Gold Rate: ಬಂಗಾರಿ ಯಾರೇ ನೀ ಬುಲ್​ ಬುಲ್​.. ಇಂದು ಎಷ್ಟಿದೆ ಗೊತ್ತಾ ಬಂಗಾರದ ಬೆಲೆ?

author-image
AS Harshith
Updated On
ಹಬ್ಬದ ಸೀಸನ್​​ನಲ್ಲಿ ಚಿನ್ನ ಖರೀದಿ ಎಷ್ಟು ಸೇಫ್​​? ನೀವು ಓದಲೇಬೇಕಾದ ಸ್ಟೋರಿ!
Advertisment
  • ಇಂದು ಬೆಂಗಳೂರಲ್ಲಿ ಚಿನ್ನದ ಬೆಲೆ ಎಷ್ಟಿದೆ?
  • ಬೆಳ್ಳಿಯ ಬೆಲೆ ಇಳಿಕೆ ಕಂಡಿದೆಯಾ? ಹೇಗಿದೆ ಮಾರುಕಟ್ಟೆ
  • ಇಂದು ಇಳಿಕೆ ಕಂಡಿದೆಯಾ? ಏರಿಕೆ ಕಂಡಿದೆಯಾ? ತಿಳಿಯಿರಿ

ಪ್ರಪಂಚದಾದ್ಯಂತ ಬಂಗಾರಕ್ಕೆ ವಿಶೇಷ ಬೇಡಿಕೆ ಇದೆ. ವಿವಿಧ ದೇಶಕ್ಕೆ ಹೋಲಿಸಿದರೆ ಭಾರತದಲ್ಲಿ ಬೇಡಿಕೆ ತುಸು ಜಾಸ್ತಿ. ಭಾರತೀಯ ಮಹಿಳೆಯರು ಆಭರಣ ಪ್ರೀಯರಾಗಿರುವುದರಿಂದ ಮತ್ತು ಸಂಸ್ಕೃತಿ ಪಾಲಿಸಿಕೊಂಡು ಮುನ್ನಡೆಯುವುದರಿಂದ ಚಿನ್ನವನ್ನು ಧರಿಸುವವರ ಸಂಖ್ಯೆ ಹಾಗೆಯೇ ಉಳಿದಿದೆ.

ಸದ್ಯದ ಪರಿಸ್ಥಿತಿ ಕಂಡಾಗ ಬಂಗಾರಕ್ಕೆ ಬೇಡಿಕೆ ಜೊತೆಗೆ ಬೆಲೆಯೂ ಗಗನಕ್ಕೇರಿದೆ. ಅದರಲ್ಲೂ ಬಹುತೇಕರು ಭವಿಷ್ಯವನ್ನು ನಿರ್ಧರಿಸಿ ಚಿನ್ನದ ಮೇಲೆ ಹೂಡಿಕೆ ಮಾಡುತ್ತಿದ್ದಾರೆ. ಭಾರತದಲ್ಲಿ ಹಬ್ಬ ಹರಿದಿನ ಬಂತೆಂದರೆ ಚಿನ್ನ ಖರೀದಿಸುವವರ ಸಂಖ್ಯೆಯೂ ಹೆಚ್ಚಾಗುತ್ತದೆ.

ಕಳೆದೆರಡು ದಿನಗಳಿಂದ ಚಿನ್ನದ ಬೆಲೆ ಗಮನಿಸಿದಾಗ ಕೊಂಚ ಏರಿಕೆ ಕಂಡಿದೆ. ಆದರೆ ನಿನ್ನೆ ಮತ್ತು ಇಂದಿನ ದರ ತಟಸ್ಥವಾಗಿದೆ. ಅಂದರೆ ಒಂದು ರೂಪಾಯಿಯಷ್ಟು ಕಡಿಮೆಯಾಗಿದೆ. ಆದರೆ ಚಿನ್ನದ ದರ ನಿಂತ ನೀರಲ್ಲ. ಯಾವಾಗ ಬೇಕಾದ್ರೂ ಏರಿಳಿತವಾಗುವ ಸಾಧ್ಯತೆ ಇದೆ. ಇಂದು ಬೆಂಗಳೂರಲ್ಲಿ ಬಂಗಾರ ಮತ್ತು ಬೆಳ್ಳಿ ದರ ಎಷ್ಟಿದೆ ನೋಡೋಣ.

ಇದನ್ನೂ ಓದಿ: ಕರ್ನಾಟಕ ಕಂದಾಯ ಇಲಾಖೆಯಲ್ಲಿ ಉದ್ಯೋಗವಕಾಶ.. ಅರ್ಜಿ ಸಲ್ಲಿಸಲು 3 ದಿನ ಬಾಕಿ

22 ಕ್ಯಾರೆಟ್​ನ ಚಿನ್ನದ ಬೆಲೆ ಎಷ್ಟು?

ಬೆಂಗಳೂರಿನಲ್ಲಿ ಇವತ್ತು 22 ಕ್ಯಾರೆಟ್​ನ 1 ಗ್ರಾಂ ಚಿನ್ನದ ಬೆಲೆ ₹ 6,693 ಇದೆ.

22 ಕ್ಯಾರೆಟ್​ನ 10 ಗ್ರಾಂ ಚಿನ್ನದ ಬೆಲೆ ₹ 66,930 ಇದೆ.

24 ಕ್ಯಾರೆಟ್​ನ ಚಿನ್ನದ ಬೆಲೆ ಎಷ್ಟು?

ಬೆಂಗಳೂರಿನಲ್ಲಿ ಇವತ್ತು 24 ಕ್ಯಾರೆಟ್​ನ 1 ಗ್ರಾಂ ಚಿನ್ನದ ದರ ₹ 7302 ಆಗಿದೆ.

24 ಕ್ಯಾರೆಟ್​ನ 10 ಗ್ರಾಂ ಚಿನ್ನದ ಬೆಲೆ ₹ 73,020 ಇದೆ.

publive-image

ಇದನ್ನೂ ಓದಿ: ಹೆಣ್ಣಿಗೆ ಕುಂಕುಮವೇ ಅಂದ ಚೆಂದ.. ಅದರ ಹಿಂದಿರುವ ವೈಜ್ಞಾನಿಕ ಕಾರಣವೇನು? ತಪ್ಪದೇ ಈ ಸ್ಟೋರಿ ಓದಿ!

ಬೆಳ್ಳಿಯ ಬೆಲೆ ಎಷ್ಟಿದೆ?

ಇವತ್ತು ಬೆಂಗಳೂರಿನಲ್ಲಿ 1 ಗ್ರಾಂ ಬೆಳ್ಳಿಯ ಬೆಲೆ ₹ 88.60 ಇದೆ.
ಹಾಗೇ ಇಂದು 1 ಕೆ.ಜಿ ಬೆಳ್ಳಿಯ ಬೆಲೆ ₹ 88,600 ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment