ಬಸ್​​ ಸ್ಟಾಪ್​ನಲ್ಲಿ ಸಿಕ್ಕ ಈ ವರ್ಣಚಿತ್ರಕ್ಕೆ ಭಾರೀ ಬೇಡಿಕೆ.. ₹200 ಕೋಟಿಗೂ ಅಧಿಕ ಬೆಲೆಗೆ ಸೇಲ್ ಆಗೋ ನಿರೀಕ್ಷೆ!

author-image
Bheemappa
Updated On
ಬಸ್​​ ಸ್ಟಾಪ್​ನಲ್ಲಿ ಸಿಕ್ಕ ಈ ವರ್ಣಚಿತ್ರಕ್ಕೆ ಭಾರೀ ಬೇಡಿಕೆ.. ₹200 ಕೋಟಿಗೂ ಅಧಿಕ ಬೆಲೆಗೆ ಸೇಲ್ ಆಗೋ ನಿರೀಕ್ಷೆ!
Advertisment
  • ಈ ರೇಖಾ ಚಿತ್ರದ ಹಿನ್ನೆಲೆ ಏನು? ಯಾಕೆ ಇಷ್ಟೊಂದು ಡಿಮ್ಯಾಂಡ್?
  • ಈ ವರ್ಣಚಿತ್ರವನ್ನು ಎರಡು ಬಾರಿ ಕಳ್ಳತನ ಮಾಡಲಾಗಿತ್ತು
  • ಅಮೋಘವಾದ ವರ್ಣಚಿತ್ರ ಯಾವ್ಯಾವ ಸಂಬಂಧ ಹೇಳುತ್ತದೆ?

ಇಟಾಲಿಯನ್ ನವೋದಯ ವರ್ಣಚಿತ್ರಕಾರ, ನವೋದಯ ವೆನೆಷಿಯನ್ ಚಿತ್ರಕಲೆ ಕಲಾವಿದ ಮಾಸ್ಟರ್ ಟಿಟಿಯನ್ ಅವರು ಬಿಡಿಸಿದ್ದ ವರ್ಣಚಿತ್ರವನ್ನು 1809ರಲ್ಲಿ ಕಳ್ಳತನ ಮಾಡಲಾಗಿತ್ತು. ನಂತರ 1995ರಲ್ಲಿ ಮತ್ತೆ ಇದು ಲಂಡನ್​ನ ಬಸ್ ನಿಲ್ದಾಣದಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ಪತ್ತೆಯಾಗಿದೆ. ಇಂತಹ ಮನಮೋಹಕ ಚಿತ್ರ ಹರಾಜಿಗೆ ಇಡಲಾಗಿದ್ದು 264 ಕೋಟಿ ರೂಪಾಯಿಗಳಿಗೆ ಮಾರಾಟವಾಗುವ ನಿರೀಕ್ಷೆ ಇದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ:ಮಾಜಿ ಸಿಎಂ HD ಕುಮಾರಸ್ವಾಮಿ, ಬೊಮ್ಮಾಯಿ, ತುಕಾರಾಂ ರಾಜೀನಾಮೆ.. ಬೈ ಎಲೆಕ್ಷನ್ ಯಾವಾಗ?

ಈ ವರ್ಣಚಿತ್ರದಲ್ಲಿ ವರ್ಜಿನ್ ಮೇರಿಯು ಶಿಶು ಯೇಸುವನ್ನು ಅಪ್ಪಿಕೊಂಡು ತೊಟ್ಟಿಲುಗೆ ಹಾಕುತ್ತಿದ್ದು ಇದನ್ನು ಜೋಸೆಫ್​ ನೋಡುತ್ತಿರುವುದನ್ನ ಚಿತ್ರೀಸಲಾಗಿದೆ. ಈ ದೃಶ್ಯವು ಜೋಸೆಫ್ ಅನ್ನು ನೆನಪಿಸುತ್ತದೆ, ಜುದೇಯ ಮಹಾರಾಜನು ಶಿಶು ಯೇಸುವನ್ನು ಕೊಲ್ಲಲು ಆದೇಶಿಸಿರುತ್ತಾನೆ. ತಕ್ಷಣವೇ ಮೇರಿ ಮತ್ತು ಮಗುವನ್ನು ಸುರಕ್ಷಿತವಾಗಿ ಈಜಿಪ್ಟ್​ಗೆ ಕರೆದೊಯ್ಯತ್ತಾಳೆ. ಈ ವೇಳೆ ಒಂದು ಪ್ರದೇಶದಲ್ಲಿ ಮೂವರು ವಿಶ್ರಾಂತಿ ಪಡೆಯುತ್ತಿರುವುದನ್ನು ಮಹಾನ್ ಕಲಾವಿದ ಟಿಟಿಯನ್ ಅವರು ಚಿತ್ರೀಸಿದ್ದಾರೆ. ಇದು ತಾಯಿ ಮತ್ತು ಮಗನ ನಡುವಿನ ಬಾಂಧವ್ಯದ ನಿಕಟ ಕ್ಷಣವಾಗಿದೆ ಎಂದು ಈ ಫೋಟೋ ಹೇಳುತ್ತದೆ.

ಇದನ್ನೂ ಓದಿ: ಪೆಟ್ರೋಲ್, ಡೀಸೆಲ್​ ಬೆಲೆ ಏರಿಕೆ ಯಾವಾಗಿನಿಂದ..? ಸಂಜೆಯಿಂದಲೇ ಸುಲಿಗೆಗೆ ನಿಂತ ಬಂಕ್​ಗಳು

publive-image

17ನೇ ಶತಮಾನದ ಆರಂಭದಲ್ಲಿ ವೆನೆಷಿಯನ್ ಮಸಾಲೆ ವ್ಯಾಪಾರಿಯ ಬಳಿ ಮೊದಲು ಈ ವರ್ಣಚಿತ್ರವಿತ್ತು. ನಂತರದ ಶತಮಾನಗಳಲ್ಲಿ ಯುರೋಪ್‌ನಾದ್ಯಂತ ವಿವಿಧ ಶ್ರೀಮಂತರು, ಚಕ್ರವರ್ತಿಗಳು ಮತ್ತು ಆರ್ಚ್‌ಡ್ಯೂಕ್‌ಗಳ ಒಡೆತನದಲ್ಲಿ ಇದು ಕಂಡು ಬಂದಿದೆ.

ಇದನ್ನೂ ಓದಿ: ಸಿನಿಮಾ ಫೈಟ್​ ರೀತಿಯಲ್ಲೇ ರೇಣುಕಾಸ್ವಾಮಿಗೆ ದರ್ಶನ್​ ಡಿಚ್ಚಿ.. ಹೇಗಿದೆ ಗೊತ್ತಾ ದಾಸನ ಅಟ್ಟಹಾಸ?

ಜುಲೈ 2 ರಂದು ನಡೆಯು ಹರಾಜಿನಲ್ಲಿ ಭಾರೀ ಮಟ್ಟಕ್ಕೆ ಈ ಚಿತ್ರಕಲೆ ಮಾರಾಟವಾಗುವ ನಿರೀಕ್ಷೆ ಇದೆ. 264 ಕೋಟಿ ರೂಪಾಯಿಗಳಿಗಿಂತೂ ಅಧಿಕ ಹಣಕ್ಕೆ ಮಾರಾಟವಾಗುವ ಸಾಧ್ಯತೆ ಇದೆ. ಇದು 1995 ರಲ್ಲಿ ಕದ್ದಾಗ ಮತ್ತು ನಂತರ 2002 ರಲ್ಲಿ ನೈಋತ್ಯ ಲಂಡನ್‌ನ ಬಸ್ ನಿಲ್ದಾಣದಲ್ಲಿ ಅಂದಿನ ಪ್ರಮುಖ ಕಲಾ ಪತ್ತೇದಾರಿ ಚಾರ್ಲ್ಸ್ ಹಿಲ್ ಅವರಿಂದ ಬ್ಯಾಗ್‌ನಲ್ಲಿ ಪತ್ತೆಯಾಗಿತ್ತು ಎಂದು ಹೇಳಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment