ಲಡ್ಡು ಕೊಬ್ಬು ಲಡಾಯಿ; ಆರೋಪ ಬೆನ್ನಲ್ಲೇ ಮಹತ್ವದ ನಿರ್ಣಯ ತೆಗೆದುಕೊಂಡ ಜಗನ್ ಪಕ್ಷ

author-image
Ganesh
Updated On
ಲಡ್ಡು ಕೊಬ್ಬು ಲಡಾಯಿ; ಆರೋಪ ಬೆನ್ನಲ್ಲೇ ಮಹತ್ವದ ನಿರ್ಣಯ ತೆಗೆದುಕೊಂಡ ಜಗನ್ ಪಕ್ಷ
Advertisment
  • ತಿರುಪತಿ ಲಡ್ಡು ತಯಾರಿಕೆ ವೇಳೆ ಪ್ರಾಣಿಗಳ ಕೊಬ್ಬು ಬಳಕೆ
  • ಸಂಚಲನ ಮೂಡಿಸಿದ ಚಂದ್ರಬಾಬು ನಾಯ್ಡು ಆರೋಪ
  • ತಿಮ್ಮಪ್ಪನ ಭಕ್ತರಲ್ಲಿ ಮೂಡಿದ ಆತಂಕ, ನಂಬಿಕೆಗೆ ದಕ್ಕೆ

ತಿರುಮಲ ಲಡ್ಡು ವಿಚಾರ ರಾಜಕೀಯವಾಗಿ ಬಿಸಿಬಿಸಿ ಚರ್ಚೆಗೆ ಕಾರಣವಾಗುತ್ತಿದೆ. ಜಗನ್ ಆಡಳಿತ ಅವಧಿಯಲ್ಲಿ ಲಡ್ಡು ತಯಾರಿಕೆಗೆ ಪ್ರಾಣಿಗಳ ಕೊಬ್ಬು ಬಳಸಲಾಗುತ್ತಿತ್ತು ಎಂಬ ಮುಖ್ಯಮಂತ್ರಿ ಚಂದ್ರಬಾಬು ಹೇಳಿಕೆ ದೇಶಾದ್ಯಂತ ಚರ್ಚೆಗೆ ಕಾರಣವಾಗಿದೆ.

ಚಂದ್ರಬಾಬು ಅವರ ಹೇಳಿಕೆ ಕೋಟ್ಯಂತರ ಹಿಂದೂಗಳಲ್ಲಿ ಆತಂಕ ಮೂಡಿಸಿದೆ. ತಿರುಮಲ ಲಡ್ಡುವಿನ ಪಾವಿತ್ರ್ಯಕ್ಕೆ ಧಕ್ಕೆಯಾಗಿದೆಯೇ. ಪ್ರಾಣಿಗಳ ಕೊಬ್ಬು ಬಳಸಿ ಲಡ್ಡೂ ತಯಾರಿಸಲಾಗುತ್ತಿತ್ತೇ?ಎಂಬ ಅನುಮಾನಗಳು ಶುರುವಾಗಿವೆ. ಅಲ್ಲದೇ ಕೋಟ್ಯಾಂತರ ತಿಮ್ಮಪ್ಪನ ಭಕ್ತರು ಬೆಚ್ಚಿಬಿದ್ದಿದ್ದಾರೆ. ಟಿಡಿಪಿಯಿಂದ ಒಳಒಪ್ಪಂದದ ಆರೋಪಗಳು ಬರುತ್ತಿದ್ದರೆ, ಅವರನ್ನು ಗುರಿಯಾಗಿಸುವ ಷಡ್ಯಂತ್ರ ಎಂದು ವೈಎಸ್​ಆರ್ ಕಾಂಗ್ರೆಸ್ ಹೇಳ್ತಿದೆ. ಬೆನ್ನಲ್ಲೇ ವೈಎಸ್​ಆರ್ ಕಾಂಗ್ರೆಸ್ ಮಹತ್ವದ ನಿರ್ಧಾರ ಕೈಗೊಂಡಿದೆ. ತಮ್ಮ ಮೇಲಿನ ಆರೋಪಗಳ ವಿರುದ್ಧ ಕಾನೂನು ಹೋರಾಟ ನಡೆಸಲು ಮುಂದಾಗಿದೆ.

publive-image

ತಿರುಮಲ ಲಡ್ಡು ವಿವಾದಕ್ಕೆ ಸಂಬಂಧಿಸಿದಂತೆ ವೈಎಸ್​​ಆರ್ ಹೈಕೋರ್ಟ್ ಮೊರೆ ಹೋಗಿದೆ. ಈ ಕುರಿತು ಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದೆ. ತಮ್ಮ ವಿರುದ್ಧ ಸುಳ್ಳು ಆರೋಪ ಮಾಡಲಾಗುತ್ತಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಹಾಲಿ ನ್ಯಾಯಾಧೀಶರು ಅಥವಾ ನ್ಯಾಯಾಲಯ ನೇಮಿಸಿದ ಸಮಿತಿಯಿಂದ ತನಿಖೆ ನಡೆಸುವಂತೆ ಜಗನ್ ಪಕ್ಷ ಒತ್ತಾಯಿಸಿದೆ. ಇನ್ನು ಮುಂದಿನ ಬುಧವಾರ ಅರ್ಜಿ ವಿಚಾರಣೆ ನಡೆಸುವುದಾಗಿ ಕೋರ್ಟ್ ಹೇಳಿದೆ.

ಇದನ್ನೂ ಓದಿ:‘ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಬಳಕೆ’ -CM ನಾಯ್ಡು ಆರೋಪ ಬೆನ್ನಲ್ಲೇ, ಭಾರೀ ವಿವಾದ

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment