Tirupati laddu: ತಿರುಪತಿ ಲಡ್ಡುಗಳಿಗೆ ನಂದಿನಿ ತುಪ್ಪ ಬೇಡ ಎನ್ನಲು ಈ ಕೊಬ್ಬಿನ ಮಾಫಿಯಾ ಕಾರಣವಾಗಿತ್ತಾ..?

author-image
Bheemappa
Updated On
ಮೀನಿನ ಎಣ್ಣೆ, ಪ್ರಾಣಿಗಳ ಕೊಬ್ಬು.. ತುಪ್ಪದಲ್ಲಿ ಕಲಬೆರಕೆ ಬೆರೆಸಿದ್ದು ಯಾರು? ಇಲ್ಲಿದೆ ಅಸಲಿ ವಿಷ್ಯ!
Advertisment
  • ಜಗನ್ ಸರ್ಕಾರದಲ್ಲಿ ಲಡ್ಡುಗೆ ಎಷ್ಟು ಪದಾರ್ಥಗಳನ್ನ ಮಿಕ್ಸ್ ಮಾಡಿದ್ರು!
  • ಯಾವೆಲ್ಲ ಪ್ರಾಣಿಗಳ ಕೊಬ್ಬು ತಿಮ್ಮಪ್ಪನ ಲಡ್ಡುಗಳಲ್ಲಿ ಮಿಶ್ರಣಗೊಂಡಿವೆ?
  • ಕರ್ನಾಟಕದ ನಂದಿನಿ ತುಪ್ಪ ಬದಲಿಸುವ ಹಿಂದಿತ್ತಾ ಕೊಬ್ಬಿನ ಮಾಫಿಯಾ?

ತಿಮ್ಮಪ್ಪನ ಪವಿತ್ರ ಪ್ರಸಾದ ಲಡ್ಡು ಬಗ್ಗೆ ಎದ್ದಿರೋ ವಿವಾದದ ಮಧ್ಯೆ ನಂದಿನಿ ಬಗ್ಗೆ ಚರ್ಚೆ ಆಗ್ತಿದೆ. ಕರ್ನಾಟಕದ ನಂದಿನ ತುಪ್ಪ ಬರುವಷ್ಟೂ ದಿನ ಲಡ್ಡು ಪಾವಿತ್ರ್ಯತೆ ಹಾಳಾಗಿರಲಿಲ್ಲ ಅಂತ ಆಂಧ್ರದ ರಾಜಕಾರಣಿಗಳೇ ಮಾತಾಡುತ್ತಿದ್ದಾರೆ. ಇದೀಗ ಬಂದಿರೋ ಪ್ರಯೋಗಾಲಯದ ವರದಿ ಅಕ್ಷರಶಃ ಬೆಂಕಿ ಬಿರುಗಾಳಿಯನ್ನೇ ಎಬ್ಬಿಸಿದೆ. ನಂದಿನಿ ತುಪ್ಪ ಬೇಡ ಎನ್ನುವುದರ ಹಿಂದೆ ಕೊಬ್ಬಿನ ಮಾಫಿಯಾ ಇತ್ತ ಎನ್ನುವ ಅನುಮಾನ ಮೂಡಿಸಿದೆ. ಅಷ್ಟಕ್ಕೂ ತಿರುಪತಿ ಲಡ್ಡುವಿನ ಪ್ರಯೋಗಾಲಯದ ವರದಿ ಏನಿದೆ ಗೊತ್ತಾ?.

ತಿರುಪತಿ ಗಿರಿವಾಸ ಒಲಿದರೇ ಮನೆ ಮನೆಯೂ ಲಕ್ಷ್ಮಿ ನಿವಾಸ ಆಗುತ್ತೆ. ಇಂಥದ್ದೊಂದು ನಂಬಿಕೆ ತಿಮ್ಮಪ್ಪನ ಭಕ್ತರಲ್ಲಿದೆ. ಅನಾದಿ ಕಾಲದಿಂದಲೂ ರಾಜಾಧಿರಾಜರೂ ಸಹ ಇದೇ ಕಾರಣಕ್ಕೇ ತಿರುಮಲಕ್ಕೆ ಭೇಟಿ ನೀಡುತ್ತಿದ್ದರು. ತಿಮ್ಮಪ್ಪನ ದರ್ಶನ ಪೂರ್ಣವಾಗೋದೇ ಲಡ್ಡು ಪ್ರಸಾದ ಸ್ವೀಕರಿಸಿದ ಮೇಲೆ ಅನ್ನೋ ಗಟ್ಟಿ ನಂಬಿಕೆ ಇದೆ. ಆದ್ರೀಗ, ಇದೇ ನಂಬಿಕೆಯ ಜಂಘಾಬಲವನ್ನೇ ಆಂಧ್ರ ಸಿಎಂ ಕೊಟ್ಟ ಹೇಳಿಕೆ ಹಿಡಿದು ಅಲುಗಾಡಿಸುತ್ತಿದೆ. ಜಗನ್ ಸರ್ಕಾರದ ಅವಧಿಯಲ್ಲಿ ಲಡ್ಡು ಪ್ರಸಾದಕ್ಕೆ ಬಳಸಿದ್ದ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬು ಇತ್ತು ಅನ್ನೋ ಆರೋಪಕ್ಕೆ ಸ್ಫೋಟಕ ಸಾಕ್ಷಿಯೊಂದು ಸಿಕ್ಕಿದೆ. ಪ್ರಯೋಗಾಲಯದ ವರದಿ ಬೆಚ್ಚಿಬೀಳಿಸುತ್ತಿದೆ.

ಇದನ್ನೂ ಓದಿ:ಹಿಂದೂಗಳ ಭಾವನೆ ಜತೆ ಚೆಲ್ಲಾಟ; ತಿರುಪತಿ ಲಡ್ಡುವಿನಲ್ಲಿ ದನದ ಕೊಬ್ಬು, ಮೀನಿನ ಎಣ್ಣೆ ಬಳಕೆ ದೃಢ!

publive-image

ಆಗ ಲಡ್ಡುಗೆ ಬಳಸಿದ ತುಪ್ಪದಲ್ಲಿ ಪ್ರಾಣಿ ಕೊಬ್ಬು ಸ್ಪಷ್ಟಪಡಿಸಿದ NDDB!

ಜಗನ್ ಸರ್ಕಾರದ ಅವಧಿಯಲ್ಲಿ ತಿರುಪತಿಯಲ್ಲಿ ಲಡ್ಡು ತಯಾರಿಕೆಗೆ ಬಳಸಿದ್ದ ತುಪ್ಪವನ್ನು ರಾಷ್ಟ್ರೀಯ ಹೈನು ಅಭಿವೃದ್ಧಿ ಮಂಡಳಿಯ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಇದೀಗ ಎನ್​ಡಿಡಿಬಿ ಪ್ರಯೋಗಾಲಯ ತುಪ್ಪವನ್ನು ಪರೀಕ್ಷಿಸಿ ವರದಿಯನ್ನು ನೀಡಿದೆ. ಜಗನ್ ಮೋಹನ್ ರೆಡ್ಡಿ ಸರ್ಕಾರದ ಅವಧಿಯಲ್ಲಿ ಲಡ್ಡು ತಯಾರಿಕೆಗೆ ಬಳಸಿದ್ದ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬು ಇದೆ ಅನ್ನೋದನ್ನ ಖಚಿತಪಡಿಸಿದೆ ಎನ್​ಡಿಡಿಬಿ ಪ್ರಯೋಗಾಲಯದ ವರದಿ. ಅಷ್ಟೇ ಅಲ್ಲ, ವರದಿ ಹೇಳುತ್ತಿರುವ ಪ್ರಕಾರ ಸುಮಾರು 14 ಪದಾರ್ಥಗಳನ್ನು ತುಪ್ಪಕ್ಕೆ ಬಳಸಲಾಗಿದೆ. ಪ್ರಾಣಿಗಳ ಕೊಬ್ಬು ಮಿಕ್ಸ್ ಆಗಿದೆ ಅನ್ನೋದು ಎಷ್ಟು ಮುಖ್ಯವೋ? ಯಾವೆಲ್ಲಾ ಪ್ರಾಣಿಗಳ ಕೊಬ್ಬು ಮಿಶ್ರಣಗೊಂಡಿದೆ ಅನ್ನೋ ಸಂಗತಿ ಇದೀಗ ಬೆಂಕಿ ಹಚ್ಚಿದೆ. ಇದೇ ವಿಚಾರಕ್ಕೆ ಟಿಡಿಪಿ ನಾಯಕ ಅನ್ನಂ ವೆಂಕಟರಮಣ ರೆಡ್ಡಿ ಜಗನ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಒಂದೊಂದೇ ಸಂಗತಿಯನ್ನು ಬಿಚ್ಚಿಟ್ಟು ಕಟು ಟೀಕೆ ಮಾಡಿದ್ದಾರೆ.

ಕಟು ಟೀಕೆಯ ಮೂಲಕ ಜಗನ್ ಮೋಹನ್ ರೆಡ್ಡಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಎಲ್ಲಕ್ಕಿಂತಲೂ ಮಿಗಿಲಾಗಿ ಜಗನ್ ಸರ್ಕಾರದ ಅವಧಿಯಲ್ಲಿ ಲಡ್ಡು ತಯಾರಿಕೆಗೆ ಬಳಸಿದ ತುಪ್ಪದಲ್ಲಿ ದನದ ಕೊಬ್ಬನ್ನು ಬಳಸಿದ್ದಾರೆ ಅನ್ನೋ ಸ್ಫೋಟಕ ಸುಳಿವನ್ನು ನೀಡಿದ್ದಾರೆ.

ಹಂದಿ ಕೊಬ್ಬು, ಮೀನಿನ ಎಣ್ಣೆ ಲಡ್ಡು ತಯರಿಸೋ ತುಪ್ಪಕ್ಕೆ ಬೆರೆಸಿದ್ದಾರೆ!

ಎನ್​​ಡಿಡಿಬಿ ಪ್ರಯೋಗಾಲಯದ ವರದಿ ಇಂಥದ್ದೊಂದು ಸಂಗತಿಯನ್ನು ಸಾರಿ ಸಾರಿ ಹೇಳುತ್ತಿದೆ. ಜಗನ್​ ಮೋಹನ್ ರೆಡ್ಡಿ ಅವಧಿಯಲ್ಲಿ ತಿರುಪತಿಯಲ್ಲಿ ಲಡ್ಡುಗಳನ್ನು ತಯಾರಿಸಲು ಬಳಸಿದ್ದ ತುಪ್ಪದಲ್ಲಿ 14 ಬಗೆಯ ಪದಾರ್ಥಗಳನ್ನು ಮಿಶ್ರಣ ಮಾಡಿರುವುದು ಖಚಿತವಾಗಿದೆ. ಇದೇ ವಿಚಾರ ಪ್ರಯೋಗಾಲಯದ ವರದಿಯಲ್ಲಿದೆ. ಜುಲೈ 8, 2024ರಂದು ಆಗ ಬಳಸಿದ್ದ ತುಪ್ಪವನ್ನು ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿತ್ತು. ಇದೀಗ ಬಂದಿರೋ ಪ್ರಯೋಗಾಲಯದ ವರದಿ ಪ್ರಕಾರ ಈ ವಸ್ತುಗಳನ್ನು ಬಳಸಲಾಗಿದೆ.

ಇದನ್ನೂ ಓದಿ: ಮೊದಲ ಮಗುವಿಗೆ ವೆಲ್​​ಕಮ್ ಹೇಳಿದ ನಟಿ ಕವಿತಾ ಗೌಡ- ಚಂದನ್ ಕುಮಾರ್​.. ಗಂಡಾ, ಹೆಣ್ಣಾ..?

publive-image

ಲಡ್ಡು ಕೊಬ್ಬಿನದ್ದಾ?

ಆಲೀವ್ ಎಣ್ಣೆ, ಗೋಧಿ ಎಣ್ಣೆ, ಮುಸುಕಿನ ಜೋಳದ ಎಣ್ಣೆ, ಹತ್ತಿ ಬೀಜಗಳಿಂದ ತೆಗೆದ ಎಣ್ಣೆ, ಮೀನಿನ ಎಣ್ಣೆ, ದನದ ಕೊಬ್ಬು, ಹಂದಿ ಕೊಬ್ಬು, ಪಾಮ್​ ಆಯಿಲ್, ಇಷ್ಟೂ ಸೇರಿದಂತೆ 14 ಪದಾರ್ಥಗಳನ್ನು ಮಿಶ್ರಣ ಮಾಡಲಾಗಿದೆ ಎನ್ನುವ ಬೆಚ್ಚಿ ಬೀಳಿಸುವ ವರದಿ ಖಚಿತವಾಗಿ ಹೇಳುತ್ತಿದೆ. ಹಾಗಾಗಿಯೇ ಜಗನ್​ ಮೋಹನ್ ರೆಡ್ಡಿ ಸರ್ಕಾರದ ವಿರುದ್ಧ ಇದೀಗ ಟಿಡಿಪಿ, ಬಿಜೆಪಿ ಮೈತ್ರಿ ಸರ್ಕಾರ ಕಿಡಿ ಕಾರುತ್ತಿದೆ.

ನಂದಿನಿ ತುಪ್ಪ ಬಳಸುತ್ತಿದ್ದಾಗ ಸಮಸ್ಯೆಯೇ ಎದುರಾಗಿರಲಿಲ್ಲ!

ತಿರುಪತಿಯ ಪವಿತ್ರ ಪ್ರಸಾದಕ್ಕೂ ಕರ್ನಾಟಕದ ನಂದಿನ ತುಪ್ಪಕ್ಕೂ ಅವಿನಾಭಾವ ಸಂಬಂಧವಿದೆ. ಭಕ್ತ ಹಾಗೂ ದೇವರಿಗೆ ಇರುವಂತ ಸಂಬಂಧ. ಯಾಕಂದ್ರೆ, ತಿರುಮಲದ ಧರ್ಮಗ್ರಂಥಗಳಲ್ಲೇ ಉಲ್ಲೇಖವಾಗಿರೋ ಪ್ರಕಾರ ಕರ್ನಾಟಕ ಭಾಗದ ಹಸುಗಳ ತುಪ್ಪ ತಿಮ್ಮಪ್ಪನಿಗೆ ಬಲು ಇಷ್ಟವಂತೆ. ಇದೇ ಭಾಗದ ಹಸುಗಳ ತುಪ್ಪದಿಂದಲೇ ಲಡ್ಡು ತಯಾರಿಸಬೇಕು ಅನ್ನೋ ಅಲಿಖಿತ ನಂಬಿಕೆ ಇತ್ತು. ಆದರೇ, ಜಗನ್ ಮೋಹನ್ ರೆಡ್ಡಿ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ನಂದಿನಿ ತುಪ್ಪ ಮೇಲ್ನೋಟಕ್ಕೆ ದುಬಾರಿ ಆಗಿತ್ತು. ಹಾಗಾಗಿಯೇ ಟಿಡಿಡಿ ಬೇರೆ ಕಡೆಯಿಂದ ತುಪ್ಪವನ್ನು ತರಿಸಿಕೊಂಡಿತ್ತು. ಈ ಅಂಶವೂ ಇದೀಗ ಆಂಧ್ರ ರಾಜಕಾರಣದಲ್ಲಿ ಬಹುದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ. ಟಿಟಿಡಿಯ ಕೋಟ್ಯಂತರ ರೂಪಾಯಿಯನ್ನು ಜಗನ್ ಸರ್ಕಾರ ಗುಳುಂ ಮಾಡಿದೆ ಅನ್ನೋ ಆರೋಪದ ಕಾರಣಕ್ಕೇ ಲಡ್ಡು ವಿಚಾರ ಬಹದೊಡ್ಡ ಚರ್ಚೆ ಹುಟ್ಟು ಹಾಕಿದೆ. ನಂದಿನಿಯನ್ನು ಪಕ್ಕಕ್ಕಿಟ್ಟು ಬೇರೆ ರಾಜ್ಯದ ತುಪ್ಪ ಖರೀದಿಯಲ್ಲಿ ಕಮೀಷನ್ ಪಡೆಯೋದಕ್ಕಾಗಿಯೇ ಇಂಥದ್ದೊಂದು ಮಿಶ್ರಣದ ಕೆಲಸ ನಡೆದಿದೆ ಅನ್ನೋ ಚರ್ಚೆ ಕೂಡ ಎದ್ದಿದೆ.

ಲಡ್ಡು ಗುಣಮಟ್ಟದ ಚರಿತ್ರೆಯನ್ನು ನೋಡಿದರೇ, ಲಡ್ಡು ತಯಾರಿಕೆಗೆ ಹಸುವಿನ ತುಪ್ಪವೇ ಶ್ರೇಷ್ಠ. ಹಸುವಿನ ತುಪ್ಪವನ್ನು ಅಚ್ಚುಕಟ್ಟಾಗಿ ತಯಾರಿಸುವ ಸಂಸ್ಥೆಗಳು ಇಡೀ ದೇಶದಲ್ಲಿ ಎಲ್ಲಿವೆ ಎಂದರೇ ಒಂದು ಕರ್ನಾಟಕ. ತಮಿಳುನಾಡು ಹಾಗೂ ಈರೋಡ್​​ನಲ್ಲಿ ಮಾತ್ರ ಸಿಗುತ್ತದೆ. ಆಂಧ್ರದ ಮಟ್ಟಿಗೆ ಚಿತ್ತೂರಿನಲ್ಲಿ ಮೊದಲು ಸಿಗುತ್ತಿತ್ತು. ಚಿತ್ತೂರು ಡೈರಿ ಮುಚ್ಚಿದ ಮೇಲೆ ವಿಶಾಖಪಟ್ಟಣದಲ್ಲಿ ಕೆಲವು ಕಡೆ ಹಸುವಿನ ತುಪ್ಪ ದೊರೆಯುತ್ತದೆ. ಇಲ್ಲಿ ಬಿಟ್ಟರೇ ಪಂಜಾಬ್​ನಲ್ಲಿ ಸಿಗುತ್ತದೆ. ಈ 4 ಪ್ರಾಂತ್ಯಗಳನ್ನು ಬಿಟ್ಟರೇ ಭಾರತದಲ್ಲಿ ಇನ್ನೆಲ್ಲಿಯೂ ಹಸುವಿನ ತುಪ್ಪ ಸಿಗಲ್ಲ.

ಓ.ವಿ ರಮಣ, ಮಾಜಿ ಚೇರ್ಮನ್, ಟಿಟಿಡಿ

ಖುದ್ದು ಟಿಟಿಡಿಯ ಮಾಜಿ ಚೇರ್ಮನ್ ಕರ್ನಾಟಕ ತುಪ್ಪದ ಬಗ್ಗೆ ಕ್ಲಾರಿಟಿ ಕೊಟ್ಟಿದ್ದಾರೆ. ಕರ್ನಾಟಕದ ನಂದಿನಿ ತುಪ್ಪಕ್ಕೆ ತಿರುಮಲದಲ್ಲಿ ಲಡ್ಡು ತಯಾರಿಗೆ ಅಗ್ರಸ್ಥಾನವನ್ನೇ ನೀಡಲಾಗಿದೆ. ಯಾವಾಗ ಜಗನ್ ಸರ್ಕಾರ ನಂದಿನಿಯನ್ನು ದೂರ ತಳ್ಳಿತೋ ಆ ಬಳಿಕವೇ ಇಂಥದ್ದೊಂದು ಗಂಭೀರ ಆರೋಪ ಎದುರಾಗಿದೆ.

ಇದನ್ನೂ ಓದಿ: ಲಕ್ಷ್ಮೀ ಬಾರಮ್ಮ ಸೀರಿಯಲ್​ ಕವಿತಾ ಗೌಡಗೆ ಅದ್ದೂರಿ ಸೀಮಂತ ಶಾಸ್ತ್ರ; ಯಾರೆಲ್ಲಾ ಬಂದಿದ್ರು?

publive-image

₹75 ಲಕ್ಷದ ಲ್ಯಾಬ್ ಸ್ಥಾಪಿಸೋದಕ್ಕೂ ಜಗನ್ ಸರ್ಕಾರ ಹಿಂದೇಟು ಹಾಕಿತ್ತಾ?

ತಿರುಮಲದಲ್ಲಿ ಲಡ್ಡು ತಯಾರಿಕೆಗೆ ಒಂದು ಪ್ರಕ್ರಿಯೆ ಇದೆ. ಪ್ರತೀ 6 ತಿಂಗಳಿಗೊಮ್ಮೆ ತುಪ್ಪವನ್ನು ಖರೀದಿ ಮಾಡಬೇಕಿದೆ. ಈ ಸಂದರ್ಭದ ಇಂಥದ್ದೇ ಗುಣಮಟ್ಟದ ತುಪ್ಪ ಬೇಕು ಅಂತ ಮೊದಲೇ ನಿರ್ಧರಿಸಲಾಗಿರುತ್ತದೆ. ಇಂಥಾ ವೇಳೆ ತುಪ್ಪದ ಗುಣಮಟ್ಟವನ್ನು ಅಳೆಯೋದಕ್ಕೆ ತಿರುಮಲದಲ್ಲಿ ಒಂದು ಪ್ರಯೋಗಾಲಯವೂ ಇಲ್ಲ. ಒಂದು ವೇಳೆ ಲಡ್ಡು ತಯಾರಿಕೆಗೂ ಮುಂಚೆ ಲ್ಯಾಬ್​ಗೆ ತುಪ್ಪ ಕಳುಹಿಸಿ ಪರೀಕ್ಷಿಸಿದ ಬಳಿಕ ಬಳಸುವಂತಹ ಪದ್ಧತಿ ರೂಡಿಯಾದರೇ ಸಮಸ್ಯೆ ಎದುರಾಗೋದಿಲ್ಲ. ಇದೇ ವಿಚಾರವನ್ನು ಟಿಟಿಡಿ ಮಾಜಿ ಚೇರ್ಮನ್ ಓ.ವಿ ರಮಣ ಹೇಳುತ್ತಿದ್ದಾರೆ. ಈ ಹಿಂದಿನ ಜಗನ್ ಮೋಹನ್ ರೆಡ್ಡಿ ಸರ್ಕಾರದ ಅವಧಿಯಲ್ಲಿ ತಿರುಮಲದಲ್ಲೇ ₹75 ಲಕ್ಷ ಅನುದಾನದಲ್ಲಿ ಒಂದು ಲ್ಯಾಬ್ ತೆಗೆಯಬಹುದಿತ್ತು. ದಿನಕ್ಕೆ ಕೋಟಿ ಕೋಟಿ ದುಡಿಯುವ ತಿಮ್ಮಪ್ಪನ ಸನ್ನಿಧಿಯಲ್ಲಿ 75 ಲಕ್ಷಕ್ಕೂ ದರಿದ್ರ ಬಂತಾ ಅಂತ ಇದೇ ಓ.ವಿ ರಮಣ ಕಟು ಟೀಕೆ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ತಿಮ್ಮಪ್ಪನ ಸನ್ನಿಧಿಯ ಪವಿತ್ರ ಪ್ರಸಾದ ಲಡ್ಡು ವಿವಾದದ ವಸ್ತುವಾಗಿದೆ. ಇಷ್ಟು ದಿನ ಲಡ್ಡು ಕೊಟ್ಟರೇ ಕಣ್ಣಿಗೆ ಒತ್ತಿಕೊಂಡು ತಿನ್ನುತ್ತಿದ್ದ ಭಕ್ತನೂ ಇನ್ಮೇಲೆ ಹಿಂದೇಟು ಹಾಕುವಂತಹ ಸ್ಥಿತಿ ನಿರ್ಮಾಣವಾಗ್ತಿದೆ.

ದೇವರ ವಿಚಾರದಲ್ಲೂ, ಪ್ರಸಾದದ ವಿಚಾರದಲ್ಲೂ ರಾಜಕೀಯ ಬೇಕಿತ್ತಾ ಅಥವಾ ಇಂಥಾ ವಿಚಾರದಲ್ಲೂ ಭ್ರಷ್ಟಾಚಾರ ಮಾಡೋದು ಎಷ್ಟು ಸರಿ? ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕ ತಿಮ್ಮಪ್ಪ ಇಂಥಾ ತಪ್ಪುಗಳನ್ನು ಕ್ಷಮಿಸುತ್ತಾನಾ?. ಆಂಧ್ರ ಸಿಎಂ ಆರೋಪದ ಬಳಿಕ ಎದ್ದಿರೋ ಅಗ್ನಿಪರೀಕ್ಷೆಯಲ್ಲಿ ಸತ್ಯ ಬಯಲಾಗಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment