newsfirstkannada.com

ಇಂದು ಕರ್ನಾಟಕಕ್ಕೆ ಪ್ರಧಾನಿ ನರೇಂದ್ರ ಮೋದಿ; ಯಾವ ಯಾವ ಕ್ಷೇತ್ರದಲ್ಲಿ ಮತಬೇಟೆ?

Share :

Published April 14, 2024 at 6:15am

    ರಾಜ್ಯದಲ್ಲಿ ಮಹಾ ಭಾರತ ಮತಯುದ್ಧಕ್ಕೆ 13 ದಿನಗಳಷ್ಟೇ ಬಾಕಿ

    ಲೋಕಸಭಾ ಕದನ ಗೆಲ್ಲಲು ಕೇಸರಿ ಸೇನೆಗೆ ಮೋದಿ ಶಕ್ತಿಯ ಸಾಥ್

    ಮೈತ್ರಿ ಸಮಾವೇಶದಲ್ಲಿ 1 ಲಕ್ಷಕ್ಕೂ ಹೆಚ್ಚು ಜನರು ಸೇರುವ ನಿರೀಕ್ಷೆ

ರಾಜ್ಯದಲ್ಲಿ ಲೋಕಸಭಾ ರಣಕಣದಲ್ಲಿ ಪ್ರಚಾರದ ಭರಾಟೆ ಜೋರಾಗಿದೆ. ಕಾಂಗ್ರೆಸ್-ಬಿಜೆಪಿ ಪಾಳಯದ ನಾಯಕರು ಅಬ್ಬರದ ಕ್ಯಾಂಪೇನ್ ನಡೆಸುತ್ತಿದ್ದಾರೆ. ಇದೀಗ ಕರುನಾಡ ಪ್ರಜಾಪ್ರಭುತ್ವ ಯುದ್ಧದಲ್ಲಿ ಬಿಜೆಪಿಗೆ ಮತ್ತಷ್ಟು ಬಲ ತರಲು ಮೋದಿಯ ಆಗಮನವಾಗ್ತಿದೆ.

ಇಂದು ಕರಾವಳಿ, ಮೈಸೂರು ಭಾಗದಲ್ಲಿ ನಮೋ ರಣಕಹಳೆ ಮೊಳಗಿಸಲಿದ್ದಾರೆ. ರಾಜ್ಯದಲ್ಲಿ ಮಹಾ ಭಾರತ ಮತಯುದ್ಧಕ್ಕೆ 13 ದಿನಗಳಷ್ಟೇ ಬಾಕಿ ಇದೆ. ಸಂಸತ್​ ಸಮರ ಗೆಲ್ಲಲು ಎನ್​ಡಿಎ, ಯುಪಿಎ ಮೈತ್ರಿಕೂಟಗಳು ತಂತ್ರ-ರಣತಂತ್ರಗಳನ್ನು ಹೆಣೆಯುತ್ತಿವೆ. ಇದೀಗ ಕರುನಾಡಿನಲ್ಲಿ ಕೇಸರಿ ಸೇನೆಗೆ ಮತ್ತಷ್ಟು ಬಲ ತರಲು ಪ್ರಧಾನಿ ಮೋದಿಯ ಆಗಮನವಾಗ್ತಿದೆ. ಬಿಜೆಪಿ ಸೇನಾನಿಗಳಿಗೆ ‘ಲೋಕ’ ಸಮರದಲ್ಲಿ ಮತ್ತಷ್ಟು ಶಕ್ತಿ ತುಂಬಲು ನಮೋ ಎಂಟ್ರಿ ಕೊಡ್ತಿದ್ದಾರೆ.

ಮೈಸೂರು, ದಕ್ಷಿಣ ಕನ್ನಡದಲ್ಲಿ ‘ನಮೋ’ ರಣಕಹಳೆ

ಲೋಕಸಭಾ ಕದನ ಗೆಲ್ಲಲು ಕೇಸರಿ ಸೇನೆಗೆ ಮೋದಿ ಎಂಬ ಶಕ್ತಿಯ ಸಾಥ್ ಬೇಕಾಗಿದೆ. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ತವರು ಜಿಲ್ಲೆಯಿಂದಲೇ ಲೋಕ ರಣಕಹಳೆಯನ್ನ ಮೊಳಗಿಸಲಿದ್ದಾರೆ. ಮೊದಲು ಮೈಸೂರಿಗೆ ಭೇಟಿ ನೀಡಲಿರೋ ಪ್ರಧಾನಿ ನರೇಂದ್ರ ಮೋದಿ, ಮಹಾರಾಜ ಕಾಲೇಜು ಮೈದಾನದಲ್ಲಿ ಇಂದು ಸಂಜೆ 4.30ಕ್ಕೆ ಆರಂಭವಾಗಲಿರುವ ಮೈತ್ರಿ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಹಳೇ ಮೈಸೂರು ಯುದ್ಧವನ್ನ ಗೆಲ್ಲಲು ಮೈತ್ರಿ ಅಭ್ಯರ್ಥಿಗಳಿಗೆ ಶಕ್ತಿಯಾಗಲಿದ್ದಾರೆ. ಕಾಂಗ್ರೆಸ್ ವಿರುದ್ಧ ನಮೋ ಮಾತಿನ ರಣಕಹಳೆಯನ್ನ ಮೊಳಗಿಸಲಿದ್ದಾರೆ. ಮೈಸೂರಿನಲ್ಲಿ ನಡೆಯಲಿರೋ ಮೈತ್ರಿ ಸಮಾವೇಶದಲ್ಲಿ 1 ಲಕ್ಷಕ್ಕೂ ಹೆಚ್ಚು ಜನರು ಸೇರುವ ನಿರೀಕ್ಷೆ ಇದೆ. ಹೀಗಾಗಿ ಮೈಸೂರಿನಲ್ಲಿ ಅಂತಿಮ ಹಂತದ ಸಿದ್ಧತೆ ನಡೆಯುತ್ತಿದೆ. ಅಲ್ಲದೇ ಪ್ರಧಾನಿ ಮೋದಿ ಭೇಟಿ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಭದ್ರತೆಯನ್ನ ಕೈಗೊಳ್ಳಲಾಗಿದೆ. ಶ್ವಾನ ದಳ, ಬಾಂಬ್ ನಿಷ್ಕ್ರಿಯ ದಳ ಭದ್ರತಾ ಪರಿಶೀಲನೆ ನಡೆಸಿದೆ. ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ, ಕಮಾಂಡೋ ಪೊಲೀಸರು, ನಗರ ಪೊಲೀಸರು ಬಿಗಿಭದ್ರತೆಯನ್ನ ಕೈಗೊಂಡಿದ್ದಾರೆ.

ಇದನ್ನೂ ಓದಿ: ಹೆಣ್ಣುಮಕ್ಕಳೇ ಈತನ ಟಾರ್ಗೆಟ್​​.. ಅಬ್ಬಬ್ಬಾ! ಇವನಿಂದ ಮೋಸ ಹೋದವರು ಎಷ್ಟು ಗೊತ್ತಾ?

ಇಂದು ಸಂಜೆ ಮಂಗಳೂರಿನಲ್ಲಿ ಮೋದಿ ರೋಡ್‌ ಶೋ

ಮೈಸೂರಿನಲ್ಲಿ ಸಮಾವೇಶದ ಮೂಲಕ ರಣಕಹಳೆ ಮೊಳಗಿಸಲಿರೋ ಮೋದಿ, ಬಳಿಕ ಕಡಲತಡಿಗೆ ವಿಸಿಟ್ ಕೊಡಲಿದ್ದಾರೆ. ಇಂದು ಸಂಜೆ ಮಂಗಳೂರಿನಲ್ಲಿ ಪ್ರಧಾನಿ ಮೋದಿ ರೋಡ್ ಶೋ ನಡೆಸೋ ಮೂಲಕ ಮತಬೇಟೆ ಆಡಲಿದ್ದಾರೆ. ನಗರದ ಲೇಡಿಹಿಲ್‌ ನಾರಾಯಣಗುರು ವೃತ್ತದಿಂದ ನವಭಾರತ್ ವೃತ್ತದವರೆಗೆ ಸುಮಾರು 2 ಕಿಲೋ ಮೀಟರ್‌ ರೋಡ್ ಶೋ‌ ನಡೆಸಲಿದ್ದಾರೆ. ಈ ಮೂಲಕ ಕರಾವಳಿ ಭಾಗದ ಅಭ್ಯರ್ಥಿಗಳ ಪರ ಮೋದಿ ಮತಯಾಚನೆ ಮಾಡಲಿದ್ದಾರೆ. ಮೋದಿ ರೋಡ್ ಶೋ ನಡೆಸಲಿರುವ ರಸ್ತೆಯಲ್ಲಿ ಭಾರೀ ಭದ್ರತೆಯನ್ನ ಕೈಗೊಳ್ಳಲಾಗಿದೆ. ಸುಮಾರು ಬಿಗಿ ಭದ್ರತೆಗೆ ಸುಮಾರು 2 ಸಾವಿರಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ. ರೋಡ್ ಶೋ ಸಾಗುವ ರಸ್ತೆಯ ಬಹುಮಹಡಿ ಕಟ್ಟಡಗಳ ಮೇಲೆ ಸ್ಕೈ ಸೆಂಟ್ರಿಗಳು ಹದ್ದಿನ ಕಣ್ಣಿಡಲಿದ್ದಾರೆ.

ಬೆಂಗಳೂರು ಗ್ರಾಮಾಂತರಕ್ಕೂ ಮೋದಿ ಕರೆತರಲು ಪ್ಲಾನ್

ಕೇವಲ ಮೈಸೂರು-ಮಂಗಳೂರು ಅಷ್ಟೇ ಅಲ್ಲ. ಡಿ.ಕೆ ಬ್ರದರ್ಸ್ ಕೋಟೆಗೆ ಲಗ್ಗೆ ಇಡಲು ಮೋದಿಗೆ ಆಹ್ವಾನ ನೀಡಲಾಗಿದೆ. ಬೆಂಗಳೂರು ಗ್ರಾಮಾಂತರಕ್ಕೆ ಕರೆತರಲು ಕಮಲ ನಾಯಕರು ಪ್ಲಾನ್ ಮಾಡಿದ್ದಾರೆ. ಈ ಮೂಲಕ ಡಿಕೆ ಬ್ರದರ್ಸ್‌ ವಿರುದ್ಧ ಮೋದಿ ಅಸ್ತ್ರ ಪ್ರಯೋಗಕ್ಕೆ ದೋಸ್ತಿಗಳು ಸಜ್ಜಾಗಿದ್ದಾರೆ. ಏಪ್ರಿಲ್ 20ರೊಳಗೆ ಬೆಂಗಳೂರು ಗ್ರಾಮಾಂತರಕ್ಕೆ ಬರುವಂತೆ ಮೋದಿಗೆ ರಾಜ್ಯ ನಾಯಕರು ಮನವಿ ಮಾಡಿದ್ದಾರೆ. ಸುಮಾರು 30 ಕಿಲೋ ಮೀಟರ್​ ರೋಡ್​ ಶೋ ನಡೆಸಲು ಪ್ರಧಾನಿಗೆ ಆಹ್ವಾನ ನೀಡಿದ್ದಾರೆ. ಕನಕಪುರದಿಂದ ನಮೋ ರೋಡ್​ ಶೋ ಆರಂಭ ಮಾಡಿ ರಾಮನಗರ, ಮಾಗಡಿ, ಕುಣಿಗಲ್​ ಮಾರ್ಗವಾಗಿ ರೋಡ್ ಶೋ ಮೂಲಕ ರಣಕಹಳೆ ಮೊಳಗಿಸಲು ಕೇಸರಿ ಕಲಿಗಳು ಪ್ಲಾನ್ ಮಾಡಿದ್ದಾರೆ. ಆದ್ರೆ, ರಾಜ್ಯ ನಾಯಕರ ಬೇಡಿಕೆಯನ್ನ ಪ್ರಧಾನಿ ಮೋದಿ ಒಪ್ಪುತ್ತಾರಾ? ಅನ್ನೋದೆ ಪ್ರಶ್ನೆ. ಒಟ್ಟಾರೆ, ಹಳೇ ಮೈಸೂರು ಭಾಗದಲ್ಲಿ ಸಿದ್ದು ಶಕ್ತಿಯನ್ನ ಅಡಗಿಸಲು ಮೋದಿ ಅಲೆಯ ಆಗಮನವಾಗ್ತಿದೆ. ಈ ಮೂಲಕ ಲೋಕ ಅಖಾಡದಲ್ಲಿರೋ ದೋಸ್ತಿ ಅಭ್ಯರ್ಥಿಗಳಿಗೆ ಆನೆಬಲ ಬರೋದಂತೂ ಪಕ್ಕಾ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇಂದು ಕರ್ನಾಟಕಕ್ಕೆ ಪ್ರಧಾನಿ ನರೇಂದ್ರ ಮೋದಿ; ಯಾವ ಯಾವ ಕ್ಷೇತ್ರದಲ್ಲಿ ಮತಬೇಟೆ?

https://newsfirstlive.com/wp-content/uploads/2024/03/pm-modi-2024-03-09T215113.700.jpg

Load More