/newsfirstlive-kannada/media/post_attachments/wp-content/uploads/2024/09/DARSHAN_IT_BALLARY.jpg)
ಬೆಂಗಳೂರು: ನಟ ದರ್ಶನ್ ಅಂಡ್ ಗ್ಯಾಂಗ್‌ನಿಂದ ರೇಣುಕಾಸ್ವಾಮಿ ಹತ್ಯೆ ಕೇಸ್‌ನಲ್ಲಿ ಜೈಲುಪಾಲಾಗಿದ್ದ ಮೂವರು ಆರೋಪಿಗಳು ಕಡೆಗೂ ಜೈಲಿನಿಂದ ರಿಲೀಸ್ ಆಗಿದ್ದಾರೆ. ತುಮಕೂರು ಜೈಲುಪಾಲಾಗಿದ್ದ ಆರೋಪಿಗಳಾದ ಕೇಶವಮೂರ್ತಿ, ಕಾರ್ತಿಕ್, ನಿಖಿಲ್ ನಾಯಕ್‌ಗೆ ಹತ್ತು ದಿನಗಳ ಹಿಂದೆಯೇ ಜಾಮೀನು ಸಿಕ್ಕಿತ್ತು. ಆದ್ರೆ ಬಿಡುಗಡೆಗೆ ಗಳಿಗೆ ಕೂಡಿ ಬಂದಿದೆ.
ಡಿ ಗ್ಯಾಂಗ್‌ನಿಂದ ಬರ್ಬರವಾಗಿ ಜೀವ ಕಳೆದುಕೊಂಡ ರೇಣುಕಾಸ್ವಾಮಿ ಪ್ರಕರಣದ 17 ಆರೋಪಿಗಳ ಪೈಕಿ ಕೊನೆಯ ಮೂರು ಆರೋಪಿಗಳಿಗೆ ಬಿಡುಗಡೆ ಭಾಗ್ಯ ಸಿಕ್ಕಿದೆ. ತುಮಕೂರು ಜಿಲ್ಲಾ ಕಾರಾಗೃಹದಲ್ಲಿದ್ದ ಎ15 ಕಾರ್ತಿಕ್, ಎ16 ಕೇಶವಮೂರ್ತಿ ಹಾಗೂ ಎ17 ನಿಖಿಲ್ ನಾಯಕ್ ಜೈಲಿನಿಂದ ರಿಲೀಸ್ ಆಗಿದ್ದಾರೆ.
ಜಾಮೀನು ಸಿಕ್ಕಿದ್ರೂ 10 ದಿನ ಜೈಲಿನಲ್ಲೇ ಕಳೆದಿದ್ದ ಆರೋಪಿಗಳು
ರೇಣುಕಾಸ್ವಾಮಿ ಹತ್ಯೆ ನಂತರ ಕೊಲೆ ಮಾಡಿರೋದಾಗಿ ಈ ಮೂವರು ಪೊಲೀಸರ ಮುಂದೆ ಶರಣಾಗಿದ್ರು. ಮೂವರ ಹೇಳಿಕೆಗಳು ಬೇರೆ ಬೇರೆ ಇದ್ದಾಗ ತೀವ್ರ ವಿಚಾರಣೆಗೆ ಒಳಪಡಿಸಿದಾಗ ದರ್ಶನ್ ಹಾಗೂ ಪವಿತ್ರಾಗೌಡ ಹೆಸ್ರು ಆಚೆ ಬಂದಿತ್ತು. ಸೆಪ್ಟೆಂಬರ್ 23ರಂದು ಮೂವರು ಆರೋಪಿಗಳಿಗೆ ಜಾಮೀನು ಮಂಜೂರಾಗಿತ್ತು. ಕೇಶವಮೂರ್ತಿಗೆ ಹೈಕೋರ್ಟ್ ಜಾಮೀನು ನೀಡಿದ್ರೆ, ನಿಖಿಲ್ ನಾಯಕ್ ಹಾಗೂ ಕಾರ್ತಿಕ್‌ಗೆ 57ನೇ ಸಿಸಿಹೆಚ್ ಕೋಟ್ ಜಾಮೀನು ಮಂಜೂರು ಮಾಡಿತ್ತು.
ಜಾಮೀನು ಸಿಕ್ಕಿ 10 ದಿನಗಳಾದ್ರೂ ಆರೋಪಿಗಳು ಬಿಡುಗಡೆಯಾಗಿರ್ಲಿಲ್ಲ. ಸತತ 9 ದಿನಗಳಿಂದ ಆರೋಪಿಗಳ ಕುಟುಂಬಸ್ಥರು 1 ಲಕ್ಷ ಹಣ ಮತ್ತು ಶ್ಯೂರಿಟಿಗಾಗಿ ಪರದಾಡಿದ್ರು. ಶ್ಯೂರಿಟಿ ಪ್ರಕ್ರಿಯೆ ಪೂರ್ಣಗೊಂಡಿರೋದ್ರಿಂದ ರಾತ್ರಿಯೇ ಮೇಲ್ ಮೂಲಕ ತುಮಕೂರು ಜೈಲಾಧಿಕಾರಿಗೆ ಜಾಮೀನು ಆದೇಶದ ಪ್ರತಿ ತಲುಪಿತ್ತು. ಹೀಗಾಗಿ ಮೂವರು ಜೈಲಿನಿಂದ ರಿಲೀಸ್ ಆಗಿದ್ದಾರೆ.
ಹಣಕಾಸಿನ ಸಮಸ್ಯೆ ಇತ್ತಂತೆ
ಒಟ್ನಲ್ಲಿ ಹಣದಾಸೆ ಇತ್ತೋ ಅಥವಾ ಹಣಕಾಸಿನ ಸಮಸ್ಯೆ ಇವ್ರಿಗೆ ಇತ್ತೋ ಗೊತ್ತಿಲ್ಲ. ಆದ್ರೆ ಕೊಲೆ ನಾವೇ ಮಾಡಿದ್ವಿ ಅಂತಾ ಪೊಲೀಸ್ರ ಮುಂದೆ ಶರಣಾಗಿದ್ದವ್ರು ಬಿಡುಗಡೆ ಏನೋ ಆಗಿದ್ದಾರೆ. ಯಾಕಂದ್ರೆ ಈ ಆರೋಪಿಗಳ ಮೇಲೆ ಕೊಲೆ ಕೇಸ್ ದಾಖಲಾಗಿರಲಿಲ್ಲ. ಕೇವಲ ಸಾಕ್ಷಿ ನಾಶದ ಸೆಕ್ಷನ್ ಅನ್ವಯವಾಗಿತ್ತು. ಆದ್ರೆ ದರ್ಶನ್ ಪ್ರಕರಣದಲ್ಲಿ ಇವರ ಹೇಳಿಕೆಯನ್ನೂ ಸಾಕ್ಷಿಯಾಗಿ ಪರಿಗಣಿಸಲಾಗಿದೆ. ಹೀಗಾಗಿ ಇವರ ಹೇಳಿಕೆಯಿಂದಾಗಿ ಜೈಲಿನಲ್ಲಿರೋ ದರ್ಶನ್ ಅಂಡ್ ಗ್ಯಾಂಗ್‌ಗೆ ಸಂಕಷ್ಟವಂತೂ ತಪ್ಪಿದ್ದಲ್ಲ.
ಇದನ್ನೂ ಓದಿ: ಇರಾನಿ ಕಪ್ನಲ್ಲಿ ಭರ್ಜರಿ ದ್ವಿಶತಕ ಸಿಡಿಸಿದ ಯುವ ಬ್ಯಾಟರ್; ಬಿಸಿಸಿಐಗೆ ಕೊಟ್ರು ಖಡಕ್ ವಾರ್ನಿಂಗ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ