ಬೇಡುವವರೇ ಲಕ್ಷಾಧೀಶ್ವರರು.. ಭಾರತದ ಟಾಪ್​ 5 ಭಿಕ್ಷುಕರು ಯಾರು? ಅವರ ನಿತ್ಯ ಸಂಪಾದನೆ ಎಷ್ಟು ಗೊತ್ತಾ?

author-image
Gopal Kulkarni
Updated On
ಬೇಡುವವರೇ ಲಕ್ಷಾಧೀಶ್ವರರು.. ಭಾರತದ ಟಾಪ್​ 5 ಭಿಕ್ಷುಕರು ಯಾರು? ಅವರ ನಿತ್ಯ ಸಂಪಾದನೆ ಎಷ್ಟು ಗೊತ್ತಾ?
Advertisment
  • ಭಾರತದಲ್ಲಿದ್ದಾರೆ ಟಾಪ್​ 5 ಭೀಕ್ಷುಕರು, ಇವ್ರ ಆದಾಯ ಕೇಳಿದ್ರೆ ಬೆಚ್ಚಿ ಬೀಳ್ತಿರಾ!
  • ಅವರು ಒಂದು ದಿನದ ಆದಾಯ ಎಷ್ಟು ಗೊತ್ತಾ? ಹೂಡಿಕೆ ಎಲ್ಲೆಲ್ಲಿ ಮಾಡ್ತಾರೆ?
  • ಬೇಡುವ ಕೈಗಳಲ್ಲಿಯೇ ಇದೇ ತಿಂಗಳಿಗೆ ಹತ್ತಾರು ಸಾವಿರ ರೂಪಾಯಿ ಆದಾಯ

ಭಿಕ್ಷುಕ ಎಂದಾಕ್ಷಣ ನಮ್ಮ ಕಣ್ಣ ಮುಂದೆ ಬರುವುದು ಅತ್ಯಂತ ಕಡುಬಡತನದ ವ್ಯಕ್ತಿಯ ಚಿತ್ರಣ. ಹಾಳಾದ ಉಡುಗೆ ತೊಡುಗೆಗಳನ್ನು ಧರಿಸಿರುವ, ಕೆದಕಿದ ಕೂದಲನ್ನು ಹೊಂದಿರುವ ಬಡ ವ್ಯಕ್ತಿ. ಬದುಕಲು ನಮ್ಮ ಬೆಂಬಲ ಸಹಾನುಭೂತಿ ಅಗತ್ಯವಿದೆ ಎಂದು ನಮಗೆ ಅನಿಸುತ್ತದೆ. ಆದರೆ ಭಾರತದಂತಹ ದೇಶದಲ್ಲೂ ಭಿಕ್ಷುಕರ ಕೋಟಿಗಳ ಲೆಕ್ಕದಲ್ಲಿ ಇದ್ದಾರೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು.

ಹೌದು, ಕೆಲವು ಭಿಕ್ಷುಕರು ದೊಡ್ಡ ನಗರಗಳಲ್ಲಿ ಫ್ಲ್ಯಾಟ್​ಗಳನ್ನು ಹೊಂದಿದ್ದಾರೆ ಅಷ್ಟೇ ಅಲ್ಲ ಅವರ ಮಕ್ಕಳು ಪ್ರತಿಷ್ಠಿತ ಶಾಲೆಗಳಲ್ಲಿ ಓದುತ್ತಿದ್ದಾರೆ. ಅವರೆಲ್ಲ ಭಿಕ್ಷಾಟನೆಯನ್ನು ಗಮನಾರ್ಹ ಆದಾಯದ ಮೂಲವಾಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಭಾರತದ ಟಾಪ್ 5 ಶ್ರೀಮಂತ ಭಿಕ್ಷುಕರು ಇಲ್ಲಿದ್ದಾರೆ ನೋಡಿ

ಇದನ್ನೂ ಓದಿ:ಸರ್ಕಾರಿ ಆಸ್ಪತ್ರೆ ವೈದ್ಯ ಬರೆದ ಪ್ರಿಸ್ಕ್ರಿಪ್ಷನ್ ನೋಡಿ ಮೆಡಿಕಲ್ ಸಿಬ್ಬಂದಿ ತಲೆ ಗಿರಗಿರ; ಕಾರಣ ಕೇಳಿದ್ರೆ ಶಾಕ್ ಆಗ್ತೀರಾ

publive-image

1. ಭರತ್ ಜೈನ್
₹7.5 ಕೋಟಿ ($1 ಮಿಲಿಯನ್) ಗಳಿಸಿರುವ ಭರತ್ ಜೈನ್ ಭಾರತದ ಅತ್ಯಂತ ಶ್ರೀಮಂತ ಭಿಕ್ಷುಕರಲ್ಲಿ ಒಬ್ಬ. ಹದಿಹರೆಯದಿಂದಲೂ ಭಿಕ್ಷೆ ಬೇಡುತ್ತಿದ್ದ. ಭಾರತದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ವಾಸಿಸುತ್ತಾನೆ. ಮುಂಬೈನ ಶಿವಾಜಿ ಮಹಾರಾಜ್ ಟರ್ಮಿನಲ್ ಅಥವಾ ಆಜಾದ್ ಮೈದಾನದ ಪ್ರಮುಖ ಸ್ಥಳಗಳಲ್ಲಿ ಭಿಕ್ಷೆ ಬೇಡುತ್ತಾನೆ. ಪರೇಲ್‌ನಲ್ಲಿ 1.4 ಕೋಟಿ ಮೌಲ್ಯದ 2 BHK ಫ್ಲಾಟ್‌ಗಳನ್ನು ಹೊಂದಿದ್ದಾನೆ. ಥಾಣೆಯಲ್ಲಿ ಎರಡು ಅಂಗಡಿಗಳನ್ನು ಹೊಂದಿದ್ದಾನೆ, ತಿಂಗಳಿಗೆ ₹ 30,000 ಬಾಡಿಗೆ ಬರುತ್ತದೆ. ಅಲ್ಲದೇ ಜ್ಯೂಸ್ ಸೆಂಟರ್ ಗೆ ಅಂಗಡಿಯೊಂದನ್ನು ಬಾಡಿಗೆಗೆ ನೀಡಿದ್ದು ತಿಂಗಳಿಗೆ ₹10 ಸಾವಿರ ಬಾಡಿಗೆ ಬರುತ್ತದೆ. ಜೈನ್ ಕುಟುಂಬ ಭಿಕ್ಷಾಟನೆ ತೊರೆಯಲು ಸಲಹೆ ನೀಡಿದ್ರೂ ಭರತ್ ಜೈನ್ ಅದನ್ನೇ ವೃತ್ತಿಯನ್ನಾಗಿಸಿದ್ದಾನೆ. ಭರತ್ ಜೈನ್ ಆದಾಯ ದಿನಕ್ಕೆ ₹ 2,000 ರಿಂದ ₹ 2,500.

ಇದನ್ನೂ ಓದಿ:ಭಿಕ್ಷೆ ಬೇಡುವುದಕ್ಕಿಂತ ದುಡಿದು ತಿನ್ನು.. ಆಟೋ ಓಡಿಸುವ 55 ವರ್ಷದ ಅಜ್ಜಿ ವಿಡಿಯೋ ವೈರಲ್‌; ಹೇಳಿದ್ದೇನು?

publive-image

2. ಲಕ್ಷ್ಮಿ ದಾಸ್
ಲಕ್ಷ್ಮಿ ದಾಸ್ ಭಾರತದ ಎರಡನೇ ಶ್ರೀಮಂತ ಭಿಕ್ಷುಕಿ. ₹1 ಕೋಟಿ ನಿವ್ವಳ ಮೌಲ್ಯವನ್ನು ಹೊಂದಿದ್ದಾಳೆ. ಕೋಲ್ಕತ್ತಾದಲ್ಲಿ ಚಿಕ್ಕ ವಯಸ್ಸಿನಿಂದಲೇ ಭಿಕ್ಷೆ ಬೇಡಲು ಆರಂಭಿಸಿದ ಆಕೆಗೆ ಈಗ 50 ವರ್ಷ. ಲಕ್ಷ್ಮಿದಾಸ್ ಚಿಕ್ಕಂದಿನಿಂದಲೂ ಪೋಲಿಯೊದಿಂದ ಸಮಸ್ಯೆ ಬಳಲುತ್ತಿದ್ದಾಳೆ. ಆಕೆಯ ಮಾಸಿಕ ಆದಾಯ ₹35,000ಕ್ಕಿಂತ ಹೆಚ್ಚು.

publive-image

3. ಸಂಭಾಜಿ ಕಾಳೆ
ಮುಂಬೈನ ಖಾರ್ ಪ್ರದೇಶದಲ್ಲಿ ವಾಸಿಸುವ ಸಂಭಾಜಿ ಕಾಳೆ ದೇಶದ ಶ್ರೀಮಂತ ಭಿಕ್ಷುಕ. ಆತನ ಆಸ್ತಿ 1.5 ಕೋಟಿಗೂ ಹೆಚ್ಚು. ಆತನ ದಿನದ ಆದಾಯ 1 ಸಾವಿರ ರೂ. ಮುಂಬೈನ ಖಾರ್ ಮತ್ತು ಸೋಲಾಪುರದಲ್ಲಿ ಅಪಾರ್ಟ್​ಮೆಂಟ್ ಹೊಂದಿದ್ದಾನೆ.

ಇದನ್ನೂ ಓದಿ: ಮ್ಯೂಸಿಯಮ್​​ನಲ್ಲಿ ಬರೋಬ್ಬರಿ 15 ಕೋಟಿ ಚಿನ್ನದ ನಾಣ್ಯಗಳು ಕದ್ದ ಕಳ್ಳ; ಈತ ಸಿಕ್ಕಿಬಿದ್ದಿದ್ದೇ ರೋಚಕ!

publive-image

4. ಕೃಷ್ಣ ಕುಮಾರ್ ಗೀತೆ
ಕೃಷ್ಣ ಕುಮಾರ್ ಗೀತೆ ಭಾರತದ ಶ್ರೀಮಂತ ಭಿಕ್ಷುಕರಲ್ಲಿ ಮತ್ತೊಬ್ಬ. ನಲ್ಲ ಸೊಪಾರಾದಲ್ಲಿ ಸುಮಾರು 7 ಲಕ್ಷ ಮೌಲ್ಯದ ಮನೆ ಇದೆ. ಆತ ತನ್ನ ಸಹೋದರನೊಂದಿಗೆ ವಾಸಿಸುತ್ತಿದ್ದಾನೆ. ಆತನ ದಿನದ ಸರಾಸರಿ ಆದಾಯ ₹1,500ಕ್ಕೂ ಹೆಚ್ಚು.

publive-image

5. ಸರ್ವತೀಯಾ ದೇವಿ
ಈ ಮಹಾತಾಯಿ ಪಾಟ್ನಾ ಜಂಕ್ಷನ್​ನಲ್ಲಿ ಭಿಕ್ಷೆ ಬೇಡುತ್ತಾಳೆ. ಭಿಕ್ಷೆ ಬೇಡಲು ಸಾಧ್ಯವಾಗದೇ ಇದ್ದಾಗ ಯಾರ ಮೇಲೂ ಅವಲಂಬಿತರಾಗಬಾರದು ಎಂಬ ಉದ್ದೇಶದಿಂದ ಜೀವ ವಿಮಾ ಯೋಜನೆಯಲ್ಲಿ ₹36,000 ಹೂಡಿಕೆ ಮಾಡಿದ್ದಾಳೆ. ಸರಾಸರಿಯಾಗಿ, ಸರ್ವತಿಯಾ ದೇವಿ ಪ್ರತಿ ತಿಂಗಳು ₹ 50,000 ಗಳಿಸುತ್ತಾಳೆ.

ಭಾರತದಲ್ಲಿ ಮಧ್ಯಮವರ್ಗದ ವ್ಯಕ್ತಿಗಿಂತ ಹೆಚ್ಚು ಆದಾಯ ಗಳಿಸುವ ಅತ್ಯಂತ ಶ್ರೀಮಂತ ಭಿಕ್ಷುಕರು ಇದ್ದಾರೆ ಎಂದು ನಂಬುವುದು ಕಷ್ಟ. ಭಿಕ್ಷಾಟನೆಯ ಕ್ಷೇತ್ರವನ್ನು ವೃತ್ತಿಪರ ಗಳಿಕೆಯ ಮೂಲವನ್ನಾಗಿ ಮಾಡಿಕೊಂಡಿದ್ದಾರೆ. ಸತ್ಯ ತಿಳಿದ ಜನರು ಈ ಭಿಕ್ಷುಕರ ತಿಂಗಳ ಆದಾಯವನ್ನು ಕೇಳಿ ಶಾಕ್ ಆಗಿದ್ದಾರೆ.

ವರದಿ: ವಿಶ್ವನಾಥ್ ಜಿ.  

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment