newsfirstkannada.com

ನನ್ನ ಮಾಜಿ ಪತಿ ಸಲಿಂಗಕಾಮಿ.. ಆತ ಧನುಷ್​ ಒಂದೇ ರೂಂನಲ್ಲಿ ಸೇರುತ್ತಿದ್ದರು; ಸುಚಿತ್ರಾ ಬಾಂಬ್

Share :

Published May 15, 2024 at 1:55pm

Update May 15, 2024 at 2:35pm

    ಕಾಲಿವುಡ್​​ ಅಂಗಳವನ್ನೇ ಕೆರಳಿಸಿದೆ ಗಾಯಕಿ ಸುಚಿತ್ರಾ ಸ್ಫೋಟಕ ಹೇಳಿಕೆ

    ನನ್ನ ಮಾಜಿ ಪತಿ ಕಾರ್ತಿಕ್​ ‘ಗೇ’ ಎಂದು ಬಹಿರಂಗವಾಗಿ ಹೇಳಿದ ಗಾಯಕಿ

    ಗಾಯಕಿ ಸುಚಿತ್ರಾ ಯಾರು? ಧನುಷ್​-ಕಾರ್ತಿಕ್​ ಬಗ್ಗೆ ಹೀಗೇಕೆ ಹೇಳಿದ್ರು?

ತಮಿಳು ನಟ ಧನುಷ್​-ಐಶ್ವರ್ಯಾ ವಿಚ್ಛೇದನದ ಬಗ್ಗೆ ಮಾತನಾಡಿದ ಗಾಯಕಿ ಸುಚಿತ್ರಾ ತನ್ನ ಮಾಜಿ ಪತಿ ಕಾರ್ತಿಕ್​ ಕುಮಾರ್​ ಬಗ್ಗೆಯೂ ಶಾಕಿಂಗ್​ ಸಂಗತಿ ಬಿಚ್ಚಿಟ್ಟಿದ್ದಾರೆ. ಆತ ಸಲಿಂಗ ಕಾಮಿ ಎಂದು ಹೇಳುವ ಮೂಲಕ ಗಂಭೀರ ಆರೋಪ ಮಾಡಿದ್ದಾರೆ.

ಗಾಯಕಿ ಸುಚಿತ್ರಾ ಸದ್ಯ ಕಾಲಿವುಡ್​ನಲ್ಲಿ ಭಾರೀ ಸುದ್ದಿಯಲ್ಲಿದ್ದಾರೆ. ನಟ ಧನುಷ್-ಐಶ್ವರ್ಯಾ ರಜನಿಕಾಂತ್​ ಡಿವೋರ್ಸ್​ ಬಗ್ಗೆ ಮಾತನಾಡುತ್ತಾ, ಇದೊಂದು ‘ದಾಂಪತ್ಯ ದ್ರೋಹ’ ಎಂದು ಹೇಳಿದ್ದಾರೆ. ಇದರ ಜೊತೆ ಜೊತೆಗೆ ನಟ ಧನುಷ್​ ಮತ್ತು ತನ್ನ ಮಾಜಿ ಪತಿ ಕಾರ್ತಿಕ್​ ಒಂದೇ ರೂಂ ಸೇರುತ್ತಿದ್ದರು ಎಂದು ಹೇಳಿದ್ದಾರೆ. ಸದ್ಯ ಗಾಯಕಿ ಸುಚಿತ್ರಾ ಹೇಳಿಕೆ ಎಲ್ಲರನ್ನು ಅಚ್ಚರಿಗೆ ದೂಡುವಂತೆ ಮಾಡಿದೆ.

ಆ ಸಿನಿಮಾದಿಂದ ಜೊತೆಯಾದರು

ಧನುಷ್​ ಮತ್ತು ಕಾರ್ತಿಕ್​ ‘ಯಾರಿ ನೀ ಮೋಹಿನಿ’ ಸಿನಿಮಾದ ಬಳಿಕ ಆತ್ಮೀಯ ಸ್ನೇಹಿತರಾಗಿದ್ದರು. ಅವರದೊಂದು ಗ್ರೂಪ್ ಇದೆ. ಆ ಗ್ರೂಪ್​ ಜಗತ್ತು ಬದಲಾಯಿಸುತ್ತದೆ ಎಂದು ಹೇಳಿದ್ದರು. ಆ ಗ್ರೂಪ್​ನಲ್ಲಿ ನಟ ಧನುಷ್​, ಮಾಜಿ ಪತಿ ಕಾರ್ತಿಕ್​, ಆ್ಯಂಡಿಯಾ, ರಾಮು ಎಂಬ ಛಾಯಾಗ್ರಾಹಕರು ಇದ್ದರು. ಆದರೆ ನಾನು ಆ ಗ್ರೂಪ್​ನಲ್ಲಿಲ್ಲ ಎಂದು ಹೇಳಿದ್ದಾರೆ.

ಸಿನಿಮಾ ಬಿಟ್ಟು ಬೇರೆ ಏನೋನು ಮಾಡುತ್ತಿದ್ದರೋ?

ವಿಜಯ್​ ಯೇಸುದಾಸ್​ ಮನೆಯಲ್ಲಿ ಹೋಮ್​ ಥಿಯೇಟರ್​ ಇದೆ. ಅಲ್ಲಿ ಇವರೆಲ್ಲ ಭೇಟಿಯಾಗುತ್ತಿದ್ದರು. ದೇಶ ವಿದೇಶಗಳ ಸಿನಿಮಾ ನೋಡುತ್ತಿದ್ದರು ಬಳಿಕ ಚರ್ಚಿಸುತ್ತಿದ್ದರು. ಸಿನಿಮಾ ಬಿಟ್ಟು ಬೇರೆ ಏನೋನು ಮಾಡುತ್ತಿದ್ದರೋ? ಎಂದು ಸುಚಿತ್ರಾ ಹೇಳಿದ್ದಾರೆ.

ಸುಚಿ ಲೀಕ್ಸ್​ ಶುರುವಾಗಿದ್ದೇ ಇಲ್ಲಿಂದ

ಕಾರ್ತಿಕ್​ ಬೆಳಗ್ಗೆ 3 ಗಂಟೆಗೆ ಮನೆಗೆ ಬಂದರು. ಆಗ ಆತನ ಕಾಲು ನಡುಗುತ್ತಿತ್ತು. ಆತ ಸಿಗರೇಟು ಸೇದುತ್ತಿದ್ದ. ಈ ವೇಳೆ ಧನುಷ್​ ನಿರ್ದೇಶಕ ಜವಾಹರ್​ ಫೋನ್​ನಿಂದ ಕಾರ್ತಿಕ್​ಗೆ ಅಸಹ್ಯಕರ ಮೆಸೇಜ್​ ಮಾಡಿದ್ದ. ಇದನ್ನು ಕಂಡ ಬಳಿಕ ನಾನು ಸುಚಿ ಲೀಕ್ಸ್​ ಶುರು ಮಾಡಿದೆ ಎಂದು ಹೇಳಿದ್ದಾರೆ.

ಗಾಯಕಿ ಸುಚಿತ್ರಾ ಮತ್ತು ಕಾರ್ತಿಕ್​

ಆತನಿಗೆ ಹೇಳಲು ಧೈರ್ಯವಿಲ್ಲ

ಮಾಜಿ ಪತಿ ಕಾರ್ತಿಕ್​ ಸಲಿಂಗಕಾಮಿ ಎಂದು ಸುಚಿತ್ರಾ ಹೇಳಿದ್ದಾರೆ. ನನಗೆ ಆತನೊಂದಿಗೆ ಮದುವೆಯಾದ 2 ವರ್ಷದ ಬಳಿಕ ಗೊತ್ತಾಯ್ತು. ಇದಾದ ಬಳಿಕ ಒಂದು ವರ್ಷದ ನಂತರ ಸುಚಿತ್ರಾ ವಿಚ್ಛೇದನ ಪಡೆದೆ. ಆದರೆ ಅದನ್ನು ಹೇಳಲು ಆತನಿಗೆ ಧೈರ್ಯವಿಲ್ಲ. ಧನುಷ್​ ಮತ್ತು ಕಾರ್ತಿಕ್​ ಒಟ್ಟಿಗೆ ಕೋಣೆಯಲ್ಲಿ ಏನು ಮಾಡುತ್ತಿದ್ದರು? ಎಂಬ ಪ್ರಶ್ನಾರ್ಥಕ ವಿಚಾರವನ್ನು ಬಿಚ್ಚಿಟ್ಟಿದ್ದಾರೆ.

ಇದನ್ನೂ ಓದಿ: ವಿವಾಹವಾದ್ರೂ ಧನುಷ್​-ಐಶ್ವರ್ಯಾ ಬೇರೆಯವರ ಜೊತೆ ಡೇಟಿಂಗ್​ ಮಾಡುತ್ತಿದ್ದರು; ಗಾಯಕಿ ಸುಚಿತ್ರಾ ಶಾಕಿಂಗ್​ ಹೇಳಿಕೆ

ಕಾರ್ತಿಕ್​​ ಸಲಿಂಗಕಾಮಿ ಎಂದು ಹೇಳಿದ್ದ

ಕಾರ್ತಿಕ್​​ ಸಲಿಂಗಕಾಮಿ ಎಂದು ಬಹಿರಂಗವಾಗಿ ಹೇಳಿದ್ದ. ತನಿಗೆ ಇಬ್ಬರು ಸ್ನೇಹಿತರಿದ್ದರು. ಅವರ ಜೊತೆಗೆ ಹೊಟೇಲ್​ ಕೋಣೆಯಲ್ಲಿ ಸೇರುತ್ತಿದ್ದರು. ಒಂದು ದಿನ ಐಪ್ಯಾಡ್​ನಲ್ಲಿ ಇವರ ಫೋಟೋಗಳನ್ನು ಒಟ್ಟಿಗೆ ನೋಡಿದೆ.

ಮದುವೆಯಾಗಿ ಮಕ್ಕಳಾಗಿರಲಿಲ್ಲ

ಮದುವೆಯಾಗಿ ನನಗೂ ಮತ್ತು ಕಾರ್ತಿಕ್​ಗೆ ಮಕ್ಕಳಾಗಿರಲಿಲ್ಲ. 2 ವರ್ಷದ ಬಳಿಕ ಇದೇ ವಿಚಾರವಾಗಿ ವೈದ್ಯರ ಬಳಿ ಹೋದೆ. ಅಲ್ಲಿ ವೈದ್ಯರು ಮಕ್ಕಳಾಗದಿರಲು ಕಾರ್ತಿಕ್​ ಕಾರಣ ಎಂದು ಹೇಳಿದ್ದರು ಎಂದು ಸುಚಿತ್ರಾ ಹಳೆಯ ಘಟನೆಯನ್ನು ಬಿಚ್ಚಿಟ್ಟಿದ್ದಾರೆ.

ಗಾಯಕಿ ಸುಚಿತ್ರಾ

ಗಾಯಕಿ ಸುಚಿತ್ರಾ ಯಾರು?

ಸುಚಿತ್ರಾ ಒಬ್ಬ ಭಾರತೀಯ ಹಿನ್ನೆಲೆ ಗಾಯಕಿ. ತಮಿಳು ಸಿನಿಮಾದ ಅನೇಕ ಸಿನಿಮಾಗಳಿಗೆ ಧ್ವನಿ ನೀಡಿದ್ದಾರೆ. ಮಾತ್ರವಲ್ಲದೆ ಕೆಲವು ಸಿನಿಮಾಗಳ ಹಿಟ್​ಗೆ ಇವರ ಧ್ವನಿಯೇ ಕಾರಣವಾಗಿದೆ. ಅದರಂತೆಯೇ ಸುಚಿತ್ರಾ ‘ಎಕ್ಸ್‌ಕ್ಯೂಸ್ ಮಿ’, ‘ಎನ್ ಇಧಯಂ’ ಮುಂತಾದ ಹಿಟ್ ಹಾಡುಗಳನ್ನು ಹಾಡುವ ಮೂಲಕ ಜನಪ್ರಿಯರಾದ ಗಾಯಕಿ.

ಸುಚಿತ್ರಾ ತನ್ನ ಹಾಡುಗಳ ಮೂಲಕ ಪ್ರಸಿದ್ಧಿ ಪಡೆದರೆ, ಇತ್ತ ‘ಸುಚಿ ಲೀಕ್ಸ್’ ಎಂಬ ಎಪಿಸೋಡ್‌ ಮೂಲಕ ಕುಖ್ಯಾತಿ ಪಡೆದಿದ್ದಾರೆ. ಸುಚಿತ್ರಾ ತಮ್ಮ ಸುಚಿ ಲೀಕ್ಸ್​ ಮೂಲಕ ಕಾಲಿವುಡ್‌ನ ಪ್ರಮುಖ ಸೆಲೆಬ್ರಿಟಿಗಳ ಹಲವಾರು ಮಾಹಿತಿಗಳನ್ನ ಸೋರಿಕೆ ಮಾಡಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ವಿಪರೀತ ಶೋಕಿ.. ಸಾಲ ತೀರಿಸಲು ಮನೆ ಮಾಲಕಿಯನ್ನು ಕೊಂದಾಕೆ ಕೊನೆಗೂ ಅರೆಸ್ಟ್​

ಅದರಲ್ಲಿ ಧನುಷ್ ಮತ್ತು ತ್ರಿಶಾ ಕೃಷ್ಣನ್ ರೂಂನಲ್ಲಿರುವ ಫೋಟೋ, ಗಾಯಕ ಅನಿರುದ್ಧ್ ರವಿಚಂದರ್ ಮತ್ತು ಆಂಡ್ರಿಯಾ ಅವರ ಲವ್ ಸ್ಟೋರಿಯ ಬಗ್ಗೆಯೂ ಮಾತನಾಡಿದ್ದಾರೆ. ಇದೀಗ ಐಶ್ವರ್ಯಾ ರಜನಿಕಾಂತ್​ ಮತ್ತು ಧನುಷ್​ ನಡುವಿನ ಸಂಬಂಧದ ಬಗ್ಗೆಯೂ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನನ್ನ ಮಾಜಿ ಪತಿ ಸಲಿಂಗಕಾಮಿ.. ಆತ ಧನುಷ್​ ಒಂದೇ ರೂಂನಲ್ಲಿ ಸೇರುತ್ತಿದ್ದರು; ಸುಚಿತ್ರಾ ಬಾಂಬ್

https://newsfirstlive.com/wp-content/uploads/2024/05/dhanush-Aishwarya-1.jpg

Load More