/newsfirstlive-kannada/media/post_attachments/wp-content/uploads/2024/06/renukaswamy6.jpg)
ಸ್ಯಾಂಡಲ್ವುಡ್ ನಟ ದರ್ಶನ್ ಅಂಡ್ ಗ್ಯಾಂಗ್ ಅಟ್ಟಹಾಸಕ್ಕೆ ಬರ್ಬರವಾಗಿ ಸಾವನ್ನಪ್ಪಿರೋ ಮೃತ ರೇಣುಕಾಸ್ವಾಮಿಗೆ ಇಂದು ಮೊದಲ ವರ್ಷದ ವಿವಾಹ ವಾರ್ಷಿಕೋತ್ಸವ. ವೆಡ್ಡಿಂಗ್ ಆ್ಯನಿವರ್ಸರಿ ಸಂಭ್ರಮದಲ್ಲಿರಬೇಕಿದ್ದ ಮನೆಯಲ್ಲಿ ನೀರವ ಮೌನ ಆವರಿಸಿದೆ.
ಇದನ್ನೂ ಓದಿ: ಜೈಲಲ್ಲಿ ದರ್ಶನ್‌ಗೆ ಸಂಕಷ್ಟಗಳ ಸರಮಾಲೆ.. ಸೆರೆವಾಸದಲ್ಲಿ ಚಿಂತಾಕ್ರಾಂತನಾದ ಸಾರಥಿ ಮಾಡ್ತಿರೋದೇನು?
ಹೌದು, ಚಿತ್ರದುರ್ಗದ ಯುವಕ ರೇಣುಕಾಸ್ವಾಮಿಯನ್ನು ಕ್ರೂರವಾಗಿ ಕೊಲೆ ಮಾಡಿದ ದರ್ಶನ್ ಸೇರಿ ಒಟ್ಟು 17 ಆರೋಪಿಗಳು ಜೈಲಿನಲ್ಲಿದ್ದಾರೆ. ನಟ ದರ್ಶನ್ ಅವರ ಆಪ್ತೆ ಪವಿತ್ರಾ ಗೌಡ ಅವರಿಗೆ ರೇಣುಕಾಸ್ವಾಮಿ ಅಶ್ಲೀಲ ಸಂದೇಶ್ ಹಾಗೂ ಫೋಟೋ ಕಳುಹಿಸಿದ್ದ ಎಂಬ ಕಾರಣಕ್ಕೆ ಕ್ರೂರವಾಗಿ ಕೊಲೆ ಮಾಡಲಾಗಿತ್ತು. ಬಳಿಕ ರೇಣುಕಾಸ್ವಾಮಿಯನ್ನು ಚಿತ್ರಹಿಂಸೆ ಕೊಟ್ಟು ಬರ್ಬರವಾಗಿ ಕೊಲೆ ಮಾಡಿದ್ದರು ದರ್ಶನ್ ಅಂಡ್ ಗ್ಯಾಂಗ್.
ಇನ್ನು ಈ ಕೊಲೆ ಕೇಸ್ ಹಿಂದೆ ನಟ ದರ್ಶನ್ ಅಂಡ್ ಗ್ಯಾಂಗ್ ಇದ್ದಾರೆ ಅಂತಾ ಗೊತ್ತಾಯಿತೋ ಪೊಲೀಸ್ ಅಧಿಕಾರಿಗಳು ಆರೋಪಿಗಳನ್ನು ಅರೆಸ್ಟ್ ಮಾಡಿ ಅಸಲಿ ವಿಚಾರವನ್ನು ಬೆಳಕಿಗೆ ತಂದಿದ್ದರು. ಬಳಿಕ ಕೊಲೆ ಕೇಸ್ನಲ್ಲಿ ಭಾಗಿಯಾಗಿದ್ದ 17 ಆರೋಪಿಗಳನ್ನು ಜೈಲಿಗೆ ಕಳುಹಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು, ಇಂದು ಮೃತ ರೇಣುಕಾಸ್ವಾಮಿ ಮೊದಲ ವರ್ಷದ ವಿವಾಹ ವಾರ್ಷಿಕೋತ್ಸವ. ವೆಡ್ಡಿಂಗ್ ಆ್ಯನಿವರ್ಸರಿ ಸಂಭ್ರಮದಲ್ಲಿರಬೇಕಿದ್ದ ಮನೆಯಲ್ಲಿ ನೀರವ ಮೌನ ಆವರಿಸಿದೆ. ಪತಿಯನ್ನ ನೆನೆದು ಪತ್ನಿ ಸಹನಾ ದಿನ ಕಣ್ಣೀರು ಇಡುತ್ತಿದ್ದಾರೆ. ಪತಿಯನ್ನು ಕಳೆದುಕೊಂಡ ನೋವಲ್ಲಿ ಕೋಣೆಯಿಂದ ಹೊರಗೆ ಬಂದಿಲ್ಲವಂತೆ.
ಇದನ್ನೂ ಓದಿ:ರೇಣುಕಾಸ್ವಾಮಿ ಹೆಸರಿನ ಹೊಸ ಪೇಜ್ ಓಪನ್; ಶಾಕಿಂಗ್ ಸಂಗತಿಗಳ ಬಗ್ಗೆ ಉಲ್ಲೇಖ
ಮೊದಲ ವಿವಾಹ ವಾರ್ಷಿಕೋತ್ಸವಕ್ಕೇ ರೇಣುಕಾಸ್ವಾಮಿ ಮೊದಲೇ ಪ್ಲಾನ್ ಮಾಡಿಕೊಂಡಿದ್ದರಂತೆ. ಎಲ್ಲರೂ ದೇವಸ್ಥಾನಕ್ಕೆ ಹೋಗೋಣ ಎಂದಿದ್ದ ರೇಣುಕಾಸ್ವಾಮಿ ಅದಕ್ಕಾಗಿ ವ್ಯವಸ್ಥೆಯನ್ನು ಮಾಡಿದ್ದನಂತೆ. ಮಗನನ್ನು ನೆನೆದು ತಂದೆ ಕಾಶೀನಾಥ ಅವರು ಕೂಡ ಕಣ್ಣೀರಿಟ್ಟಿದ್ದಾರೆ. ಮಗ ಇದ್ದಿದ್ರೆ ದೊಡ್ಡದಾಗಿ ಆಚರಣೆ ಮಾಡ್ತಿದ್ವಿ. ಆದ್ರೆ ಇಂದಿನ ದಿನ ನಮಗೆ ದುಃಖ ತಡೆಯೋಕೆ ಆಗ್ತಿಲ್ಲ ಎಂದು ಭಾವುಕರಾಗಿದ್ದಾರೆ.
ಇದೇ ವಿಚಾರವಾಗಿ ಮಾತಾಡಿದ ಅವರು, ಇಂದು ರೇಣುಕಾಸ್ವಾಮಿಯ ವಾರದ ರಜೆ ದಿನ. ಇಡೀ ದಿನ ಮಗ ಫುಲ್ ಫ್ರಿ ಇರ್ತಾ ಇದ್ದ. ವೆಡ್ಡಿಂಗ್ ಆ್ಯನಿವರ್ಸರಿಗೆ ಈ ಹಿಂದೆ ಪ್ಲಾನ್ ಮಾಡಿಕೊಂಡಿದ್ದರು. ವೆಡ್ಡಿಂಗ್ ಆ್ಯನಿವರ್ಸರಿ ದಿನ ಎಲ್ಲರೂ ಹೊರಗಡೆ ಹೋಗಬೇಕು ಅಂತ ಪ್ಲಾನ್ ಮಾಡಿದ್ದರು. ಅಷ್ಟರೊಳಗೆ ಈ ಘಟನೆ ನಡೆದು ಹೋಗಿದೆ. ನಮ್ಮಗೆ ಏನು ಸೇವಿಸಲು ಆಗುತ್ತಿಲ್ಲ. ನಮ್ಮ ಸೊಸೆ ಮುಖದ ಮೇಲೆ ಆಸೆನೇ ಇಲ್ಲ. ತುಂಬಾ ಸಂಭ್ರಮದಿಂದ ವೆಡ್ಡಿಂಗ್ ಆ್ಯನಿವರ್ಸರಿ ಮಾಡಬೇಕು ಅಂತ ಪ್ಲಾನ್ ಮಾಡಿದ್ವಿ. ನಮ್ಮ ಜೀವನದಲ್ಲೇ ತುಂಬಾ ಕೆಟ್ಟ ದಿನ ಅಂತಾ ಹೇಳಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ