ತಿರುಪತಿ ಪ್ರಸಾದದಲ್ಲಿ ಬಳಸುವ ತುಪ್ಪದಲ್ಲಿ ದನದ ಕೊಬ್ಬು, ಮೀನಿನ ಎಣ್ಣೆ ಪತ್ತೆ
ಪರೀಕ್ಷೆಗೆ ನೀಡಲಾಗಿದ್ದ ತುಪ್ಪದ ಸ್ಯಾಂಪಲ್ನಲ್ಲಿದೆ ಈ ಎರಡೂ ಅಂಶಳು ಪತ್ತೆ
ಹಿಂದೂಗಳ ಶ್ರದ್ಧೆ, ಭಕ್ತಿಯ ಮೇಲೆ ಗದಪ್ರಹಾರ ಮಾಡಿತಾ ಜಗನ್ ಸರ್ಕಾರ?
ಹೈದ್ರಾಬಾದ್: 1857 ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಅಥವಾ ಸಿಪಾಯಿ ದಂಗೆಯೊಂದು ಆರಂಭವಾಗಿದ್ದೆ ಹಿಂದೂಗಳ ಶ್ರದ್ಧೆ ಮೇಲೆ ಆಟ ಆಡಲು ಹೋದಾಗ. ಬಂದೂಕಿಗೆ ಬಳಸುವ ಕಾಡತೂಸುಗಳಿಗೆ ದನದ ಕೊಬ್ಬನ್ನು ಸವರಲಾಗಿದೆ ಎಂದು ತಿಳಿದ ಕೂಡಲೇ ಭಾರತೀಯ ಸೈನಿಕ ತನ್ನ ಬಂದೂಕಿನ ಗುರಿಯನ್ನು ಆಂಗ್ಲರೆಡೆಗೆ ನೆಟ್ಟಿದ್ದ. ಅದಕ್ಕೆ ಕಾರಣ ಕಾಡತೂಸನ್ನು ಬಂದೂಕಿಗೆ ಒಡಲಿಗೆ ತುಂಬುವ ಮೊದಲು ಅವರು ಅದನ್ನು ಕಚ್ಚಿ ಬಳಿಕ ಲೋಡ್ ಮಾಡಬೇಕಿತ್ತು. ಯಾವಾಗ ಬುಲೆಟ್ಗಳಿಗೆ ಹಸುವಿನ ಕೊಬ್ಬು ಸವರಲಾಗಿದೆ ಎಂದು ಸುದ್ದಿ ಹರಡತೊಡಗಿತೊ ಮಂಗಲ್ಪಾಂಡೆ ಬಂದೂಕಿನಿಂದ ಮೊದಲ ಗುಂಡು ಹಾರಿಯೂ ಬಿಟ್ಟಿತ್ತು. ಆ ಗುಂಡು ಹುಗೇಸನ್ ಹಾಗೂ ಬೌಗ್ ಎಂಬ ಇಬ್ಬರು ಆಂಗ್ಲ ಅಧಿಕಾರಿಗಳ ಜೀವವನ್ನು ತೆಗೆದುಕೊಂಡಿತ್ತು. ಈಗ ಅದು ಇತಿಹಾಸ. ಆದ್ರೆ ಹಿಂದೂಗಳ ಶ್ರದ್ಧೆ, ಭಕ್ತಿಗಳ ಜೊತೆಗೆ ಆಟ ಆಡುವುದು ಇಂದಿಗೂ ಕೂಡ ನಿಂತಿಲ್ಲ. ಅದು ಹಿಂದೂಗಳ ಆರಾಧ್ಯ ದೈವ ಹಾಗೂ ಪವಿತ್ರ ಕ್ಷೇತ್ರವಾದ ತಿರುಪತಿಯಲ್ಲಿಯೇ ನಡೆದಿದ್ದು ಮತ್ತೊಂದು ಘೋರ ದುರಂತ.
ಆಂಧ್ರಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ಹಿಂದಿನ ಜಗನ್ ಸರ್ಕಾರದ ವಿರುದ್ಧ ಒಂದು ಗಂಭೀರ ಆರೋಪ ಮಾಡಿದ್ದರು. ಜಗತ್ಪ್ರಸಿದ್ಧ ತಿರುಪತಿ ದೇವಾಲಯದ ಪ್ರಸಾದವಾದ ಲಡ್ಡು ತಯಾರಿಕೆಯಲ್ಲಿ ತುಪ್ಪದ ಬದಲು ಪ್ರಾಣಿಯ ಕೊಬ್ಬು ಬಳಕೆ ಮಾಡಲಾಗುತ್ತಿತ್ತು ಎಂದು ಬಹುದೊಡ್ಡ ಅರೋಪ ಮಾಡಿದ್ದರು. ಈಗ ಅದು ನಿಜವೆಂದೂ ಸಾಬೀತಾಗಿದೆ. ಪ್ರಸಾದವನ್ನು ಪರೀಕ್ಷೆಗೆ ಕೊಟ್ಟು ಕಳುಹಿಸಲಾಗಿತ್ತು. ಸದ್ಯ ಅದರ ವರದಿ ಬಂದಿದ್ದು. ಲಡ್ಡುವಿಗೆ ಮೀನಿನ ಎಣ್ಣೆ ಹಾಗೂ ದನದ ಕೊಬ್ಬನ್ನು ಪ್ರಸಾದದಲ್ಲಿ ಕಂಡು ಬಂದಿದೆ.
ಇದನ್ನೂ ಓದಿ: ‘ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಬಳಕೆ’ -CM ನಾಯ್ಡು ಆರೋಪ ಬೆನ್ನಲ್ಲೇ, ಭಾರೀ ವಿವಾದ
ಈ ಒಂದು ವರದಿ ಈಗ ಇಡೀ ಹಿಂದೂ ಸಮುದಾಯದ ಶ್ರದ್ಧೆ ಮೇಲೆ ನಡೆದ ರಣಭೀಕರ ಪ್ರಹಾರ. ಹೀನ ಪಾಪದ ಕಾರ್ಯ ಎಂದೇ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಗುಜರಾತ್ನ ಲೈವ್ಸ್ಟಿಕ್ ಲ್ಯಾಬರೋಟರಿ ಎನ್ಡಿಡಿಬಿ ಕಾಲ್ಫ್ ಎಂಬ ಪ್ರಯೋಗಾಲಯದಲ್ಲಿ ಈ ಒಂದು ಪರೀಕ್ಷೆ ನಡೆದಿದ್ದು ಬಂದಿರುವ ವರದಿಯಲ್ಲಿ ಸ್ಯಾಂಪಲ್ಗೆ ನೀಡಿದ ತುಪ್ಪದಲ್ಲಿ ದನದ ಕೊಬ್ಬಿನ ಅಂಶ ಇದೆ ಎಂಬುದು ಸಾಬೀತಾಗಿದೆ. ಸದ್ಯ ಈ ಒಂದು ವರದಿ ಇಂಟರ್ನೆಟ್ನಲ್ಲಿ ತೀವ್ರ ಸಂಚಲನ ಸೃಷ್ಟಿ ಮಾಡಿದ್ದು. ಹಿಂದೂಗಳ ಶ್ರದ್ಧೆಯ ಜೊತೆ ಆಟ ಆಡಿದ ಸರ್ಕಾಗಳ ವಿರುದ್ಧ ಜನರು ಕೆಂಡ ಕಾರುತ್ತಿದ್ದಾರೆ. ಇದು ಕೋಟ್ಯಾಂತರ ಹಿಂದೂಗಳ ನಂಬಿಕೆಯ ಮೇಲೆ ಮಾಡಿದ ಮಹಾ ಪ್ರಹಾರ ಎಂದೇ ಟೀಕಿಸುತ್ತಿದ್ದಾರೆ.
ಇದನ್ನೂ ಓದಿ: ಭಾರತದ ಜೇಮ್ಸ್ ಬಾಂಡ್ ಅಜಿತ್ ಧೋವಲ್ಗೆ US ಕೋರ್ಟ್ನಿಂದ ಸಮನ್ಸ್! ಆಗಿದ್ದೇನು?
ಇದು ಇದೇ ಮೊದಲ ಬಾರಿಯೇನಲ್ಲ. ಈ ಹಿಂದೆ ಇದೇ ಚಂದ್ರಬಾಬು ನಾಯ್ಡು ಸರ್ಕಾರವಿದ್ದಗಲೂ ಕೂಡ ಪ್ರಸಾದದ ಗುಣಮಟ್ಟದಲ್ಲಿ ಖರ್ಚು ಕಡಿಮೆ ಮಾಡಲು ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಆವಾಗ ಶ್ರೀವಾರಿ ಲಾಡು ಪ್ರಸಾದಕ್ಕೆ ಬಳಸುವ ತುಪ್ಪದ ಗುಣಮಟ್ಟವನ್ನು ಪರೀಕ್ಷಿಸುವ ಪದ್ಧತಿ ಇರಲಿಲ್ಲ. ಈಗ ಒಂದು ಲ್ಯಾಬರೋಟರಿಯನ್ನು ಮೈಸೂರಿನಲ್ಲಿ ತೆರೆಯಲಾಗಿದ್ದು . ತುಪ್ಪದ ಗುಣಮಟ್ಟದ ಪರೀಕ್ಷೆಗೆ ಅಲ್ಲಿನ ಸಿಬ್ಬಂದಿಗೆ ತರಬೇತಿಯನ್ನು ಕೂಡ ನೀಡಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ