10 ರಾಜ್ಯ 96 ಕ್ಷೇತ್ರಗಳಿಗೆ ಮತಹಬ್ಬ.. ಅದೃಷ್ಟದ ಅಗ್ನಿ ಪರೀಕ್ಷೆಯಲ್ಲಿ ಸ್ಟಾರ್ಸ್​..! ಯಾಱರು ಇದ್ದಾರೆ?

author-image
Ganesh
10 ರಾಜ್ಯ 96 ಕ್ಷೇತ್ರಗಳಿಗೆ ಮತಹಬ್ಬ.. ಅದೃಷ್ಟದ ಅಗ್ನಿ ಪರೀಕ್ಷೆಯಲ್ಲಿ ಸ್ಟಾರ್ಸ್​..! ಯಾಱರು ಇದ್ದಾರೆ?
Advertisment
  • ಇಂದು 4ನೇ ಹಂತದ ಲೋಕಸಭಾ ಚುನಾವಣೆಗೆ ಮತದಾನ
  • 10 ರಾಜ್ಯಗಳ 96 ಕ್ಷೇತ್ರಗಳಿಗೆ ನಡೆಯಲಿರುವ ಚುನಾವಣೆ
  • ಚುನಾವಣಾ ಆಯೋಗ ಮತದಾನಕ್ಕೆ ಸಕಲ ಸಿದ್ಧತೆ

ಇಂದು ನಡೆಯಲಿರುವ ಲೋಕಸಭಾ ಚುನಾವಣೆಯ 4ನೇ ಹಂತದ ಮತದಾನಕ್ಕೆ ಕೇಂದ್ರ ಚುನಾವಣಾ ಆಯೋಗ ಸಂಪೂರ್ಣ ಸಿದ್ಧತೆ ಮಾಡಿಕೊಂಡಿದೆ. 9 ರಾಜ್ಯಗಳು, 1 ಕೇಂದ್ರಾಡಳಿತ ಪ್ರದೇಶ ಸೇರಿ 96 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.

ಒಟ್ಟು 1,717 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇನ್ನು ಕೇಂದ್ರ ಚುನಾವಣಾ ಆಯೋಗ ಮುಕ್ತ ಹಾಗೂ ನ್ಯಾಯಸಮ್ಮತ ಮತದಾನಕ್ಕೆ ಕ್ರಮ ಕೈಗೊಂಡಿದ್ದು ಶಾಂತಿಯುತ ಮತದಾನಕ್ಕೆ ವ್ಯವಸ್ಥೆ ಮಾಡಿದೆ.

ಇದನ್ನೂ ಓದಿ:ಹಾಸನ ಅಶ್ಲೀಲ ವಿಡಿಯೋ ಕೇಸ್​ಗೆ ಸ್ಫೋಟಕ ಟ್ವಿಸ್ಟ್.. ಮತ್ತೊಬ್ಬ ‘ಮಹಾನಾಯಕ’ನ ಹೆಸರು ಹೇಳಿದ ಆರೋಪಿ..

ಎಲ್ಲೆಲ್ಲಿ ಮತಹಬ್ಬ?

  • ನಾಳೆ ಆಂಧ್ರಪ್ರದೇಶದ 25 ಕ್ಷೇತ್ರಗಳು, ಬಿಹಾರದ 5 ಕ್ಷೇತ್ರಗಳು
  • ಜಮ್ಮುಕಾಶ್ಮೀರ 1 ಕ್ಷೇತ್ರ, ಜಾರ್ಖಂಡ್​ನ 4 ಲೋಕ ಕ್ಷೇತ್ರಗಳು
  • ಮಧ್ಯಪ್ರದೇಶದ 8 ಕ್ಷೇತ್ರಗಳು, ಮಹಾರಾಷ್ಟ್ರದ 11 ಕ್ಷೇತ್ರಗಳು
  • ಒಡಿಶಾದ 4 ಕ್ಷೇತ್ರಗಳು, ತೆಲಂಗಾಣದ 17 ಲೋಕ ಕ್ಷೇತ್ರಗಳು
  • ಉತ್ತರಪ್ರದೇಶದ 13 ಕ್ಷೇತ್ರಗಳು, ಪ.ಬಂಗಾಳದ 8 ಕ್ಷೇತ್ರಗಳು
  • ಆಂಧ್ರಪ್ರದೇಶದ 175 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ
  • ನಾಳೆ ಒಡಿಶಾದ 147 ಕ್ಷೇತ್ರಗಳಲ್ಲಿ ಒಂದೇ ಹಂತದ ಮತದಾನ

ಯಾಱರು ಸ್ಟಾರ್ ಅಭ್ಯರ್ಥಿಗಳು?

4ನೇ ಹಂತದಲ್ಲಿ ಸಂಸದೆ ಮೊಹುವಾ ಮೊಯಿತ್ರಾ ಟಿಎಂಸಿಯಿಂದ ಪಶ್ಚಿಮ ಬಂಗಾಳದ ಕೃಷ್ಣನಗರ ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದಾರೆ. ಸಂಸತ್​​ನಲ್ಲಿ ಪ್ರಶ್ನೆಗಾಗಿ ಹಣ ಕೇಳಿರುವ ಆರೋಪ ಎದುರಿಸ್ತಿದ್ದಾರೆ. ಮತ್ತೊಂದೆಡೆ ಕಾಂಗ್ರೆಸ್​​ ಸಂಸದ ಅಧೀರ್ ರಂಜನ್​ ಚೌಧರಿ ಪಶ್ಚಿಮ ಬಂಗಾಳದ ಬೆಹರಾಮ್​ಪುರ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ಇದೇ ಕ್ಷೇತ್ರದಲ್ಲಿ ಅಧೀರ್ ರಂಜನ್ ಚೌಧರಿ ಎದುರಾಳಿಯಾಗಿ ಟಿಎಂಸಿಯಿಂದ ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್​ ಸ್ಪರ್ಧೆ ಮಾಡಿದ್ದಾರೆ. ಬಾಲಿವುಡ್ ಹಿರಿಯ ನಟ, ಸಂಸದ ಶತ್ರುಘ್ನ ಸಿನ್ಹಾ ಟಿಎಂಸಿಯಿಂದ ಪಶ್ಚಿಮ ಬಂಗಾಳದ ಅಸಾನ್ಸೋಲ್​​ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದಾರೆ. ಇವರು ಬಿಹಾರ್ ಬಾಬು ಎಂದೇ ಪ್ರಸಿದ್ದಿಯಾಗಿದ್ದಾರೆ. ಮತ್ತೊಂದು ಪ್ರಮುಖ ರಾಜ್ಯ ಉತ್ತರ ಪ್ರದೇಶದ ಮಾಜಿ ಸಿಎಂ ಅಖಿಲೇಶ್ ಯಾದವ್​​ ಕನೌಜ್​ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ಇತ್ತ ಆಂಧ್ರದ ಮಾಜಿ ಸಿಎಂ ವೈಎಸ್​ಆರ್​ ಪುತ್ರಿ ಆಂಧ್ರ ಕಾಂಗ್ರೆಸ್ ಅಧ್ಯಕ್ಷೆ ಶರ್ಮಿಳಾ ಕಡಪ ಕ್ಷೇತ್ರದಿಂದ ಸಹೋದರ ಸಂಬಂಧಿ ಅವಿನಾಶ್ ರೆಡ್ಡಿ ವಿರುದ್ಧ ಸ್ಪರ್ಧೆ ಮಾಡಿದ್ದಾರೆ. ಅತ್ತ ತೆಲಂಗಾಣದ ಹೈದ್ರಾಬಾದ್​​ನಲ್ಲಿ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಸ್ಪರ್ಧೆ ಮಾಡಿದ್ದು ಇವರ ವಿರುದ್ಧ ಹಿಂದುತ್ವದ ಫೈರ್ ಬ್ರ್ಯಾಂಡ್ ಎಂದೇ ಖ್ಯಾತರಾಗಿರುವ ಮಾಧವಿ ಲತಾ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದಾರೆ. ಇನ್ನು ತೆಲಂಗಾಣ ಬಿಜೆಪಿ ಅಧ್ಯಕ್ಷ ಹಾಗೂ ಕೇಂದ್ರ ಸಚಿವ ಕಿಶನ್ ರೆಡ್ಡಿ ಸಿಕಂದರಾಬಾದ್​ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ.

ಇದನ್ನೂ ಓದಿ:Heat wave: ರಣ ಬಿಸಿಲಿಗೆ ಯಾರಾದರೂ ಪ್ರಜ್ಞೆತಪ್ಪಿ ಬಿದ್ದರೆ ಯಾವತ್ತೂ ಈ ತಪ್ಪು ಮಾಡಲೇಬೇಡಿ..!

4ನೇ ಹಂತದ ಲೋಕ ಮತೋತ್ಸವದಲ್ಲಿ ಘಟಾನುಘಟಿ ನಾಯಕರುಗಳು ಅದೃಷ್ಟಪರೀಕ್ಷೆಗಿಳಿದಿದ್ದು ಇವರೆಲ್ಲರ ರಾಜಕೀಯ ಭವಿಷ್ಯಕ್ಕೆ ಮತದಾರರ ಪ್ರಭುಗಳು ಮುದ್ರೆ ಒತ್ತಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment