newsfirstkannada.com

×

VIDEO: ಅಯ್ಯೋ.. ಎಂಥಾ ಕಾಲ ಬಂತು ನೋಡ್ರಪ್ಪಾ.. ಸಿಸಿಟಿವಿ ಕಣ್ಗಾವಲಿನಲ್ಲಿದೆ ಟೊಮ್ಯಾಟೋ!

Share :

Published July 5, 2023 at 12:48pm

    ಮಾರುಕಟ್ಟೆಯಲ್ಲಿ ಟೊಮ್ಯಾಟೋಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು..!

    ಟೊಮ್ಯಾಟೊ ಕಳ್ಳತನ ಆಗದಂತೆ ತಡೆಯಲು ಹೈಟೆಕ್‌ ಐಡಿಯಾ

    ಟೊಮ್ಯಾಟೊ ಅಂಗಡಿಯಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ

ಹಾವೇರಿ: ದೇಶಾದ್ಯಂತ ಟೊಮ್ಯಾಟೋ ಬೆಲೆ ದಿಢೀರ್ ಏರಿಕೆಯಾಗಿದೆ. 1 ಕೆಜಿ ಟೊಮ್ಯಾಟೋ ಬೆಲೆ 100ರ ಗಡಿ ದಾಟಿದೆ. ರಾಜ್ಯದಲ್ಲಿ ಈ ಬಾರಿ ಮುಂಗಾರು ಕೈಕೊಟ್ಟಿದೆ. ಹೀಗಾಗಿ ಮಳೆ ಕೊರತೆಯಿಂದ ತರಕಾರಿಗಳ ಬೆಲೆ ಗಗನಕ್ಕೇರುತ್ತಿದೆ. ಇನ್ನು ತರಕಾರಿ ಬೆಲೆ ಇನ್ನಷ್ಟು ದುಬಾರಿ ಆಗುವ ನಿರೀಕ್ಷೆ ದಟ್ಟವಾಗಿದ್ದು ಜನಸಾಮಾನ್ಯರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ.

ಇನ್ನು, ಈ ನಡುವೆ ಲಕ್ಷಾಂತರ ರೂಪಾಯಿ ಮೌಲ್ಯದ ಟೊಮ್ಯಾಟೋ ಕಳ್ಳತನ ಮಾಡಿರುವ ಘಟನೆ ಹಾಸನದ ಬೇಲೂರು ತಾಲೂಕಿನ ಗೋಣಿ ಸೋಮನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಧರಣಿ ಎಂಬವರು ತಮ್ಮ ಜಮೀನಿನಲ್ಲಿ ಟೊಮ್ಯಾಟೋ ಬೆಳೆದಿದ್ದರು. ಕಳೆದ ರಾತ್ರಿ ಹೊಲಕ್ಕೆ ನುಗ್ಗಿರುವ ಕಳ್ಳರು ಟೊಮ್ಯಾಟೋ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.

ದಿಢೀರ್ ಟೊಮ್ಯಾಟೋ ಬೆಲೆ ಏರಿಕೆಯಿಂದ ಜನರು ಕಂಗೆಟ್ಟಿದ್ದರೆ, ಇತ್ತ ಟೊಮ್ಯಾಟೋ ವ್ಯಾಪಾರಸ್ಥರು ಫುಲ್​ ಖುಷ್​ ಆಗಿದ್ದಾರೆ.  ಜೊತೆಗೆ ಫುಲ್ ಅಲರ್ಟ್ ಕೂಡ ಆಗಿದ್ದಾರೆ. ಹೀಗಾಗಿ ಮಾರುಕಟ್ಟೆಯಲ್ಲಿ ಟೊಮ್ಯಾಟೋಗೆ ಡಿಮ್ಯಾಂಡು ಜಾಸ್ತಿಯಾಗಿದೆ. ಅದಕ್ಕೆ ಹಾನಗಲ್ ತಾಲೂಕಿನ ಅಕ್ಕಿ ಆಲೂರು ಗ್ರಾಮದಲ್ಲಿ ಟೊಮ್ಯಾಟೊ ಕಳ್ಳತನ ಆಗದಂತೆ ವ್ಯಾಪಾರಸ್ಥ ಕೃಷ್ಣಪ್ಪ ಎಂಬುವವರು ತಮ್ಮ ಅಂಗಡಿಯಲ್ಲಿ ಸಿಸಿಟಿವಿ ಅಳವಡಿಕೆ ಮಾಡಿದ್ದಾರೆ.

ಇದನ್ನು ಓದಿ: ಮತ್ತಷ್ಟು ಹೆಚ್ಚಿದ ತರಕಾರಿ ಬೆಲೆ; ಪ್ರತಿ ಕೆ.ಜಿ ಟೊಮ್ಯಾಟೋಗೆ 150 ರೂಪಾಯಿ..!

ಪ್ರತಿ 1 ಕೆ.ಜಿ ಟೊಮ್ಯಾಟೊಗೆ 150 ರೂಪಾಯಿ ಬೆಲೆ ಏರಿದ ಹಿನ್ನೆಲೆಯಲ್ಲಿ ಖರೀದಿ ನೆಪದಲ್ಲಿ ಬಂದ ಜನರು ಟೊಮ್ಯಾಟೋ ಕಳ್ಳತನ ಮಾಡುವ ಸಾಧ್ಯತೆ ಇದೆ. 1ರಿಂದ 2 ಕೆಜಿ ಟೊಮ್ಯಾಟೋ ಕದ್ದರೂ ಅದು ನಮಗೆ ತುಂಬಾ ನಷ್ಟ ಆಗುವುದು. ಹೀಗಾಗಿ ಸಿಸಿಟಿವಿ ಕ್ಯಾಮೆರಾವನ್ನು ಅಳವಡಿಕೆ ಮಾಡಿದ್ದೇನೆ ಎಂದು ವ್ಯಾಪಾರಸ್ಥ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಅಯ್ಯೋ.. ಎಂಥಾ ಕಾಲ ಬಂತು ನೋಡ್ರಪ್ಪಾ.. ಸಿಸಿಟಿವಿ ಕಣ್ಗಾವಲಿನಲ್ಲಿದೆ ಟೊಮ್ಯಾಟೋ!

https://newsfirstlive.com/wp-content/uploads/2023/07/tamato-2.jpg

Load More