/newsfirstlive-kannada/media/post_attachments/wp-content/uploads/2024/05/SRH-VS-RCB.jpg)
ಇಂದು ಹೈದರಾಬಾದ್​ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಐಪಿಎಲ್​ 2024ರ 66ನೇ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಗುಜರಾತ್ ಟೈಟನ್ಸ್​​ ಹಾಗೂ ಸನ್ ರೈಸರ್ಸ್ ಹೈದರಾಬಾದ್​ ತಂಡಗಳು ಮುಖಾಮುಖಿಯಾಗಲಿವೆ.
ಈ ಪಂದ್ಯದಲ್ಲಿ ಗೆದ್ದರೆ ಸನ್‌ರೈಸರ್ಸ್ ಅಧಿಕೃತವಾಗಿ ಪ್ಲೇ-ಆಫ್ ಪ್ರವೇಶಿಸಲಿದೆ. ಸನ್‌ರೈಸರ್ಸ್‌ಟೂರ್ನಿಯಲ್ಲಿ 12 ಪಂದ್ಯಗಳನ್ನಾಡಿದ್ದು, 7ರಲ್ಲಿ ಗೆದ್ದು 14 ಪಡೆದುಕೊಂಡಿದೆ. ಇತ್ತ ಎರಡು ಪಂದ್ಯಗಳಲ್ಲಿ ಸೋತರೆ ಪ್ಲೇ-ಆಫ್ ರೇಸ್‌ನಿಂದಹೊರಬೀಳುವ ಸಾಧ್ಯತೆಯೂ ಇದೆ. ಅತ್ತ ಗುಜರಾತ್ ಈಗಾಗಲೇ ಪ್ಲೇ-ಆಫ್​ನಿಂದ ಹೊರಗುಳಿದಿದ್ದು, ಈ ಪಂದ್ಯದ ಗೆಲುವಿನೊಂದಿಗೆ ಟೂರ್ನಿಗೆ ವಿದಾಯ ಹೇಳಲು ಕಾಯ್ತಿದೆ.
ಇದನ್ನೂ ಓದಿ:‘ಬೇಕಂತ ಕೊಲೆ ಮಾಡ್ಲಿಲ್ಲ ಸರ್..’ ಪೊಲೀಸರ ಮುಂದೆ ಬಿಕ್ಕಿ ಬಿಕ್ಕಿ ಅತ್ತ ಮೋನಿಕಾ
/newsfirstlive-kannada/media/post_attachments/wp-content/uploads/2024/05/RCB_Play-off.jpg)
ಆರ್​ಸಿಬಿ ಏನು ಲಾಭ..?
ಇವತ್ತಿನ ಪಂದ್ಯದಲ್ಲಿ ಸನ್ ರೈಸರ್ಸ್​ ಹೈದರಾಬಾದ್ ತಂಡ ಸೋತರೆ ಆರ್​ಸಿಬಿಗೆ ಒಳ್ಳೆಯದು. ಈಗಾಗಲೇ 12 ಪಂದ್ಯಗಳನ್ನು ಆಡಿರುವ ಹೈದರಾಬಾದ್​ 7 ರಲ್ಲಿ ಗೆದ್ದು, +0.406 ನೆಟ್​ ರನ್​ರೇಟ್​​ನೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಹೈದರಾಬಾದ್​ಗೆ ಇನ್ನೂ ಎರಡು ಪಂದ್ಯಗಳು ಬಾಕಿ ಇವೆ. ಮೇ 16 ರಂದು ಗುಜರಾತ್ ಟೈಟನ್ಸ್ ಹಾಗೂ ಮೇ 19 ರಂದು ಪಂಜಾಬ್ ವಿರುದ್ಧ ಸೆಣಸಾಟ ನಡೆಸಲಿದೆ. ಒಂದು ವೇಳೆ ಈ ಎರಡೂ ಪಂದ್ಯಗಳಲ್ಲಿ ಸನ್ ರೈಸರ್ಸ್​ ಹೈದರಾಬಾದ್ ಸೋತರೆ ಪ್ಲೇ-ಆಫ್ ಪ್ರವೇಶ ಮಾಡೋದು ಕಷ್ಟವಾಗಬಹುದು.
ಇದನ್ನೂ ಓದಿ: CSK vs RCB ನಡುವಿನ ಮ್ಯಾಚ್​ಗೆ ಮಳೆ ಬಂದರೆ ಏನಾಗುತ್ತದೆ..?
/newsfirstlive-kannada/media/post_attachments/wp-content/uploads/2024/04/SRH.jpg)
ಶನಿವಾರ ನಡೆಯುವ ಸಿಎಸ್​ಕೆ ಮತ್ತು ಆರ್​ಸಿಬಿ ನಡುವಿನ ಪಂದ್ಯದಲ್ಲಿ ಬೆಂಗಳೂರು ಗೆದ್ದರೆ, ಹೈದರಾಬಾದ್ ಮನೆಗೆ ಹೋಗಲಿದೆ. ಆರ್​ಸಿಬಿ ಸಿಎಸ್​ಕೆ ವಿರುದ್ಧ ಭಾರೀ ಅಂತರದಿಂದ ಗೆದ್ದರೆ, ಸಹಜವಾಗಿಯೇ ನೆಟ್​ ರನ್​ ರೇಟ್ ಹೆಚ್ಚಾಗಲಿದೆ. ಈಗಾಗಲೇ + 0.387 ನೆಟ್​ ರನ್​ ರೇಟ್ ಹೊಂದಿದೆ. ಇತ್ತ ಪಾಯಿಂಟ್ಸ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಸಿಎಸ್​ಕೆ ನಾಲ್ಕನೇ ಸ್ಥಾನಕ್ಕೆ ಕುಸಿಯಲಿದೆ. ಆದರೂ ಸಿಎಸ್​ಕೆ ಪ್ಲೇ-ಆಫ್ರ ಪ್ರವೇಶ ಮಾಡಲಿದೆ. ಭಾರೀ ಅಂತರದಲ್ಲಿ ಗೆಲ್ಲದಿದ್ದರೆ ಆರ್​ಸಿಬಿ ನಾಲ್ಕನೇ ಸ್ಥಾನ ಪಡೆದು ಪ್ಲೇ ಆಫ್ ಪ್ರವೇಶ ಮಾಡಲಿದೆ.
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us