/newsfirstlive-kannada/media/post_attachments/wp-content/uploads/2024/07/KRS-1.jpg)
ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಮುಂದುವರೆದಿದೆ. ಕೆಆರ್‌ಎಸ್ ಡ್ಯಾಂನ ನೀರಿನ ಮಟ್ಟ 95 ಅಡಿಗೆ ಏರಿಕೆ ಕಂಡಿದೆ. ಇದರಿಂದಾಗಿ ರೈತರಿಗೆ ಮುಖದಲ್ಲಿ ಮಂದಾಹಾಸ ಮೂಡಿದೆ.
ಮಳೆಯಿಂದಾಗಿ ಕೃಷ್ಣರಾಜ ಸಾಗರಕ್ಕೆ 9,369 ಕ್ಯೂಸೆಕ್ ಒಳಹರಿವು ಬರುತ್ತಿದೆ. 124.80 ಗರಿಷ್ಠ ಮಟ್ಟದ ಡ್ಯಾಂನಲ್ಲಿ ಸದ್ಯ 95.50 ಅಡಿ ನೀರು ಸಂಗ್ರಹವಾಗಿದೆ. 49.452 ಟಿಎಂಸಿ ಗರಿಷ್ಠ ಸಾಮರ್ಥ್ಯದ ಡ್ಯಾಂನಲ್ಲಿ 19.487 ಟಿಎಂಸಿ ನೀರು ಸಂಗ್ರಹವಾಗಿದೆ.
ಇದನ್ನೂ ಓದಿ: ದಲ್ಲಾಳಿಗಳ ಕಳ್ಳಾಟ.. ನಾಲ್ವರು ರೈತರಿಂದ ಆತ್ಮಹತ್ಯೆಗೆ ಯತ್ನ
ಕೆಆರ್‌ಎಸ್ ಡ್ಯಾಂಗೆ 9,369 ಕ್ಯೂಸೆಕ್ ನೀರು ಹರಿದು ಬರ್ತಿದೆ. ಡ್ಯಾಂನಿಂದ 518 ಕ್ಯೂಸೆಕ್ ನೀರು ಕುಡಿಯುವ ಉದ್ದೇಶಕ್ಕೆ ಹೊರಹರಿಸಲಾಗುತ್ತಿದೆ. ನಿನ್ನೆ 12,867 ಕ್ಯೂಸೆಕ್ ಒಳಹರಿವು ಇತ್ತು. ಮಳೆ ಸ್ವಲ್ಪ ತಗ್ಗಿರುವ ಹಿನ್ನಲೆ ಒಳಹರಿವು ಇಂದು ಅಲ್ಪ ಇಳಿಕೆಯಾಗಿದೆ.
ಇಂದಿನ ಕೆಆರ್‌ಎಸ್ ನೀರಿನ ಮಟ್ಟ
- ಗರಿಷ್ಠ ಮಟ್ಟ - 124.80 ಅಡಿ.
- ಇಂದಿನ ಮಟ್ಟ - 95.50 ಅಡಿ.
- ಗರಿಷ್ಠ ಸಾಮರ್ಥ್ಯ - 49.452 ಟಿಎಂಸಿ
- ಇಂದಿನ ಸಾಮರ್ಥ್ಯ - 19.487 ಟಿಎಂಸಿ
- ಒಳ ಹರಿವು - 9,369 ಕ್ಯೂಸೆಕ್
- ಹೊರ ಹರಿವು - 518 ಕ್ಯೂಸೆಕ್
ಇದನ್ನೂ ಓದಿ: ಸಿಡಿಲಾರ್ಭಟಕ್ಕೆ ಹೊತ್ತಿ ಉರಿದ ಮನೆ.. ಮನೆಯಲ್ಲಿದ್ದವರ ಪರಿಸ್ಥಿತಿ?
ನಿನ್ನೆ ಕೆಆರ್‌ಎಸ್ ನೀರಿನ ಮಟ್ಟ (ಜೂನ್ 30)
- ಗರಿಷ್ಠ ಮಟ್ಟ – 124.80 ಅಡಿ.
- ಇಂದಿನ ಮಟ್ಟ – 94.40 ಅಡಿ.
- ಗರಿಷ್ಠ ಸಾಮರ್ಥ್ಯ – 49.452 ಟಿಎಂಸಿ
- ಇಂದಿನ ಸಾಮರ್ಥ್ಯ – 18.733 ಟಿಎಂಸಿ
- ಒಳ ಹರಿವು – 12,867 ಕ್ಯೂಸೆಕ್
- ಹೊರ ಹರಿವು – 507 ಕ್ಯೂಸೆಕ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ