Advertisment

VIDEO: ತಿರುಪತಿ ಲಡ್ಡುವಿನಲ್ಲಿ ಸಿಕ್ತು ತಂಬಾಕು ತುಂಡುಗಳು! ತಿಮ್ಮಪ್ಪನ ಪ್ರಸಾದ ತಿಂದು ಬೆಚ್ಚಿ ಬಿದ್ದ ಮಹಿಳೆ

author-image
AS Harshith
Updated On
VIDEO: ತಿರುಪತಿ ಲಡ್ಡುವಿನಲ್ಲಿ ಸಿಕ್ತು ತಂಬಾಕು ತುಂಡುಗಳು! ತಿಮ್ಮಪ್ಪನ ಪ್ರಸಾದ ತಿಂದು ಬೆಚ್ಚಿ ಬಿದ್ದ ಮಹಿಳೆ
Advertisment
  • ಪ್ರಾಣಿಗಳ ಕೊಬ್ಬಿನ ಬಳಿಕ ಮತ್ತೊಂದು ವಿವಾದ
  • ತಿರುಪತಿ ಲಡ್ಡುನಿನಲ್ಲಿ ಕಾಣಿಸಿದ ತಂಬಾಕು ತುಂಡು
  • ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ದೃಶ್ಯ

ತಿರುಪತಿ ತಿಮ್ಮಪ್ಪನ ಪ್ರಸಾದವಾದ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸಲಾಗುತ್ತದೆ ಎಂಬ ವಿವಾದದ ಬೆನ್ನಲ್ಲೇ ಮತ್ತೊಂದು ಅಂಶ ಪತ್ತೆಯಾಗಿದೆ. ಇದೀಗ ಲಡ್ಡುವಿನಲ್ಲಿ ತಂಬಾಕು ತುಂಡುಗಳು ಸಿಕ್ಕಿವೆ ಎಂದು ಭಕ್ತೆಯೊಬ್ಬರು ಆರೋಪಿಸಿದ್ದಾರೆ.

Advertisment

ತೆಲಂಗಾಣದ ಖಮ್ಮಂ ಜಿಲ್ಲೆಯ ಕಾರ್ತಿಕೇಯ ಟೌನ್‌ಶಿಪ್‌ನ ನಿವಾಸಿ ಪದ್ಮಾವತಿ ಈ ಆರೋಪ ಮಾಡಿದ್ದಾರೆ. ತಿಮ್ಮಪ್ಪನ ಲಡ್ಡುವಿನಲ್ಲಿ ತಂಬಾಕು ತುಂಡು ಸಿಕ್ಕಿದೆ ಎಂದಿದ್ದಾರೆ.

ಇದನ್ನೂ ಓದಿ: Bengaluru: ಆಫೀಸ್​ ಚೇರ್​ ಬಳಸಿ ಆಟೋ ಓಡಿಸೋ ಡ್ರೈವರ್​.. ಸಖತ್​ ವೈರಲ್​ ಆಗುತ್ತಿದೆ ಪೋಸ್ಟ್​

ನಾವು ಸೆ.19ಕ್ಕೆ ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡಿದ್ದೆವು. ಈ ವೇಳೆ ತಿರುಮಲ ದೇವಸ್ಥಾನದಿಂದ ಲಡ್ಡು ತಂದಿದ್ದೆವು. ಮನೆಗೆ ತಂದ ಲಡ್ಡುವಿನಲ್ಲಿ ತಂಬಾಕು ತುಂಡುಗಳು ಪತ್ತೆಯಾಗಿದ್ದವು. ಸಣ್ಣ ಪೇಪರ್‌ನಲ್ಲಿ ಸುತ್ತಿದ ತಂಬಾಕಿನ ತುಂಡುಗಳಿತ್ತು. ನಾವು ಲಡ್ಡುವಿನಲ್ಲಿ ತಂಬಾಕು ತುಂಡು ಕಂಡು ಬೆಚ್ಚಿಬಿದ್ವಿ ಎಂದಿದ್ದಾರೆ.

Advertisment

ಇದನ್ನೂ ಓದಿ: ಲಡ್ಡುಗಳಲ್ಲಿ ಪ್ರಾಣಿಗಳ ಕೊಬ್ಬು; ಕಂಪನಿಗೆ ನೋಟಿಸ್, TTD ಮಾಜಿ ಅಧ್ಯಕ್ಷನಿಂದ ಆಣೆ, ಪ್ರಮಾಣ

ಸದ್ಯ ಸಾಮಾಜಿಕ ಜಾಲತಾಣದಲ್ಲೂ ದೃಶ್ಯ ಹರಿದಾಡುತ್ತಿದೆ. ಕರ್ನಾಟಕ ವೆದರ್​ ಎಂಬ ಟ್ವಿಟ್ಟರ್​ ಖಾತೆ ಈ ದೃಶ್ಯವನ್ನು ಹಂಚಿಕೊಂಡಿದೆ. ಇನ್ನು ದೃಶ್ಯ ಕಂಡು ಅನೇಕ ಜನರು ಬಗೆ ಬಗೆಯ ಕಾಮೆಂಟ್​ ಮಾಡಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment