/newsfirstlive-kannada/media/post_attachments/wp-content/uploads/2024/06/ROHIT_SHARMA_KOHLI.jpg)
ಟೀಮ್ ಇಂಡಿಯಾ ನಿರಾಯಾಸವಾಗಿ ಸೂಪರ್-8ಗೆ ಎಂಟ್ರಿಕೊಟ್ಟಿದೆ. ಆದ್ರೆ ಸೆಮಿಫೈನಲ್ ಹಾದಿ ಅಂದುಕೊಂಡಷ್ಟು ಸುಲಭವಿಲ್ಲ. ಭಾರತಕ್ಕೆ ರಿಯಲ್ ಚಾಲೆಂಜ್ ಇರೋದೇ ಮುಂದಿನ ಹಂತದಲ್ಲಿ. ವಿಭಿನ್ನವಾದ ಸವಾಲಿಗೆ ಸಜ್ಜಾಗಬೇಕಿದೆ. ಹಾಗಾದ್ರೆ ಮಾತ್ರ ಗ್ರೂಪ್ ಸ್ಟ್ರೇಜ್ನ ಜಬರ್ದಸ್ತ್ ಪರ್ಫಾಮೆನ್ಸ್ ಸೂಪರ್-8 ರಲ್ಲಿ ರಿಪೀಟ್ ಆಗೋಕೆ ಸಾಧ್ಯ. ಅಂದಹಾಗೇ ರೋಹಿತ್ ಶರ್ಮಾ ಪಡೆ ಮುಂದಿರೋ ಚಾಲೆಂಜಸ್ಗಳೇನು ?
ಸೂಪರ್-8ನಲ್ಲಿ ಭಾರತಕ್ಕೆ ರಿಯಲ್ ಟೆಸ್ಟ್
ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾಗೆ ಸೂಪರ್-8 ಟಿಕೆಟ್ ಖಾತ್ರಿಯಾಗಿದೆ. ಗ್ರೂಪ್ ಸ್ಟೇಜ್ನಲ್ಲಿ ಧೂಳೆಬ್ಬಿಸಿ ನಿರಾಯಾಸವಾಗಿ ಸೂಪರ್-8ಗೆ ಪ್ರವೇಶಿಸಿದೆ. ಜೂನ್ 19 ರಿಂದ ಮುಂದಿನ ಹಂತದ ಪಂದ್ಯಗಳು ಆರಂಭಗೊಳ್ಳಲಿದ್ದು, ಭಾರತಕ್ಕೆ ರಿಯಲ್ ಟೆಸ್ಟ್ ಶುರುವಾಗಲಿದೆ. ರೋಹಿತ್ ಶರ್ಮಾ ಅಂಡ್ ಗ್ಯಾಂಗ್ ಇಲ್ಲಿ ಸ್ವಲ್ಪವು ಮೈ ಮರೆಯುವಂತಿಲ್ಲ. ಯಾಕಂದ್ರೆ ಸೂಪರ್-8ನಲ್ಲಿ ವಿಶ್ವದ ಬಲಾಢ್ಯ ತಂಡಗಳನ್ನು ಎದುರಿಸಬೇಕಿದೆ. ಮೆನ್ ಇನ್ ಬ್ಲೂ ಪಡೆಗೆ ಸೂಪರ್-8 ಹಂತದಲ್ಲಿ ಕಠಿಣಾತಿ ಕಠಿಣ ಸವಾಲುಗಳಿವೆ. ಒಂದೊಂದು ಸವಾಲು ಭಿನ್ನ-ವಿಭಿನ್ನ. ಇಂತಹ ಅಗ್ನಿಪರೀಕ್ಷೆಯ ಚಕ್ರವ್ಯೂಹ ಬೇಧಿಸಿದರಷ್ಟೇ ಟೀಮ್ ಇಂಡಿಯಾಗೆ ಸೆಮಿಫೈನಲ್ ಬಾಗಿಲು ತೆರೆಯಲಿದೆ.
ಇದನ್ನೂ ಓದಿ:ರೇಣುಕಾಸ್ವಾಮಿ ಕೊಲೆ ಪ್ರಕರಣದ ಹಿಂದೆ ಓರ್ವ PSI ನೆರಳು..? ಏನಿದು ಶಾಕಿಂಗ್ ವಿಚಾರ..?
ಚಾಲೆಂಜ್ ನಂ.1:
ಟೀಮ್ ಇಂಡಿಯಾ ಜೂನ್ 20 ರಂದು ನಡೆಯುವ ಸೂಪರ್-8 ಮೊದಲ ಪಂದ್ಯದಲ್ಲೆ ಡೇಂಜರಸ್ ಅಪ್ಘಾನಿಸ್ತಾನ ತಂಡವನ್ನ ಎದುರಿಸಲಿದೆ. ಹೇಳಿ ಕೇಳಿ ಅಪ್ಘನ್ ತಂಡದಲ್ಲಿ ಟಾಪ್ ಕ್ಲಾಸ್ ಸ್ಪಿನ್ನರ್ಗಳಿದ್ದಾರೆ. ರಶೀದ್ ಖಾನ್ ಹಾಗೂ ನೂರ್ ಅಹ್ಮದ್ಗೆ ಬೆರಳು ಕೊಟ್ರೆ ಅಂಗೈಯನ್ನೆ ನುಂಗಬಲ್ಲರು. ಸಾಲದೆಂಬಂತೆ ಫರೂಕಿ ಅನ್ನೋ ಮ್ಯಾಚ್ ವಿನ್ನಿಂಗ್ ಬೌಲರ್ ಬೇರೆ. ಜೊತಗೆ ಬ್ಯಾಟಿಂಗ್ ವಿಭಾಗ ಕೂಡ ಬಲಿಷ್ಠವಾಗಿದೆ. ಇಂತಹ ಸಮತೋಲನದ ತಂಡದೊಂದಿಗೆ ಸೆಣಸಾಡಲು ಭಾರತ ತಂಡ ಪಕ್ಕಾ ಸ್ಟ್ರಾಟಜಿಯೊಂದಿಗೆ ಕಣಕ್ಕಿಳಿಯುವ ಅಗತ್ಯವಿದೆ.
ಇದನ್ನೂ ಓದಿ:ಸೂತ್ರಧಾರಿಗಳ ತಾಳಕ್ಕೆ ಕುಣಿದ ಪಾತ್ರಧಾರಿಗಳು.. ಯಾರು ಯಾವ ರೋಲ್ ನಿಭಾಯಿಸಿದರು..?
ಚಾಲೆಂಜ್ ನಂ.2:
ಭಾರತಕ್ಕೆ ಸೂಪರ್-8ನ ಎರಡನೇ ಬಿಗ್ ಚಾಲೆಂಜ್ ಅಂದ್ರೆ ಬಾಂಗ್ಲಾದೇಶ. ಬಾಂಗ್ಲಾ ಭಾರತದ ವಿರುದ್ಧ ಸುಲಭವಾಗಿ ಮಣಿಯುವ ತಂಡವಲ್ಲ. ಚಾನ್ಸ್ ಸಿಕ್ರೆ ಸೋಲಿನ ರುಚಿ ತೋರಿಸೋಕೆ ತಯಾರಿರುತ್ತೆ. ಇಂತಹ ತಂಡದಲ್ಲಿ ಕ್ವಾಲಿಟಿ ಸ್ಪಿನ್ನರ್ಗಳ ದಂಡಿದೆ. ತಸ್ಕಿನ್ ಅಹ್ಮದ್, ಮುಸ್ತಫಿಜುರ್ ರೆಹಮಾನ್ರಂತ ವಿಶ್ವದರ್ಜೆಯ ವೇಗಿಗಳ ಬಲವಿದೆ. ಪಂದ್ಯದ ಗತಿಯನ್ನೆ ಬದಲಿಸುವ ಟಿ20 ಸ್ಪೆಷಲಿಸ್ಟ್ಗಳಿದ್ದಾರೆ. ಸೋ ಭಾರತಕ್ಕೆ ಬಾಂಗ್ಲಾ ಸಂಹಾರವಂತೂ ಸುಲಭವಿಲ್ಲ.
ಇದನ್ನೂ ಓದಿ:ದರ್ಶನ್ ಜೊತೆಯಲ್ಲೇ ಇರ್ತಾರೆ ಮೂವರು ದುಶ್ಮನ್ಗಳು.. ಪ್ರತಿ ಅನಾಹುತಗಳಿಗೂ ಕಾರಣ ಅವೇ..!
ಚಾಲೆಂಜ್ ನಂ.3
ಭಾರತ ತಂಡ ಸೂಪರ್-8 ಕೊನೆ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನ ಎದುರಿಸಲಿದೆ. ಇಲ್ಲಿ ಟಫ್ ಫೈಟ್ ಇದ್ದೆ ಇದೆ. ಯಾಕಂದ್ರೆ ಸುಲಭವಾಗಿ ಸೋಲೊಪ್ಪಿಕೊಳ್ಳುವ ಜಾಯಮಾನ ಆಸಿಸ್ ತಂಡದ್ದಲ್ಲ. ಆಸ್ಟ್ರೇಲಿಯಾ ತಂಡದಲ್ಲಿ ವಿಶ್ವದರ್ಜೆಯ ಆಟಗಾರರಿದ್ದಾರೆ. ಮಿಚೆಲ್ ಮಾರ್ಷ್, ಕ್ಯಾಮರೂನ್ ಗ್ರೀನ್, ಗ್ಲೆನ್ ಮ್ಯಾಕ್ಸ್ವೆಲ್ ಹಾಗೂ ಮಾರ್ಕಸ್ ಸ್ಟೋಯ್ನಿಸ್ರಂತ ಸ್ಟಾರ್ ಆಲ್ರೌಂಡರ್ಗಳಿದ್ದಾರೆ. ಅಲ್ಲದೇ ವಿಧ್ವಂಸಕ ಬ್ಯಾಟರ್ಸ್, ನಡುಕ ಹುಟ್ಟಿಸುವ ಫಾಸ್ಟ್ ಬೌಲರ್ಸ್, ಖೆಡ್ಡಾಗೆ ಕೆಡವುವ ಸ್ಪಿನ್ನರ್ಸ್ ತಂಡದಲ್ಲಿದ್ದಾರೆ. ಇಂತಹ ಬಲಾಢ್ಯ ತಂಡದೆದುರು ಭಾರತ ತಂಡ ಶಕ್ತಿಮೀರಿ ಹೋರಾಟ ನಡೆಸಬೇಕಿದೆ.
ಇದನ್ನೂ ಓದಿ:ದೇಶದಲ್ಲಿ ಮತ್ತೊಂದು ರೈಲು ಭೀಕರ ಅಪಘಾತ.. ಭಾರೀ ಸಾವು ನೋವಿನ ಆತಂಕ
ಒಟ್ಟಿನಲ್ಲಿ ಆರಂಭದಲ್ಲೇ ಹೇಳಿದಂತೆ ಟೀಮ್ ಇಂಡಿಯಾಗೆ ಸೂಪರ್-8 ನಲ್ಲಿ ಕಠಿಣ ಸವಾಲು ಇದೆ. ಈ ಮೂರು ಬಿಗ್ ಚಾಲೆಂಜಸ್ಗಳನ್ನ ರೋಹಿತ್ ಶರ್ಮಾ ಪಡೆ ಹೇಗೆ ಮೆಟ್ಟಿ ನಿಲ್ಲುತ್ತೆ? ಗ್ರೂಪ್ ಸ್ಟೇಜ್ನಂತೆ, ಸೂಪರ್-8 ನಲ್ಲೂ ಚಿಂದಿ ಪರ್ಫಾಮೆನ್ಸ್ ನೀಡುತ್ತಾ? ಕಾದು ನೋಡಬೇಕು.
ಇದನ್ನೂ ಓದಿ:ಒಂದು ದಿನಕ್ಕೆ ಎಷ್ಟು ಗಂಟೆ ಫೋನ್ ಬಳಸಬಹುದು? ಮಕ್ಕಳು ಫೋನ್ನಲ್ಲಿ ಎಷ್ಟು ಗಂಟೆ ಕಳೆದ್ರೆ ಉತ್ತಮ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ