newsfirstkannada.com

ಪಾವಗಡದಲ್ಲಿ ವೈದ್ಯರ ನಿರ್ಲಕ್ಷ್ಯಕ್ಕೆ ಮೂವರು ಬಲಿ; ಮೂರು ತಿಂಗಳ ಬಳಿಕ ಸರ್ಕಾರ ಮಾಡಿದ್ದೇನು ಗೊತ್ತಾ..?

Share :

Published June 1, 2024 at 12:27pm

Update June 1, 2024 at 12:44pm

  ಫೆಬ್ರವರಿ 22ರಂದು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಮಹಿಳೆಯರು ದಾರುಣ ಸಾವು

  ಖಾತೆಯಿಂದ ಬರುವ ಬಡ್ಡಿ ಹಣವನ್ನು ಮಕ್ಕಳ ಪೋಷಣೆಗೆ ಬಳಸಲು ಆದೇಶ

  ಹಿರಿಯ ವೈದ್ಯಾಧಿಕಾರಿಗಳ ನೇತೃತ್ವದಲ್ಲಿ ತನಿಖೆ ನಡೆಸಿದ್ದ ಆರೋಗ್ಯ ಇಲಾಖೆ

ತುಮಕೂರು: ಪಾವಗಡದಲ್ಲಿ ವೈದ್ಯರ ನಿರ್ಲಕ್ಷ್ಯಕ್ಕೆ ಮೂವರು ಬಲಿ ಕೇಸ್​ಗೆ ಸಂಬಂಧಿಸಿದಂತೆ ಮೂರು ತಿಂಗಳ ನಂತರ ಸರ್ಕಾರದಿಂದ ಪರಿಹಾರ ಘೋಷಣೆ ಮಾಡಲಾಗಿದೆ. ಚಿಕಿತ್ಸೆಗೆಂದು ಆಸ್ಪತ್ರೆಗೆ ಒಳಗಾಗಿದ್ದ ಅನಿತ, ಅಂಜಲಿ, ನರಸಮ್ಮ ಮೃತಪಟ್ಟಿದ್ದರು.

ಇದನ್ನೂ ಓದಿ: ಅಮೆರಿಕಾದ ಈ ಸ್ಪರ್ಧೆಯಲ್ಲಿ ಭಾರತೀಯನದ್ದೇ ಹವಾ.. ಬೃಹತ್​ ಸಾಧನೆ ಮಾಡಿದ 12 ವರ್ಷದ ಬಾಲಕ!

ಅದೇ ದಿನ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಒಬ್ಬರಾದ ಬಳಿಕ ಮತ್ತೊಬ್ಬರು ಮೃತಪಟ್ಟಿದ್ದರು. ಇದೀಗ ಮೃತರ ಪ್ರತಿ ಕುಟುಂಬಕ್ಕೆ ತಲಾ 4 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ. ಮೃತರ ಮಕ್ಕಳು ಅಪ್ರಾಪ್ತರಾದಲ್ಲಿ, ಮಕ್ಕಳು ಹಾಗೂ ತಂದೆಯ ಹೆಸರಿನಲ್ಲಿ ಜಂಟಿ ಖಾತೆ ತೆರೆಬೇಕು. ಪರಿಹಾರ ಧನವನ್ನು ಸ್ಥಿರ ಠೇವಣಿ (ಎಫ್.ಡಿ) ರೂಪದಲ್ಲಿ ಅಪ್ರಾಪ್ತ ಮಕ್ಕಳ ಹೆಸರಿನಲ್ಲಿ ಇಡಲು ಸೂಚನೆ ನೀಡಲಾಗಿದೆ. ಖಾತೆಯಿಂದ ಬರುವ ಬಡ್ಡಿ ಹಣವನ್ನು ಮಾತ್ರ ಮಕ್ಕಳ ಪೋಷಣೆಗೆ ಬಳಸಿಕೊಳ್ಳಲು‌ ಸರ್ಕಾರ ಆದೇಶ ಹೊರಡಿಸಿದೆ.

ಮೂವರು ಮಹಿಳೆಯರ ಸಾವು ಪ್ರಕರಣ ಇಡೀ ರಾಜ್ಯಾದ್ಯಂತ ಗಮನ ಸೆಳೆದಿತ್ತು. ವೈದ್ಯರು ಹಾಗೂ ಸಿಬ್ಬಂದಿ ವಿರುದ್ಧ ಪೋಷಕರು, ಕುಟುಂಬಸ್ಥರು ಹೋರಾಟ ನಡೆಸಿದ್ದರು. ಹಿರಿಯ ವೈದ್ಯಾಧಿಕಾರಿಗಳ ನೇತೃತ್ವದಲ್ಲಿ ಆರೋಗ್ಯ ಇಲಾಖೆ ತನಿಖೆ ನಡೆಸಿತ್ತು. ಈ ಸಂಬಂಧ‌ ಪಾವಗಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ಕೇಸ್​ ದಾಖಲಾಗಿತ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪಾವಗಡದಲ್ಲಿ ವೈದ್ಯರ ನಿರ್ಲಕ್ಷ್ಯಕ್ಕೆ ಮೂವರು ಬಲಿ; ಮೂರು ತಿಂಗಳ ಬಳಿಕ ಸರ್ಕಾರ ಮಾಡಿದ್ದೇನು ಗೊತ್ತಾ..?

https://newsfirstlive.com/wp-content/uploads/2024/06/women-death1.jpg

Load More