/newsfirstlive-kannada/media/post_attachments/wp-content/uploads/2024/05/Uttar-Pradesh-1.jpg)
ಕಾಲುವೆಯಲ್ಲಿ ಈಜಲು ಹೋಗಿದ್ದ ನಾಲ್ವರು ಯುವಕರಲ್ಲಿ ಮೂವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರೋ ಘಟನೆ ಉತ್ತರ ಪ್ರದೇಶದ ಮೈನ್‌ಪುರಿಯಲ್ಲಿ ನಡೆದಿದೆ. ಗಂಗಾ ಕಾಲುವೆಯ ರಾಯಹಾರ್ ಸೇತುವೆ ಬಳಿ ನಿನ್ನೆ ಮಧ್ಯಾಹ್ನ 11 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ.
ಕಸ್ಬಾ ಮೊಹಲ್ಲಾ ನಿವಾಸಿಗಳಾದ 18 ವರ್ಷದ ವಿಷ್ಣು ಪಾಂಡೆ, 17 ವರ್ಷದ ದೀಕ್ಷಿತ್, 19 ವರ್ಷದ ಯಶ್ ಗುಪ್ತಾ, ಮತ್ತು 17 ವರ್ಷದ ಅಮಿತ್ ಗುಪ್ತಾ ಎಂಬುವವರು ಈಜಲು ಹೋಗಿದ್ದ ಯುವಕರಾಗಿದ್ದಾರೆ.
ಯುವಕರು ನೀರಿನಲ್ಲಿ ಮುಳುಗುತ್ತಿದ್ದಂತೆ ಸ್ಥಳಕ್ಕೆ ಬಂದ ವ್ಯಕ್ತಿಯೋರ್ವ ಓರ್ವನನ್ನ ಪಾರು ಮಾಡಿದ್ದು, ಇನ್ನುಳಿದ ಮೂವರು ಜಲ ಸಮಾಧಿಯಾಗಿದ್ದಾರೆ. ಇನ್ನೂ ಸ್ಥಳದಲ್ಲಿ ಎಸ್​​ಡಿಆರ್​ಎಫ್​ ಸಿಬ್ಬಂದಿಯಿಂದ ಮೃತದೇಹಕ್ಕಾಗಿ ರಕ್ಷಣಾ ಕಾರ್ಯ ಮುಂದುವರೆದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ