Advertisment

ದರ್ಶನ್ ಕೇಸ್​​ನಲ್ಲಿ ಇನ್ನೂ ಮೂವರು ನಿಗೂಢ ನಾಪತ್ತೆ.. ಯಾರು ಅವರು..?

author-image
Ganesh
Updated On
ಪದೇ ಪದೇ ಸಿಗರೇಟ್‌ ಕೇಳಿದ್ದಕ್ಕೆ ದರ್ಶನ್‌ಗೆ ವಾರ್ನಿಂಗ್‌; ಕೊನೆಗೂ ಅಶ್ಲೀಲ ಮೆಸೇಜ್ ಸೀಕ್ರೆಟ್‌ ರಿವೀಲ್‌!
Advertisment
  • ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣ
  • ಕ್ಯಾಬ್ ಡ್ರೈವರ್ ಸೇರಿ 14 ಆರೋಪಿಗಳ ಬಂಧನ
  • ಪೊಲೀಸರಿಂದ ಪವಿತ್ರಗೌಡ, ದರ್ಶನ್​​ಗೆ ಫುಲ್ ಡ್ರಿಲ್

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಆರೋಪ ಪ್ರಕರಣದಲ್ಲಿ ನಟ ದರ್ಶನ್, ನಟಿ ಪವಿತ್ರಾಗೌಡ ಸೇರಿದಂತೆ ಇಲ್ಲಿಯವರೆಗೆ ಒಟ್ಟು 14 ಆರೋಪಿಗಳ ಬಂಧನ ಆಗಿದೆ. ಆರೋಪಿಗಳನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸುತ್ತಿದ್ದಾರೆ.

Advertisment

ಈ ಮಧ್ಯೆ ಮೂವರು ಆರೋಪಿಗಳು ನಾಪತ್ತೆ ಆಗಿದ್ದು, ತೀವ್ರ ಶೋಧಕಾರ್ಯ ನಡೆಸುತ್ತಿದ್ದಾರೆ. ಜಗದೀಶ್, ಅನು, ರಾಜು ಎಂಬ ಆರೋಪಿಗಳ ಪತ್ತೆಗಾಗಿ ವಿಶೇಷ ತಂಡ ರಚನೆ ಮಾಡಲಾಗಿದೆ. ನಾಪತ್ತೆ ಆಗಿರೋ ಆರೋಪಿಗಳ ಪಾತ್ರ ಏನು ಅನ್ನೋದ್ರ ಬಗ್ಗೆ ಪೊಲೀಸರು ತನಿಖೆ ನಡೆಸಬೇಕಾಗಿದೆ. ಆದರೆ ಅವರು ನಾಪತ್ತೆ ಆಗಿರೋದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಇದನ್ನೂ ಓದಿ:ಊಟದ ಬಿಲ್ ಪೇ ಮಾಡಿದ್ದ ರೇಣುಕಾಸ್ವಾಮಿ.. ಕಿಡ್ನ್ಯಾಪ್ ರೂಟ್​​ ಮ್ಯಾಪ್ ಹೇಗಿತ್ತು..?

ಕಸ್ಟಡಿಯಲ್ಲಿರೋ ಆರೋಪಿಗಳ ಹೇಳಿಕೆ ಆಧಾರದ ಮೇಲೆ ಸರ್ಚಿಂಗ್ ನಡೆಸಲಾಗುತ್ತಿದೆ. ಈಗಾಗಲೇ ಮೈಸೂರು, ಮಂಡ್ಯದಲ್ಲಿ ಅರೋಪಿಗಳಿಗಾಗಿ ಹುಡುಕಾಟ ನಡೆಸಲಾಗಿದೆ. ಆರೋಪಿಗಳ ಕುಟುಂಬಸ್ಥರಿಗೂ ಮಾಹಿತಿ ನೀಡುವಂತೆ ಸೂಚನೆ ನೀಡಲಾಗಿದೆ. ಆರೋಪಿಗಳು ಮನೆಗೆ ಕರೆ ಮಾಡಿದ್ರೆ ಪೊಲೀಸ್ರಿಗೆ ತಿಳಿಸುವಂತೆ ಸೂಚನೆ ನೀಡಲಾಗಿದೆ. ಪ್ರಕರಣದ ತನಿಖೆಯನ್ನ ತೀವ್ರಗೊಳಿಸಿರೋ ಪೊಲೀಸರು ತಲೆ ಮರೆಸಿಕೊಂಡಿರುವ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

Advertisment

ಇದನ್ನೂ ಓದಿ:ಕೊಲೆ ಆರೋಪದ ಟೆನ್ಷನ್ ನಡುವೆ ದರ್ಶನ್​ಗೆ ಮತ್ತೊಂದು ಚಿಂತೆ.. ಠಾಣೆಯಲ್ಲಿ ಚಿಂತಾಕ್ರಾಂತ..!

ಇದನ್ನೂ ಓದಿ:ರೇಣುಕಾಸ್ವಾಮಿ ಸಾವಿಗೆ ಕಾರಣವಾಯ್ತಾ ಆ ಒಂದು ಕರೆ..? 20 ನಿಮಿಷ ಅಲ್ಲಿ ನಡೆದಿದ್ದೇನು..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment