/newsfirstlive-kannada/media/post_attachments/wp-content/uploads/2024/10/COFFEE-PROBLEM.jpg)
ನಾವು ತಿನ್ನುವ ಹಾಗೂ ಕುಡಿಯುವ ಪದಾರ್ಥಗಳು ನಮ್ಮ ದೇಹದ ರಕ್ತನಾಳದ ಮೇಲೆ ಅನೇಕ ಪರಿಣಾಮಗಳನ್ನು ಬೀರುತ್ತವೆ. ಅದರಲ್ಲೂ ಕೂಡ ಹೃದಯರಕ್ತನಾಳದ ಮೇಲೆ ನಾವು ತಿನ್ನುವ ಹಾಗೂ ಕುಡಿಯುವ ಪದಾರ್ಥಗಳ ಪರಿಣಾಮ ಉಂಟಾಗುವುದು ನಿಜ. ಕಾಫಿ ಕುಡಿಯುವುದು ಅನೇಕ ಆರೋಗ್ಯಕರ ಕಾರಣಗಳಿಂದ ಉತ್ತಮ. ಆದ್ರೆ ಅದು ಅತಿಯಾಗಿ ಹೋದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ ಎನ್ನುತ್ತಿವೆ ಹಲವು ಅಧ್ಯಯನಗಳು. ಅತಿಯಾದ್ರೆ ಅಮೃತವೇ ವಿಷವಾಗುತ್ತದೆ. ಇನ್ನು ಕಾಫಿ ಏನು? ಕಾಫಿ ಹಾಗೂ ಸೋಡಾ ಹೆಚ್ಚು ಸೇವಿಸುವುದರಿಂದ ಪಾರ್ಶ್ವವಾಯುವಿನಂತಹ ಸಮಸ್ಯೆಗಳು ನಮಗೆ ಕಾಡುತ್ತವೆ.
ಇದನ್ನೂ ಓದಿ:ರೆಡ್ ಬ್ಲೂ ಸಾರಿಯಲ್ಲಿ ಮಿರ ಮಿರ ಮಿಂಚಿದ ರಾಣಿ ಮುಖರ್ಜಿ; ಸೋಷಿಯಲ್ ಮೀಡಿಯಾದಲ್ಲಿ ಹೊಸ ಅಲೆ ಸೃಷ್ಟಿಸಿದ ಸೀರೆ
ಸದ್ಯ ಅಮೆರಿಕಾದ ಎರಡು ಅಧ್ಯಯನಗಳು ನಮ್ಮ ಪಾನೀಯಗಳ ಆಯ್ಕೆ ಹೇಗಿರಬೇಕು ಅನ್ನೋದರ ಬಗ್ಗೆ ಹೇಳಿವೆ. ಅತಿಯಾದ ಕಾಫಿ ಮತ್ತು ಸೋಡಾ ಸೇವನೆಯಿಂದಾಗಿ ಸ್ಟ್ರೋಕ್ ಸಂಭವಿಸುವ ಸಾಧ್ಯತೆ ಹೆಚ್ಚು ಎಂದು ಹೇಳಲಾಗಿದೆ. ಕಾರ್ಬೊನೇಟ್​​ ಅಂಶ ಹೊಂದಿರುವ ಪಾನೀಯಗಳು ಹಾಗೂ ಜ್ಯೂಸ್​ಗಳು ಪಾರ್ಶ್ವವಾಯು ಹೊಡೆತಕ್ಕೆ ಈಡಾಗುವ ಸಾಧ್ಯತೆ ಹೆಚ್ಚು ಎಂದೇ ಹೇಳಲಾಗಿದೆ. ನಿತ್ಯ ನೀವು 4 ಕಪ್ ಕಾಫಿಗಿಂತ ಹೆಚ್ಚು ಸೇವಿಸಿದರೆ, ಈ ಅಪಾಯವಿದೆ ಎಂದು ಅಧ್ಯಯನಗಳು ಹೇಳಿವೆ.
ಐರ್ಲೆಂಡ್​ನ ಗಾಲ್ವೇ ವಿಶ್ವವಿದ್ಯಾಲಯದ ಪಿಹೆಚ್​ಡಿ ಪ್ರೊಫೆಸರ್ ಆಂಡ್ರೆ ಸ್ಮಿತ್ ಹೇಳುವ ಪ್ರಕಾರ, ನಾವು ಜನರಲ್ಲಿ ಈ ರೀತಿಯ ಅನೇಕ ವಿಷಯಗಳ ಬಗ್ಗೆ ಜಾಗೃತಿ ಮೂಡಿಸಬೇಕಿದೆ. ಜನರು ಅತಿಹೆಚ್ಚು ಕಾಫಿ, ಜ್ಯೂಸ್ ಹಾಗೂ ಸೋಡಾ ಕುಡಿಯವುದರಿಂದ ದೂರ ಉಳಿದು ಹೆಚ್ಚು ಹೆಚ್ಚು ನೀರು ಕುಡಿಯುವದತ್ತ ಗಮನಹರಿಸಬೇಕು. ಸೋಡಾ, ಕಾಫಿ ಹಾಗೂ ಅತಿಹೆಚ್ಚು ಜ್ಯೂಸ್ ಸೇವಿಸುವುದರಿಂದ ಸ್ಟ್ರೋಕ್​ನಂತಹ ಸಮಸ್ಯೆಗಳು ನಿಮ್ಮನ್ನು ಕಾಡುತ್ತವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ತೀವ್ರ ಲೋ ಬಿಪಿಯಿಂದ ಬಳಲುತ್ತಿದ್ದ ರತನ್ ಟಾಟಾ; BP ಇರೋರು ಈ ತಪ್ಪು ಮಾಡಬಾರದು!
ಸಾಮಾನ್ಯವಾಗ ಪಾರ್ಶ್ವವಾಯು ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟುವಿಕೆಯಿಂದ ಆಗುತ್ತದೆ. ಇದರಿಂದಾಗಿ ಮೆದುಳಿಗೆ ಸಾಮಾನ್ಯವಾಗಿ ರಕ್ತದಿಂದ ಸಿಗಬೇಕಾದ ಆಕ್ಸಿಜನ್ ಸಿಗುವುದಿಲ್ಲ. ಹೀಗಾಗಿ ಮೆದುಳಿನ ಸೆಲ್​ಗಳು ಒಂದೊಂದಾಗಿ ಸಾಯುತ್ತ ಬರುತ್ತವೆ. ಅಮೆರಿಕಾದಲ್ಲಿಯೇ ಅತಿಹೆಚ್ಚು ಜನರು ಈ ಪಾರ್ಶ್ವವಾಯುವಿನಿಂದ ಸಾವನ್ನಪ್ಪತ್ತಾರೆ ಎಂದು ಒಂದು ಅಧ್ಯಯನ ಹೇಳಿದೆ. ಪ್ರತಿ ವರ್ಷ ಅಲ್ಲಿ ಪಾರ್ಶ್ವವಾಯುವಿನಿಂದ ಅಸುನೀಗುವವರ ಸಂಖ್ಯೆ ಸುಮಾರು 7 ಲಕ್ಷ 95 ಸಾವಿರ ಅಂದ್ರೆ ನೀವು ನಂಬಲೇಬೇಕು.
/newsfirstlive-kannada/media/post_attachments/wp-content/uploads/2024/10/COFFEE-PROBLEM-1.jpg)
ಇದರ ಕಾರಣ ಕಂಡುಹಿಡಿಯಲೆಂದೇ ಒಂದು ಸಂಶೋಧನೆಯನ್ನು ಕೈಗೊಳ್ಳಲಾಗಿದೆ. ಅದರ ಫಲವಾಗಿ ಎರಡು ಅಧ್ಯಯನಗಳು ಹೊರಗೆ ಬಂದಿವೆ. ಒಂದು ಜರ್ನಲ್ ಆಫ್ ಸ್ಟ್ರೋಕ್ ಹಾಗೂ ಮತ್ತೊಂದು ಇಂಟರ್​ನ್ಯಾಷನಲ್ ಜರ್ನಲ್ ಆಫ್ ಸ್ಟ್ರೋಕ್ ಎನ್ನುವುದು. ಈ ಒಂದು ಅಧ್ಯಯನದಲ್ಲಿ ಒಟ್ಟು 27 ದೇಶಗಳಿಂದ ಆಯ್ದ 27 ಸಾವಿರ ಜನರನ್ನು ಪರೀಕ್ಷಿಸುವುದರೊಂದಿಗೆ ಒಂದು ನಿರ್ಣಯಕ್ಕೆ ಬರಲಾಗಿದೆ. ಇವರಲ್ಲಿ ಸುಮಾರು 13,500 ಜನರು ಮೊದಲ ಬಾರಿಗೆ ಪಾರ್ಶ್ವವಾಯುವಿನಿಂದ ಬಳಲಿದವರಾಗಿದ್ದಾರೆ.
ಈ ಒಂದು ಅಧ್ಯಯನ ಪ್ರಕಾರ ನಿತ್ಯ ಕಾರ್ಬೊನೇಟ್ ಅಂಶವುಳ್ಳ ಪಾನೀಯಗಳನ್ನು ಕುಡಿಯುವ ಸಂಖ್ಯೆ ಶೇಕಡಾ 22ರಷ್ಟಿದೆ. ಈ ಪ್ರಮಾಣದ ಜನರು ನಿತ್ಯ ಮೂರರಿಂದ ನಾಲ್ಕು ಬಾರಿ ಕಾಫಿ, ಸೋಡಾ ಹಾಗೂ ಕಾರ್ಬೊನೆಟ್ ಅಂಶವುಳ್ಳ ಪಾನೀಯಗಳನ್ನು ಕುಡಿದಿದ್ದಾರೆ ಎಂದು ಹೇಳಲಾಗಿದೆ. ಫ್ರುಟ್ ಜ್ಯೂಸ್​ ಕುಡಿದು ಸ್ಟ್ರೋಕ್​ನಂತಹ ರಿಸ್ಕ್​​ಗೆ ಒಳಗಾದವರ ಸಂಖ್ಯೆ ಶೇಕಡಾ 37ರಷ್ಟಿದೆ. ಕಾಫಿ ಕುಡಿದು ಈ ರೀತಿಯ ಅಪಾಯಕ್ಕೆ ಒಳಗಾದವರ ಸಂಖ್ಯೆಯೂ ಕೂಡ ಶೇಕಡಾ 37 ರಷ್ಟಿದೆ. ಆದ್ರೆ ನಿತ್ಯ ನಾಲ್ಕು ಕಪ್ ಟೀ ಕುಡಿಯುವವರಲ್ಲಿ ಪಾರ್ಶ್ವವಾಯುವಿನ ಅಪಾಯ ಕಂಡು ಬಂದಿದ್ದು ಕೇವಲ 19ರಷ್ಟು ಮಾತ್ರ ಎಂದು ಹೇಳಲಾಗಿದೆ. ಹೀಗಾಗಿ ಕಾಫಿಗಿಂತ ಟೀ ಕುಡಿಯುವುದು ಉತ್ತಮ ಎಂದು ಈ ಅಧ್ಯಯದಲ್ಲಿ ಹೇಳಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us