/newsfirstlive-kannada/media/media_files/2025/08/02/actor-prem-2025-08-02-11-13-41.jpg)
ಸ್ಯಾಂಡಲ್​ವುಡ್​ ನಟ ಲವ್ಲಿ ಸ್ಟಾರ್ ಪ್ರೇಮ್ ದಂಪತಿ ಸಖತ್ ಸಂಭ್ರಮದಲ್ಲಿದ್ದಾರೆ. ‘ನೆನಪಿರಲಿ’ ಪ್ರೇಮ್ - ಜ್ಯೋತಿ ಮದುವೆಯಾಗಿ ನಿನ್ನೆಗೆ 25 ವರ್ಷಗಳು ತುಂಬಿವೆ.
ಇದನ್ನೂ ಓದಿ:8 ಮದ್ವೆಯಾಗಿ ಲಕ್ಷ.. ಲಕ್ಷ ಸುಲಿಗೆ; ಇನ್ನೇನು ಮತ್ತೊಂದು ಆಗಬೇಕು ಅನ್ನುವಷ್ಟರಲ್ಲೇ ಸಿಕ್ಕಿಬಿದ್ಳು ಕಿಲಾಡಿ ಲೇಡಿ!
/filters:format(webp)/newsfirstlive-kannada/media/media_files/2025/08/02/nenapirali-prem-2025-08-02-12-04-36.jpg)
ತಮ್ಮ 25ನೇ ವಿವಾಹ ವಾರ್ಷಿಕೋತ್ಸವವನ್ನು ಪ್ರೇಮ್, ಜ್ಯೋತಿ ದಂಪತಿ ವಿಶೇಷವಾಗಿ ಆಚರಿಸಿಕೊಂಡಿದ್ದಾರೆ. ಅಲ್ಲದೇ ಮ್ಯಾರೇಜ್ ಆನಿವರ್ಸರಿ ಪ್ರಯುಕ್ತ ಪತ್ನಿ ಜ್ಯೋತಿಗೆ ಪ್ರೇಮ್ ರಕ್ತದಲ್ಲಿ ಪತ್ರ ಬರೆದು ವಿಶ್ ಮಾಡಿದ್ದಾರೆ. ಜೊತೆಗೆ ದೇವಸ್ಥಾನಕ್ಕೂ ಭೇಟಿ ಕೊಟ್ಟಿದ್ದಾರೆ.
ಪ್ರೇಮ್ ಹಾಗೂ ಜ್ಯೋತಿ ದಂಪತಿ ಒಬ್ಬರಿಗೊಬ್ಬರು ಪ್ರೀತಿಸಿ ಮದುವೆಯಾದವರು. ಪ್ರೇಮ್ ಚಿತ್ರರಂಗಕ್ಕೆ ಕಾಲಿಡುವ ಮುನ್ನವೇ ವೈವಾಹಿಕ ಬದುಕಿಗೆ ನಾಂದಿ ಹಾಡಿದ್ದರು. ಕಷ್ಟ- ಸುಖ, ಏಳು -ಬೀಳನ್ನ ಸಮನಾಗಿ ಸ್ವೀಕರಿಸಿರುವ ಪ್ರೇಮ್ ಹಾಗೂ ಜ್ಯೋತಿ ದಂಪತಿ ಹಲವರಿಗೆ ಸ್ಫೂರ್ತಿಯಾಗಿದ್ದಾರೆ.
/filters:format(webp)/newsfirstlive-kannada/media/media_files/2025/08/02/nenapirali-prem2-2025-08-02-12-06-57.jpg)
ಇನ್ನೂ, 25ನೇ ವಿವಾಹ ವಾರ್ಷಿಕೋತ್ಸವವನ್ನು ಕ್ಯೂಟ್​ ಆಗಿ ಆಚರಿಸಿಕೊಂಡ ವಿಡಿಯೋವನ್ನು ದಂಪತಿಗೆ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡೊಕೊಂಡಿದ್ದಾರೆ. ಇದೇ ವಿಡಿಯೋ ನೋಡಿದ ಅಭಿಮಾನಿಗಳು ಕ್ಯೂಟ್​ ದಂಪತಿಗೆ ಶುಭ ಹಾರೈಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us