newsfirstkannada.com

ಆರ್​ಸಿಬಿ ಪಂದ್ಯಕ್ಕೆ ಮಳೆಯ ಆತಂಕ.. ಇವತ್ತು ಪಂದ್ಯ ರದ್ದು ಆದರೆ ಏನಾಗುತ್ತದೆ..?

Share :

Published May 4, 2024 at 10:05am

Update May 4, 2024 at 10:54am

    ಆರ್​​ಸಿಬಿಗೆ ಗುಜರಾತ್​ ಟೈಟನ್ಸ್​​ ರಾಯಲ್​ ಚಾಲೆಂಜ್​

    ಚಿನ್ನಸ್ವಾಮಿ ಮೈದಾನದಲ್ಲಿ ಇವತ್ತು ಹೈವೋಲ್ಟೆಜ್​ ಕದನ

    ಮಾಡು ಇಲ್ಲವೇ ಮಡಿ ಕದನದಲ್ಲಿ ಇವತ್ತು ಗೆಲ್ಲೋದ್ಯಾರು?

ಗುಜರಾತ್​ ಟೈಟನ್ಸ್​ vs ರಾಯಲ್​ ಚಾಲೆಂಜರ್ಸ್​ ಬೆಂಗಳೂರು ನಡುವಿನ ಹಣಾಹಣಿಗೆ ಕೌಂಟ್​​ಡೌನ್​ ಶುರುವಾಗಿದೆ. ತವರಿನಂಗಳದಲ್ಲಿ ಗೆದ್ದು ಬೀಗೋ ಲೆಕ್ಕಾಚಾರದಲ್ಲಿ ಆರ್​​ಸಿಬಿ ಇದ್ರೆ, ಸೋಲಿನ ಸೇಡು ತೀರಿಸಿಕೊಳ್ಳೋ ಲೆಕ್ಕಾಚಾರದಲ್ಲಿ ಗುಜರಾತ್​ ತಂಡವಿದೆ. ಉಭಯ ತಂಡಗಳ ಕಾದಾಟ ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಹೆಚ್ಚಿಸಿದೆ.

ಚಿನ್ನಸ್ವಾಮಿ ಅಂಗಳದಲ್ಲಿಂದು ಹೈವೋಲ್ಟೆಜ್​ ಫೈಟ್​
ಐಪಿಎಲ್​ ಟೂರ್ನಿಯ ಮತ್ತೊಂದು ಮೆಗಾ ಫೈಟ್​ಗೆ ವೇದಿಕೆ ಸಜ್ಜಾಗಿದೆ. ಇಂದಿನ ಡು ಆರ್​ ಡೈ ಫೈಟ್​ನಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು-ಗುಜರಾತ್​ ಟೈಟನ್ಸ್​ ಮುಖಾಮುಖಿಯಾಗ್ತಿವೆ. ಪ್ಲೇ ಆಫ್​​​ ದೃಷ್ಟಿಯಿಂದ ಎರಡೂ ತಂಡಗಳಿಗೂ ಗೆಲುವು ಅನಿವಾರ್ಯವಾಗಿದೆ. ಹೀಗಾಗಿ ಪಂದ್ಯಕ್ಕೆ ಹೈವೋಲ್ಟೆಜ್​ ಟಚ್​​​ ಸಿಕ್ಕಿದೆ.

ಇದನ್ನೂ ಓದಿ:ಮಳೆಯಿಂದ ಭಾರೀ ಪ್ರವಾಹ.. 350ಕ್ಕೂ ಹೆಚ್ಚು ಮಂದಿ ಸಾವು, 90 ಜನರು ನಾಪತ್ತೆ

ಹೋಮ್​ಗ್ರೌಂಡ್​​ನಲ್ಲಿ ಪುಟಿದೇಳುತ್ತಾ ಆರ್​​ಸಿಬಿ?
ಹೋಮ್​ಗ್ರೌಂಡ್​ ಚಿನ್ನಸ್ವಾಮಿ ಮೈದಾನದಲ್ಲಿ ಗೆಲ್ಲೋದೆ ಆರ್​​ಸಿಬಿ ಮುಂದಿರೋ ಟಫ್​ ಟಾಸ್ಕ್​ ಆಗಿದೆ. ಈ ಹಿಂದಿನ 3 ಪಂದ್ಯಗಳಲ್ಲಿ ಸೋಲಿನ ಮುಖಭಂಗ ಅನುಭವಿಸಿರೋ ಡುಪ್ಲೆಸಿ ಪಡೆ ಇಂದು ಪುಟಿದೇಳುತ್ತಾ ಅನ್ನೋದು ಮಿಲಿಯನ್​ ಡಾಲರ್​ ಪ್ರಶ್ನೆಯಾಗಿದೆ. ತಂಡದ ಬ್ಯಾಟಿಂಗ್​ ಸುಧಾರಿಸಿದೆ ನಿಜ.. ಆದ್ರೆ, ಬೌಲಿಂಗ್​ ವೀಕ್​ನೆಸ್​ ಹಾಗೆ ಉಳಿದುಕೊಂಡಿದೆ. ಇಂದಿನ ಪಂದ್ಯಕ್ಕೂ ಮುನ್ನವೂ ಆರ್​​ಸಿಬಿ ಕ್ಯಾಂಪ್​​ನಲ್ಲಿ ಬೌಲಿಂಗ್​ನದ್ದೇ ದೊಡ್ಡ ತಲೆ ನೋವಾಗಿದೆ.

ಆರ್​​ಸಿಬಿಗೆ ಮ್ಯಾಕ್ಸ್​ವೆಲ್​ ಕಮ್​ಬ್ಯಾಕ್​ನ ಬಲ
ಕಳೆದ ಪಂದ್ಯದಲ್ಲಿ ಗ್ಲೇನ್​ ಮ್ಯಾಕ್ಸ್​ವೆಲ್​ ಪ್ಲೇಯಿಂಗ್​ ಇಲೆವೆನ್​ಗೆ ಕಮ್​ಬ್ಯಾಕ್​ ಮಾಡಿದ್ರು. ಮ್ಯಾಕ್ಸಿ ಕಮ್​ಬ್ಯಾಕ್​ ಆರ್​​ಸಿಬಿ ಬ್ಯಾಟಿಂಗ್​ ಬಲವನ್ನ ಹೆಚ್ಚಿಸಿತ್ತು. ಬ್ಯಾಟಿಂಗ್​-ಬೌಲಿಂಗ್​ ಎರಡೂ ವಿಭಾಗದಲ್ಲಿ ತಂಡ ಬ್ಯಾಲೆನ್ಸ್​​ಡ್​ ಆಗಿತ್ತು. ಹೀಗಾಗಿ ಇಂದಿನ ಪಂದ್ಯದಲ್ಲೂ ಸೇಮ್​ ಇಲೆವೆನ್​ನೊಂದಿಗೆ ಆರ್​​ಸಿಬಿ ಕಣಕ್ಕಿಳಿಯೋದು ಬಹುತೇಕ ಖಚಿತವಾಗಿದೆ.

ಇದನ್ನೂ ಓದಿ:Breaking News: ರಾಯಚೂರಲ್ಲಿ ಹೃದಯ ವಿದ್ರಾವಕ ಘಟನೆ.. ಇಬ್ಬರ ಬಲಿ ಪಡೆದ ರಣ ಬಿಸಿಲು

ಸೇಡು ತೀರಿಸಿಕೊಳ್ಳೋ ತವಕದಲ್ಲಿ ಗುಜರಾತ್​​ ಟೈಟನ್ಸ್
ಕಳೆದ ಭಾನುವಾರ ನಡೆದ ಪಂದ್ಯದಲ್ಲಿ ಗುಜರಾತ್​ ತಂಡಕ್ಕೆ ಅವರದೇ ಹೋಮ್​ಗ್ರೌಂಡ್​​ನಲ್ಲಿ ಆರ್​​ಸಿಬಿ ಸೋಲಿನ ದರ್ಶನ ಮಾಡಿಸಿತ್ತು. ನಮೋ ಅಂಗಳದಲ್ಲಿ ಭರ್ಜರಿ ಆಟವಾಡಿದ್ದ ಆರ್​​ಸಿಬಿ, ಗುಜರಾತ್​​ ಎದುರು ಗೆದ್ದು ಬೀಗಿತ್ತು. ಇದೀಗ ಶುಭ್​ಮನ್​ ಗಿಲ್​ ನೇತೃತ್ವದ ಗುಜರಾತ್​ ಆ ಸೋಲಿನ ಸೇಡನ್ನ ಚಿನ್ನಸ್ವಾಮಿ ಅಂಗಳದಲ್ಲಿ ತೀರಿಸಿಕೊಳ್ಳೋ ಲೆಕ್ಕಾಚಾರದಲ್ಲಿದೆ.

ಪಂದ್ಯಕ್ಕೆ ಮಳೆ ಕಾಟ..! ನುಚ್ಚು ನೂರಾಗುತ್ತಾ RCB ಕನಸು..?
ಟೂರ್ನಿಯಲ್ಲಿ ಆಡಿದ 10 ಪಂದ್ಯಗಳಲ್ಲಿ 7 ಪಂದ್ಯ ಸೋತಿರೋ ಆರ್​​ಸಿಬಿ ಎಲ್ಲಾ ಪಂದ್ಯಗಳನ್ನ ಗೆದ್ದರೂ, ಪ್ಲೇ ಆಫ್​ ಎಂಟ್ರಿಗೆ ಅದೃಷ್ಟ ಕೈ ಹಿಡಯಬೇಕಿದೆ. ಬೆಂಗಳೂರಿನಲ್ಲಿ ಸದ್ಯ ಮಳೆಯ ವಾತಾರವಣವಿದ್ದು, ಒಂದು ವೇಳೆ ಮಳೆ ಬಂದು ಪಂದ್ಯ ರದ್ದಾದ್ರೆ, ಆರ್​​​ಸಿಬಿಯ ಪ್ಲೇ ಆಫ್​ ಕನಸು ನುಚ್ಚು ನೂರಾಗಲಿದೆ. 10ರಲ್ಲಿ 4 ಪಂದ್ಯ ಗೆದ್ದಿರೋ ಗುಜರಾತ್​​​ ಪಾಲಿಗೆ ಎಂಟ್ರಿ ಡೋರ್​​ ಬಹುತೇಕ ಮುಚ್ಚಲಿದೆ. ಎರಡೂ ತಂಡಗಳು ತಲಾ ಒಂದೊಂದು ಅಂಕವನ್ನು ಹಂಚಿಕೊಳ್ಳಲಿವೆ.

ಇದನ್ನೂ ಓದಿ:ಮೊದಲ ಮಳೆ ಮಾಡಿದ ಅನಾಹುತ.. ನೆಲ ಕಚ್ಚಿದ ಟೊಮ್ಯಾಟೋ ಬೆಳೆ.. ರಾಜ್ಯದಲ್ಲಿ ಎಲ್ಲಿ ಏನಾಯ್ತು..?

ಹೋಮ್​ಗ್ರೌಂಡ್​ನಲ್ಲಿ ಆರ್​​ಸಿಬಿಗೆ ಚಿಯರ್​ ಮಾಡಲು ಬಂದ ಲಾಯಲ್​ ಫ್ಯಾನ್ಸ್​ ಕಳೆದ 3 ಪಂದ್ಯಗಳಲ್ಲಿ ನಿರಾಸೆ ಅನುಭವಿಸಿದ್ದಾರೆ. ಸದ್ಯ ಸತತ 2 ಪಂದ್ಯ ಗೆದ್ದು ಗೆಲುವಿನ ಹಳಿಗೆ ಮರಳಿರುವ ಆರ್​​ಸಿಬಿ ಚಿನ್ನಸ್ವಾಮಿ ಚಾಲೆಂಜ್​ನಲ್ಲೂ ಗೆದ್ದು ಬೀಗುತ್ತಾ? ಅಭಿಮಾನಿಗಳಿಗೆ ಭರ್ಜರಿ ಪರ್ಫಾಮೆನ್ಸ್​ನ ಸ್ಪೆಷಲ್​ ಟ್ರೀಟ್​ ನೀಡುತ್ತಾ? ಕಾದು ನೋಡೋಣ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಆರ್​ಸಿಬಿ ಪಂದ್ಯಕ್ಕೆ ಮಳೆಯ ಆತಂಕ.. ಇವತ್ತು ಪಂದ್ಯ ರದ್ದು ಆದರೆ ಏನಾಗುತ್ತದೆ..?

https://newsfirstlive.com/wp-content/uploads/2024/04/kohli-Reacation-will-Jacks-1.jpg

Load More