/newsfirstlive-kannada/media/post_attachments/wp-content/uploads/2024/04/Darshan-in-mndya-2.jpg)
ರಾಜ್ಯದಲ್ಲಿ ಮೊದಲ ಹಂತದ ಮತದಾನಕ್ಕೆ ಎರಡೇ ದಿನಗಳ ಬಾಕಿ ಇದೆ. ಲೋಕ ಸಮರದಲ್ಲಿ ಗೆಲುವಿಗೆ ಕಾಂಗ್ರೆಸ್​ ಮತ್ತು ಕಮಲ-ದಳ ಮೈತ್ರಿ ಪಡೆ ಅಬ್ಬರದ ಪ್ರಚಾರ ನಡೆಸಿ, ಭರ್ಜರಿ ಮತಯಾಚನೆ ಮಾಡಿದೆ. ಇವತ್ತು ರಾಜ್ಯದ 14 ಕ್ಷೇತ್ರ ಮೊದಲ ಹಂತದ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ.
ಕಾಂಗ್ರೆಸ್​ ಅಭ್ಯರ್ಥಿ ಪರ ಮತಯಾಚಿಸಿರುವ ‘ದಾಸ’
ಮೊದಲ ಹಂತದ 14 ಕ್ಷೇತ್ರಗಳಲ್ಲಿ ಇಂದು ಸಂಜೆ 6 ಗಂಟೆಗೆ ಬಹಿರಂಗ ಪ್ರಚಾರ ಮುಕ್ತಾಯವಾಗಲಿದೆ. ಈ ಹಿನ್ನೆಲೆ ಕೊನೆ ದಿನ ಕಾಂಗ್ರೆಸ್​ ಅಭ್ಯರ್ಥಿ ಅಬ್ಬರದ ಪ್ರಚಾರಕ್ಕೆ ಪ್ಲಾನ್​ ಮಾಡಿದ್ದಾರೆ. ಇಡೀ ದೇಶದ ಗಮನ ಸೆಳೆದಿರುವ ಮಂಡ್ಯದಲ್ಲಿ ಈಗಾಗಲೇ ಸ್ಟಾರ್​ ಚಂದ್ರು ಪರ ನಟ ದರ್ಶನ್​ ಮತಬೇಟೆಯಾಡುತ್ತಿದ್ದಾರೆ. ಬಹಿರಂಗ ಪ್ರಚಾರದ ಕೊನೆ ದಿನವಾದ ಇವತ್ತು ಇಡೀ ದಿನ ಮಂಡ್ಯದಲ್ಲಿ ಸ್ಟಾರ್​ ಚಂದ್ರು ಪರ ಚಾಲೆಂಜಿಂಗ್​ ಸ್ಟಾರ್​ ಮತಯಾಚನೆ ಮಾಡಲಿದ್ದಾರೆ.
ಇದನ್ನೂ ಓದಿ:ದೇಶಕ್ಕಾಗಿ ನನ್ನ ತಾಯಿಯ ಮಂಗಲಸೂತ್ರ ಬಲಿದಾನ -ಮೋದಿ ಹೇಳಿಕೆ ಖಂಡಿಸಿ ಪ್ರಿಯಾಂಕ ಗಾಂಧಿ ಎಮೋಷನಲ್
/newsfirstlive-kannada/media/post_attachments/wp-content/uploads/2024/04/SOUMYA-REDDY-2.jpg)
ಮೈತ್ರಿ ಅಭ್ಯರ್ಥಿ ಹೆಚ್​.ಡಿ.ಕುಮಾರಸ್ವಾಮಿ ಕೂಡ ಮತ ಶಿಕಾರಿ ಮುಂದುವರೆಸಲಿದ್ದಾರೆ. ಬಹಿರಂಗ ಪ್ರಚಾರದ ಕೊನೆಯ ದಿನ ಮಂಡ್ಯ ನಗರದಲ್ಲಿ ಹೆಚ್​ಡಿಕೆ ಭರ್ಜರಿ ಪ್ರಚಾರ ಮಾಡಲಿದ್ದಾರೆ. ಈ ವೇಳೆ ಬಿಜೆಪಿ-ಜೆಡಿಎಸ್​ನ ನಾಯಕರು ಮಾಜಿ ಸಿಎಂಗೆ ಸಾಥ್​ ನೀಡಲಿದ್ದಾರೆ.
ಬೆಂಗಳೂರು ದಕ್ಷಿಣದಲ್ಲಿ ಯುವ ಸಮೂಹವೇ ಟಾರ್ಗೆಟ್​
ಬೆಂಗಳೂರು ದಕ್ಷಿಣ ಕ್ಷೇತ್ರದ ಕದನ ಕಣದಲ್ಲಿ ಅತಿರಥ ಮಹಾರಥರು ಅಬ್ಬರದ ಪ್ರಚಾರ ನಡೆಸಿದ್ದಾರೆ. ಪ್ರಿಯಾಂಕಾ ಗಾಂಧಿ ಬಳಿಕ ಬಿಜೆಪಿ ಚುನಾವಣಾ ಚಾಣಕ್ಯ ಅಮಿತ್​ ಶಾ, ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಪರ ಭರ್ಜರಿ ರೋಡ್​ ಶೋ ನಡೆಸಿದ್ರು. ಸುಮಾರು ಒಂದೂವರೆ ಕಿಲೋ ಮೀಟರ್ ಉದ್ದಕ್ಕೂ ರೋಡ್ ಶೋ ಮಾಡಿ, ಯುವ ಮತದಾರರ ಗಮನ ಸೆಳೆದರು. ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಜನರತ್ತ ಅಮಿತ್​ ಶಾ ಕೈ ಬೀಸಿ, ಬಿಜೆಪಿಗೆ ಮತ ನೀಡುವಂತೆ ಮನವಿ ಮಾಡಿದ್ದಾರೆ.
/newsfirstlive-kannada/media/post_attachments/wp-content/uploads/2024/04/ELECTION-2.jpg)
ಯಾವೆಲ್ಲ ಕ್ಷೇತ್ರಗಳ ಪ್ರಚಾರಕ್ಕೆ ತೆರೆ..?
ಉಡುಪಿ -ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ, ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಲೋಕಸಭೆ ಕ್ಷೇತ್ರಗಳ ಬಹಿರಂಗ ಚುನಾವಣಾ ಪ್ರಚಾರಕ್ಕೆ ತೆರೆ ಬೀಳಲಿದೆ. ಒಟ್ಟು 247 ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದಾರೆ.
ಒಟ್ಟಾರೆ.. ರಾಜ್ಯದಲ್ಲಿ ಮೊದಲ ಹಂತದ 14 ಕ್ಷೇತ್ರಗಳಿಗೆ, ನಾಡಿದ್ದು ಮತದಾನ ನಡೆಯಲಿದೆ. ಇಂದು ಸಂಜೆ 6 ಗಂಟೆಗೆ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದ್ದು. ಬಳಿಕ ಮನೆ ಮನೆ ಪ್ರಚಾರಕ್ಕೆ ಮಾತ್ರ ಅವಕಾಶ ಇರಲಿದೆ.
ಇದನ್ನೂ ಓದಿ:ಶ್ರೀರಾಮನ ಫೋಟೋ ಇರುವ ಪ್ಲೇಟ್​ನಲ್ಲಿ ಬಿರಿಯಾನಿ ಊಟ; ಭುಗಿಲೆದ್ದ ಮತ್ತೊಂದು ವಿವಾದ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us