ಬೆಳ್ಳಂಬೆಳಗ್ಗೆ ಹೃದಯ ವಿದ್ರಾವಕ ಘಟನೆ; ಹನುಮ ಭಕ್ತರ ಮೇಲೆ ಪಿಕಪ್ ವಾಹನ ಹರಿದು ಮೂವರು ಸಾವು

author-image
Ganesh
Updated On
ಬೆಳ್ಳಂಬೆಳಗ್ಗೆ ಹೃದಯ ವಿದ್ರಾವಕ ಘಟನೆ; ಹನುಮ ಭಕ್ತರ ಮೇಲೆ ಪಿಕಪ್ ವಾಹನ ಹರಿದು ಮೂವರು ಸಾವು
Advertisment
  • ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಮೂವರು ಸಾವು
  • ದುರ್ಘಟನೆಯಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ
  • ಗಾಡಿ ಬಿಟ್ಟು ಓಡಿ ಹೋಗ್ತಿದ್ದ ಚಾಲಕನ ಅರೆಸ್ಟ್ ಮಾಡಿದ ಪೊಲೀಸರು

ರಾಯಚೂರು: ಬೆಳ್ಳಂಬೆಳಗ್ಗೆ ಹನುಮ ಭಕ್ತರ ಮೇಲೆ ಪಿಕಪ್ ವಾಹನ ಹರಿದು ಮೂವರು ಸಾವನ್ನಪ್ಪಿರುವ ಘಟನೆ ತಾಲೂಕಿನ ಹೆಗ್ಗಸನಹಳ್ಳಿಯಲ್ಲಿ ನಡೆದಿದೆ.

ಭೀಕರ ಅಪಘಾತದಲ್ಲಿ ಮೂವರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಹನುಮ ಜಯಂತಿ ಪ್ರಯುಕ್ತ ಕೃಷ್ಣಾ ನದಿಗೆ ಮಡಿ ನೀರು ತರಲು ಹೊರಟಿದ್ದ ಭಕ್ತರ ಮೇಲೆ ವಾಹನ ಹರಿದಿದೆ. ಹೆಗ್ಗಸನಹಳ್ಳಿ ಸಮೀಪದ ಎಂಪಿಸಿಎಲ್ ಕಾಲೋನಿಯ 8-10 ಭಕ್ತರು ನದಿ ನೀರಲು ತರಲು ಪಾದಯಾತ್ರೆ ಮಾಡುತ್ತಿದ್ದರು. ಹಿಂದಿನಿಂದ ಬಂದ ಪಿಕಪ್ ವಾಹನ ಭಕ್ತರ ಮೇಲೆ ಹರಿದಿದೆ.

ಇದನ್ನೂ ಓದಿ: ಅಯ್ಯೋ, ಸಾವು ಹೀಗೂ ಬರುತ್ತೆ.. ಪಿಜಿ ಮಾಲೀಕನ ನಿರ್ಲಕ್ಷ್ಯಕ್ಕೆ ಐಟಿ ಉದ್ಯೋಗಿ ಬಲಿ, Video

ಅಯ್ಯನಗೌಡ (30), ಮಹೇಶ (30), ಉದಯಕುಮಾರ (30) ಸಾವನ್ನಪ್ಪಿದ ಹನುಮ ಭಕ್ತರು. ಶಕ್ತಿನಗರ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೂವರು ಸಾವನ್ನಪ್ಪಿದ್ದಾರೆ. ಮತ್ತಿಬ್ಬರಿಗೂ ಗಾಯಗಳಾಗಿದ್ದು ರಿಮ್ಸ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ತೆಲಂಗಾಣ ಮೂಲದ ಜಡಚರ್ಲಾದ ವಾಹನ ಅಪಘಾತ ಮಾಡಿದೆ. ಅಪಘಾತ ಬಳಿಕ ವಾಹನ ಬಿಟ್ಟು ಚಾಲಕ ಪರಾರಿಯಾಗಿದ್ದ, ಕೊನೆಗೆ ಪೊಲೀಸರು ಬೆನ್ನತ್ತಿ ಹಿಡಿದಿದ್ದಾರೆ. ಶಕ್ತಿನಗರ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಇದನ್ನೂ ಓದಿ:7 ಸಿಕ್ಸರ್, 9 ಬೌಂಡರಿ..! ಜೈಸ್ವಾಲ್ ಸ್ಫೋಟಕ ಶತಕ.. ಹಳಿಗೆ ಮರಳಿದ ಯಂಗ್​ಗನ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment