newsfirstkannada.com

ಭಿಕ್ಷೆ ಬೇಡುವುದಕ್ಕಿಂತ ದುಡಿದು ತಿನ್ನು.. ಆಟೋ ಓಡಿಸುವ 55 ವರ್ಷದ ಅಜ್ಜಿ ವಿಡಿಯೋ ವೈರಲ್‌; ಹೇಳಿದ್ದೇನು?

Share :

Published September 5, 2024 at 5:33pm

    55ರ ಹರೆಯದಲ್ಲಿ ಆಟೋ ಓಡಿಸುವ ಈ ಅಜ್ಜಿಯ ಬದುಕೇ ಎಲ್ಲರಿಗೂ ಸ್ಪೂರ್ತಿ

    ಬಡತನ, ದುಡಿಯಲಾರದ ಮಗ, ಆದರೂ ದೃತಿಗೆಡದೇ ಬದುಕುತ್ತಿರುವ ವೃದ್ಧೆ

    ಸ್ವಾಭಿಮಾನದ ಈ ಅಜ್ಜಿಯ ವಿಡಿಯೋ ನೋಡಿ ಸಲಾಂ ಎಂದ ನೆಟ್ಟಿಗರು

ಎಲ್ಲರ ಬದುಕು ಒಂದೇ ರೀತಿಯಲ್ಲ, ಒಬ್ಬೊಬ್ಬರದು ಒಂದೊಂದು ಕಥೆ. ಬದುಕಿನ ವೈಚಿತ್ರ್ಯಗಳೇ ಹಾಗೆ, ಇಲ್ಲಿ ಯಾರದೋ ಬದುಕನ್ನ ಇನ್ಯಾರೋ ಕಿತ್ತು ತಿನ್ನುತ್ತಾರೆ. ಇನ್ಯಾರೋ ಯಾರಿಗೂ ಕಾಯದೇ ಭಾರವಾಗದೇ, ತಮ್ಮ ಬದುಕನ್ನು ತಾವೇ ರೂಪಿಸಿಕೊಳ್ಳಲು ವಯಸ್ಸು, ಸಮಯದ ಹಂಗು ತೊರೆದು ದುಡಿಯುತ್ತಾರೆ. ಆ ಸಾಲಿನಲ್ಲಿ ಬಂದು ನಿಲ್ಲುತ್ತಾರೆ ಈ 55 ವರ್ಷದ ಅಜ್ಜಿ.

ಈ ಅಜ್ಜಿಯ ಒಂದು ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 55 ವರ್ಷದ ವೃದ್ಧೆ ತಾವೇ ನಡುರಾತ್ರಿಯಲ್ಲಿ ಆಟೋ ಓಡಿಸಿ ತಮ್ಮ ಬದುಕನ್ನು ನೂಕುತ್ತಿದ್ದಾರೆ. ಈ ಅಜ್ಜಿಯ ಆಟೋ ಏರಿದ ಯುವಕನೊಬ್ಬ ಆಕೆಯ ಬದುಕಿನ ಬಗ್ಗೆ ಕುತೂಹಲ ಹುಟ್ಟಿ ಅನೇಕ ಪ್ರಶ್ನೆಗಳನ್ನು ಕೇಳಿದ್ದಾನೆ. ಅದಕ್ಕೆ ಅಜ್ಜಿ ಉತ್ತರಿಸಿದ ಪರಿಯೇ ಅನನ್ಯ, ಎಲ್ಲರ ಬದುಕಿಗೂ ಪ್ರೇರಣೆಯಾಗಬಲ್ಲ ಮಾತು ಅವರದು.

ಇದನ್ನೂ ಓದಿ: ಏರ್​​ ಇಂಡಿಯಾ ಪ್ರಯಾಣಿಕರಿಗೆ ಸಿಹಿ ಸುದ್ದಿ! ಇನ್ಮುಂದೆ ಆಕಾಶದಲ್ಲೂ ವೈ-ಫೈ ಬಳಸಬಹುದು

ಮಧ್ಯರಾತ್ರಿ 12ರ ವೇಳೆ ಆಟೋ ಚಲಾಯಿಸುತ್ತಿದ್ದ ಅಜ್ಜಿಯನ್ನು ಈ ಸಮಯದಲ್ಲಿ ಯಾಕೆ ನೀವು ಆಟೋ ಓಡಿಸುತ್ತಿದ್ದೀರಾ ಎಂದು ಕೇಳಿದ್ದಾನೆ ಪ್ರಯಾಣಿಕ. ಅದು ಒಬ್ಬೊಬ್ಬರ ಬದುಕಿಗು ಒಂದೊಂದು ಅನಿವಾರ್ಯತೆ ಇರುತ್ತದೆ ನನ್ನದೂ ಹಾಗೆಯೇ. ವಯಸ್ಸಿಗೆ ಬಂದ ಮಗ ದುಡಿಯುವುದಿಲ್ಲ. ಬದಲಿಗೆ ನನ್ನಿಂದಲೇ ದುಡ್ಡು ಕಿತ್ತುಕೊಳ್ಳುತ್ತಾನೆ. ನನ್ನ ಗಂಡ ತುಂಬಾ ವರ್ಷಗಳ ಹಿಂದೆಯೇ ತೀರಿಕೊಂಡರು ಹೀಗಾಗಿ ಬದುಕಿ ಬಂಡಿ ಓಡಿಸಲು ನಾನು ಈ ಆಟೋ ಓಡಿಸುತ್ತೇನೆ ಎಂದು ಹೇಳಿದ್ದಾರೆ ಈ ವೃದ್ಧೆ.

ಇದನ್ನೂ ಓದಿ: ಕನ್ನಡಿಗರಿಗೆ ಗುಡ್​​ನ್ಯೂಸ್​​; ತಿರುಪತಿ ಲಡ್ಡು ವಿಚಾರದಲ್ಲಿ ಒಂದೊಳ್ಳೆ ಸುದ್ದಿ

ಜೀವನದಲ್ಲಿ ಭೀಕ್ಷೆ ಬೇಡುವುದು ಬಹುದೊಡ್ಡ ಅವಮಾನ. ಅದರ ಬದಲಿಗೆ ಕಷ್ಟಪಟ್ಟು ದುಡಿಯಬೇಕು. ನಾನು ಮಧ್ಯಾಹ್ನ 1 ರಿಂದ ರಾತ್ರಿ 12ವರೆಗೆ ಆಟೋ ಓಡಿಸಿಕೊಂಡು ಜೀವನ ನೂಕುತ್ತಿದ್ದೇನೆ. ಈ ಕೆಲಸ ಮಾಡುವುದರಲ್ಲಿ ನನಗ್ಯಾವ ಮುಜುಗರವು ಇಲ್ಲ. ದುಡಿಮೆಯಲ್ಲಿ ಹಿರಿದು ಕಿರಿದು ಅಂತ ಇಲ್ಲ. ದುಡಿದು ತಿನ್ನುವುದಕ್ಕಿಂತ ದೊಡ್ಡದು ಯಾವುದೂ ಅಲ್ಲ ಎಂದು ಹೇಳಿದ್ದಾರೆ ಅಜ್ಜಿ. ಅಜ್ಜಿಯ ಈ ಒಂದೊಂದು ವಾಕ್ಯಗಳು ಪ್ರೇರಣಾದಾಯಕ. ಕಾಯಕವೇ ಕೈಲಾಸ ಎಂಬ ಶರಣ ಉಕ್ತಿಯಂತೆಯೇ ಬದುಕು ಎಲ್ಲಾ ಆದರ್ಶಗಳು ನಮ್ಮ ಕಾಯಕ ದುಡಿಮೆಯ ಮೇಲೆಯೇ ನಿಂತಿವೆ. ಈ ಅಜ್ಜಿ ಎಲ್ಲಿಯವರು ಏನೂ ಅನ್ನೋದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಆದ್ರೆ ಅವರು ಜೀವನದಲ್ಲಿ ಅಳವಡಿಸಿಕೊಂಡಿರುವ ಪಾಠವಂತೂ ಅನೇಕರಿಗೆ ಮಾದರಿ.

ಹಣ್ಣು ಯಾವ ಗಿಡದಿಂದ ಬಂದರೇನು ಅದರ ರುಚಿಯಷ್ಟೇ ಅದರ ಶ್ರೇಷ್ಠತೆಯನ್ನು ತಿಳಿಸುತ್ತದೆ ಅನ್ನುವ ರೀತಿ. ಈ ಅಜ್ಜಿ ಎಲ್ಲಿಯವರೋ ಏನೋ ಆದ್ರೆ ಅವರು ಸರಳ ಭಾಷೆಯಲ್ಲಿ ತಿಳಿಸಿದ ಬದುಕಿನ ಆದರ್ಶಗಳು ದೊಡ್ಡದು. ಆಯಷ್ಮಾನ್ ಗೋಸ್ವಾಮಿ ಅನ್ನೋರು ಈ ವಿಡಿಯೋವನ್ನು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಶೇರ್ ಮಾಡಿದ್ದು ಇದು ಐವತ್ತು ಲಕ್ಷಕ್ಕೂ ಹೆಚ್ಚು ವೀವ್ಸ್ ಪಡೆದಿದೆ. ಅಜ್ಜಿಯ ಅಳವಡಿಸಿಕೊಂಡಿರುವ ಜೀವನ ಮೌಲ್ಯಗಳಿಗೆ ನೆಟ್ಟಿಗರು ತಲೆಬಾಗಿ ನಮಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಭಿಕ್ಷೆ ಬೇಡುವುದಕ್ಕಿಂತ ದುಡಿದು ತಿನ್ನು.. ಆಟೋ ಓಡಿಸುವ 55 ವರ್ಷದ ಅಜ್ಜಿ ವಿಡಿಯೋ ವೈರಲ್‌; ಹೇಳಿದ್ದೇನು?

https://newsfirstlive.com/wp-content/uploads/2024/09/55-YEAR-OLD-WOMEN-AUTO.jpg

Load More