/newsfirstlive-kannada/media/post_attachments/wp-content/uploads/2024/09/Munnawar.jpg)
ಬಿಗ್​ ಬಾಸ್ 17ರ​ ವಿನ್ನರ್​, ಹಾಸ್ಯ ನಟ ಮುನಾವರ್​ ಫಾರೂಕಿಗೆ ಜೀವ ಬೆದರಿಕೆ ಬಂದಿದೆ. ಹೀಗಾಗಿ ಅವರ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ತಿಳಿದುಬಂದಿದೆ.
ಮುನಾವರ್ ಫಾರೂಕಿ​​ ಯೂಟ್ಯೂಬರ್​ ಎಲ್ವಿಶ್​​​ ಯಾದವ್​ ಅವರೊಂದಿಗೆ ದೆಹಲಿಯ ಹೋಟೆಲ್​​ ಸೂರ್ಯದಲ್ಲಿ ತಂಗಿದ್ದರು. ಅದೇ ಹೋಟೆಲ್​​ನಲ್ಲಿ ಶೂಟರ್​​ಗಳು ಇದ್ದರು ಎಂದು ತಿಳಿದುಬಂದಿದೆ. ಮುನಾವರ್​ ಫಾರೂಕಿ ಮತ್ತು ಎಲ್ವಿಶ್​​ ಯಾದವ್​ ದೆಹಲಿಯ ಐಹಿಐ ಸ್ಟೇಡಿಯಂಗೆ ಬಂದಿದ್ದರು. ಸೌಹಾರ್ದ ಪಂದ್ಯ ಆಡಲು ಸೇರಿದ್ದರು. ಈ ವೇಳೆ ಸ್ಟಾಂಡ್​ ಅಪ್​ ಕಾಮಿಡಿಯನ್​ಗೆ ಬೆದರಿಕೆ ಬಂದಿದೆ.
/newsfirstlive-kannada/media/post_attachments/wp-content/uploads/2024/09/Bigg-boss-1-1.jpg)
ಇದನ್ನೂ ಓದಿ: ಭಾರತದ ಶ್ರೀಮಂತ ಬಾಲನಟಿ.. ಈಕೆಯ ಬಳಿ ಇದೆ ದುಬಾರಿ ಆಸ್ತಿ, 40 ಲಕ್ಷದ ಐಷಾರಾಮಿ ಕಾರು
ಮುನಾವರ್​​ ಫಾರೂಕಿಗೆ ಬೆದರಿಕೆ ಬಂದ ತಕ್ಷಣವೇ ದೆಹಲಿ ಪೊಲೀಸರು ಕಾರ್ಯಪ್ರವರ್ತರಾಗಿದ್ದಾರೆ. ಕೂಡಲೇ ಐಜಿಐ ಸ್ಟೇಡಿಯಂಗೆ ತಲುಪಿದ್ದಾರೆ. ಬೆದರಿಕೆ ಕರೆಯಿಂದಾಗಿ ಸ್ವಲ್ಪ ಸಮಯದವರೆಗೆ ಪಂದ್ಯವನ್ನು ನಿಲ್ಲಿಸಲಾಗಿದೆ. ಮುನಾವರ್​ಗೆ ಸಂಪೂರ್ಣ ಭದ್ರತೆ ನೀಡಿದ ಬಳಿಕ ಅವರನ್ನು ಮುಂಬೈಗೆ ವಾಪಾಸ್​ ಕಳುಹಿಸಲಾಗಿದೆ.
ಇದನ್ನೂ ಓದಿ: ಪೇಜರ್​ ಎಂದರೇನು? ​ಹಿಜ್ಬುಲ್ಲಾಗಳು 1980ರ ಹಳೆಯ ಸಾಧನವನ್ನು ಈಗಲೂ ಬಳಸುತ್ತಿರೋದೇಕೆ?
ಈಸಿಎಲ್​​- ಎಂಟರ್​​​​ಟೈನರ್ಸ್​ ಕ್ರಿಕೆಟ್​​ ಲೀಗ್​ ಪ್ರಾರಂಭವಾಗಿದೆ. ಇದರಲ್ಲಿ ಯೂಟ್ಯೂಬ್​​ನ ಎಲ್ವಿಶ್​​ ಯಾದವ್​, ಅಭಿಷೇಕ್​​ ಮಲ್ಹಾನ್​​, ಸೋನು ಶರ್ಮಾ, ಹರ್ಷ್​​ ಬೇನಿವಾಲ್​​ ಮತ್ತು ಅನುರಾಗ್​ ಸ್ವಿವೇದಿ ಮತ್ತು ಮುನ್ನಾವರ್​ ಫಾರೂಕಿ ಆಡುತ್ತಿದ್ದಾರೆ. ಸೆಪ್ಟೆಂಬರ್​​ 13ರಿಂದ 22ರವರೆಗೆ ಪಂದ್ಯ ನಡೆಯಲಿಕ್ಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us