 ಕೋಟಿ ರೂಪಾಯಿ, ಉತ್ತರ ಪ್ರದೇಶದಲ್ಲಿ ಧರ್ಮಾರ್ಥ ಮಾರ್ಗಗಳ ಅಭಿವೃದ್ದಿಗಾಗಿ 1,750 ಕೋಟಿ ರೂ ಅನುದಾನವನ್ನು ಹಂಚಿಕೆ ಮಾಡಲಾಗಿದೆ.

ಇದನ್ನೂ ಓದಿ: 11 ದಿನಕ್ಕೆ 25 ಲಕ್ಷ ಭಕ್ತರು ಅಯೋಧ್ಯೆಗೆ ಭೇಟಿ; ಹುಂಡಿಯಲ್ಲಿ ಸಂಗ್ರಹವಾದ ಹಣ ಎಷ್ಟು ಕೋಟಿ?

ಇನ್ನು ಕಾಶಿ ವಿಶ್ವನಾಥ್ ಕಾರಿಡಾರ್ ನಿರ್ಮಾಣದ ಬಳಿಕ ಭಕ್ತಾದಿಗಳ ಭೇಟಿ 5 ಪಟ್ಟು ಹೆಚ್ಚಾಗಿದೆ. ಅಯೋಧ್ಯೆಯಲ್ಲಿ ಭಕ್ತಾದಿಗಳ ದಟ್ಟಣೆ ಹೆಚ್ಚಾಗಿರುವುದರಿಂದ ಮೂರು ಪಥಗಳ ವಿಸ್ತರಣೆ ಮಾಡಲು ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರ ತೀರ್ಮಾನಿಸಿದೆ. ಬಜೆಟ್‌ನಲ್ಲಿ ಅಯೋಧ್ಯೆಯ ಭಕ್ತಿ ಪಥ, ಧರ್ಮ ಪಥ, ರಾಮಜನ್ಮಭೂಮಿ ಪಥದ ವಿಸ್ತರಣೆಯ ಬಗ್ಗೆಯೂ ಘೋಷಣೆ ಮಾಡಲಾಗಿದೆ. ಈ ಮೂಲಕ ಉತ್ತರ ಪ್ರದೇಶದ ಈ ಬಾರಿಯ ಬಜೆಟ್‌ನಲ್ಲಿ ಅಯೋಧ್ಯೆಯ ಅಭಿವೃದ್ಧಿ ಯೋಜನೆಗಳಿಗೆ ಸಾವಿರಾರು ಕೋಟಿ ರೂಪಾಯಿ ಘೋಷಣೆಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಯೋಧ್ಯೆಗೆ ಉತ್ತರ ಪ್ರದೇಶ ಬಜೆಟ್‌ನಲ್ಲಿ ಭಾರಿ ಮೊತ್ತದ ಅನುದಾನ ಹಂಚಿಕೆ; ಎಷ್ಟು ಕೋಟಿ?

https://newsfirstlive.com/wp-content/uploads/2024/02/Ayodhya-UP-Budget.jpg

Load More