/newsfirstlive-kannada/media/post_attachments/wp-content/uploads/2024/08/RAJ-TARUN.jpg)
ತೆಲುಗು ನಟ ರಾಜ್ ತರುಣ್ ಹಾಗೂ ನಟಿ ಲಾವಣ್ಯ ನಡುವಿನ ಬೀದಿ ರಂಪಾಟ ಮತ್ತೊಂದು ಸ್ವರೂಪ ಪಡೆದುಕೊಂಡಿದೆ. ಖಾಸಗಿ ಟಿವಿ ಚರ್ಚಾ ಕಾರ್ಯಕ್ರಮದ ನೇರ ಪ್ರಸಾರದ ವೇಳೆ ನಟಿ ಲಾವಣ್ಯ, ರಾಜ್ ತರುಣ್ ಅವರ ಸ್ನೇಹಿತನಿಗೆ ಚಪ್ಪಲಿಯಿಂದ ಹೊಡೆದಿದ್ದಾರೆ.
ಇತ್ತೀಚೆಗೆ ರಾಜ್ ತರುಣ್​​ನಿಂದ ನನಗೆ ಮೋಸ ಆಗಿದೆ ಎಂದು ಆರೋಪಿಸಿ ಲಾವಣ್ಯ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಇಬ್ಬರ ನಡುವಿನ ಗಲಾಟೆ ಸಂಬಂಧ ಖಾಸಗಿ ಟಿವಿ ಝೀ ತೆಲುಗು ನ್ಯೂಸ್‌ನಲ್ಲಿ ಡಿಬೇಟ್ ನಡೆಯುತ್ತಿತ್ತು. ತಮ್ಮ ನೋವನ್ನು ತೋಡಿಕೊಳ್ಳಲು ನಟಿ ಲಾವಣ್ಯ ಕೂಡ ಆಗಮಿಸಿದ್ದರು. ಆದರೆ ರಾಜ್ ತರುಣ್ ಈ ಚರ್ಚಾ ಕಾರ್ಯಕ್ರಮದಲ್ಲಿ ಭಾಗಿ ಆಗಿರಲಿಲ್ಲ. ಬದಲಾಗಿ ರಾಜ್ ತರುಣ್ ಅವರ ಸ್ನೇಹಿತ ಶೇಖರ್ ಬಾಷಾ ಬಂದಿದ್ದರು.
ಡಿಬೇಟ್ ವೇಳೆ ಶೇಖರ್ ಬಾಷಾ ಮೇಲೆ ಕೋಪಿಸಿಕೊಂಡ ಲಾವಣ್ಯ, ಕಾಲಲ್ಲಿದ್ದ ಚಪ್ಪಲಿಯನ್ನು ತೆಗೆದು ಹೊಡೆದಿದ್ದಾರೆ. ಬಾಷಾ ಟಿವಿ ನಿರೂಪಕನ ಜತೆ ಮಾತನಾಡುತ್ತಿರುವಾಗಲೇ, ಲಾವಣ್ಯ ತಮ್ಮ ಕಾಲಿನಲ್ಲಿದ್ದ ಚಪ್ಪಲಿ ತೆಗೆದು ಎಸೆದಿದ್ದಾರೆ. ಇದನ್ನು ನೋಡಿ ಚರ್ಚೆಗೆ ಬಂದಿದ್ದ ಮತ್ತೊಬ್ಬ ಅತಿಥಿ ಆಘಾತಕ್ಕೆ ಒಳಗಾಗಿದ್ದಾರೆ. ಚಪ್ಪಲಿ ಎಸೆದ ಬೆನ್ನಲ್ಲಿಯೇ ಮೇಲೆದ್ದ ಬಾಷಾ, ಮತ್ತೊಮ್ಮೆ ಚಪ್ಪಲಿಯಲ್ಲಿ ಹೊಡೆಯುವಂತೆ ಲಾವಣ್ಯಗೆ ಸವಾಲ್ ಹಾಕಿದ್ದಾರೆ.
ಇಬ್ಬರ ಆರೋಪ ಏನು..?
ನಟಿ ಮಾಳವಿ ಮಲ್ಹೋತ್ರಾಗಾಗಿ ರಾಜ್ ತರುಣ್ ತನ್ನನ್ನು ತೊರೆದಿದ್ದಾನೆ ಎಂದು ನಟಿ ಲಾವಣ್ಯ ಆರೋಪ ಮಾಡುತ್ತಿದ್ದಾರೆ. ಲಾವಣ್ಯ ಅತಿಯಾಗಿ ಮಾದಕ ದ್ರವ್ಯ ಸೇವನೆ ಮಾಡುತ್ತಾರೆ. ಇದರಿಂದ ಅನೇಕ ಬಾರಿ ಕಾನೂನಿನ ಸಮಸ್ಯೆಗೆ ಒಳಗಾಗಿದ್ದೇನೆ. ಇದರಿಂದ ನಾನು ಆಕೆಯಿಂದ ದೂರ ಆಗಿದ್ದೇನೆ ಅನ್ನೋದು ರಾಜ್ ತರುಣ್ ವಾದ.
Shoes thrown in live debate, Not hindi but south debate did is first😭 pic.twitter.com/lO3oI63jBm
— Lala (@FabulasGuy) August 1, 2024
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ