newsfirstkannada.com

ಕರುನಾಡಿಗೆ ಮತ್ತೆ ಬಂದ ‘ನಮೋ’.. ಇಂದು ಯಾವೆಲ್ಲಾ ಅಭ್ಯರ್ಥಿಗಳ ಪರ ಮೋದಿ ಮತಯಾಚನೆ ಮಾಡಲಿದ್ದಾರೆ?

Share :

Published April 28, 2024 at 6:24am

    ಒಂದೇ ದಿನ 4 ‘ಲೋಕ’ ಕ್ಷೇತ್ರಗಳಲ್ಲಿ ನಮೋ ಮೋದಿ ಮಹಾ ಪ್ರಚಾರ

    ಇಂದು ಬೆಳಗ್ಗೆ ಬೆಳಗಾವಿ, ಉತ್ತರ ಕನ್ನಡದಲ್ಲಿ ಮೋದಿ ಕ್ಯಾಂಪೇನ್

    ಬಿಜೆಪಿ ಸೇನಾನಿಗಳ ಗೆಲುವಿಗಾಗಿ ಪ್ರಧಾನಿ ನರೇಂದ್ರ ಮೋದಿ ಸಮಾವೇಶ

ಮೊದಲ ಹಂತದ ಪ್ರಜಾಪ್ರಭುತ್ವ ಯುದ್ಧಕ್ಕೆ ತೆರೆಬಿದ್ದಿದೆ. ಇದೀಗ ಎರಡನೇ ಹಂತದ ಲೋಕ ಸಮರಕ್ಕೆ ವೇದಿಕೆ ಸಜ್ಜಾಗಿದೆ. ಮತ್ತೆ ಕರುನಾಡಿಗೆ ನಮೋ ಎಂಟ್ರಿ ಕೊಟ್ಟಿದ್ದಾರೆ. ನಿನ್ನೆ ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದಾರೆ. ಇಂದು ನಾಲ್ಕು ಲೋಕಸಭಾ ಕ್ಷೇತ್ರಗಳಲ್ಲಿ ಮಿಂಚಿನ ಸಂಚಾರ ನಡೆಸಲಿದ್ದಾರೆ. ಕೇಸರಿ ಸೇನಾನಿಗಳ ಗೆಲುವಿಗಾಗಿ ಭರ್ಜರಿ ಮತಬೇಟೆ ನಡೆಸಲಿದ್ದಾರೆ.

ಇದನ್ನೂ ಓದಿ: ಬೆಂಗಳೂರಿಗೆ ಬಿಗ್ ಶಾಕ್! ಮತ್ತೆ ಹೆಚ್ಚಾಗುತ್ತಿದೆ ಬಿರು ಬಿಸಿಲು; ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ?

ರಾಜ್ಯದಲ್ಲಿ ಮೊದಲ ಹಂತದ ಮತಯುದ್ಧ ಸಮಾಪ್ತಿಯಾಗಿದೆ. ಇದೀಗ ಎರಡನೇ ಹಂತದ ಕದನ ಕೌತುಕಕ್ಕೆ ಕೇಸರಿ ಪಾಳಯ ರಣಕಹಳೆ ಮೊಳಗಿಸಿದೆ. ಕಮಲ ಕಲಿಗಳ ಗೆಲುವಿಗಾಗಿ ಪ್ರಧಾನಿ ಮೋದಿಯನ್ನ ಅಖಾಡಕ್ಕೆ ಇಳಿಸಿದೆ. ಮೊದಲ ಹಂತದ ಚುನಾವಣಾ ಕ್ಷೇತ್ರಗಳಲ್ಲಿ ಅಬ್ಬರಿಸಿದ್ದ ನಮೋ ಇಂದಿನಿಂದ 2ನೇ ಹಂತದ ಮತದಾನ ನಡೆಯಲಿರೋ ರಣಕಣದಲ್ಲಿ ರಣಕಹಳೆಯನ್ನ ಊದಲಿದ್ದಾರೆ.

ಒಂದೇ ದಿನ 4 ‘ಲೋಕ’ ಕ್ಷೇತ್ರಗಳಲ್ಲಿ ‘ನಮೋ’ ಅಬ್ಬರದ ಪ್ರಚಾರ

ಪ್ರಧಾನಿ ನರೇಂದ್ರ ಮೋದಿ ಕರುನಾಡಲ್ಲಿ ಮಿಂಚಿನ ಸಂಚಾರ ನಡೆಸಲು ಮುಹೂರ್ತ ಫಿಕ್ಸ್ ಆಗಿದೆ. ಎರಡನೇ ಹಂತದ ಮತದಾನ ನಡೆಯಲಿರೋ ಕ್ಷೇತ್ರಗಳಲ್ಲಿ ಮೋದಿ ಭರ್ಜರಿ ಮತಬೇಟೆ ನಡೆಸಲಿದ್ದಾರೆ. ನಿನ್ನ ರಾತ್ರಿ ರಾಜ್ಯಕ್ಕೆ ಆಗಮಿಸಲಿರುವ ಮೋದಿ ಇಂದು ಮತ್ತು ನಾಳೆ ಎರಡು ದಿನ ಕರ್ನಾಟಕದಲ್ಲಿ ಮತಬೇಟೆ ಆಡಲಿದ್ದಾರೆ. ಇಂದು ಒಂದೇ ದಿನ ಬೆಳಗಾವಿ, ಉತ್ತರಕನ್ನಡ, ದಾವಣಗೆರೆ, ಬಳ್ಳಾರಿ ಲೋಕಸಭಾ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಪರ ಪ್ರಧಾನಿ ಮೋದಿ ಅಬ್ಬರದ ಕ್ಯಾಂಪೇನ್ ನಡೆಸಲಿದ್ದಾರೆ.

ನಿನ್ನೆ ರಾತ್ರಿ 8:45ಕ್ಕೆ ಬೆಳಗಾವಿಗೆ ಪ್ರಧಾನಿ ಮೋದಿ ಆಗಮಿಸಿದ್ದಾರೆ. ರಾತ್ರಿ ನಗರದ ITC ವೆಲ್ಕಂ ಹೋಟೆಲ್‌ನಲ್ಲಿ ಪ್ರಧಾನಮಂತ್ರಿ ಮೋದಿ ವಾಸ್ತವ್ಯ ಹೂಡಿದ್ದಾರೆ. ಇಂದು ಬೆಳಗ್ಗೆ 11ಕ್ಕೆ ನಡೆಯಲಿರುವ ಬಿಜೆಪಿ ಸಮಾವೇಶದಲ್ಲಿ ಮೋದಿ ಭಾಗಿಯಾಗಲಿದ್ದು, ಇಂದು ಬೆಳಗ್ಗೆ 11 ಗಂಟೆಯಿಂದ 11:40ರವರೆಗೂ ತಮ್ಮ ಅಭ್ಯರ್ಥಿ ಜಗದೀಶ್ ಶೆಟ್ಟರ್ ಪರ ಪ್ರಧಾನಿ ಮೋದಿ ಕ್ಯಾಂಪೇನ್‌ ಮಾಡಲಿದ್ದಾರೆ. ನಂತರ ಉತ್ತರ ಕನ್ನಡ ಜಿಲ್ಲೆಗೆ ತೆರಳಲಿರುವ ಪ್ರಧಾನಿ ಮೋದಿ, ಮಧ್ಯಾಹ್ನ 1 ಗಂಟೆಯಿಂದ 1.50ರವರೆಗೆ ವಿಶ್ವೇಶ್ವರ ಹೆಗಡೆ ಕಾಗೇರಿ ಪರ ಶಿರಸಿಯಲ್ಲಿ ನಡೆಯಲಿರುವ ಸಮಾವೇಶದಲ್ಲಿ ಮೋದಿ ರಣಕಹಳೆ ಮೊಳಗಿಸಲಿದ್ದಾರೆ.

ಬೆಳಗ್ಗೆ ಎರಡು ಕ್ಷೇತ್ರಗಳಲ್ಲಿ ಅಬ್ಬರಿಸಲಿರುವ ಪ್ರಧಾನಿ ಮೋದಿ ಮಧ್ಯಾಹ್ನ ಮತ್ತೆರಡು ಕ್ಷೇತ್ರಗಳಲ್ಲಿ ಕ್ಯಾಂಪೇನ್ ಮಾಡಲಿದ್ದಾರೆ. ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಉತ್ತರ ಕನ್ನಡ ಜಿಲ್ಲೆಯಿಂದ ನೇರವಾಗಿ ಬೆಣ್ಣೆ ನಗರಿಗೆ ಆಗಮಿಸಲಿದ್ದಾರೆ. ಬಳಿಕ ಗಣಿನಾಡಿನಲ್ಲಿ ನಮೋ ಧೂಳ್ ಎಬ್ಬಿಸಲಿದ್ದಾರೆ. ನಾಡಿದ್ದು ಅಂದ್ರೆ, ಏಪ್ರಿಲ್ 29ರಂದು ಬಾಗಲಕೋಟೆಗೆ ಬಿಜೆಪಿಯ ವಿಶ್ವಗುರು ಲಗ್ಗೆ ಇಟ್ಟು ಅಬ್ಬರಿಸಿ ಬೊಬ್ಬಿರಿಯಲಿದ್ದಾರೆ. ಇಂದು ಮಧ್ಯಾಹ್ನ 3ಗಂಟೆಗೆ ಪ್ರಧಾನಿ ಮೋದಿ ದಾವಣಗೆರೆಗೆ ಆಗಮಿಸಲಿದ್ದಾರೆ. ಮ.3 ರಿಂದ 3:50ರವರೆಗೆ ನಡೆಯಲಿರೋ ಸಮಾವೇಶದಲ್ಲಿ ಭಾಗಿಯಾಗಲಿದ್ದು, ದಾವಣಗೆರೆ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್‌ ಪರ ಪ್ರಚಾರ ಮಾಡಲಿದ್ದಾರೆ.

ಇದನ್ನೂ ಓದಿ: ಇಡೀ ವಿಶ್ವವನ್ನೇ ಬೆರಗುಗೊಳಿಸಿದ ಬ್ಯೂಟಿ ಕ್ವೀನ್; ಈಕೆ ವಯಸ್ಸು ಎಷ್ಟು ಅಂತ ಕೇಳಿದ್ರೆ ಶಾಕ್ ಆಗ್ತೀರಾ!

ಇಂದು ಸಂಜೆ 5ಕ್ಕೆ ಬಳ್ಳಾರಿಯಲ್ಲಿ ಪ್ರಧಾನಿ ಮೋದಿ ಸಾರ್ವಜನಿಕ ಸಭೆ ಕೈಗೊಳ್ಳಲಿದ್ದು, ಪುನೀತ್ ರಾಜ್‍ಕುಮಾರ್ ಮೈದಾನದಲ್ಲಿ ನಡೆಯಲಿರೋ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಸಂಜೆ 5ರಿಂದ 5:50ರವರೆಗೂ ಅಭ್ಯರ್ಥಿ ಶ್ರೀರಾಮುಲು ಪರ ಮತಯಾಚನೆ ಮಾಡಲಿದ್ದಾರೆ. ಇಂದು ಹೊಸಪೇಟೆಯಲ್ಲೇ ಪ್ರಧಾನಿ ನರೇಂದ್ರ ಮೋದಿ ವಾಸ್ತವ್ಯ ಹೂಡಲಿದ್ದು, ಏಪ್ರಿಲ್ 29ರಂದು ಬಳ್ಳಾರಿಯಿಂದ ಬಾಗಲಕೋಟೆಗೆ ಪ್ರವಾಸ ಮಾಡಲಿದ್ದಾರೆ. ಏಪ್ರಿಲ್ 29ರ ಮಧ್ಯಾಹ್ನ 12 ಗಂಟೆಯಿಂದ 12.55ರವರೆಗೆ ನಡೆಯಲಿರುವ ಸಮಾವೇಶದಲ್ಲಿ ಭಾಗಿಯಾಗಿ ಅಭ್ಯರ್ಥಿ ಪಿ. ಸಿ. ಗದ್ದಿಗೌಡರ್ ಪರ ಮೋದಿ ಕ್ಯಾಂಪೇನ್ ಮಾಡಲಿದ್ದಾರೆ. ಬಳಿಕ ನಾಡಿದ್ದು ಮಧ್ಯಾಹ್ನ 2ಗಂಟೆಗೆ ಬಾಗಲಕೋಟೆಯಿಂದ ಮಹಾರಾಷ್ಟ್ರಕ್ಕೆ ಮೋದಿ ಪ್ರಯಾಣ ಬೆಳಸಲಿದ್ದಾರೆ.

ಒಟ್ಟಾರೆ, ರಾಜ್ಯದಲ್ಲಿ ಎರಡು ದಿನಗಳ ಕಾಲ ಪ್ರಧಾನಿ ನರೇಂದ್ರ ಮೋದಿ ದಂಡಯಾತ್ರೆ ನಡೆಸಲಿದ್ದಾರೆ. ಈ ಮೂಲಕ ಎರಡನೇ ಹಂತದ ಮತದಾನ ನಡೆಯಲಿರೋ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ಶಕ್ತಿ ತುಂಬಲಿದ್ದಾರೆ. ಅದೇನೆ ಇರಲಿ ಪ್ರಧಾನಿ ಮೋದಿ ಪ್ರಚಾರದ ಅಲೆ ಈ ಬಾರಿ ಮತವಾಗಿ ಕನ್ವರ್ಟ್‌ ಆಗುತ್ತಾ? ಜೂನ್ 4ಕ್ಕೆ ಗೊತ್ತಾಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕರುನಾಡಿಗೆ ಮತ್ತೆ ಬಂದ ‘ನಮೋ’.. ಇಂದು ಯಾವೆಲ್ಲಾ ಅಭ್ಯರ್ಥಿಗಳ ಪರ ಮೋದಿ ಮತಯಾಚನೆ ಮಾಡಲಿದ್ದಾರೆ?

https://newsfirstlive.com/wp-content/uploads/2024/04/PM-Modi-Belagavi.jpg

Load More