/newsfirstlive-kannada/media/post_attachments/wp-content/uploads/2024/07/CATCHS.jpg)
- ಈ ಕ್ಯಾಚ್ಗಳಲ್ಲಿ ಅಡಗಿತ್ತು ವಿಶ್ವ ಚಾಂಪಿಯನ್ ಕಿರೀಟ
- ಭಾರತವನ್ನ ಚಾಂಪಿಯನ್ ಮಾಡಿದ್ದೇ ಕ್ಯಾಚ್ಗಳು..!
- ಕ್ಯಾಚ್ ಹಿಡಿದು ವಿಶ್ವಕಪ್ ಗೆಲ್ಲಿಸಿದ ವೀರರು ಇವರು
ಕ್ಯಾಚಸ್ ವಿನ್ ದಿ ಮ್ಯಾಚಸ್.. ಬಹು ಕಾಲದಿಂದ ಕ್ರಿಕೆಟ್​ ಅನ್ನೋ ಜಂಟಲ್​ಮನ್​ ಗೇಮ್​ನಲ್ಲಿ ಚಾಲ್ತಿಯಲ್ಲಿರೋ ಮಾತಿದು. ಟೀಮ್​ ಇಂಡಿಯಾ ವಿಚಾರದಲ್ಲಂತೂ ಈ ಮಾತು ಪದೇ ಪದೆ ಸತ್ಯ ಅನ್ನೋದು ಪ್ರೂವ್​ ಆಗಿದೆ. ಒಂದಲ್ಲ.. ಎರಡಲ್ಲ.. ಬರೋಬ್ಬರಿ ಮೂರು ಬಾರಿ ಕ್ಯಾಚ್​ಗಳು ಕೋಟ್ಯಂತರ ಅಭಿಮಾನಿಗಳ ಕನಸು ನನಸು ಮಾಡಿದೆ. ಅವು ಜಸ್ಟ್​ ಕ್ಯಾಚ್ ಆಗಿರಲಿಲ್ಲ. ಐಸಿಸಿ ಟ್ರೋಫಿಗಳೇ ಆಗಿವೆ!
ಟೀಮ್ ಇಂಡಿಯಾ 2ನೇ ಬಾರಿಗೆ ಟಿ20 ವಿಶ್ವಕಪ್ ಪ್ರಶಸ್ತಿ ಗೆದ್ದುಕೊಂಡಿದೆ. ರಣ ರೋಚಕ ಫೈನಲ್​​ನಲ್ಲಿ ಟೀಮ್ ಇಂಡಿಯಾ ಸೋಲಿನ ಹಾದಿ ತುಳಿದಿತ್ತು. ಕೊನೆ ಐದು ಓವರ್​ಗಳಲ್ಲಿ ಕಮ್​ಬ್ಯಾಕ್ ಮಾಡಿದ ಟೀಮ್ ಇಂಡಿಯಾ, ವಿಶ್ವಕಪ್​ ಗೆಲ್ಲುವಲ್ಲಿ ಯಶಸ್ವಿಯಾಯ್ತು. ಟೀಮ್ ಇಂಡಿಯಾದ ಕಮ್​ಬ್ಯಾಕ್​ ರೋಲ್​ ಪ್ಲೇ ಮಾಡಿದ್ದು ಆ ಒಂದು ಕ್ಯಾಚ್.
ಇದನ್ನೂ ಓದಿ:ವಿಶ್ವದ ಮೊಟ್ಟ ಮೊದಲ ಕೇಸ್​.. ರೋಬೋಟ್ ಆತ್ಮಹತ್ಯೆಗೆ ಶರಣು..!
ಸೂರ್ಯ ಹಿಡಿದಿದ್ದು ಕ್ಯಾಚ್ ಅಲ್ಲ.. ವಿಶ್ವಕಪ್​
ಕೊನೆ ಐದು ಓವರ್​​​​​​​​​​​​​​ಗಳಲ್ಲಿ ಟೀಮ್ ಇಂಡಿಯಾ ಕಮ್​ಬ್ಯಾಕ್ ಮಾಡಿದ ರೀತಿ ಒಂದು ಅದ್ಭುತವಾದರೆ 20ನೇ ಓವರ್​​​​​ನ ಮೊದಲ ಎಸೆತದಲ್ಲಿ ಸಿಕ್ಸ್​ ಹೋಗಬೇಕಿದ್ದ ಚೆಂಡನ್ನು ಸೂರ್ಯ ಕ್ಯಾಚ್​ ಹಿಡಿದಿದ್ದು ಮತ್ತೊಂದು ಅದ್ಭುತ. ಕ್ರೀಸ್​ನಲ್ಲಿ ಇದಿದ್ದು ಡೇಂಜರಸ್ ಕಿಲ್ಲರ್ ಮಿಲ್ಲರ್. ಸೂರ್ಯ ಸ್ವಲ್ಪ ಯಾಮಾರಿ ಮಿಲ್ಲರ್ ಕ್ಯಾಚ್​ ಡ್ರಾಪ್​ ಮಾಡಿದ್ರೆ ಟಿ20 ವಿಶ್ವಕಪ್ ಮಿಸ್​ ಆಗೋ ಸಾಧ್ಯತೆ ದಟ್ಟವಾಗಿತ್ತು.
2024 ಚುಟುಕು ವಿಶ್ವಕಪ್​ ಮಾತ್ರವಲ್ಲ. ಈ ಹಿಂದಿನ 1983 ಏಕದಿನ ವಿಶ್ವಕಪ್​ ಹಾಗೂ 2007 ಟಿ20 ವಿಶ್ವಕಪ್​ನಲ್ಲೂ ಟೀಮ್ ಇಂಡಿಯಾನ ಚಾಂಪಿಯನ್ ಮಾಡಿದ್ದು ಆ ಎರಡು ಕ್ರೂಶಿಯಲ್​ ಕ್ಯಾಚ್​​​ಗಳೇ.
2007ರ ಟಿ20 ವಿಶ್ವಕಪ್​ ಕ್ಯಾಚ್ ಹಿಡಿದ ಶ್ರೀಶಾಂತ್
2007ರ ಚೊಚ್ಚಲ ಟಿ20 ವಿಶ್ವಕಪ್​ ಟೂರ್ನಿ ಅದು. ಈ ಟಿ20 ವಿಶ್ವಕಪ್​ನಲ್ಲಿ ಧೋನಿ ನೇತೃತ್ವದ ಟೀಮ್ ಇಂಡಿಯಾ, ವಿಶ್ವ ಕಿರೀಟಕ್ಕೆ ಮುತ್ತಿಟ್ಟಿತ್ತು. ಅಂದಿನ ಪಾಕಿಸ್ತಾನ ಎದುರಿನ​ ಫೈನಲ್ ಪಂದ್ಯ ರಣರೋಚಕತೆಯಿಂದ ಕೂಡಿತ್ತು. ಏಕಾಂಗಿ ಹೋರಾಟ ನಡೆಸಿದ್ದ ಮಿಸ್ಬಾ ಉಲ್ ಹಕ್, ಪಾಕ್​ಗೆ ವಿಶ್ವ ಕಿರೀಟ ತೊಡಿಸುವ ಉತ್ಸಾಹದಲ್ಲಿದ್ದರು.
ಇದನ್ನೂ ಓದಿ:ವಿಶ್ವಕಪ್ ಗೆಲುವಿನ ಹಿಂದೆ ಕೆಲಸ ಮಾಡಿದ್ದು ಜೋಡೆತ್ತುಗಳ ಬಾಂಡಿಂಗ್.. ಹೃದಯ ಗೆದ್ದ ಸ್ನೇಹಿತರು ಇವರು..!
ಕೊನೆಯ ಓವರ್​ನಲ್ಲಿ ಸ್ಟ್ರೈಕ್​ನಲ್ಲಿದ್ದ ಮಿಸ್ಬಾ ಮೊದಲ ಎರಡು ಎಸೆತಗಳಿಂದ 6 ರನ್ ಕಲೆ ಹಾಕಿದ್ರು. ಇನ್ನುಳಿದ 4 ಎಸೆತಗಳಲ್ಲಿ 6 ರನ್ ಗಳಿಸಬೇಕಿದ್ದ ಸವಾಲು ಮಿಸ್ಟಾ ಮುಂದಿತ್ತು. ಆಗ, ಸ್ಕೂಪ್ ಶಾಟ್ ಹೊಡೆಯಲು ಯತ್ನಿಸಿದ್ರು. ಶಾರ್ಟ್ ಫೈನ್ ಲೆಗ್‌ನಲ್ಲಿ ಫೀಲ್ಡಿಂಗ್​ ಮಾಡ್ತಿದ್ದ ಶ್ರೀಶಾಂತ್​, ಕ್ಯಾಚ್ ಹಿಡಿದು ಚೊಚ್ಚಲ ಟಿ20 ವಿಶ್ವಕಪ್ ಗೆಲ್ಲಿಸಿಕೊಟ್ಟಿದರು.
ಕಪಿಲ್​ ದೇವ್ ಹಿಡಿದ ಕ್ಯಾಚ್​​ಗೆ ಸಿಕ್ಕಿತ್ತು ಚೊಚ್ಚಲ ವಿಶ್ವಕಪ್
ಕಪಿಲ್ ದೇವ್ ನಾಯಕತ್ವದಲ್ಲಿ ಭಾರತ ಮೊದಲ ಏಕದಿನ ವಿಶ್ವಕಪ್ ಗೆದ್ದಿದ್ದು. ಅಂದು ದೈತ್ಯ ವೆಸ್ಟ್ ಇಂಡೀಸ್​ ಸವಾಲು ಎದುರಿಸಿದ್ದ ಟೀಮ್ ಇಂಡಿಯಾ ಗೆಲ್ಲುತ್ತೆ ಅನ್ನೋ ನಿರೀಕ್ಷೆಯೇ ಇರಲಿಲ್ಲ. ಭಾರತ ನೀಡಿದ್ದ 184 ರನ್​ಗಳ ಗುರಿ ಅಂದಿನ ಬಲಾಢ್ಯ ವೆಸ್ಟ್ ಇಂಡೀಸ್​ಗೆ ಬಿಗ್​ ಟಾಸ್ಕ್​ ಆಗಿರಲಿಲ್ಲ.
ಆ ಪಂದ್ಯದಲ್ಲಿ ಕ್ರೀಸ್​ನಲ್ಲಿದ್ದ ವಿವಿಯನ್ ರಿಚರ್ಡ್ಸ್​ 27 ಎಸೆತಗಳಲ್ಲೇ 33 ರನ್ ಸಿಡಿಸಿ ಗೇಮ್​ ಫೀನಿಷ್​ ಮಾಡೋ ಉತ್ಸಾಹದಲ್ಲಿದ್ರು. ಮದನ್ ಲಾಲ್ ಬೌಲಿಂಗ್​ನಲ್ಲಿ ಭಾರೀ ಹೊಡೆತಕ್ಕೆ ಕೈ ಹಾಕಿ ಕೆಟ್ರು. ರಿಚರ್ಡ್ಸ್​ ಹೊಡೆದ ಬಿಗ್​ ಶಾಟ್​ ಅನ್ನ​ ಹಿಂಬದಿಯಾಗಿ ಓಡಿದ್ದ ಕಪಿಲ್ ದೇವ್ ಕ್ಯಾಚ್ ಆಗಿ ಪರಿವರ್ತಿಸಿದ್ರು. ಈ ಕ್ಯಾಚ್ ಪಂದ್ಯದ ಗತಿಯನ್ನೇ ಬದಲಿಸಿತ್ತು. ಭಾರತಕ್ಕೆ ವಿಶ್ವ ಕಿರೀಟ ಒಲಿದಿತ್ತು.
ಮೂರು ಅದ್ಭುತ ಕ್ಯಾಚ್​ಗಳು, ಮೂರು ಐಸಿಸಿ ಟೂರ್ನಿಗಳಲ್ಲಿ ಟೀಮ್​ ಇಂಡಿಯಾದ ಗೆಲುವಿಗೆ ಕಾರಣವಾಗಿದೆ. ಮೂರೂ ಪಂದ್ಯಗಳಲ್ಲಿ ಸೋಲಿನ ಹಂತ ತಲುಪಿದ್ದ ಟೀಮ್​ ಇಂಡಿಯಾ, ವಿಶ್ವಕಪ್​ ಗೆದ್ದು ಬೀಗಿದೆ. ಈ ಉದಾಹರಣೆಯನ್ನ ನೋಡಿದ ಮೇಲೆ ಕ್ಯಾಚಸ್​ ವಿನ್​ ಮ್ಯಾಚಸ್​ ಅನ್ನೋ ಮಾತನ್ನ ಒಪ್ಪದೆ ಇರೋಕಾಗುತ್ತಾ?
ವಿಶೇಷ ವರದಿ: ಸಂತೋಷ್
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್