ಇಂದು ನಡೆಯಲಿರುವ ಎರಡನೇ ದಿನದ ಜಿ20 ಶೃಂಗಸಭೆ
ಮಹಾತ್ಮ ಗಾಂಧೀಜಿ ಸಮಾಧಿಗೆ ಪುಷ್ಪಾರ್ಚನೆ ಮಾಡಲಿದ್ದಾರೆ ಗಣ್ಯರು
ಇಂದು ಯಾವ ವಿಚಾರದ ಕುರಿತು ಸಮಾವೇಶ ನಡೆಯಲಿಕ್ಕಿದೆ?
ಇಂದು ಎರಡನೆ ಮತ್ತು ಕೊನೆಯ ದಿನದ G20 ಶೃಂಗಸಭೆ ನಡೆಯಲಿಕ್ಕಿದೆ. 8.15ರಿಂದ 9.00ರವರೆಗೆ ರಾಜ್ಘಾಟ್ಗೆ ವಿಶ್ವ ನಾಯಕರು ಮತ್ತು ನಿಯೋಗಗಳ ಮುಖ್ಯಸ್ಥರು ಆಗಮಿಸಲಿದ್ದಾರೆ.
ಇಂದಿನ G-20 ಶೃಂಗಸಭೆಯ ಕಾರ್ಯಕ್ರಮಗಳ ಪಟ್ಟಿ ನೋಡುವುದಾದರೆ, ರಾಜ್ಘಾಟ್ನಲ್ಲಿರುವ ನಾಯಕರ ಲಾಂಜ್ನಲ್ಲಿ ಶಾಂತಿ ಗೋಡೆ ಮೇಲೆ ಸಹಿ ಹಾಕುವ ಕಾರ್ಯಕ್ರಮ ಆಯೋಜಿಸಲಾಗಿದೆ. ಬಳಿಕ 9.00-9.20ರ ನಡುವೆ ಮಹಾತ್ಮ ಗಾಂಧಿಯವರ ಸಮಾಧಿಗೆ ಪುಷ್ಪಾರ್ಚನೆ ಮಾಡಲಿದ್ದಾರೆ.
ಮಹಾತ್ಮ ಗಾಂಧಿಯವರ ನೆಚ್ಚಿನ ಭಕ್ತಿಗೀತೆಗಳ ಪ್ರದರ್ಶನ ನಡೆಯಲಿಕ್ಕಿದೆ. 9.40-10.15ಕ್ಕೆ ಭಾರತ ಮಂಟಪಕ್ಕೆ ನಾಯಕರು ಮತ್ತು ನಿಯೋಗದ ಮುಖ್ಯಸ್ಥರ ಆಗಮಿಸಲಿದ್ದಾರೆ. 10.15-10.28ರವರೆಗೆ ಸೌತ್ ಪ್ಲಾಜಾ, ಲೆವೆಲ್ 2, ಭಾರತ್ ಮಂಟಪದಲ್ಲಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
10.30-12.30ರವರೆಗೆ ಸೆಷನ್ ಮೂರರಲ್ಲಿ ಶೃಂಗಸಭೆ ಸಭಾಂಗಣದಲ್ಲಿ ಒಂದು ಭವಿಷ್ಯ(one future) ವಿಚಾರದ ಕುರಿತು ಸಮಾವೇಶ ನಡೆಯಲಿಕ್ಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ