newsfirstkannada.com

ಇವತ್ತು RCB ಗೆಲ್ಲಲು ಪಾಲಿಸಬೇಕು ಐದು ಸೂತ್ರಗಳು.. ರೆಡ್​ ಆರ್ಮಿಗೆ ಟಫ್ ಚಾಲೆಂಜ್..!

Share :

Published April 11, 2024 at 9:23am

    ಆರ್​ಸಿಬಿಗೆ ಬಿಗ್ ಡೇ.. ಬಿಗ್​ ಮ್ಯಾಚ್​​​​.. ಬಿಗ್ ಟೀಮ್ಸ್​​​..!

    ಗೆಲುವಿನ ಲಯಕ್ಕೆ ಮರಳಿರೋ ಮುಂಬೈ ಇಂಡಿಯನ್ಸ್

    ಡುಪ್ಲೆಸಿಸ್​​​ ಬಳಗಕ್ಕೆ ಹ್ಯಾಟ್ರಿಕ್ ಸೋಲಿನ ಆಘಾತ

ಆರ್​ಸಿಬಿ ವರ್ಸಸ್​ ಮುಂಬೈ ಇಂಡಿಯನ್ಸ್​​. ಪ್ರತಿ ಐಪಿಎಲ್​ನಲ್ಲಿ ಈ ಬಲಾಢ್ಯರ ಕಾಳಗ ನೋಡುಗರಿಗೆ ಸಖತ್​ ಕಿಕ್​​​​ ಕೊಡುತ್ತೆ. ಆರ್​ಸಿಬಿ ವರ್ಸಸ್​​ ಸಿಎಸ್​ಕೆ ಬಿಟ್ರೆ, ಫ್ಯಾನ್ಸ್ ಹೆಚ್ಚು ಕಾಯೋದೇ ಆರ್​ಸಿಬಿ ವರ್ಸಸ್ ಮುಂಬೈ ಬ್ಯಾಟಲ್​​ಗಾಗಿ. ಇಂದಿನ ಐಪಿಎಲ್​ ರಣರಂಗದಲ್ಲಿ ಉಭಯ ತಂಡಗಳು ಕಾದಾಡಲಿವೆ. ಹ್ಯಾಟ್ರಿಕ್ ಸೋಲುಂಡ ಆರ್​ಸಿಬಿ, ಮುಂಬೈ ಸೋಲಿಸಲು ಏನ್ ಮಾಡ್ಬೇಕು? ಆ ಕುರಿತ ಸ್ಪೆಷಲ್ ರಿಪೋರ್ಟ್​ ಇಲ್ಲಿದೆ.

ಇದನ್ನೂ ಓದಿ: ಮಹೇಂದ್ರ ಸಿಂಗ್ ಧೋನಿಯ ಮಾಜಿ ಬ್ಯುಸಿನೆಸ್​ ಪಾರ್ಟ್ನರ್ ದಿವಾಕರ್ ಅರೆಸ್ಟ್; ಕಾರಣ..?

ಸೋಲು..ಸೋಲು..ಸೋಲು..! ಹ್ಯಾಟ್ರಿಕ್ ಸೋಲಿನಿಂದ ಜರ್ಜರಿತವಾಗಿದ್ದ ಮುಂಬೈ ಇಂಡಿಯನ್ಸ್​ ತಂಡ ಕೊನೆಗೂ ಗೆಲುವಿನ ಹಳಿಗೆ ಮರಳಿದೆ. ಡೆಲ್ಲಿ ಮಣಿಸಿದ ಆತ್ಮವಿಶ್ವಾಸದಲ್ಲಿರೋ ಹಾರ್ದಿಕ್​ ಪಾಂಡ್ಯ ಸೈನ್ಯ ಗುರುವಾರ ಆರ್​ಸಿಬಿ ತಂಡವನ್ನ ಎದುರಿಸಲಿದೆ. ಆರ್​ಸಿಬಿ ಕೂಡ ಹ್ಯಾಟ್ರಿಕ್ ಸೋಲಿನಿಂದ ನಲುಗಿದೆ. ಅವರದ್ದೇ ನೆಲದಲ್ಲಿ ಮುಂಬೈ ಬೇಟೆಯಾಡೋದು ಸುಲಭವಿಲ್ಲ. ಹಾಗಂತ ಅಸಾಧ್ಯವೂ ಅಲ್ಲ. ಈ ಅಂಶಗಳನ್ನ ಫಾಲೋ ಮಾಡಿದ್ರೆ ಸಾಕು, ವಾಂಖೆಡೆ ಮೈದಾನದಲ್ಲಿ ಆರ್​ಸಿಬಿ ಗೆಲುವಿನ ಪತಾಕೆ ಹಾರಿಸಬಹುದು.

ಓಪನರ್ಸ್​ ಅಬ್ಬರಕ್ಕೆ ಆಸ್ಪದ ನೀಡಬಾರದು
ಮುಂಬೈ ಓಪನರ್ಸ್​ ಸದ್ಯ ಗುಡ್​ ಟಚ್​​ನಲ್ಲಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರೋಹಿತ್​ ಶರ್ಮಾ ಹಾಗೂ ಇಶನ್​​ ಕಿಶನ್ ಸ್ಪೋಟಕ ಇನ್ನಿಂಗ್ಸ್ ಕಟ್ಟಿದ್ರು. ಆರ್​ಸಿಬಿ ಬೌಲರ್ಸ್​ ಈ ಇಬ್ಬರು ಬಾಲಬಿಚ್ಚದಂತೆ ನೋಡಿಕೊಳ್ಳಬೇಕಿದೆ.

ಇದನ್ನೂ ಓದಿ: ಆರ್​ಸಿಬಿಗೆ ಇವತ್ತು ಮುಂಬೈ ಇಂಡಿಯನ್ಸ್​​ ಸವಾಲ್; ಪ್ಲೇಯಿಂಗ್​-11ರಲ್ಲಿ ಭಾರೀ ಬದಲಾವಣೆ?

ಬಿಗ್​ ಹಿಟ್ಟರ್ಸ್​ ಬೇಗನೆ ಕಟ್ಟಿಹಾಕಬೇಕು
ಮುಂಬೈ ತಂಡದಲ್ಲಿ ಸೂರ್ಯಕುಮಾರ್​ ಯಾದವ್​​, ಟಿಮ್ ಡೇವಿಡ್​ ಹಾಗೂ ರೊಮಾರಿಯೋ ಶೆಫರ್ಡ್​ರಂತ ಬಿಗ್​​ ಹಿಟ್ಟರ್​ಗಳ ದಂಡೇ ಇದೆ. ಯಾವುದೇ ಕ್ಷಣದಲ್ಲಿ ಪಂದ್ಯದ ಗತಿ ಬದಲಿಸುವ ತಾಕತ್ತು ಇದೆ. ಇವರನ್ನ ಬೇಗನೆ ಕಟ್ಟಿಹಾಕಲು ಡುಪ್ಲೆಸಿ ಆ್ಯಂಡ್ ಗ್ಯಾಂಗ್ ಸೂಕ್ತ ಸ್ಟ್ರಾಟಜಿಯೊಂದಿಗೆ ಕಣಕ್ಕಿಳಿಯಬೇಕು.

ಶರವೇಗಿಗಳ ವಿರುದ್ಧ ಡಾಮಿನೇಟ್​ ಅತ್ಯಗತ್ಯ
ಮುಂಬೈ ಇಂಡಿಯನ್ಸ್​ನಲ್ಲಿ ಜಸ್​ಪ್ರೀತ್​ ಬೂಮ್ರಾ, ಜೆರಾಲ್ಡ್​​ ಕೊಯೆಟ್ಜಿ ಹಾಗೂ ಆಕಾಶ್​​ ಮದ್ವಾಲ್​ ರಂತ ಎಕ್ಸ್​ಪ್ರೆಸ್​ ವೇಗಿಗಳಿದ್ದಾರೆ. ಮುಂಬೈಗೆ ಇವರೇ ದೊಡ್ಡ ಬಲ. ಈ ತ್ರಿಮೂರ್ತಿ ಸ್ಪೀಡ್ ವೆಪನ್ಸ್​​​​ ಗಳನ್ನ ಒತ್ತಡಕ್ಕೆ ಸಿಲುಕಿಸಿದ್ರೆ ರೆಡ್​ ಆರ್ಮಿ ಅರ್ಧ ಪಂದ್ಯ ಗೆದ್ದಂತೆ.

ಅಟ್ಯಾಕಿಂಗ್ ಸ್ಟ್ರೈಲ್​​​​​ ಕ್ರಿಕೆಟ್ ಮೊರೆ ಹೋಗ್ಬೇಕು
ಆರ್​ಸಿಬಿ ತಂಡ ಮುಂಬೈನಂತ ಚಾಂಪಿಯನ್​ ತಂಡವನ್ನ ಮಣಿಸಬೇಕಾದ್ರೆ ಅಟ್ಯಾಕಿಂಗ್ ಸ್ಟ್ರೈಲ್​ ಕ್ರಿಕೆಟ್​​​​​​ ಆಡಬೇಕಿದೆ. ಸಂದರ್ಭ ಹೇಗಿದ್ರೂ ಸೈ..ಎದುರಾಳಿ ತಂತ್ರಕ್ಕೆ ಬೆದರದೆ ನಿರ್ಭೀತಿಯಿಂದ ಆಡಬೇಕಿದೆ. ಎಸ್ಪೆಶಲಿ ಪವರ್​​​ಪ್ಲೇ ಹಾಗೂ ಮಿಡ್​ ಓವರ್ಸ್​ನಲ್ಲಿ ತಡಕಾಡೋದನ್ನ ಬಿಟ್ಟು, ಆಕ್ರಮಣಕಾರಿ ಆಟಕ್ಕಿಳಿಯಬೇಕಿದೆ.

ಇದನ್ನೂ ಓದಿ:  ಫ್ಯಾಮಿಲಿ ಎಮರ್ಜೆನ್ಸಿ’ ಎಂದು ಕೆಲಸಕ್ಕೆ ಚಕ್ಕರ್.​. ಸುಂದರಿಗೆ ಫಜೀತಿ ತಂದಿಟ್ಟ ರಾವತ್ ಬಾರಿಸಿದ ಬೌಂಡರಿ..!

ಟಾಸ್​ ಗೆದ್ದು, ಮ್ಯಾಚ್​​​ ಗೆಲ್ಲುವ ಸೂತ್ರ ಪಾಲಿಸಬೇಕು
ಮುಂಬೈ ವಿರುದ್ಧ ಆರ್​ಸಿಬಿ ಟಾಸ್ ಗೆದ್ದರೆ ಚೇಸಿಂಗ್ ಆಯ್ದುಕೊಳ್ಳಬೇಕು. ಯಾಕಂದ್ರೆ ಎರಡನೇ ಇನ್ನಿಂಗ್ಸ್​​​​ ವೇಳೆ ಇಂಜುರಿ ಸಮಸ್ಯೆ ಎದುರಾಗುತ್ತೆ. ಇದರಿಂದ ಬೌಲರ್ಸ್​ ಹೈರಾಣಾಗ್ತಾರೆ. ಹೀಗಾಗಿ ಚೇಸಿಂಗ್ ಮಾಡಿದ್ರೆ ಆರ್​ಸಿಬಿಗೆ ಗೆಲುವು ಈಸಿಯಾಗಲಿದೆ. ಇದಿಷ್ಟೇ ಅಲ್ಲದೇ ಫಾರಿನ್​​ ಪ್ಲೇಯರ್ಸ್​ ರನ್ ಭರಾಟೆ ನಡೆಸಬೇಕಿದೆ. ಜೊತೆಗೆ ಬೌಲಿಂಗ್ ಅಟ್ಯಾಕ್ ಉತ್ತಮಗೊಳಿಸಿದ್ರೆ ವಾಂಖೆಡೆ ಮೈದಾನದಲ್ಲಿ ಆರ್​ಸಿಬಿ ವಂಡರ್ ಸೃಷ್ಟಿಸೋದು ಪಕ್ಕಾ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಇವತ್ತು RCB ಗೆಲ್ಲಲು ಪಾಲಿಸಬೇಕು ಐದು ಸೂತ್ರಗಳು.. ರೆಡ್​ ಆರ್ಮಿಗೆ ಟಫ್ ಚಾಲೆಂಜ್..!

https://newsfirstlive.com/wp-content/uploads/2024/04/RCB-23.jpg

Load More