/newsfirstlive-kannada/media/post_attachments/wp-content/uploads/2024/04/MODI-8.jpg)
ಮೊನ್ನೆ ಮೊನ್ನೆಯಷ್ಟೇ ಮೈಸೂರು, ಕರಾವಳಿಯಲ್ಲಿ ಕಮಲ ಕಹಳೆ ಮೊಳಗಿಸಿದ್ದ ಪ್ರಧಾನಿ ಮೋದಿ ಮತ್ತೆ ಕರುನಾಡಿನ ಪ್ರವಾಸ ಕೈಗೊಂಡಿದ್ದಾರೆ. ಈ ಬಾರಿ ಬೆಂಗಳೂರಿನ ಕ್ಷೇತ್ರಗಳನ್ನೇ ಟಾರ್ಗೆಟ್ ಮಾಡಿ ನಮೋ ಮತಬೇಟೆಗೆ ಧುಮಕಲಿದ್ದಾರೆ.
ಮೋದಿ ಮೇನಿಯಾಗೆ ಇಂದು ಮತ್ತೆ ಕರುನಾಡು ಸಾಕ್ಷಿಯಾಗಲಿದೆ. ಇಂದು ಕರುನಾಡಿಗೆ ಪ್ರಧಾನಿ ಎಂಟ್ರಿ ಕೊಡಲಿದ್ದಾರೆ. ಸಮಾವೇಶಗಳ ಮೂಲಕ ಶಕ್ತಿ ಪ್ರದರ್ಶನ ಮಾಡಲಿದ್ದಾರೆ. ಕಮಲ ಹಿಡಿದು ಮತಶಿಕಾರಿಗೆ ಇಳಿಯಲಿದ್ದಾರೆ.
ಬೆಂಗಳೂರಿನ 3 ಕ್ಷೇತ್ರಗಳನ್ನ ಗಮನದಲ್ಲಿಟ್ಟು ‘ನಮೋ’ ರಣಕಹಳೆ
- ಮಧ್ಯಾಹ್ನದ ಬಳಿಕ ಮೋದಿ ಆಗಮನ
- ಡಾ.ಕೆ.ಸುಧಾಕರ್ ಪರ ಮೋದಿ ಪ್ರಚಾರ
- ಮಧ್ಯಾಹ್ನ 3.45 ರಿಂದ 4.25ರವರೆಗೆ ಸಮಾವೇಶ
- ಚಿಕ್ಕಬಳ್ಳಾಪುರದಲ್ಲಿ ಮೋದಿ ಸಮಾವೇಶ
- ಸಂಜೆ 5.30 ರಿಂದ 6.10ರವರೆಗೆ ಸಮಾವೇಶ
- ಬೆಂಗಳೂರಲ್ಲಿ ಮೋದಿ ಬೃಹತ್ ಸಮಾವೇಶ
- ಬೆಂಗಳೂರಿನ 3 ಕ್ಷೇತ್ರಗಳನ್ನ ಗೆಲ್ಲಲು ತಂತ್ರ
ಬೆಂಗಳೂರಿನಲ್ಲಿ ಮೋದಿ ಶಕ್ತಿಪ್ರದರ್ಶನ, ಜನ ಸಾಮಾನ್ಯರ ಮೇಲೂ ಪರಿಣಾಮ ಬೀರಲಿದೆ. ವೀಕೆಂಡ್ ಇರೋದ್ರಿಂದ ಕೆಲ ಮಾರ್ಗ ಬದಲಾವಣೆ ಮಾಡಲಾಗಿದೆ. ಮಧ್ಯಾಹ್ನ 1 ಗಂಟೆಯಿಂದ ರಾತ್ರಿ 7 ಗಂಟೆತನಕ ಮಾರ್ಗ ಬದಲಾವಣೆ ಮಾಡಲಾಗಿದ್ದು, ಕೆಲ ರಸ್ತೆಗಳಲ್ಲಿ ವಾಹನಗಳ ನಿಲುಗಡೆಗೆ ನಿಷೇಧ ಹೇರಲಾಗಿದೆ.
ನೋ ಎಂಟ್ರಿ..!
- ಪ್ಯಾಲೇಸ್ ರಸ್ತೆ , ಜಯಮಹಲ್ ರಸ್ತೆ
- MV ಜಯರಾಮ್, ವಸಂತನಗರ ರಸ್ತೆ
- ಸಿ.ವಿ. ರಾಮನ್ ರಸ್ತೆ, ನಂದಿದುರ್ಗ ರಸ್ತೆ
- ಮೇಕ್ರಿ ಸರ್ಕಲ್, ವಸಂತ ನಗರ ರಸ್ತೆ
- ಬಳ್ಳಾರಿ ರಸ್ತೆ, ತರಬಾಳು ರಸ್ತೆ
- ಮೌಂಟ್ ಕಾರ್ಮೆಲ್ ಕಾಲೇಜ್ ರಸ್ತೆ
ಇದಲ್ಲದೆ ಮೇಖ್ರಿ ಸರ್ಕಲ್‌ನಿಂದ ಯಶವಂತಪುರ ರಸ್ತೆವರೆಗೆ ಭಾರೀ ಸರಕು ಸಾಗಾಣಿಕಾ ವಾಹನಗಳ ಸಂಚಾರ ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 9 ಗಂಟೆ ವರೆಗೆ ನಗರದೊಳಗೆ ಪ್ರವೇಶಿಸುವುದನ್ನೂ ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಇದನ್ನೂ ಓದಿ:ಲೋಕಸಭೆ ಮಧ್ಯೆ ಸುರಪುರ ವಿಧಾನಸಭಾ ಕ್ಷೇತ್ರಕ್ಕೆ ಬೈ ಎಲೆಕ್ಷನ್.. ಗೆಲ್ಲೋದ್ಯಾರು ಗೊತ್ತಾ?
ಪರ್ಯಾಯ ಮಾರ್ಗ ಬಳಸಿ
CMTI ಜಂಕ್ಷನ್, ಮೈಸೂರು ಬ್ಯಾಂಕ್ ಜಂಕ್ಷನ್, ಹೆಬ್ಬಾಳ ಜಂಕ್ಷನ್, ನ್ಯೂ ಬಿಇಎಲ್ ಜಂಕ್ಷನ್, ಬಿಹೆಚ್‌ಇಎಲ್ ಜಂಕ್ಷನ್, ಬಸವೇಶ್ವರ ಸರ್ಕಲ್, ಓಲ್ಡ್ ಉದಯ ಟಿವಿ, ಹಜ್ ಕ್ಯಾಂಪ್ ನಂದಿದುರ್ಗ, ಯಶಪುಂತಪುರ ಗೋವರ್ಧನ್ ಬಳಿಯಿರುವ ರಸ್ತೆಯನ್ನು ಭಾರೀ ಸರಕು ಸಾಗಾಣಿಕೆ ವಾಹನಗಳು ಮಾರ್ಗ ಬದಲಾವಣೆಗೆ ಬಳಸಿಕೊಳ್ಳಬಹುದಾಗಿದೆ.
ಇದಿಷ್ಟು ಸಂಚಾರಿ ಮಾರ್ಗಗಳ ಬದಲಾವಣೆಯಾದ್ರೆ ನಗರದಲ್ಲಿ ಮೋದಿ ಆಗಮನದ ಕಾರಣ ಭಾರೀ ಭದ್ರತೆಯನ್ನೂ ಮಾಡಿಕೊಳ್ಳಲಾಗ್ತಿದೆ. ಹೆಚ್ಚುವರಿ ಪೊಲೀಸರ ನಿಯೋಜನೆ ಮಾಡಲಾಗಿದೆ. ವೀಕೆಂಡ್ನಲ್ಲಿ ಮೋದಿ ಬರ್ತಿರೋದು ಕಮಲ ಬಳಗಕ್ಕೆ ಹೊಸ ಹುರುಪು ತುಂಬೋ ವಿಶ್ವಾಸ ಮೂಡಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ