newsfirstkannada.com

ಸತತ ಸೋಲು, ಸೋಲು..! ದೊಡ್ಡ ಬದಲಾವಣೆ ನಿರೀಕ್ಷೆಯಲ್ಲಿ RCB; ಗೆಲ್ಲಬೇಕು ಅಂದ್ರೆ ಯಾರು ಎಲ್ಲಿ ಆಡಬೇಕು?

Share :

Published April 11, 2024 at 10:56am

    ಆರ್​​​ಸಿಬಿ vs ಮುಂಬೈ, ವಾಂಖೆಡೆ ವಾರ್​ಗೆ ಕೌಂಟ್​​ಡೌನ್

    ಗೆಲುವಿನ ಹಳಿಗೆ ಮರಳಲು ಬದಲಾವಣೆ ಅನಿವಾರ್ಯ

    ಆರ್​​ಸಿಬಿಯಲ್ಲಿ ಏನೆಲ್ಲಾ ಬದಲಾಗಬೇಕು? ಕಂಪ್ಲೀಟ್ ಮಾಹಿತಿ

ಆರ್​​​ಸಿಬಿ vs ಮುಂಬೈ, ವಾಂಖೆಡೆ ವಾರ್​ಗೆ ಕೌಂಟ್​​ಡೌನ್​ ಶುರುವಾಗಿದೆ. ಸತತ ಸೋಲಿನಿಂದ ಕಂಗೆಟ್ಟಿರುವ ಆರ್​​ಸಿಬಿ ಗೆಲುವಿನ ಹಳಿಗೆ ಮರಳಬೇಕಂದ್ರೆ, ಬದಲಾವಣೆ ಅನಿವಾರ್ಯವಾಗಿದೆ. ಹಾಗಾದ್ರೆ, ಆರ್​​ಸಿಬಿ ತಂಡದಲ್ಲಿ ಏನೆಲ್ಲಾ ಬದಲಾಗಬೇಕು? ಯಾವ ಬದಲಾವಣೆಯಿಂದ ಗೆಲುವು ಸಾಧ್ಯ? ಇಲ್ಲಿದೆ ನೋಡಿ ಫುಲ್​ ಡಿಟೇಲ್ಸ್​.

ಆರ್​​​ಸಿಬಿ vs ಮುಂಬೈ ಬಿಗ್​ ಬ್ಯಾಟಲ್​ಗೆ ವೇದಿಕೆ ಸಜ್ಜಾಗಿದೆ. ಮುಂಬೈನ ಐಕಾನಿಕ್​​ ವಾಂಖೆಡೆ ಸ್ಟೇಡಿಯಂನಲ್ಲಿ ಹೈವೋಲ್ಟೆಜ್​ ಕದನ ನಡೆಯಲಿದೆ. ಹ್ಯಾಟ್ರಿಕ್​ ಸೋಲಿನ ಬಳಿಕ ಗೆಲುವಿನ ಹಳಿಗೆ ಮರಳಿರೋ ಮುಂಬೈ ಇಂಡಿಯನ್ಸ್​, ‘ರಾಯಲ್​ ಚಾಲೆಂಜ್’​ಗೆ ಆತ್ಮವಿಶ್ವಾಸದಿಂದ ಸಜ್ಜಾಗಿದೆ. ಆದ್ರೆ ಸೋಲಿನಿಂದ ಕಂಗೆಟ್ಟಿರೋ ಅರ್​​​ಸಿಬಿ ಪಾಳಯದಲ್ಲಿ ಆತಂಕವೇ ಹೆಚ್ಚಾಗಿದೆ. ಆರ್​​​ಸಿಬಿ ಇಂದು ಗೆಲ್ಲಬೇಕು ಕೆಲ ಬದಲಾವಣೆಗಳನ್ನ ಮಾಡಿಕೊಳ್ಳಲೇಬೇಕು.

ಇದನ್ನೂ ಓದಿ: ತಾಪ್ಸಿ ಪನ್ನು ಯಾಕೆ ಮದುವೆ ಗುಟ್ಟು ಮುಚ್ಚಿಟ್ಟಿದ್ದರು..? ಅಸಲಿ ಸತ್ಯ ತಿಳಿಸಿದ ಸ್ಟಾರ್​ ನಟಿ..!

ಫಾಫ್​ ಡುಪ್ಲೆಸಿ-ವಿಲ್​ ಜಾಕ್ಸ್​ ಓಪನಿಂಗ್ ಮಾಡ್ಬೇಕು​
ಇಂದಿನ ಪಂದ್ಯದಲ್ಲಿ ಆರ್​​ಸಿಬಿ ತಂಡದಲ್ಲಿ ಎಲ್ಲರೂ​ ನಿರೀಕ್ಷೆ ಮಾಡ್ತಿರೋ ಮೊದಲ ಬದಲಾವಣೆಯೇ ಇದು. ಪರ್ಫಾಮ್​ ಮಾಡಲು ತಿಣುಕಾಡ್ತಿರೋ ಕ್ಯಾಮರೂನ್​ ಗ್ರೀನ್​ ಕಿತ್ತು ಬಿಸಾಕಿ ವಿಲ್​ ಜಾಕ್ಸ್​​ಗೆ ಚಾನ್ಸ್​ ನೀಡಬೇಕು ಅನ್ನೋದು ಫ್ಯಾನ್ಸ್​ ಆಗ್ರಹವಾಗಿದೆ. ವಿಲ್​ ಜಾಕ್ಸ್​​, ಫಾಫ್​ ಡುಪ್ಲೆಸಿ ಜೊತೆ ಇನ್ನಿಂಗ್ಸ್​ ಓಪನ್​ ಮಾಡಿದ್ರೆ ತಂಡಕ್ಕೆ ಅದ್ದೂರಿ ಆರಂಭ ಸಿಗುತ್ತೆ ಅನ್ನೋ ನಿರೀಕ್ಷೆಯಿದೆ.

3ನೇ ಕ್ರಮಾಂಕದಲ್ಲಿ ಕಿಂಗ್​​ ಕೊಹ್ಲಿ ಆಡ್ಬೇಕು
ನಂಬರ್​ 3 ವಿರಾಟ್​ ಕೊಹ್ಲಿ ಫೇವರಿಟ್​ ಸ್ಲಾಟ್​. ಈ ಕ್ರಮಾಂಕದಲ್ಲಿ ಕೊಹ್ಲಿ ಸಾಲಿಡ್​ ಟ್ರ್ಯಾಕ್​ ರೆಕಾರ್ಡ್​​ ಹೊಂದಿದ್ದಾರೆ. ಸದ್ಯ ಸಾಲಿಡ್​ ಫಾರ್ಮ್​ನಲ್ಲಿರೋ ವಿರಾಟ್​ ಕೊಹ್ಲಿ 3ನೇ ಕ್ರಮಾಂಕದಲ್ಲಿ ಆಡಿದ್ರೆ, ಆರ್​​ಸಿಬಿಯ ಮಿಡಲ್​ ಆರ್ಡರ್​ ಬ್ಯಾಟಿಂಗ್​ ಸ್ಟ್ರೆಂಥ್​ ಹೆಚ್ಚಲಿದೆ.

ಇದನ್ನೂ ಓದಿ: ಮಹೇಂದ್ರ ಸಿಂಗ್ ಧೋನಿಯ ಮಾಜಿ ಬ್ಯುಸಿನೆಸ್​ ಪಾರ್ಟ್ನರ್ ದಿವಾಕರ್ ಅರೆಸ್ಟ್; ಕಾರಣ..?

ನಂ.4ರಲ್ಲಿ ಎಡಗೈ ಬ್ಯಾಟರ್​ ಅನುಜ್​ ರಾವತ್​​ಗೆ ಚಾನ್ಸ್
ವೈಫಲ್ಯದ ಸುಳಿಗೆ ಸಿಲುಕಿರೋ ರಜತ್​ ಪಟಿದಾರ್​ಗೆ ಗೇಟ್​ ಪಾಸ್​ ನೀಡಿ ಲೆಫ್ಟ್​ ಆರ್ಮ್​ ಬ್ಯಾಟರ್​ ಅನುಜ್​ ರಾವತ್​ಗೆ ಚಾನ್ಸ್​ ನೀಡಬೇಕಿದೆ. 4ನೇ ಕ್ರಮಾಂಕದಲ್ಲಿ ಅನುಜ್​ ರಾವತ್​ ಕಣಕ್ಕಿಳಿದ್ರೆ, ಬ್ಯಾಟಿಂಗ್​ ಲೈನ್​ ಅಪ್​ಗೆ ಅಡ್ವಾಂಟೇಜ್​​ ಆಗಲಿದೆ. ಮಿಡಲ್​ ಆರ್ಡರ್​ಗೆ ಲೆಫ್ಟ್​ – ರೈಟ್​ ಕಾಂಬಿನೇಶನ್​​ನ ಬಲ ಬರಲಿದೆ.

ಲೋವರ್​ ಆರ್ಡರ್​​ನಲ್ಲಿ ಮ್ಯಾಕ್ಸಿ-ಡಿಕೆ ಆಡ್ಬೇಕು..!
ಲೋವರ್​​ ಆರ್ಡರ್​​ನಲ್ಲಿ ಗ್ಲೆನ್​ ಮ್ಯಾಕ್ಸ್​​ವೆಲ್​, ದಿನೇಶ್​ ಕಾರ್ತಿಕ್​ ಆಡಿದ್ರೆ, ಆರ್​​ಬಿಯ ಬಲ ದುಪ್ಪಟ್ಟಾಗಲಿದೆ. ಅನುಭವಿಗಳಾದ ಇಬ್ಬರೂ ಒತ್ತಡವನ್ನ ನಿಭಾಯಿಸಬಲ್ಲರು. ಫಿನಿಷರ್​ ರೋಲ್​ ಪ್ಲೇ ಮಾಡುವ ಕಲೆ ಇಬ್ಬರಲ್ಲೂ ಇದ್ದು, ಡೆತ್​ ಓವರ್​​ಗಳಲ್ಲಿ ರನ್​ ಕೊಳ್ಳೆ ಹೊಡೆಯಬಲ್ಲರು.

ಇದನ್ನೂ ಓದಿ: ಆರ್​ಸಿಬಿಗೆ ಇವತ್ತು ಮುಂಬೈ ಇಂಡಿಯನ್ಸ್​​ ಸವಾಲ್; ಪ್ಲೇಯಿಂಗ್​-11ರಲ್ಲಿ ಭಾರೀ ಬದಲಾವಣೆ?

ಅನುಭವಿ ಸ್ಪಿನ್ನರ್​​ ಕರಣ್​ ಶರ್ಮಾಗೆ ಚಾನ್ಸ್​ ಕೊಡಿ
ಒಂದು ಪಂದ್ಯ ಆಡಿ ಬಳಿಕ ಬೆಂಚ್​ಗೆ ಸೀಮಿತವಾಗಿರುವ ಕರಣ್​ ಶರ್ಮಾಗೆ ಮತ್ತೆ ಅವಕಾಶ ನೀಡಬೇಕು. ಅನುಭವಿ ಸ್ಪಿನ್ನರ್ ಕಮ್​ಬ್ಯಾಕ್​​ ಸ್ಪಿನ್​ ವಿಭಾಗದ ಬಲ ಹೆಚ್ಚಿಸಲಿದೆ. ಮಯಾಂಕ್​ ಡಾಗಾರ್​​ಗಿಂತ ಕರಣ್​ ಶರ್ಮಾ ಉತ್ತಮ ಟ್ರ್ಯಾಕ್​ ರೆಕಾರ್ಡ್​ ಹೊಂದಿದ್ದಾರೆ.

ವೇಗದ ವಿಭಾಗಕ್ಕೂ ಸರ್ಜರಿ ಅಗತ್ಯ..!
ಆರ್​​​ಸಿಬಿಯ ಬೌಲಿಂಗ್​ ಡಿಪಾರ್ಟ್​​ಮೆಂಟ್​ಗೆ​ ಸರ್ಜರಿ ಮಾಡ್ಲೇಬೇಕಿದೆ. ಮೊಹಮ್ಮದ್​ ಸಿರಾಜ್​, ರೀಸಿ ಟೋಪ್ಲಿ ಜೊತೆಗೆ ವೇಗಿ ವೈಶಾಖ್​ ವಿಜಯ್​ ಕುಮಾರ್​​​ಗೆ ಪ್ಲೇಯಿಂಗ್​ ಇಲೆವೆನ್​ನಲ್ಲಿ ಚಾನ್ಸ್​ ನೀಡಬೇಕಿದೆ. ಮೂವರು ವೇಗಿಗಳ ಬಲ ಬೌಲಿಂಗ್​ ವಿಭಾಗದ ಸ್ಟ್ರೆಂಥ್​ ಹೆಚ್ಚಿಸಲಿದೆ.

ಇದನ್ನೂ ಓದಿ: ಫ್ಯಾಮಿಲಿ ಎಮರ್ಜೆನ್ಸಿ’ ಎಂದು ಕೆಲಸಕ್ಕೆ ಚಕ್ಕರ್.​. ಸುಂದರಿಗೆ ಫಜೀತಿ ತಂದಿಟ್ಟ ರಾವತ್ ಬಾರಿಸಿದ ಬೌಂಡರಿ..!

ಮಹಿಪಾಲ್​ ಲೋಮ್ರೋರ್​, ಯಶ್​ ದಯಾಳ್​ರನ್ನ ಇಂಪ್ಯಾಕ್ಟ್​ ಪ್ಲೇಯರ್ ಅವಕಾಶದಲ್ಲಿ ಟಾಸ್​ ಲೆಕ್ಕಾಚಾರಕ್ಕೆ ಅನುಗುಣವಾಗಿ ಆಡಿಸಬೇಕಿದೆ. ಮೊದಲು ಬ್ಯಾಟಿಂಗ್​ ಆದ್ರೆ ಲೋಮ್ರೋರ್​, ಬೌಲಿಂಗ್​ ಆದ್ರೆ ಯಶ್​​ ದಯಾಳ್​ರನ್ನ ಪ್ಲೇಯಿಂಗ್​ ಇಲೆವೆನ್​ನಲ್ಲಿ ಆಡಿಸಿ, ಇನ್ನಿಂಗ್ಸ್​ ಅಂತ್ಯದ ಬಳಿಕ ಬದಲಾವಣೆ ಮಾಡಿಕೊಳ್ಳಬೇಕಿದೆ. ಇಷ್ಟು ಬದಲಾವಣೆ ಮಾಡಿಕೊಂಡು ಕಣಕ್ಕಿಳಿದ್ರೆ, ಗೆಲುವಿನ ಹಳಿಗೆ ಮರಳೋದು ಆರ್​​ಸಿಬಿಗೆ ಕಷ್ಟದ ವಿಚಾರವೇನಲ್ಲ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಸತತ ಸೋಲು, ಸೋಲು..! ದೊಡ್ಡ ಬದಲಾವಣೆ ನಿರೀಕ್ಷೆಯಲ್ಲಿ RCB; ಗೆಲ್ಲಬೇಕು ಅಂದ್ರೆ ಯಾರು ಎಲ್ಲಿ ಆಡಬೇಕು?

https://newsfirstlive.com/wp-content/uploads/2024/04/RCB_PLAF.jpg

Load More