ಬಳ್ಳಾರಿಗೆ ಹೋದರೂ ಬಿಡಲ್ಲ ಬೆಂಗಳೂರು ಪೊಲೀಸರು; ದರ್ಶನ್ ನಿರಾಳರಾಗೋ ಮಾತೇ ಇಲ್ಲ, ಯಾಕೆಂದರೆ..!

author-image
Ganesh
Updated On
ದರ್ಶನ್‌ಗೆ ರಾಜಾತಿಥ್ಯ ಸಿಕ್ಕ ಕೇಸ್‌ಗೆ ಟ್ವಿಸ್ಟ್‌.. ವಿಲ್ಸನ್ ಗಾರ್ಡನ್ ನಾಗ ಬೇರೆ ಜೈಲಿಗೆ ಶಿಫ್ಟ್‌; ಎಲ್ಲಿಗೆ?
Advertisment
  • ಪರಪ್ಪನ ಅಗ್ರಹಾರದಲ್ಲಿ ರಾಜಾಧಿತ್ಯದ ತಪ್ಪಿಗೆ ಬಳ್ಳಾರಿ ಜೈಲಿಗೆ ಶಿಫ್ಟ್
  • ಬೆಂಗಳೂರಿನಿಂದ ಬಳ್ಳಾರಿಗೆ ಹೋದರೂ ಸಂಕಷ್ಟ ಮಾತ್ರ ತಪ್ಪುತ್ತಿಲ್ಲ
  • ಈಗಾಗಲೇ 25 ದಿನಗಳ ವಿಚಾರಣೆಗೆ ಅನುಮತಿ ಪಡೆಯಲಾಗಿದೆ

ಬಳ್ಳಾರಿ: ಪರಪ್ಪನ ಅಗ್ರಹಾರದಲ್ಲಿ ರಾಜಾಧಿತ್ಯದ ತಪ್ಪಿಗೆ ಕೊಲೆ ಆರೋಪಿ ದರ್ಶನ್​​ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಬೆಂಗಳೂರಿನಿಂದ ಬಳ್ಳಾರಿಗೆ ಹೋದರೂ ದರ್ಶನ್​​ಗೆ ಸಂಕಷ್ಟ ಮಾತ್ರ ತಪ್ಪುತ್ತಿಲ್ಲ.

ದರ್ಶನ ವಿಚಾರಣೆಗೆ ಬೆಂಗಳೂರು ಪೊಲೀಸರು ಬಳ್ಳಾರಿಗೆ ಬರಲಿದ್ದಾರೆ. ಈಗಾಗಲೇ ಕೋರ್ಟ್​ನಿಂದ 25 ದಿನಗಳ ಅನುಮತಿಯನ್ನು ಪಡೆದುಕೊಂಡಿದ್ದಾರೆ. ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿ ದರ್ಶನ್​​ನನ್ನು ಪೊಲೀಸರು ವಿಚಾರಣೆ ಮಾಡಲಿದ್ದಾರೆ. ಅಂತೆಯೇ ಇಂದು ಬೆಂಗಳೂರಿನ ಪೊಲೀಸರು ಬಳ್ಳಾರಿಗೆ ಬರಲಿದ್ದಾರೆ.

ವಿಡಿಯೋ ಕಾಲ್, ಟೀ ಪಾರ್ಟಿ ಫೋಟೋ ವೈರಲ್ ಸಂಬಂಧ ದರ್ಶನ್ ಮೇಲೆ ಕೇಸ್ ದಾಖಲಾಗಿದೆ. ಫೋಟೋ, ವಿಡಿಯೋ ವೈರಲ್ ಕೇಸ್‌ಗಲ್ಲಿ ದರ್ಶನ ಮುಖ್ಯ ಆರೋಪಿ ಆಗಿದ್ದಾರೆ. ದರ್ಶನ್, ಕುಳ್ಳ ಸೀನ, ವಿಲ್ಸನ್ ಗಾರ್ಡನ್ ನಾಗ ಹಾಗೂ ನಾಗರಾಜ್ ಮೇಕೂ ಕೇಸ್ ದಾಖಲಾಗಿದೆ. ದರ್ಶನ ಹೇಳಿಕೆ ದಾಖಲಿಸಿಕೊಂಡು ನಾಗನ ವಿಚಾರಣೆ ಸಾಧ್ಯತೆ ಇದೆ. ದರ್ಶನ ವಿಚಾರಣೆಗಾಗಿ ಪೊಲೀಸರು ಬಳ್ಳಾರಿಗೆ ಬರಲಿದ್ದಾರೆ.

ಇದನ್ನೂ ಓದಿ:20 ಸಿಕ್ಸರ್ 241 ಜೊತೆಯಾಟ.. ಆರ್​ಸಿಬಿಯ ಅನುಜ್ ರಾವತ್ ವಿಧ್ವಂಸಕಾರಿ ಬ್ಯಾಟಿಂಗ್​​..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment