/newsfirstlive-kannada/media/post_attachments/wp-content/uploads/2024/09/ttd-1.jpg)
ಸಪ್ತಗಿರಿವಾಸನ ಪ್ರಸಾದವಾದ ಲಡ್ಡು ವಿಚಾರ ದೇಶಾದ್ಯಂತ ಭಾರೀ ಕೋಲಾಹಲವನ್ನು ಎಬ್ಬಿಸಿದೆ. ತಿರುಪತಿ ತಿರುಮಲಕ್ಕೆ ಭಕ್ತಿಯಿಂದ ಬರುವ ಭಕ್ತರು, ಪ್ರಸಾದ ರೂಪದಲ್ಲಿ ಸೇವಿಸುವ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಬಳಕೆ ದೃಢ ಪಟ್ಟಿದೆ. ಇದೀಗ ತಿರುಪತಿ ಲಡ್ಡು ಅಪವಿತ್ರ ಆಗಿದೆ ಅಂತ ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಪ್ರಾಯಶ್ಚಿತ್ತ ದೀಕ್ಷಾ ಕೈಗೊಂಡಿದ್ದಾರೆ. ಜೊತೆಗೆ ಲಡ್ಡು ವಿಚಾರಕ್ಕೆ ರಾಜಕೀಯ ಜಟಾಪಟಿ ಜೋರಾಗಿದೆ.
ಇದನ್ನೂ ಓದಿ: 32 ಪೀಸ್.. ವೈಯಾಲಿಕಾವಲ್ ಮಹಿಳೆ ಕೇಸ್‌ಗೆ ಹೊಸ ಟ್ವಿಸ್ಟ್; ಕೊ*ಲೆಗಾರ ಯಾರು? ಸ್ಫೋಟಕ ಸುಳಿವು ಪತ್ತೆ!
/newsfirstlive-kannada/media/post_attachments/wp-content/uploads/2024/09/ttd-laddu2.jpg)
ತಿರುಪತಿ ತಿಮ್ಮಪ್ಪನ ಲಡ್ಡುವಿನಲ್ಲಿ ತುಪ್ಪದ ಜೊತೆಗೆ ಪ್ರಾಣಿಯ ಕೊಬ್ಬು, ಮೀನಿನ ಎಣ್ಣೆ ಬಳಕೆ ಮಾಡಿರೋದು ಲ್ಯಾಬ್​ ಟೆಸ್ಟ್​ನಲ್ಲಿ ಕನ್ಫರ್ಮ್​ ಆಗಿದೆ. ಈ ವಿಷ್ಯ ಬಯಲಿಗೆ ಬಂದಿದ್ದೇ ತಡ, ಆಂಧ್ರದ ಡಿಸಿಎಂ ಪವನ್​ ಕಲ್ಯಾಣ್​, ಈ ಬಗ್ಗೆ ತನಿಖೆಗಾಗಿ ವಿಶೇಷ ತಂಡ ರಚನೆ ಮಾಡೋದಾಗಿ ಹೇಳಿದ್ರು. ಇದೀಗ ತಿಮ್ಮಪ್ಪನ ಸನ್ನಿಧಿಗೆ ಮಾಡಿರೋ ಅಪವಿತ್ರದ ಪರಿಹಾರಕ್ಕಾಗಿ ಡಿಸಿಎಂ ಪವನ್ ಕಲ್ಯಾಣ್ ವ್ರತಕೈಗೊಂಡಿದ್ದಾರೆ.
11 ದಿನಗಳ ಕಾಲ ಡಿಸಿಎಂ ಪವನ್ ಕಲ್ಯಾಣ್ ಪ್ರಾಯಶ್ಚಿತ್ತ ದೀಕ್ಷಾ ಕೈಗೊಳ್ಳಲು ನಿರ್ಧರಿಸಿದ್ದಾರೆ. ಏಡುಕುಂಡಲವಾಡ ಕ್ಷಮಿಸು ಅಂತ ಪವನ್ ಪ್ರಾಯಶ್ಚಿತ್ತ ದೀಕ್ಷಾ ಕೈಗೊಳ್ಳಲಿದ್ದಾರೆ. ಇಂದು ಗುಂಟೂರಿನ ವೆಂಕ ದೇವಾಲಯದಲ್ಲಿ ಆಂಧ್ರ ಉಪಮುಖ್ಯಮಂತ್ರಿ ದೀಕ್ಷೆಯನ್ನ ಆರಂಭಿಸಲಿದ್ದಾರೆ. 11 ದಿನದ ಬಳಿಕ ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ಪವನ್ ಭೇಟಿ ನೀಡಿ ವ್ರತವನ್ನ ಕೈಬಿಡಲಿದ್ದಾರೆ. ಲಡ್ಡುನಲ್ಲಿ ಪ್ರಾಣಿ ಕೊಬ್ಬು ಬಳಕೆ ವಿಚಾರ ರಾಜಕೀಯ ಜಟಾಪಟಿಗೂ ಕಾರಣವಾಗಿದೆ. ಇದೇ ವಿಚಾರಕ್ಕೆ ಟ್ವೀಟ್ ಮಾಡಿರೋ ಡಿಸಿಎಂ ಪವನ್ ಕಲ್ಯಾಣ್, ಸನಾತನ ಧರ್ಮ ರಕ್ಷಣಾ ಮಂಡಳಿ ರಚನೆ ಮಾಡಬೇಕು ಅಂತ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
/newsfirstlive-kannada/media/post_attachments/wp-content/uploads/2023/06/pavan-kalyan.jpg)
ಇನ್ಮುಂದೆ ದೇಶಾದ್ಯಂತ ಇರುವ ದೇವಾಲಯಗಳಲ್ಲಿ ಇಂತಹ ಕೃತ್ಯಗಳು ನಡೆಯದಂತೆ ತಡೆಯಲು ಪ್ರತ್ಯೇಕ ಸಮಿತಿ ರಚಿಸಬೇಕು. ಸನಾತನ ಧರ್ಮ ರಕ್ಷಣಾ ಮಂಡಳಿಯನ್ನ ತಕ್ಷಣವೇ ಆರಂಭಿಸಬೇಕು. ಸನಾತನ ಧರ್ಮವನ್ನು ಅವಮಾನಿಸುವ ವಿಷಯಗಳನ್ನು ಕೊನೆಗಾಣಿಸಲು ಒಗ್ಗಟ್ಟಾಗಿ ಹೋರಾಡಬೇಕು.
-ಪವನ್ ಕಲ್ಯಾಣ್, ಆಂಧ್ರ ಡಿಸಿಎಂ
ಪವನ್ ಕಲ್ಯಾಣ್ ಟ್ವೀಟ್‌ಗೆ ನಟ ಪ್ರಕಾಶ್ ರಾಜ್ ಗೇಲಿ ಮಾಡಿದ್ದಾರೆ. ಸನಾತನ ಮಂಡಳಿ ಮಾಡೋದು ಬಿಟ್ಟು ಈ ಕೃತ್ಯ ಎಸಗಿದವರಿಗೆ ಮೊದಲು ಶಿಕ್ಷೆ ಕೊಡಿಸಿ ಅಂತ ಟೀಕೆ ಮಾಡಿದ್ದಾರೆ.
/newsfirstlive-kannada/media/post_attachments/wp-content/uploads/2024/04/Prakash-Raj-1.jpg)
ಮಾನ್ಯ ಉಪ ಮುಖ್ಯಮಂತ್ರಿಗಳೇ.. ಈ ಘಟನೆ ನಿಮ್ಮ ಆಡಳಿತಾವಧಿಯಲ್ಲಿಯೇ ನಡೆದಿದೆ. ಈಗಾಗಲೇ ದೇಶದಲ್ಲಿ ಹಲವು ಸಮಸ್ಯೆಗಳಿವೆ. ಮತ್ತೆ ನೀವು ಹೊಸ ಸಮಸ್ಯೆಗಳನ್ನ ಇಲ್ಲಿಗೆ ತರುವುದು ಬೇಡ. ಮೊದಲು ಈ ಕೃತ್ಯ ಎಸಗಿದವರನ್ನು ಪತ್ತೆ ಹಚ್ಚಿ ಅವರಿಗೆ ಶಿಕ್ಷೆ ಕೊಡಿಸುವ ಕಡೆ ನಿಮ್ಮ ಗಮನವಿರಲಿ.
-ಪ್ರಕಾಶ್ ರಾಜ್, ನಟ
ಒಟ್ಟಾರೆ, ತಿರುಪತಿ ಲಡ್ಡು ಅಪವಿತ್ರಗೊಂಡಿದೆ. ಭಕ್ತರ ಭಾವನೆಗೆ ಧಕ್ಕೆಯಾಗಿದೆ. ಈ ವಿಚಾರಕ್ಕೆ ರಾಜಕೀಯ ಕಲಬೆರಕೆ ಮಾಡದೇ ಘೋರ ಅಪರಾಧ ಎಸಗಿದವರ ವಿರುದ್ಧ ಕ್ರಮವಾಗಬೇಕಿದೆ. ಇನ್ಮುಂದೆ ಬಾಲಾಜಿ ಪ್ರಸಾದದ ಪಾವಿತ್ಯ್ರತೆಗೆ ಧಕ್ಕೆ ಬಾರದಂತೆ ಆಂಧ್ರ ಸರ್ಕಾರ ನೋಡಿಕೊಳ್ಳಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us