ತಿಮ್ಮಪ್ಪನ ಪವಿತ್ರ ಪ್ರಸಾದ ಲಡ್ಡು ಪಾವಿತ್ರ್ಯತೆಗೆ ಧಕ್ಕೆ ಎದುರಾಗಿದ್ಯಾ?
ದಿನ ಕನಿಷ್ಟ 60,000ದಿಂದ 1 ಲಕ್ಷ ಮಂದಿ ಭಕ್ತರು ತಿರುಪತಿಗೆ ಭೇಟಿ
ಆಂಧ್ರ ಸಿಎಂ ಚಂದ್ರಬಾಬು ಯಾರತ್ತ ಬೊಟ್ಟು ಮಾಡಿ ತೋರಿಸಿದ್ರು?
ಕಲಿಯುಗ ವೈಕುಂಠ ತಿರುಮಲ. ತಿಮ್ಮಪ್ಪನ ಪವಿತ್ರ ಪ್ರಸಾದ ಲಡ್ಡು. ಇದೇ ಲಡ್ಡು ಈಗ ಅಸಂಖ್ಯಾತ ಭಕ್ತರನ್ನ ಬೆಚ್ಚಿಬೀಳಿಸುತ್ತಿದೆ. ಖುದ್ದು ಆಂಧ್ರ ಸಿಎಂ ಸಿಡಿಸಿರೊ ಲಡ್ಡು ಬಾಂಬಿಗೆ ತಿಮ್ಮಪ್ಪನ ಭಕ್ತರು ಕಂಗಾಲಾಗಿದ್ದಾರೆ. ಪವಿತ್ರವಾದ ತಿಮ್ಮಪ್ಪನ ಲಡ್ಡು ಪ್ರಸಾದವನ್ನ ಪ್ರಾಣಿಗಳ ಕೊಬ್ಬು ಬಳಸಿ ತಯಾರಿಸಲಾಗ್ತಿದ್ಯಂತೆ. ಲಡ್ಡು ಬಗ್ಗೆ ನಾಯ್ಡು ಹಾಕಿರೋ ಈ ಬಾಂಬ್ ತಿಮ್ಮಪ್ಪನ ಪ್ರಸಾದದ ಪಾವಿತ್ರ್ಯತೆಯ ಪ್ರಶ್ನೆ ಮೂಡಿದೆ. ಲಡ್ಡು ವಿಚಾರಕ್ಕೆ ಆಣೆ ಪ್ರಮಾಣದ ಸಂಗ್ರಾಮ ಶುರುವಾಗಿದೆ. ಅಷ್ಟಕ್ಕೂ ಚಂದ್ರಬಾಬು ನಾಯ್ಡು ಹೇಳಿದ್ದೇನು?. ಲಡ್ಡು ಪಾವಿತ್ರ್ಯತೆ ಹಾಳು ಮಾಡಿದ್ಯಾರು?. ದೇವರ ಪ್ರಸಾದದಲ್ಲೂ ರಾಜಕೀಯ ಏಕೆ?.
ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕ ಶ್ರೀನಿವಾಸ. ಸಾಕ್ಷಾತ್ ತಿಮ್ಮಪ್ಪನಿಗೂ ಅಚ್ಚುಮೆಚ್ಚು ಲಡ್ಡು ಪ್ರಸಾದ. ಶ್ರೀವೆಂಕಟೇಶ್ವರ ಚರಿತ್ರೆ ಸಾರಿ ಸಾರಿ ಹೇಳುವ ದೈವ ಸತ್ಯವಿದು. ಪುಣ್ಯಕ್ಷೇತ್ರ ಸಪ್ತಗಿರಿಯ ಟ್ರೇಡ್ಮಾರ್ಕ್ ಪೈಕಿ ಲಡ್ಡುಗೇ ಅಗ್ರಸ್ಥಾನ. ತಿರುಪತಿಯಲ್ಲಿ ಅನುದಿನವೂ ಸರಿಸುಮಾರು 3 ಲಕ್ಷ ಲಡ್ಡುಗಳನ್ನ ಭಕ್ತರಿಗೆ ಟಿಟಿಡಿ ನೀಡ್ತಿದೆ. 300 ವರ್ಷಗಳ ಚರಿತ್ರೆ ಇರೋ ಇಂತಹ ಲಡ್ಡು ಪ್ರಸಾದದ ಬಗ್ಗೆ ಇದೀಗ ಗಂಭೀರ ಆರೋಪ ಕೇಳಿ ಬಂದಿದೆ. ಇದೇ ವಿಚಾರ ಇದೀಗ ಕೋಟ್ಯಾನುಕೋಟಿ ತಿಮ್ಮಪ್ಪನ ಭಕ್ತರನ್ನ ಬೆಚ್ಚಿಬೀಳಿಸಿದೆ. ಅಷ್ಟಕ್ಕೂ ಖುದ್ದು ಆಂಧ್ರದ ಮುಖ್ಯಮಂತ್ರಿಗಳೇ ಸಿಡಿಸಿರೋ ಆ ಬಾಂಬ್ ಏನು?.
ಇದನ್ನೂ ಓದಿ: ಹಿಂದೂಗಳ ಭಾವನೆ ಜತೆ ಚೆಲ್ಲಾಟ; ತಿರುಪತಿ ಲಡ್ಡುವಿನಲ್ಲಿ ದನದ ಕೊಬ್ಬು, ಮೀನಿನ ಎಣ್ಣೆ ಬಳಕೆ ದೃಢ!
ಕೊನೆಗೆ ತಿರುಮಲ ಲಡ್ಡು ಸಹ ಕಳಪೆ ಆಗಿದೆ. ನನಗಂತೂ ಆಶ್ಚರ್ಯವಾಗುತ್ತದೆ. ಎಷ್ಟು ದೂರು ನೀಡಿದರು. ಕೊನೆಗ ವೆಂಕಟೇಶ್ವರ ಸ್ವಾಮಿಯ ಪವಿತ್ರತೆಗೆ ಧಕ್ಕೆ ತಂದಿದ್ದಾರೆ. ಎಷ್ಟೋ ಸಲ ಹೇಳಿದ್ದೇವೆ. ಅಲ್ಲಿ ಎಷ್ಟು ಕೆಟ್ಟದಾಗಿ ಪ್ರಯತ್ನಿಸಿದ್ದಾರೆ, ಎಂದರೇ ಅಷ್ಟು ಕೆಟ್ಟದಾಗಿ ವ್ಯವಹರಿಸಿದ್ದಾರೆ.
– ಚಂದ್ರಬಾಬು ನಾಯ್ಡು, ಸಿಎಂ, ಆಂಧ್ರ ಪ್ರದೇಶ
ತಿಮ್ಮಪ್ಪನ ಪರಮ ಪ್ರಸಾದ ಎನಿಸಿಕೊಂಡಿರುವ ಲಡ್ಡು ಗುಣಮಟ್ಟ ಹಾಗೂ ಪಾವಿತ್ರ್ಯತೆಗೂ ಧಕ್ಕೆಯಾಗಿದೆ. ಸಾಕಷ್ಟು ಸಲ ದೂರು ಕೊಟ್ರೂ ಎಚ್ಚೆತ್ತುಕೊಳ್ಳಲಿಲ್ಲ. ವೆಂಕಟೇಶ್ವರ ಸ್ವಾಮಿಯ ಪವಿತ್ರ ಪ್ರಸಾದವನ್ನೂ ಹಾಳು ಮಾಡಿದ್ದಾರೆ. ಹೀಗೆ ಹೇಳುವ ಮೂಲಕ ಆಂಧ್ರ ಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ಸ್ಫೋಟಕ ಆರೋಪ ಮಾಡಿದ್ದಾರೆ. ಪ್ರತಿ ದಿನವೂ ಕನಿಷ್ಟ 60,000ದಿಂದ 1 ಲಕ್ಷ ಮಂದಿ ಭಕ್ತರು ತಿರುಪತಿಗೆ ಭೇಟಿ ನೀಡುತ್ತಾರೆ. ಹೀಗೆ ವರ್ಷಕ್ಕೆ ಕೋಟ್ಯಾನುಕೋಟಿ ಭಕ್ತರು ತಿಮ್ಮಪ್ಪನ ದರ್ಶನ ಪಡೆದು ಲಡ್ಡು ಪ್ರಸಾದ ಸ್ವೀಕರಿಸುತ್ತಿದ್ದಾರೆ. ಹಾಗೇ ಸ್ವೀಕರಿಸುವವರು ಅದೆಷ್ಟೋ ಕೋಟಿ ಜನರು ಸಸ್ಯಹಾರಿಗಳೂ ಇದ್ದಾರೆ. ಅದು ಬೇರೆ ವಿಷ್ಯ, ಆದ್ರೆ, ಈಗ ತಿಮ್ಮಪ್ಪನ ಲಡ್ಡು ಪ್ರಸಾದದಲ್ಲಿ ನಾಯ್ಡು ಸಿಡಿಸಿರೋ ಈ ಬಾಂಬ್ ಅಕ್ಷರಶಃ ಜಗನ್ ಸರ್ಕಾರ ಇಷ್ಟೊಂದು ಕೆಳಮಟ್ಟದಲ್ಲಿ ನಡೆದುಕೊಂಡಿದ್ಯಾ ಎನ್ನುವ ಪ್ರಶ್ನೆ ಮೂಡಿಸಿದೆ.
ಜಂತುಗಳ ಕೊಬ್ಬು ತುಪ್ಪಕ್ಕೆ ಮಿಕ್ಸ್! ಅದರಿಂದ ಲಡ್ಡು ತಯಾರು!
ಇಂಥದ್ದೊಂದು ಸ್ಫೋಟಕ ಸಂಗತಿಯನ್ನು ಹೇಳುವ ಮೂಲಕ ಕೋಟ್ಯಾಂತರ ಭಕ್ತರನ್ನು ಸಂಚಲನಕ್ಕೆ ದೂಡಿದ್ದಾರೆ. ಆಂಧ್ರ ಪ್ರದೇಶದಲ್ಲಿ ಅಸ್ತಿತ್ವಕ್ಕೆ ಬಂದ ಎನ್ಡಿಎ ಮೈತ್ರಿ ಸರ್ಕಾರದ ನೂರನೇ ದಿನದ ಸಂಭ್ರಮದಲ್ಲಿ ನಾಯ್ಡು ಇಂಥದ್ದೊಂದು ಬಾಂಬ್ ಸಿಡಿಸಿದ್ರು. ಇದೇ ವೇಳೆ ಲಡ್ಡು ಪ್ರಸಾದ ತಯಾರಿಕೆಯಲ್ಲಿ ಪ್ರಾಣಿ ಕೊಬ್ಬಿನ ಬಳಕೆ ಆಗಿದೆ ಅನ್ನೋ ಆರೋಪ ಮಾಡಿದ್ದಾರೆ. ಲಡ್ಡು ತಯಾರಿಕೆಗೆ ಬಳಸಲಾಗುವ ತುಪ್ಪಕ್ಕೆ ಪ್ರಾಣಿಗಳ ಕೊಬ್ಬನ್ನ ಮಿಕ್ಸ್ ಮಾಡಿ ಅದರಿಂದ ಲಡ್ಡು ಪ್ರಸಾದ ರೆಡಿ ಮಾಡ್ತಿದ್ದರಂತೆ.
ಇದನ್ನ ಯಾರೋ ಹೇಳಿದ್ದರೇ ಸುಮ್ಮನಿರಬಹುದಿತ್ತು. ಆದರೇ, ಆಂಧ್ರ ಪ್ರದೇಶದ ಸಿಎಂ ಚಂದ್ರಬಾಬು ನಾಯ್ಡುರವರೇ ಇವತ್ತು ಗಂಭೀರ ಆರೋಪ ಮಾಡುತ್ತಿದ್ದಾರೆ. ಈ ಹಿಂದಿನ ಜಗನ್ ಸರ್ಕಾರದ ಅವಧಿಯಲ್ಲಿ ಲಡ್ಡು ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬು ಬಳಸಿದ್ದಾರೆ. ಇಂಥದ್ದೊಂದು ಸಂಗತಿಯನ್ನ ಇದೀಗ ಕೋಟ್ಯಂತರ ಭಕ್ತರಿಗೆ ಅರಗಿಸಿಕೊಳ್ಳೋದಕ್ಕೆ ಆಗುತ್ತಿಲ್ಲ. ಈ ಹಿಂದೆ ಇಂಥದ್ದೇ ಸ್ಫೋಟಕ ಆರೋಪವನ್ನು ತೆಲುಗು ದೇಶಂ ಪಾರ್ಟಿ ನಾಯಕರು ಪ್ರಚಾರ ಮಾಡಿದ್ರು.
ಅನ್ಯಕೋಮಿನ ಉದ್ಯಮಿಗೆ ಲಡ್ಡು ತಯಾರಿಕೆಯ ಟೆಂಡರ್!?
ಇದೇ ಜುಲೈ 18, 2024ರಂದು ಸಂಚಲನದ ಸುದ್ದಿಯೊಂದು ಸ್ಫೋಟಗೊಂಡಿತ್ತು. ಟಿಡಿಪಿ ನಾಯಕರೇ ಪ್ರಚಾರ ಮಾಡಿದ್ದ ಆರೋಪ ತಿಮ್ಮಪ್ಪನ ಭಕ್ತರನ್ನು ಅಕ್ಷರಶಃ ಬೆಚ್ಚಿಬೀಳಿಸಿತ್ತು. ತಿರುಮಲದ ಪವಿತ್ರ ಪ್ರಸಾದ ಲಡ್ಡು ತಯಾರಿಕೆಯ ಟೆಂಡರ್ ಅನ್ಯಕೋಮಿನ ಉದ್ಯಮಿಗೆ ನೀಡಲಾಗಿದೆ. ಈ ಮೂಲಕ ಜಗನ್ ಸರ್ಕಾರ ತಿಮ್ಮಪ್ಪನ ಭಕ್ತರ ನಂಬಿಕೆಗೆ ಧಕ್ಕೆ ತಂದಿದ್ದಾರೆ ಅಂತಾ ಟಿಟಿಡಿ ಹೇಳಿತ್ತು. ಇಂಥದ್ದೊಂದು ಸುದ್ದಿ ಸ್ಫೋಟಗೊಂಡ ಕೂಡಲೇ ಅವತ್ತು ತಿರುಪತಿ ತಿರುಮಲ ದೇವಸ್ಥಾನಂ ಪತ್ರಿಕಾ ಪ್ರಕಟಣೆ ಮೂಲಕ ಸ್ಪಷ್ಟನೆ ನೀಡಿತ್ತು.
ಇದನ್ನೂ ಓದಿ: ಮೊದಲ ಮಗುವಿಗೆ ವೆಲ್ಕಮ್ ಹೇಳಿದ ನಟಿ ಕವಿತಾ ಗೌಡ- ಚಂದನ್ ಕುಮಾರ್.. ಗಂಡಾ, ಹೆಣ್ಣಾ..?
ತಿರುಪತಿ ತಿರುಮಲ ದೇವಸ್ಥಾನಂ (ಟಿಟಿಡಿ)
ತಿರುಮಲ ಶ್ರೀವಾರಿ ಲಡ್ಡು ಪ್ರಸಾದವನ್ನು ಎಷ್ಟೋ ದಶಕಗಳಿಂದ ಶ್ರೀವೈಷ್ಣವ ಬ್ರಾಹ್ಮಣ ಸಂಪ್ರದಾಯದಂತೆ ತಯಾರಿಸಲಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳುತ್ತೇವೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಇಂಥಾ ಸುದ್ದಿಗಳನ್ನು ಭಕ್ತರು ನಂಬಬಾರದು ಅಂತ ಟಿಡಿಡಿ ವಿಜ್ಞಾಪಿಸುತ್ತದೆ.
-ತಿರುಮಲ ತಿರುಪತಿ ದೇವಸ್ಥಾನ ಟ್ರಸ್ಟ್
ಹೀಗೆ ಟಿಡಿಡಿ ಭಕ್ತರಲ್ಲಿ ಮನವಿ ಮಾಡಿತ್ತು. ಅಷ್ಟೇ ಅಲ್ಲ, ಈ ಕ್ಷಣಕ್ಕೂ ತಿರುಮಲದಲ್ಲಿ ಲಡ್ಡು ತಯಾರಿಸುತ್ತಿರುವುದು ವೈಷ್ಣವ ಬ್ರಾಹ್ಮಣರು ಅನ್ನೋ ಸಂಗತಿಯನ್ನು ಹೇಳಿತ್ತು. ಲಡ್ಡು ತಯಾರಿಕೆಗಾಗಿ 980 ವೈಷ್ಣವ ಬ್ರಾಹ್ಮಣರು ಅನುದಿನವೂ ಸೇವೆಯಲ್ಲಿ ಭಾಗಿಯಾಗುತ್ತಿದ್ದಾರೆ ಎಂದಿತ್ತು. ಅಲ್ಲದೇ, ಅನ್ಯಕೋಮಿನ ಯಾವ ಉದ್ಯಮಿ ಲಡ್ಡು ತಯಾರಿಕೆಯ ಟೆಂಡರ್ ಪಡೆದಿಲ್ಲ ಎಂಬುದನ್ನು ಸವಿವರವಾಗಿ ಹೇಳಿತ್ತು.
ಮಾಜಿ ಚೇರ್ಮನ್ ಕೂಡ ಲಡ್ಡು ಬಗ್ಗೆ ಸ್ಫೋಟಕ ಸಂಗತಿ ಬಾಯ್ಬಿಟ್ಟಿದ್ದಾರೆ!
ಬಟ್, ಈ ಮಧ್ಯೆ ತಿರುಮಲ ತಿರುಪತಿ ದೇವಸ್ಥಾನಂ ಟ್ರಸ್ಟ್ನ ಮಾಜಿ ಚೇರ್ಮನ್ ಓ.ವಿ ರಮಣ ಸಹ ಸ್ಫೋಟಕ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ. ಬಹುಮುಖ್ಯವಾಗಿ ಆ ಮೂವರ ಕಾರಣದಿಂದಲೇ ಲಡ್ಡು ಪ್ರಸಾದದ ಪಾವಿತ್ರ್ಯತೆ ಹಾಳಾಗಿದೆ ಎಂದಿದ್ದಾರೆ.
ಈ ಹಿಂದೆ ಲಡ್ಡು ತಯಾರಿಕೆಯಲ್ಲಿ ಗುಣಮಟ್ಟ ಕಳಪೆ ಆಗುತ್ತಿತ್ತು. ಲಡ್ಡು ಗುಣಮಟ್ಟ ಕಡಿಮೆ ಆಗೋದಕ್ಕೆ ಕಾರಣ ತುಪ್ಪ. ಯಾವ ತುಪ್ಪವನ್ನು ಬಳಸಬೇಕೋ? ಅದನ್ನು ಬಳಸುತ್ತಾ ಇರಲಿಲ್ಲ. ಸ್ವಚ್ಛವಾದ ಹಸುವಿನ ತುಪ್ಪವನ್ನು ಲಡ್ಡು ಪ್ರಸಾದ ತಯಾರಿಕೆಗೆ ಬಳಸಬೇಕು. ಇಂಥದ್ದೊಂದು ವಿಚಾರ ಧರ್ಮ ಗ್ರಂಥಗಳಲ್ಲಿದೆ. ಟಿಡಿಡಿ ಪುಸ್ತಕದಲ್ಲೂ ಇದೆ. ಈ ಸಂಪ್ರದಾಯವನ್ನು ಪಕ್ಕಕ್ಕಿಟ್ಟು ಪ್ರಾಣಿಗಳ ಕೊಬ್ಬಿನಿಂದ ಲಡ್ಡು ತಯಾರಿಸಿದ್ದಾರೆ.
-ಓ.ವಿ ರಮಣ, ಮಾಜಿ ಚೇರ್ಮನ್, ಟಿಟಿಡಿ
ತಿರುಮಲದಲ್ಲಿ ಪುಟ್ಟದೊಂದು ಹೂಮಾಲೆಯನ್ನ ತಿಮ್ಮಪ್ಪನಿಗೆ ಹಾಕುವುದಕ್ಕೂ ಧರ್ಮಗ್ರಂಥ ನೋಡುತ್ತಾರೆ. ತಿಮ್ಮಪ್ಪನ ಅಲಂಕಾರಕ್ಕೆ ಬೇಕಾಗುವ ಹೂಗಳ ರಾಶಿಯನ್ನ ನಿಗೂಢ ಹಳ್ಳಿಯೊಂದರಿಂದ ತರಿಸಿಕೊಳ್ತಾರೆ. ಅಲ್ಲಿನ ಶಾಸ್ತ್ರ, ಸಂಪ್ರದಾಯ ಅಷ್ಟು ಕಟ್ಟುನಿಟ್ಟಿನಿಂದ ಇರುತ್ತದೆ. ಹಾಗಾಗಿ ಕೋಟ್ಯಂತರ ಭಕ್ತರು ತಿಮ್ಮಪ್ಪನನ್ನ ಸಂದರ್ಶಿಸುತ್ತಿದ್ದಾರೆ. ಆದರೇ, ಜಗನ್ ಮೋಹನ್ ರೆಡ್ಡಿ ಆಡಳಿತದ ಅವಧಿಯಲ್ಲಿ ಲಡ್ಡು ತಯಾರಿಕೆಗೆ ಪ್ರಾಣಿಗಳನ್ನು ತುಪ್ಪವನ್ನು ಬಳಸಿದ್ದಾರೆ. ತಿರುಮಲದ ಶಾಸ್ತ್ರ, ಧರ್ಮಗ್ರಂಥಗಳನ್ನು ನಂಬಿಕೆ, ಆಚರಣೆಗಳನ್ನೂ ಧಿಕ್ಕರಿಸಿದ್ದಾರೆ ಅಂತ ಟಿಟಿಡಿ ಮಾಜಿ ಚೇರ್ಮನ್ ಓ.ವಿ ರಮಣ ಕೂಡ ಆರೋಪಿಸುತ್ತಿದ್ದಾರೆ. ಇಂಥದ್ದೊಂದು ಆರೋಪ ರಾಜಕೀಯ ಆರೋಪ ಅನ್ನೋ ಮೂಲಕ ಇದೆಲ್ಲಾ ಸುಳ್ಳು ಎನ್ನುತ್ತಿದೆ ವೈಎಸ್ಆರ್ ಕಾಂಗ್ರೆಸ್ ಪಕ್ಷ.
‘ದೇವರ ಮುಂದೆ ಪ್ರಮಾಣಕ್ಕೂ ರೆಡಿ. ತನಿಖೆಗೂ’
ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಆರೋಪಗಳನ್ನ ಜಗನ್ ನೇತೃತ್ವದ ವೈಎಸ್ಆರ್ ಕಾಂಗ್ರೆಸ್ ಸಾರಸಗಟಾಗಿ ತಳ್ಳಿಹಾಕಿದೆ. ಪಕ್ಷದ ನಾಯಕ ಹಾಗೂ ಕಳೆದ 4 ವರ್ಷ ಕಾಲ ಟಿಟಿಡಿ ಚೇರ್ಮನ್ ಆಗಿದ್ದ ವೈವಿ ಸುಬ್ಬಾರೆಡ್ಡಿ ಬೇಕಿದ್ರೆ ಆಣೆ ಮಾಡ್ತೀವಿ ಅವ್ರು ಹೇಳ್ತಿರೋದೆಲ್ಲಾ ಸುಳ್ಳು ಅಂತಾ ಸವಾಲು ಎಸೆದಿದ್ದಾರೆ.
ಇದನ್ನೂ ಓದಿ: ಪದವೀಧರರಿಗೆ ಸರ್ಕಾರಿ ಕೆಲಸ.. ಸ್ಯಾಲರಿ ₹95,000; ಅರ್ಜಿ ಸಲ್ಲಿಸಲು ಕೊನೆ ದಿನಾಂಕ ಯಾವುದು?
ಮಾತಾಡಿದ್ದು ನೀನಾ? ಅಧಿಕಾರಿನಾ? ಇಂದು ನಾನು ಏಕೆ ಹೊಣೆ ಹೊರುತ್ತಿದ್ದೇನೆ ಗೊತ್ತಾ? ನಾನು 4 ವರ್ಷ ಟಿಟಿಡಿ ಚೇರ್ಮನ್ ಆಗಿದ್ದೆ. ಹಾಗಾಗಿ. ನಾನು ಹೊಣೆ ಹೊರಲು ಸಿದ್ಧನಿದ್ದೇನೆ. ಋಜುವಾತುಪಡಿಸಿ ಅಂತ ಹೇಳುತ್ತಿದ್ದೀನಲ್ಲ. ಇಂಥಾ ನೀಚ ಕೆಲಸ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ತಿರುಮಲ ತಿರುಪತಿಯಲ್ಲಿ ಎಂದಿಗೂ ನಡೆದಿಲ್ಲ. 5 ವರ್ಷಗಳಲ್ಲಿ, ಚಂದ್ರಬಾಬು ನಾಯ್ಡು ಅವರನ್ನು ಬರೋದಕ್ಕೆ ಹೇಳಿ. ಸಾಬೀತು ಮಾಡೋದಕ್ಕೆ ಹೇಳಿ. ಅವರೇ ಅಧಿಕಾರದಲ್ಲಿದ್ದಾರೆ. ಯಾವ ತನಿಖೆ ಬೇಕಿದ್ರೂ ಮಾಡೋದಕ್ಕೆ ಹೇಳಿ. ಕೇಂದ್ರದಲ್ಲೂ ಅವರದ್ದೇ ಮೈತ್ರಿ ಸರ್ಕಾರ ಇದೆ. ಯಾವ ತನಿಖೆ ಬೇಕಾದ್ರೂ ಮಾಡಿಸಲಿ. ನಾವು ಸಿದ್ಧರಿದ್ದೀವಿ.
ವೈ.ವಿ ಸುಬ್ಬಾರೆಡ್ಡಿ, ಮಾಜಿ ಚೇರ್ಮನ್, ಟಿಟಿಡಿ
ಕೇಂದ್ರದಲ್ಲೂ, ರಾಜ್ಯದಲ್ಲೂ ಅವರದ್ದೇ ಮೈತ್ರಿ ಸರ್ಕಾರವಿದೆ. ಯಾವ ತನಿಖೆ ಮಾಡಿಸಿದರೂ ನಾವು ಸಿದ್ಧ. ನಮ್ಮ 5 ವರ್ಷಗಳ ಆಡಳಿತ ಅವಧಿಯಲ್ಲಿ ನಾವು ಅಂಥಾ ನೀಚ ಕೆಲಸವನ್ನೇ ಮಾಡಿಲ್ಲ. ರಾಜಕೀಯಕ್ಕಾಗಿ ಕೆಟ್ಟ ಆರೋಪ ಮಾಡುತ್ತಿದ್ದಾರೆ ಅಂತ ಮಾಜಿ ಚೇರ್ಮನ್ ವೈ.ವಿ ಸುಬ್ಬಾರೆಡ್ಡಿ ಖಡಕ್ ಸವಾಲು ಎಸೆದಿದ್ದಾರೆ. ಆದರೇ, ಪ್ರಯೋಗಾಲಯದಲ್ಲಿ ಪರೀಕ್ಷಿಸಲ್ಪಟ್ಟ ಲಡ್ಡು ಸ್ಫೋಟಕ ಸುಳಿವು ನೀಡುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ