/newsfirstlive-kannada/media/post_attachments/wp-content/uploads/2024/04/Smartphone.jpg)
ಅಂಗೈ ಅಗಲದ ಸ್ಮಾರ್ಟ್​ಫೋನಿಗೆ ವಿಶ್ವದಾದ್ಯಂತ ಬೇಡಿಕೆ ಹೆಚ್ಚಾಗುತ್ತಿದೆಯೇ ಹೊರತು ಕಡಿಯಾಗುತ್ತಿಲ್ಲ. ಅದರಲ್ಲೂ ತಂತ್ರಜ್ಞಾನ ಬೆಳೆದಂತೆ ನೂತನ ಸ್ಮಾರ್ಟ್​ಫೋನ್​​ಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಅದರಂತೆ ಭಾರತದಲ್ಲಿ ಏಪ್ರಿಲ್​ ತಿಂಗಳಿನಲ್ಲಿ ಟಾಪ್​ ಸ್ಮಾರ್ಟ್​ಫೋನ್​ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ ಮತ್ತು ಇಡಲು ಸಜ್ಜಾಗಿದೆ. ಈ ಬಗ್ಗೆ ಮಾಹಿತಿ ಇಲ್ಲಿವೆ.
ಒನ್​ಪ್ಲಸ್​ ನೋರ್ಡ್​​ ಸಿಇ
ಜನಪ್ರಿಯ ಸ್ಮಾರ್ಟ್​ಫೊನ್​ ಸಂಸ್ಥೆ ಒನ್​ಪ್ಲಸ್​ ಏಪ್ರಿಲ್​ 1 ರಂದು ನೋರ್ಡ್​ ಸಿಇ 4 ಸ್ಮಾರ್ಟ್​ಫೋನನ್ನು ರಿಲೀಸ್​ ಮಾಡಿದೆ. ನೂತನ ಸ್ಮಾರ್ಟ್​ಫೊನ್​ ಬೆಲೆ 25 ಸಾವಿರ ರೂಪಾಯಿಯಾಗಿದೆ. ಸದ್ಯ ಕಾಲಕ್ಕೆ ತಕ್ಕ ಕೋಲ ಎಂಬಂತೆ ಟೆಕ್​ ಪ್ರಿಯರಿಗೆ ಈ ಸ್ಮಾರ್ಟ್​ಫೋನ್​ ಹೇಳಿಮಾಡಿಸಿದಂತಿದೆ.
ಮೊಟೊರೊಲ ಎಡ್ಜ್​ 50 ಪ್ರೊ
ಮೊಟೊರೊಲ ಕೂಡ ಭಾರತೀಯ ಮಾರುಕಟ್ಟೆಯನ್ನು ಗುರಿಯಾಗಿಸಿಟ್ಟುಕೊಂಡು ಎಡ್ಕ್​ 50 ಪ್ರೊ ಸ್ಮಾರ್ಟ್​ಫೋನನ್ನು ರಿಲೀಸ್​ ಮಾಡಿದೆ. ನೂತನ ಫೋನ್​ ಸ್ನಾಪ್​ಡ್ರಾಗನ್​ 8 ಜನರೇಷನ್​ 3 ಚಿಪ್​ಸೆಟ್​ ಒಳಗೊಂಡಿದೆ. ಹೈ-ರಿಫ್ರೆಶ್​​ ಅಮೋಲ್ಡ್​​ ಸ್ಕ್ರೀನ್​ ಮತ್ತು ಆಕರ್ಷಕ ಕ್ಯಾಮೆರಾವನ್ನು ಒಳಗೊಂಡಿದೆ.
ಸ್ಯಾಮ್​ಸಂಗ್​ ಗ್ಯಾಲಕ್ಸಿ ಎಮ್​55
ಸೌತ್​ ಕೊರಿಯಾದ ಸ್ಯಾಮ್​ಸಂಗ್​ ಕಂಪನಿ ಎಮ್​ ಸಿರೀಸ್​​ ಸ್ಮಾರ್ಟ್​ಫೊನನ್ನು ಭಾರತದಲ್ಲಿ ರಿಲೀಸ್​ ಮಾಡಲು ಮುಂದಾಗಿದೆ. ಇದೇ ತಿಂಗಳು 8ರಮದು ರಿಲೀಸ್​ ಮಾಡಲಿದೆ. ಅಂದಹಾಗೆಯೇ ಇದು ಕೈಗೆಟುಕುವ ಬೆಲೆಯಲ್ಲಿ ಸಿಗಲಿದೆ. ಸ್ಯಾಮ್​​ಸಂಗ್​ ಗ್ಯಾಲಕ್ಸಿ ಎಮ್​55 ಫೊನ್​ನಲ್ಲಿ ಸ್ನಾಪ್​ಡ್ರ್ಯಾಗನ್​ 7 ಜನರೇಷನ್​ ಚಿಪ್​ಸೆಟ್​​ ಅಳವಡಿಸಲಾಗಿದ್ದು, ಗ್ರಾಹಕರಿಗೆ 30 ಸಾವಿರ ಮುಖಬೆಲೆಗೆ ಖರೀದಿಗೆ ಸಿಗಲಿದೆ ಎನ್ನಲಾಗುತ್ತಿದೆ.
ರಿಯಲ್​ಮಿ ಜಿಟಿ 5 ಪ್ರೊ
ಚೀನಾಯದ ರಿಯಲ್​ಮಿ ಇದೇ ತಿಂಗಳು ಭಾರತದಲ್ಲಿ ಜಿಟಿ 5 ಪ್ರೊ ರಿಲೀಸ್​ ಮಾಡಲು ಮುಂದಾಗಿದೆ ಎನ್ನಲಾಗುತ್ತಿದೆ. ಈ ನೂತನ ಫೋನಿನ ವಿಶೇಷತೆ ಎಂದರೆ 100 ವ್ಯಾಟ್ ವೈರ್​ ಜೊತೆಗೆ 50 ವ್ಯಾಟ್​​ ವೈರ್​ಲೆಸ್​ ಚಾರ್ಜಿಂಗ್​ ಬರುತ್ತದೆ. ಇದಲ್ಲದೆ, ಲೆದರ್​ ಪ್ಯಾನೆಲ್​ ಮತ್ತು ಕೆಲವು ಪ್ರಿಮಿಯಂ ಫೀಷರ್​​ ಜಿಟಿ ಸಿರೀಸ್​ ಒಳಗೊಂಡಿದೆ. ಇನ್ನು ನೂತನ ಸ್ಮಾರ್ಟ್​ಫೋನಿನ ಬೆಲೆ ಹೊರಬೀಳಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us