Advertisment

ವಾಹನ ಸವಾರರಿಗೆ ಬರೆ.. ಇಂದಿನಿಂದ ಟೋಲ್ ದರ ದುಪ್ಪಟ್ಟು ಹೆಚ್ಚಳ

author-image
AS Harshith
Updated On
ವಾಹನ ಸವಾರರಿಗೆ ಬರೆ.. ಇಂದಿನಿಂದ ಟೋಲ್ ದರ ದುಪ್ಪಟ್ಟು ಹೆಚ್ಚಳ
Advertisment
  • ಇಂದಿನಿಂದ ಎಕ್ಸ್ ಪ್ರೆಸ್ ಹೈವೇಗಳಲ್ಲಿ ಟೋಲ್​ ದರದಲ್ಲಿ ಏರಿಕೆ
  • NHAIನಿಂದ ಹೆದ್ದಾರಿಗಳ ಟೋಲ್ ಶೇ.3ರಿಂದ ಶೇ.5 ರಷ್ಟು ಏರಿಕೆ
  • ಏಪ್ರಿಲ್​ 1 ರಿಂದ ಪರಿಷ್ಕೃತ ದರ ಜಾರಿಯಾಗಬೇಕಿತ್ತು.. ವಿಳಂಬವಾಗಿದ್ದೇಕೆ?

ಎಕ್ಸ್ ಪ್ರೆಸ್ ವೇ ಗಳನ್ನು ಬಳಕೆ ಮಾಡುವ ವಾಹನ ಸವಾರರು ಇಂದಿನಿಂದ ಟೋಲ್ ಗಳಲ್ಲಿ ಹೆಚ್ಚಿನ ದರ ನೀಡಬೇಕಾಗುತ್ತದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ದೇಶಾದ್ಯಂತ ಹೆದ್ದಾರಿಗಳ ಟೋಲ್ ದರವನ್ನು ಶೇ.5 ರಷ್ಟು ಏರಿಕೆ ಮಾಡಿದೆ.

Advertisment

ಟೋಲ್ ದರ ವಾರ್ಷಿಕ ಶೇ.5 ರಷ್ಟು ಹೆಚ್ಚಾಗುವುದು ವಾಡಿಕೆ. ಏಪ್ರಿಲ್​ 1 ರಿಂದ ಪರಿಷ್ಕೃತ ದರ ಜಾರಿಯಾಗಬೇಕಿತ್ತು. ಆದರೆ ಲೋಕಸಭಾ ಚುನಾವಣೆಯ ಕಾರಣದಿಂದಾಗಿ ಪರಿಷ್ಕೃತ ದರ ವಿಳಂಬವಾಗಿತ್ತು. ಹಾಗಾಗಿ ಎಕ್ಸ್​ಪ್ರೆಸ್ ವೇ ಬಳಕೆ ಮಾಡುವ ವಾಹನ ಸವಾರರೇ ಎಚ್ಚರವಾಗಿರಿ NHAIನಿಂದ ಹೆದ್ದಾರಿಗಳ ಟೋಲ್ ಶೇಕಡಾ.5 ರಷ್ಟು ಏರಿಕೆಯಾಗಿದ್ದು ಇಂದಿನಿಂದಲೇ ಪರಿಷ್ಕೃತ ದರ ಜಾರಿಯಾಗಲಿದೆ.

publive-image

ಇನ್ನು ಟೋಲ್​​ ತೆರಿಗೆ ಹೆಚ್ಚಳ ಸಮಾಜದ ಅನೇಕ ವರ್ಗಗಳ ಮೇಲೆ ಪರಿಣಾಮ ಬೀರಿದೆ. ಐಆರ್​ಬಿ ಇನ್​​​ಫ್ರಾಸ್ಟ್ರಕ್ಚರ್​​ ಡೆವಲಪರ್ಸ್​ ಮತ್ತು ಅಶೋಕ್​​ ಬಿಲ್ಡ್​ಕಾನ್​ ಲಿಮಿಟೆಡ್​ನಂತರ ಉನ್ನತ ನಿರ್ವಾಹರಿಗೆ ಟ್ರೋಲ್​ ತೆರಿಗೆ ಹೆಚ್ಚಳದಿಂದ ಪ್ರಯೋಜನ ಸಿಗಲಿದೆ.

ಇದನ್ನೂ ಓದಿ: ಟ್ರ್ಯಾಕ್ಟರ್​ ಟ್ರಾಲಿ ಪಲ್ಟಿ.. ಮಕ್ಕಳು ಸೇರಿ 13 ಜನರು ಸಾವು, ನಾಲ್ವರು ಗಂಭೀರ

Advertisment

ಇದಲ್ಲದೆ, ಕಳೆದ ವರ್ಷ ಭಾರತವು ರಾಷ್ಟ್ರೀಯ ಹೆದ್ದಾರಿಯನ್ನು ವಿಸ್ತರಿಸಲು ಶತಕೋಟಿಯನ್ನು ಹೂಡಿಕೆ ಮಾಡಿದೆ. 146,000 ಕಿಲೋ ಮೀಟರ್​ ರಸ್ತೆಗಳ ಉದ್ದಾರಕ್ಕೆ ಮುಂದಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment