ಸಚಿವರ ಬೆಂಗಾವಲು ವಾಹನದ ಮೇಲೆ ದುಷ್ಕರ್ಮಿಗಳು ದಾಳಿ.. ಕಾರಿನ ಗ್ಲಾಸ್​ ಪೀಸ್ ಪೀಸ್..!

author-image
Bheemappa
Updated On
ಸಚಿವರ ಬೆಂಗಾವಲು ವಾಹನದ ಮೇಲೆ ದುಷ್ಕರ್ಮಿಗಳು ದಾಳಿ.. ಕಾರಿನ ಗ್ಲಾಸ್​ ಪೀಸ್ ಪೀಸ್..!
Advertisment
  • ತಮ್ಮ ಪಕ್ಷದ ಗೆಲುವಿಗಾಗಿ ಕ್ಯಾಂಪೇನ್ ಮಾಡ್ತಿರುವ ನಾಯಕರು
  • ಬೆಂಗಾವಲು ವಾಹನದ ಮೇಲೆ ದಾಳಿ, ಒಡೆದು ಹೋದ ಗ್ಲಾಸ್
  • ಈಗಾಗಲೇ ದೇಶದಲ್ಲಿ ಚುನಾವಣಾ ಪ್ರಚಾರದ ಕಾವು ಹೆಚ್ಚಾಗಿದೆ

ನವದೆಹಲಿ: ದೇಶದಲ್ಲಿ ಚುನಾವಣಾ ಸಮರ ತಾರಕಕ್ಕೇರಿದ್ದು ರಾಜಕೀಯ ಪಕ್ಷದ ನಾಯಕರ ಬೆಂಗಾವಲು ವಾಹನಗಳ ದಾಳಿ ನಡೆಯುತ್ತಲೇ ಇವೆ. ಉತ್ತರ ಪ್ರದೇಶದ ಮುಜಾಫರ್‌ನಗರದಲ್ಲಿ ಕೇಂದ್ರ ಸಚಿವ ಸಂಜೀವ್ ಬಲ್ಯಾನ್ ಅವರ ಬೆಂಗಾವಲು ವಾಹನಗಳ ಮೇಲೆ ಕಲ್ಲು ತೂರಾಟ ಮಾಡಲಾಗಿತ್ತು. ಸದ್ಯ ಇದರ ಬೆನ್ನಲ್ಲೇ ಪಶ್ಚಿಮ ಬಂಗಾಳದ ಸಚಿವ ಉದಯನ್ ಗುಹಾ ಅವರ ವಾಹನದ ಮೇಲೂ ಕಿಡಿಗೇಡಿಗಳು ಏಕಾಏಕಿ ದಾಳಿ ಮಾಡಿದ್ದಾರೆ.

publive-image

ಇದನ್ನೂ ಓದಿ: ಸಿಟಿಯೆಲ್ಲ ತೋರಿಸ್ತೀನೆಂದು ಮಾನಸಿಕ ಅಸ್ವಸ್ಥ ಬಾಲಕಿ ಮೇಲೆ ಅತ್ಯಾಚಾರ.. ಉಬರ್​ ಕ್ಯಾಬ್ ಡ್ರೈವರ್​ನಿಂದ ಕೃತ್ಯ

ಪಶ್ಚಿಮ ಬಂಗಾಳದ ಸಚಿವ ಉದಯನ್ ಗುಹಾ ಬೆಂಗಾವಲು ವಾಹನದ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿ, ಕಾರಿನ ಗ್ಲಾಸ್​ ಒಡೆದು ಹಾಕಿದ್ದಾರೆ.. ಬಿಜೆಪಿ ನಾಯಕ, ಕೇಂದ್ರ ಸಚಿವ ನಿಸಿತ್ ಪ್ರಮಾಣಿಕ್ ಬೆಂಬಲಿಗರಿಂದ ಈ ದಾಳಿ ನಡೆದಿದೆ ಎಂದು ತೃಣಮೂಲ ಕಾಂಗ್ರೆಸ್ ಆರೋಪಿಸ್ತಿದೆ. ಕೂಚ್ ಬೆಹಾರ್ ಪ್ರದೇಶದಲ್ಲಿ ಈ ದಾಳಿ ನಡೆದಿದ್ದು, ಟಿಎಂಸಿ ಚುನಾವಣಾ ಪ್ರಚಾರ ಸಭೆ ವೇಳೆ ಈ ಘಟನೆ ನಡೆದಿದೆ. ದಾಳಿಯಲ್ಲಿ ಟಿಎಂಸಿ ಪಕ್ಷದ ಹಲವಾರು ಕಾರ್ಯಕರ್ತರು ಗಾಯಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಟಿಎಂಸಿ ಆರೋಪಗಳನ್ನು ಬಿಜೆಪಿ ತಳ್ಳಿಹಾಕಿದ್ದು ಇದಕ್ಕೆಲ್ಲ ನಾವು ಕಾರಣರಲ್ಲ ಎಂದು ಹೇಳಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment