/newsfirstlive-kannada/media/post_attachments/wp-content/uploads/2024/10/Tissue-saari.jpg)
ಸೀರೆಗಳಲ್ಲಿ ಹಲವು ವಿಧಗಳಿವೆ. ಭಾರತದ ಆಯಾಯ ಭಾಗಗಳಲ್ಲಿ ಸಂಸ್ಕೃತಿಯ ಭಾಗವಾಗಿ ಸೀರೆಗಳನ್ನು ಕಾಣಬಹುದು. ಮೈಸೂರು ಸಿಲ್ಕ್​​, ಕಾಂಚಿವರಂ, ಇಲಕಲ್​ ಸೀರೆ ಹೀಗೆ ಹಲವು ವಿಧದ ಸಾರಿಗಳಿವೆ. ಪ್ರಸ್ತುತ ಸಮಾಜದಲ್ಲಿ ಹೊಸ ಹೊಸ ಸಾರಿಗಳು ಮಾರುಕಟ್ಟೆಗೆ ಬರುತ್ತಿವೆ. ಆದರೀಗ ಅದರ ಪೈಕಿ ‘ಟಿಶ್ಯೂ ಸೀರೆ’ ಜನಪ್ರಿಯವಾಗಿವೆ.
ಟಿಶ್ಯೂ ಸೀರೆ ಸದ್ಯ ಟ್ರೆಂಡಿಂಗ್​​ನಲ್ಲಿರುವ ಸಾರಿ. ಸಿನಿಮಾ ತಾರೆಯರೂ ಕೂಡ ಇದರ ಹಿಂದೆ ಬಿದ್ದಿದ್ದು, ಫ್ಯಾಷನ್​ ಮೇಳಗಳಲ್ಲಿ ಇದನ್ನು ಧರಿಸಿ ಗಮನ ಸೆಳೆಯುತ್ತಿರುತ್ತಾರೆ. ಅಂದಹಾಗೆಯೇ, ಈ ಸೀರೆಯ ಇತಿಹಾಸ ಮತ್ತು ಕರಕುಶಲತೆಯ ಬಗ್ಗೆ ತಿಳಿಯೋಣ.
ಇದನ್ನೂ ಓದಿ: VIDEO: ಹೇರ್ ಕಲರ್ ಮಾಡಿಕೊಳ್ಳುವ ಬರದಲ್ಲಿ ಸಂಗೀತಾ ಶೃಂಗೇರಿ ಯಡವಟ್ಟು.. ಬಣ್ಣ ಬದಲಾಗಿ ಸಿಟ್ಟಿಗೆದ್ದ ಚಾರ್ಲಿ ನಟಿ
ಟಿಶ್ಯೂ ಸೀರೆ ಭಾರತೀಯ ಮೂಲದ್ದು ಎಂಬುದು ಹೆಮ್ಮೆಯ ವಿಚಾರ. ಇದಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಆದರೀಗ ಪ್ರಸ್ತುತ ಟ್ರೆಂಡಿಂಗ್​ನಲ್ಲಿ ಕಾಣಿಸಿಕೊಂಡಿದೆ. ಟಿಶ್ಯೂ ಸೀರೆ ದಕ್ಷಿಣ ಏಷ್ಯಾದಾದ್ಯಂತ ಹಳೆಯ ಉಡುಪುಗಳಲ್ಲಿ ಒಂದಾಗಿ ಕಾಣಿಸಿದೆ.
ಸೀರೆ ಎಂದ ಪದ ಎಲ್ಲಿಂದ ಬಂತು?
ಸೀರೆ ಎಂದ ಪದ ಸಂಸ್ಕೃತದಿಂದ ಬಂದಿದೆ. ‘‘ಸತ್ತಿಕಾ’’ ಎಂಬ ಪದದಿಂದ ಇದು ಬಂದಿದೆ. ಶತಮಾನಗಳಿಂದ ಸೀರೆಯ ವಿನ್ಯಾಸ ಮತ್ತು ಫ್ಯಾಬ್ರಿಕ್​, ಡ್ರಾಪಿಂಗ್​ ಶೈಲಿ ವಿಕಸನಗೊಂಡಿದೆ.
ಟಿಶ್ಯೂ ಸೀರೆ ಹೇಗೆ ತಯಾರಿಸಲಾಗುತ್ತದೆ?
ಟಿಶ್ಯೂ ಸೀರೆಯನ್ನು ಹಗುರವಾದ ಬಟ್ಟೆಯಿಂದ ತಯಾರಿಸಲಾಗುತ್ತದೆ. ರೇಷ್ಮೆ ಅಥವಾ ರೇಷ್ಮೆ ಮಿಶ್ರಣದ ಬೇಸ್​ ಬಳಸಿ ಮತ್ತು ಚಿನ್ನ ಅಥವಾ ಬೆಳ್ಳಿಯ ಬಣ್ಣದ ಲೋಹದ ಎಲೆಗಳಿಂದ ಇದನ್ನು ನೇಯಲಾಗುತ್ತದೆ. ಇದರಿಂದ ಸೀರೆ ಮೇಲ್ಮೈ ಹೊಳೆಯುತ್ತದೆ. ಮಿನುಗುವ ಕಾರಣಕ್ಕೆ ಇದು ಐಷಾರಾಮಿ ಸೀರೆಯಂತೆ ಕಾಣುತ್ತದೆ. ಮದುವೆ, ದೀಪಾವಳಿ ಹಬ್ಬದ ಸಂದರ್ಭದಲ್ಲಿ ಇದನ್ನು ಮಹಿಳೆಯರು ಬಳಸಲು ಮುಂದಾಗುತ್ತಾರೆ.
ಇದನ್ನೂ ಓದಿ: ವಿಷಸರ್ಪ ಕಚ್ಚಿ ಮೂವರು ಸಾ*ವು.. ಪುಂಗಿದಾಸನನ್ನು ಕರೆಸಿ ಹಾವು ಹಿಡಿಯಲು ಮುಂದಾದ ಅರಣ್ಯ ಇಲಾಖೆ
ಬನಾರಸ್​ನಂತರ ಪ್ರದೇಶಗಳಲ್ಲಿ ಇಂತಹ ಟಿಶ್ಯೂ ಸೀರೆಗಳನ್ನು ತಯಾರಿಸುತ್ತಾರೆ. ಕುಶಲಕರ್ಮಿಗಳು ಸಾಂಪ್ರದಾಯಿಕ ಕೈಮಗ್ಗ ಬಳಸಿ ಸೀರೆಯನ್ನು ನೇಯುತ್ತಾರೆ.
ರೇಷ್ಮೆ ಸೀರೆಗಳಿಗೆ ಹೋಲಿಸಿದರೆ ಟಿಶ್ಯೂ ಸೀರೆ ತುಂಬಾ ಹಗುರವಾಗಿದೆ. ದಿನನಿತ್ಯ ಧರಿಸಲು ಆರಾಮದಾಯಕವಾಗಿದೆ. ಸದ್ಯ ಮಾರುಕಟ್ಟೆಯಲ್ಲಿ ಈ ಸೀರೆ ಯುವತಿಯರನ್ನು ಸೆಳೆದಿದೆ. ಫ್ಯಾಷನ್​ ಲೋಕದಲ್ಲಿ ಈ ಸೀರೆ ಜನಪ್ರಿಯತೆ ಪಡೆಯುತ್ತಿದೆ. ಸಿನಿ ತಾರೆಯರಂತೂ ಟಿಶ್ಯೂ ಸೀರೆಯನ್ನು ಹೆಚ್ಚಾಗಿ ಧರಿಸುತ್ತಿದ್ದಾರೆ. ಸುಲಭವಾಗಿ ಧರಿಸಬಹುದಾದ ಮತ್ತು ಹೆಚ್ಚು ಸಮಯ ಧರಿಸಲು ಯೋಗ್ಯವಾಗಿದೆ. ಹೀಗಾಗಿ ಈ ಸೀರೆಗೆ ಡಿಮ್ಯಾಂಡ್​ ಹೆಚ್ಚಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us