newsfirstkannada.com

ರಾಜ್ಯದಲ್ಲಿ ಮತ್ತೊಂದು ದುರಂತ; ಕೆರೆಯಲ್ಲಿ ಮುಳುಗಿ ಮೂವರು ಮಕ್ಕಳು ದಾರುಣ ಸಾವು

Share :

Published May 31, 2024 at 6:00pm

Update May 31, 2024 at 6:02pm

    ಜಾನುವಾರುಗಳನ್ನ ಕೆರೆಯ ಬಳಿ ಕಟ್ಟಿ ಆಟವಾಡಲು ನೀರಿನಲ್ಲಿ ಇಳಿದಿದ್ದರು

    ಆಟವಾಡುತ್ತಿದ್ದಾಗ ಕೆರೆಯಲ್ಲಿ ಮೂವರು ಮುಳುಗಿ ಸಾವನ್ನಪ್ಪಿರುವ ಘಟನೆ

    ಮೂವರು ಮಕ್ಕಳನ್ನ ಕಳೆದುಕೊಂಡು ಕಣ್ಣೀರಿಡುತ್ತಿರುವ ಪೋಷಕರು

ಹಾಸನ: ಈ ಬೇಸಿಗೆ ರಜೆಯಲ್ಲಿ ಮಕ್ಕಳು ಈಜಲು ಹೋಗಿ ಸಾವನ್ನಪ್ಪಿದ ಅನೇಕ ಘಟನೆಗಳು ನಡೆದಿದೆ. ರಾಜ್ಯದ ಹಲವೆಡೆ ಪೋಷಕರ ತಮ್ಮ ಮಕ್ಕಳನ್ನ ಕಳೆದುಕೊಂಡು ಕಣ್ಣೀರು ಹಾಕಿದ್ದಾರೆ. ಈ ಸಾಲು, ಸಾಲು ದುರಂತ ಕಣ್ಮುಂದೆ ಇರುವಾಗಲೇ ಮತ್ತೊಂದು ಘೋರ ದುರಂತ ನಡೆದಿದೆ.

ಇದನ್ನೂ ಓದಿ: ದುರಂತ.. ಸ್ನಾನ ಮಾಡಲು ಹೋದ ಇಬ್ಬರು ಬಾಲಕಿಯರು ದಾರುಣ ಸಾವು 

ಕೆರೆಯಲ್ಲಿ ಮುಳುಗಿ ಮೂವರು ಮಕ್ಕಳು ಸಾವನ್ನಪ್ಪಿರುವ ಘಟನೆ ಬೇಲೂರು ತಾಲ್ಲೂಕಿನ ನರಸೀಪುರ ಗ್ರಾಮದಲ್ಲಿ ನಡೆದಿದೆ. ದೀಕ್ಷಿತ್ (10), ನಿತ್ಯಶ್ರೀ (12), ಕುಸುಮ (6) ಮೃತ ಮಕ್ಕಳಾಗಿದ್ದಾರೆ.

ಈ ಮೂರು ಮಕ್ಕಳು ಜಾನುವಾರುಗಳನ್ನು ಕೆರೆಯ ಬಳಿ ಕಟ್ಟಿ ಆಟವಾಡಲು ನೀರಿನಲ್ಲಿ ಇಳಿದಿದ್ದರು. ಆಟವಾಡುತ್ತಿದ್ದಾಗ ಕೆರೆಯಲ್ಲಿ ಮೂವರು ಮುಳುಗಿ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಹಳೇಬೀಡು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಜ್ಯದಲ್ಲಿ ಮತ್ತೊಂದು ದುರಂತ; ಕೆರೆಯಲ್ಲಿ ಮುಳುಗಿ ಮೂವರು ಮಕ್ಕಳು ದಾರುಣ ಸಾವು

https://newsfirstlive.com/wp-content/uploads/2024/05/Lake-Death.jpg

Load More