newsfirstkannada.com

S1, R 5​ ವ್ಯೂಹವೇ ಚೆನ್ನೈ ತಂಡದ ಗೆಲುವಿನ ಮಂತ್ರ; ಮುಂಬೈ ವಿರುದ್ಧವೂ ಈ ಅಸ್ತ್ರ ಪ್ರಯೋಗ

Share :

Published April 14, 2024 at 10:34am

    ಮಹಾರಾಷ್ಟ್ರದ ವಾಂಖೆಡೆಯಲ್ಲಿ ಇಂದು ಮದಗಜಗಳ ಕಾಳಗ..!

    5 ಬಾರಿಯ ಚಾಂಪಿಯನ್ಸ್​​ ಬ್ಯಾಟಲ್​​ನಲ್ಲಿ ಯಾರಿಗೆ ಜಯ?

    ವಾಂಖೆಡೆಯಲ್ಲಿ ಚೆನ್ನೈಗೆ ಥ್ರೆಟ್ ಆಗೋದು ಯಾಱರು ಗೊತ್ತಾ?

ಸೂಪರ್ ಸಂಡೇಯ ಸೂಪರ್ ಮ್ಯಾಚ್​​ಗೆ ವೇದಿಕೆ ರೆಡಿಯಾಗಿದೆ. ಮನೆಯಲ್ಲಿ ಕೆಲ್ಸ ಇದ್ರೂ, ಟೈಮ್ ಫ್ರೀ ಮಾಡಿಕೊಂಡ್ಬಿಡಿ. ಯಾಕಂದ್ರೆ, ಇವತ್ತು ಐಪಿಎಲ್​ ಅಖಾಡದಲ್ಲಿ ನಡೀತಿರುವುದು ಮೋಸ್ಟ್​​ ಎಕ್ಸೈಟಿಂಗ್​ ಮ್ಯಾಚ್​. ಚೆನ್ನೈ ಹಾಗೂ ಮುಂಬೈ ಇಂಡಿಯನ್ಸ್​ ಮ್ಯಾಚ್​. ಐಪಿಎಲ್​ನ ಈ ಮದಗಜಗಳ ಕಾದಾಟ. ಹಾಗಾದ್ರೆ ಈ ಮದಗಜಗಳ ಕಾದಾಟ ಹೇಗಿರಲಿದೆ.

ಇದನ್ನೂ ಓದಿ: ವಿಶ್ವದಾದ್ಯಂತ ರಾಮಾಯಣ ಹಬ್ಬ, ಒಂದು ದೇಶ, ಒಂದು ಚುನಾವಣೆ -ಬಿಜೆಪಿ ಪ್ರಣಾಳಿಕೆಯ ಹೈಲೈಟ್ಸ್​ ಇಲ್ಲಿದೆ..

ಇಷ್ಟು ದಿನದ ಐಪಿಎಲ್​​ ಪಂದ್ಯಗಳ ಲೆಕ್ಕ ಒಂದಾದ್ರೆ ಇವತ್ತಿನದ್ದು ಬೇರೆಯದ್ದೇ ಲೆಕ್ಕ. ಯಾಕಂದ್ರೆ ಇಂದು ತೊಡೆತಟ್ಟಲು ಸಜ್ಜಾಗಿರೋದು ಸಾಮಾನ್ಯ ತಂಡಗಳಲ್ಲ. ಬರೋಬ್ಬರಿ ಐದು ಬಾರಿ ಟ್ರೋಫಿ ಗೆದ್ದಿರುವ ತಂಡಗಳು. ಹೀಗಾಗಿ ಇಂದಿನ ಪಂದ್ಯ​​ ಚಾಂಪಿಯನ್​​ಗಳ ಬ್ಯಾಟಲ್​​​ ಅಂತಾನೇ ಬಿಂಬಿತವಾಗಿದೆ.

ಇಂದು ಚಾಂಪಿಯನ್​​ಗಳ ಕಾಳಗ..!
ವಾಂಖಡೆಯಲ್ಲಿ ಇಂದು ಬಲಿಷ್ಠ ಚೆನ್ನೈ ಸೂಪರ್ ಕಿಂಗ್ಸ್​ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಗುಟುರು ಹಾಕಲು ಸಜ್ಜಾಗಿವೆ. ಹಸಿದ ಹೆಬ್ಬುಲಿಯಂತಾಗಿರುವ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್, ಭದ್ರಕೋಟೆಯಲ್ಲೇ ಹಾಲಿ ಚಾಂಪಿಯನ್ಸ್​ಗೆ ಚಮಕ್​ ನೀಡಲು ಸರ್ವ ರೀತಿಯಲ್ಲಿ ಸಜ್ಜಾಗಿದೆ. ಅತ್ತ ಮುಗ್ಗರಿಸಿ ಪುಟಿದೆದ್ದಿರುವ ಚೆನ್ನೈ ಕಿಂಗ್ಸ್​, ತನ್ನ ಕೋಟೆಯಲ್ಲಿ ಮುಂಬೈಯನ್ನ ಹೊಸಿಕಿ ಹಾಕಲು ಹವಣಿಸ್ತಿದೆ.

ಇದನ್ನೂ ಓದಿ:3ನೇ ಮಹಾಯುದ್ಧದ ಆತಂಕ.. ಇಸ್ರೇಲ್​ ಮೇಲೆ 200 ಡ್ರೋನ್​, ಭಾರೀ ಮಿಸೈಲ್ಸ್​ ಉಡಾಯಿಸಿದ ಇರಾನ್

ಧೋನಿ-ರೋಹಿತ್​ ಸೆಂಟರ್ ಆಫ್​ ಅಟ್ರಾಕ್ಷನ್​​
ಚೆನ್ನೈ ಹಾಗೂ ಮುಂಬೈ ನಡುವಿನ ಪಂದ್ಯದ ಸೆಂಟರ್ ಆಫ್ ಅಟ್ರಾಕ್ಷನ್​.. ಚೆನ್ನೈ ಮಾಜಿ ನಾಯಕ ಧೋನಿ ಹಾಗೂ ಮುಂಬೈ ಮಾಜಿ ನಾಯಕ ರೋಹಿತ್​ ಶರ್ಮಾ. ಇದೇ ವರ್ಷ ನಾಯಕತ್ವದಿಂದ ದೂರ ಸರಿದಿರುವ ಈ ಚಾಂಪಿಯನ್ ನಾಯಕರು, ಈಗ ಆಟಗಾರರಾಗಿ ಅಂಗಳದಲ್ಲಿ ಮುಖಾಮುಖಿಯಾಗ್ತಿದ್ದಾರೆ. ಇದು ಸಹಜವಾಗೇ ಎಲ್ಲರ ಕ್ಯೂರಿಯಾಸಿಟಿ ಹುಟ್ಟಿಹಾಕಿದೆ. ಇದೇ ಪಂದ್ಯ ಚೆನ್ನೈ ಹಾಗೂ ಮುಂಬೈ ನಡುವಿನ ಹೊಸ ರೈವರ್ಲಿಗೆ ಕಾರಣವಾಗ್ತಿದೆ. ಇದಕ್ಕೆ ಕಾರಣ ಹಾರ್ದಿಕ್ ಪಾಂಡ್ಯ ಹಾಗೂ ರುತುರಾಜ್ ಗಾಯಕ್ವಾಡ್​ ನಾಯಕತ್ವ. ಯಾಕಂದ್ರೆ, ಐಪಿಎಲ್​ ಅಖಾಡದಲ್ಲಿ ನೀನಾ ? ನಾನಾ ? ಎಂಬಂತೆ ಇತ್ತಂಡಗಳ ಪೈಪೋಟಿ ಇದೆ. ಹೀಗಾಗಿ ಆ ರೈವರ್ಲಿ ಮುಂದುವರಿಸಬೇಕಾದ ಸವಾಲು ಇವರಿಬ್ಬರ ಮೇಲಿದೆ.

ಇದನ್ನೂ ಓದಿ‘ಅಕ್ಕಾ.. ಸ್ವಲ್ಪ ಎಣ್ಣೆ ಹೊಡೆದು ಮಲಗಿಕೊಳ್ಳಿ’ ಎಂದ ಪಾಟೀಲ್; ಹೆಬ್ಬಾಳ್ಕರ್ ಬೆಂಬಲಿಗರಿಂದ ಆಪ್ತನಿಗೆ ಕಪಾಳಮೋಕ್ಷ..!

ಭದ್ರಕೋಟೆಯಲ್ಲಿ ಚೆನ್ನೈಗೆ ತ್ರಿಮೂರ್ತಿಗಳೇ ಥ್ರೆಟ್​​​..!
ಸದ್ಯ ಗೆಲ್ಲೋ ಆತ್ಮವಿಶ್ವಾಸದಲ್ಲಿರುವ ಚೆನ್ನೈ, ಮುಂಬೈ ಟಾಪ್ ತ್ರಿ ಬ್ಯಾಟರ್​​ಗಳಾದ ರೋಹಿತ್ ಶರ್ಮಾ, ಇಶಾನ್ ಕಿಶನ್, ಟಿ20 ಸ್ಪೆಷಲಿಸ್ಟ್​ ಸೂರ್ಯನ ಮುಂದೆ ಅಷ್ಟು ಸುಲಭವಲ್ಲ. ಹೀಗಾಗಿ ಇವರನ್ನ ಕಟ್ಟಿ ಹಾಕಿದರಷ್ಟೇ ಚೆನ್ನೈ ಗೆಲುವು ಸುಲಭ. ಇಲ್ಲ ಚಮಕ್ ನೀಡೋದು ಕನ್ಫರ್ಮ್​.. ಇವರೇ ಅಲ್ಲ.! ವೇಗಿ ಜಸ್​ಪ್ರೀತ್​ ಬೂಮ್ರಾರ ಬೆಂಕಿ ಬೌಲಿಂಗ್​​ ಬಿಗ್ಗೆಸ್ಟ್​ ಸ್ಟ್ರೆಂಥ್ ಅನ್ನೋದು ಮರೆಯುವಂತಿಲ್ಲ.​​​​​​​​​​​​​​​​

ಎಸ್1, ​ಆರ್-5​ ವ್ಯೂಹವೇ ಚೆನ್ನೈ ತಂಡದ ಗೆಲುವಿನ ಮಂತ್ರ!
ಮುಂಬೈ ಬಲಿಷ್ಠ ನಿಜ. ಆದ್ರೆ, ಚೆನ್ನೈನಲ್ಲಿ ಹಾಲಿ ಚಾಂಪಿಯನ್ಸ್​ಗೆ ಚಮಕ್ ನೀಡಬೇಕಾದ್ರೆ. ಎಸ್​ಆರ್​ ವ್ಯೂಹವನ್ನೇ ಛಿದ್ರಗೊಳಿಸಬೇಕು. ಅಂದ್ಹಾಗೆ ಆ ಚಕ್ರವ್ಯೂಹವೇ ಎಸ್1, ​ಆರ್-5​, ಅಂದ್ರೆ ಶಿವಂ ದುಬೆ, ರುತುರಾಜ್ ಗಾಯಕ್ವಾಡ್, ರಹಾನೆ, ರಚಿನ್ ರವೀಂದ್ರ, ರವೀಂದ್ರ ಜಡೇಜಾ, ಮುಷ್ತಾಪಿಜುರ್​​​​ ರೆಹಮಾನ್ ಆಗಿದ್ದಾರೆ​.. ಇವ್ರನ್ನ ಡೀಲ್ ಮಾಡಿದ್ರಷ್ಟೇ ಮುಂಬೈ ಗೆಲುವು ಸಾಧ್ಯ.

ಮುಂಬೈ ಬ್ಯಾಟಿಂಗ್ ವರ್ಸಸ್ ಚೆನ್ನೈ ಬೌಲಿಂಗ್ ಕಾಳಗ!
ಇಂದು ಚೆನ್ನೈ ಹಾಗೂ ಮುಂಬೈ ನಡುವಿನ ಕಾಳಗವನ್ನ ಮುಂಬೈ ಇಂಡಿಯನ್ಸ್​ ಬ್ಯಾಟರ್ಸ್ ಹಾಗೂ ಚೆನ್ನೈ ಬೌಲಿಂಗ್ ನಡುವಿನ ದಂಗಲ್​ ಆಗಿದೆ. ಯಾಕಂದ್ರೆ, ಟಿ20 ಸ್ಪೆಷಲಿಸ್ಟ್​ಗಳ ಬ್ಯಾಟರ್​ಗಳ ದಂಡನ್ನೇ ಮುಂಬೈ ಹೊಂದಿದ್ರೆ. ಮೋಸ್ಟ್ ಎಕಾನಮಿಕಲ್ ಬೌಲರ್​​ಗಳನ್ನ ಚೆನ್ನೈ ಸೂಪರ್ ಕಿಂಗ್ಸ್​ ಹೊಂದಿದೆ. ಹೀಗಾಗಿ ಈ ಬಲಿಷ್ಠ ತಂಡಗಳ ಕದನ ಸಾಕಷ್ಟು ಕ್ಯೂರಿಯಾಸಿಟಿ ಬೀಲ್ಡ್ ಮಾಡಿದ್ದು, ವಾಂಖೆಡೆಯಲ್ಲಿ ಯಾರಿಗೆ ಯಾರು ಚೆಕ್​​ಮೇಟ್ ಕೊಡ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

S1, R 5​ ವ್ಯೂಹವೇ ಚೆನ್ನೈ ತಂಡದ ಗೆಲುವಿನ ಮಂತ್ರ; ಮುಂಬೈ ವಿರುದ್ಧವೂ ಈ ಅಸ್ತ್ರ ಪ್ರಯೋಗ

https://newsfirstlive.com/wp-content/uploads/2024/04/DHONI-JADEJA.jpg

Load More