newsfirstkannada.com

ಹಳೆ ಸಾಲ.. ಹೊಸ ಲೆಕ್ಕ.. ನಾಳೆ ಸೆಮಿಫೈನಲ್​​ ಅಲ್ಲ, ಸೇಡಿನ ಫೈಟ್​; ಗೆಲ್ಲೋರು ಯಾರು?

Share :

Published November 14, 2023 at 11:54am

  ಸೋಲಿನ ರನೌಟ್​​ ಪ್ರತೀಕಾರಕ್ಕೆ ಬಂದಿದೆ ಸಮಯ!

  ಭಾರತಕ್ಕೆ ಅಲ್ಲ.. ಆಫ್ರಿಕಾಗೂ ಇದೆ ಸೇಡಿನ ಜ್ವಾಲೆ

  ಸೌತ್​ ಆಫ್ರಿಕಾ ಮುಂದಿದೆ 24 ವರ್ಷಗಳ ಮುಯ್ಯಿ

ಏಕದಿನ ವಿಶ್ವಕಪ್​ ಮಹಾ ಸಂಗ್ರಾಮ ಉಪಾಂತ್ಯಕ್ಕೆ ಬಂದಾಗಿದೆ. ಬಲಿಷ್ಠ ನಾಲ್ಕು ತಂಡಗಳ ಕಾದಾಟಕ್ಕೆ ರಣರಂಗ ಸಜ್ಜಾಗಿದೆ. ಆದರೆ, ಈ ಬಾರಿಯ ಸೆಮಿಫೈನಲ್​​ನ ಎರಡೂ ಪಂದ್ಯಗಳು ಕೇವಲ ಪಂದ್ಯಗಳಾಗಿ ಮಾತ್ರ ಉಳಿದಿಲ್ಲ. ಇವು ಸೇಡಿನ ಸಮರಗಳು.

ಏಕದಿನ ವಿಶ್ವಕಪ್​ನ ಲೀಗ್ ಮ್ಯಾಚ್​​ಗಳ ಮುಕ್ತಾಯ ಕಂಡಿದ್ದು, ಎಲ್ಲರ ಚಿತ್ತ ನಾಕೌಟ್​​ನತ್ತ ನೆಟ್ಟಿದೆ. ಉಳಿದೆರೆಡು ಪಂದ್ಯಗಳಲ್ಲಿ ಗೆದ್ದು, ವಿಶ್ವಕಪ್ ಗದ್ದುಗೆ ಯಾರ್​ ಏರ್ತಾರೆ ಎಂಬ ಕ್ಯೂರಿಯಾಸಿಟಿಯೂ ಹೆಚ್ಚಾಗಿದೆ. ಜಿದ್ದಾ ಜಿದ್ದಿನ ಹೋರಾಟದ ನಿರೀಕ್ಷೆ ಎಲ್ಲರಲ್ಲೂ ಇದೆ. ಯಾಕಂದ್ರೆ, ಈ ವಿಶ್ವಕಪ್​​ನ ಸೆಮಿಫೈನಲ್​​​ ಕಾದಾಟ ಸೇಡಿನ ಸಮರಗಳಾಗಿವೆ.

ಎರಡು ರನೌಟ್.. ಎರಡು ಸೆಮಿಫೈನಲ್​.. ಸೇಡಿನ ಫೈಟ್​..!

ಹೌದು! ವಿಶ್ವಕಪ್​ನ ಸೆಮಿಫೈನಲ್​ನಲ್ಲಿ ಟೀಮ್ ಇಂಡಿಯಾ, ನ್ಯೂಜಿಲೆಂಡ್ ಹಾಗೂ ಸೌತ್ ಆಫ್ರಿಕಾ, ಆಸ್ಟ್ರೇಲಿಯಾ ಮುಖಮುಖಿಯಾಗ್ತಿವೆ. ಬಲಿಷ್ಠರ ಕಾಳಗ ಭಾರೀ ಕುತೂಹಲವನ್ನ ಹುಟ್ಟು ಹಾಕಿದೆ. ಇದಕ್ಕೆ ಕಾರಣ ಆ ಎರಡು ರನೌಟ್​..!

ಇದನ್ನು ಓದಿ: ಪತ್ನಿಗೆ ಬೇರೊಂದು ಮದುವೆ ಮಾಡಿಸಿದ್ದ ಸೇಡು, 2 ಕ್ವಾರ್ಟರ್ ಎಣ್ಣೆ ಕುಡಿಸಿ ಕೊಂದೇ ಬಿಟ್ಟ.. ಇದು ಕುಚಿಕು ಗೆಳೆಯನ ಮರ್ಡರ್​ ಸ್ಟೋರಿ

ಟೀಮ್ ಇಂಡಿಯಾ ಮುಂದೆ 2019ರ ಸೆಮಿಸ್​ ಸೇಡು..!

ಹೌದು! 2019ರ ವಿಶ್ವಕಪ್​ ಸೆಮಿಫೈನಲ್​ ಎಂದಿಗೂ ಮರೆಯುವಂತಿಲ್ಲ. ಅಂದು ಇಂಗ್ಲೆಂಡ್​ ನೆಲದಲ್ಲಿ ಟೀಮ್ ಇಂಡಿಯಾವನ್ನ ಮಣಿಸಿದ್ದ ನ್ಯೂಜಿಲೆಂಡ್​​​, ಕೋಟ್ಯಾಂತರ ಅಭಿಮಾನಿಗಳ ಕನಸು ನುಚ್ಚುನೂರು ಮಾಡಿತ್ತು. ಇದಕ್ಕೆಲ್ಲಾ ಕಾರಣ ಧೋನಿಯ ಆ ಒಂದೇ ಒಂದು ರನೌಟ್​..

ಭಾರತಕ್ಕೆ ಅಲ್ಲ.. ಸೌತ್​ ಆಫ್ರಿಕಾಗೂ ಇದೆ ರನೌಟ್​​ ಮುಯ್ಯಿ..​!

ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾಗೆ ಮಾತ್ರವೇ ಅಲ್ಲ. ಸೌತ್ ಆಫ್ರಿಕಾಗೂ ಒಂದು ರನೌಟ್ ಕನಸಲ್ಲೂ ಕಾಡುತ್ತೆ. ವಿಶ್ವ ಕ್ರಿಕೆಟ್​ನ ಮೋಸ್ಟ್ ಫೇಮಸ್​ ರನೌಟ್ ಇದು. 1999ರ ಏಕದಿನ ವಿಶ್ವಕಪ್​ನಲ್ಲಾದ ಆ ಘಟನೆ ಇಂದಿಗೂ ಆಫ್ರಿಕನ್ನರ ಹೃದಯವನ್ನ ಛಿದ್ರಗೊಳಿಸುತ್ತೆ.

ಅದು ಆಸ್ಟ್ರೇಲಿಯಾ ಹಾಗೂ ಸೌತ್ ಆಫ್ರಿಕಾ ಸೆಮಿಫೈನಲ್ ಕಾದಾಟ.. ಆಸಿಸ್​ ನೀಡಿದ್ದ 213 ರನ್​​​​ಗಳ ಗುರಿ ಬೆನ್ನಟ್ಟಿದ್ದ ಸೌತ್ ಆಫ್ರಿಕಾಗೆ ಕೊನೆ ಓವರ್​​ನಲ್ಲಿ 9 ರನ್​ಗಳ​ ಅಗತ್ಯತೆ ಇತ್ತು. ಕೊನೆ ಓವರ್​ನ ಮೊದಲ ಎರಡೂ ಎಸೆತ ಬೌಂಡರಿ ಬಾರಿಸಿದ್ದ ಲ್ಯಾನ್ಸಿ ಕ್ಲೂಸ್ನರ್​, ಪಂದ್ಯವನ್ನ ಟೈ ಮಾಡಿಕೊಂಡಿದ್ರು. ಆದ್ರೆ, 4ನೇ ಎಸೆತದಲ್ಲಿ ರನೌಟ್​​ ಹೈಡ್ರಾಮಾ ನಡೀತು. ಇದು ಆಫ್ರಿಕನ್ನರ ಗೆಲುವಿನ ಕನಸು ಚಿದ್ರಗೊಳಿಸಿತ್ತು. ಟೈನಲ್ಲಿ ಪಂದ್ಯ ಅಂತ್ಯವಾದ್ರೂ, ಸೂಪರ್ ಸಿಕ್ಸ್​​ ಲೆಕ್ಕಾಚಾರದಲ್ಲಿ ಆಸಿಸ್​​ ಗೆದ್ದು ಬೀಗಿತ್ತು.

ಇದನ್ನು ಓದಿ: Virat Kohli: ನಂಬಿಕೆ ಇಲ್ಲ ಎಂದಿದ್ದ ಕೊಹ್ಲಿ ದೇವರ ಮೊರೆ ಹೋಗಿದ್ದೇಕೆ? ವಿರಾಟ್​ ಇಂಥಾ ಬದಲಾವಣೆಗೆ ಕಾರಣ ಯಾರು?

ಮುಯ್ಯಿಗೆ ಮುಯ್ಯಿ ತೀರಿಸಿಕೊಳ್ತಾರಾ ಟಾಪರ್ಸ್​..?

ಸದ್ಯ ಟೀಮ್ ಇಂಡಿಯಾಗೆ ನ್ಯೂಜಿಲೆಂಡ್ ಎದುರಿನ 4 ವರ್ಷಗಳ ಹಿಂದಿನ ಸೇಡು ತೀರಿಸಿಕೊಳ್ಳುವ ಚಾನ್ಸ್​ ಸಿಕ್ಕಿದ್ರೆ. ಅತ್ತ ಸೌತ್ ಆಫ್ರಿಕಾಗೆ 1999ರ ಮುಯ್ಯಿ ತೀರಿಸಿಕೊಳ್ಳುವ ಸುವರ್ಣಾವಕಾಶ ಲಭಿಸಿದೆ. ಈಗಾಗಲೇ ಲೀಗ್​ನಲ್ಲಿ ಸೆಮೀಸ್​ ಎದುರಾಳಿಗಳಿಗೆ ಸೋಲಿನ ರುಚಿ ಉಣಿಸಿರುವ ಟೇಬಲ್ ಟಾಪರ್ಸ್​, ಈಗ ಸೆಮಿಫೈನಲ್​ ಎಂಬ ಸೇಡಿನ ಸಮರದಲ್ಲಿ ಹಳೆಯ ಲೆಕ್ಕ ಚುಕ್ತಾ ಮಾಡಲು ಸಜ್ಜಾಗಿವೆ. ಆ ಮೂಲಕ ಕೋಟ್ಯಾಂತರ ಅಭಿಮಾನಿಗಳ ಆಸೆ ಈಡೇರಿಸುವ ಹಂಬಲದಲ್ಲಿವೆ. ಆದ್ರೆ, ಇದು ಎಷ್ಟರ ಮಟ್ಟಿಗೆ ಸಾಧ್ಯವಾಗುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಹಳೆ ಸಾಲ.. ಹೊಸ ಲೆಕ್ಕ.. ನಾಳೆ ಸೆಮಿಫೈನಲ್​​ ಅಲ್ಲ, ಸೇಡಿನ ಫೈಟ್​; ಗೆಲ್ಲೋರು ಯಾರು?

https://newsfirstlive.com/wp-content/uploads/2023/11/Worlcup-Semi.jpg

Load More