/newsfirstlive-kannada/media/media_files/2025/08/01/women-married-8-men2-2025-08-01-19-20-37.jpg)
ಈಕೆ ಅಂತಿಂಥ ಮಹಿಳೆ ಅಲ್ಲವೇ ಅಲ್ಲ.. ಖತರ್ನಾಕ್ ಲೇಡಿ ಕಹಾನಿ ಕೇಳಿದ್ರೆ ನೀವೂ ಶಾಕ್ ಆಗ್ತೀರಾ. ಹೌದು, ಸಾಮಾನ್ಯವಾಗಿ ಒಂದು ಮದುವೆಯಾಗಿ ಸಂಸಾರ ನಡೆಸೋದೆ ಕಷ್ಟ ಇರೋ ಈ ಕಾಲದಲ್ಲಿ ಇಲ್ಲೊಬ್ಬ ಖತರ್ನಾಕ್ ಲೇಡಿ ಬರೋಬ್ಬರಿ 8 ಮದುವೆಯಾಗಿದ್ದಾಳೆ. ಅಲ್ಲದೇ ಇನ್ನೇನು 9ನೇ ಮದುವೆ ಆಗಬೇಕು ಅನ್ನುವಷ್ಟರಲ್ಲಿ ಸಿಕ್ಕಿಬಿದ್ದಿದ್ದಾಳೆ.
ಇದನ್ನೂ ಓದಿ:ಧರ್ಮಸ್ಥಳ ಪ್ರಕರಣದ ತನಿಖೆಗೆ ಮೇಜರ್ ಟ್ವಿಸ್ಟ್.. ಪಾಯಿಂಟ್ 1ರಲ್ಲಿ ಸಿಕ್ಕ ಡೆಬಿಟ್ ಕಾರ್ಡ್ ರಹಸ್ಯ ಬಯಲು..!
ಮಹಾರಾಷ್ಟ್ರದ ನಾಗ್ಪುರದಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಒಬ್ಬರಲ್ಲಾ, ಇಬ್ಬರಲ್ಲ ಬರೋಬ್ಬರಿ ಎಂಟು ಪುರುಷರನ್ನು ಒಂದಾದ ಮೇಲೆ ಒಂದರಂತೆ ಮದುವೆಯಾಗಿ ಪಂಗನಾಮ ಹಾಕಿದ್ದಾಳೆ ಈ ಕಿಲಾಡಿ ಮಹಿಳೆ. ಮದುವೆ ಆಗೋದಲ್ಲದೇ ಲಕ್ಷಾಂತರ ರೂಪಾಯಿಗಳನ್ನು ಸುಲಿಗೆ ಮಾಡಿದ್ದ 'ಲೂಟೇರಿ ದುಲ್ಹನ್' (ವಧು)ಯನ್ನು ಪೊಲೀಸರು ಬಂಧಿಸಿದ್ದಾರೆ.
ಅಧಿಕಾರಿಗಳ ಪ್ರಕಾರ, ಆರೋಪಿ ಸಮೀರಾ ಫಾತಿಮಾ ಅವರನ್ನು ಬಂಧಿಸಿದಾಗ, ಅವರು ತಮ್ಮ ಮುಂದೆ ಯಾರನ್ನು ಮದುವೆ ಆಗ್ಲಿ ಅಂತ ಹುಡುಕುತ್ತಿದ್ದರು. 9ನೇ ಪುರಷನನ್ನು ಭೇಟಿಯಾಗುತ್ತಿದ್ದಾಗ ಈಕೆ ಸಿಕ್ಕಿಬಿದ್ದಿದ್ದಾಳೆ. ಪೊಲೀಸರ ಆರಂಭಿಕ ತನಿಖೆಯಲ್ಲಿ ಆರೋಪಿ ವಧು ತನ್ನ ಗಂಡಂದಿರನ್ನು ಬ್ಲಾಕ್ ಮೇಲ್ ಮಾಡಿ ಹಣ ಸುಲಿಗೆ ಮಾಡುತ್ತಿದ್ದಳು ಎಂದು ತಿಳಿದುಬಂದಿದೆ. ಸದ್ಯ ಸಮೀರಾ ಫಾತಿಮಾ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ತನಿಖೆಯಲ್ಲಿ ಸಮೀರಾ ಫಾತಿಮಾ ತನ್ನ ಬೇರೆ ಬೇರೆ ಗಂಡಂದಿರಿಂದ ಹಣ ಸುಲಿಗೆ ಮಾಡಲು ಒಂದು ಗ್ಯಾಂಗ್ ಜೊತೆ ಕೆಲಸ ಮಾಡುತ್ತಿದ್ದಳು ಎಂದು ತಿಳಿದುಬಂದಿದೆ. ಆರೋಪಿ ಸಮೀರಾ ವಿದ್ಯಾವಂತಳಾಗಿದ್ದು, ವೃತ್ತಿಯಲ್ಲಿ ಶಿಕ್ಷಕಿ ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ.
ಇದನ್ನೂ ಓದಿ: 52 ದಿನ.. ತನ್ನ ಮಾಲೀಕನ ಹುಡುಕಿ ದೆಹಲಿಯಿಂದ ಮಂಡ್ಯಕ್ಕೆ ಹಾರಿ ಬಂತು ವಿಶೇಷ ಪಾರಿವಾಳ
ಕಳೆದ 15 ವರ್ಷಗಳಿಂದ ಆಕೆ ಹಲವಾರು ಪುರುಷರನ್ನು ವಂಚಿಸಿದ್ದಾಳೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ವಿಶೇಷವಾಗಿ ಮುಸ್ಲಿಂ ಸಮುದಾಯದ ಶ್ರೀಮಂತ, ವಿವಾಹಿತ ಪುರುಷರನ್ನು ಗುರಿಯಾಗಿಸಿಕೊಂಡು ಈ ವಂಚನೆ ಮಾಡಲಾಗಿದೆ. ಆಕೆಯ ಗಂಡನೊಬ್ಬ ಸಂತ್ರಸ್ತೆಯೊಬ್ಬಳಿಂದ 50 ಲಕ್ಷ ರೂಪಾಯಿ ಮತ್ತು ಇನ್ನೊಬ್ಬರಿಂದ 15 ಲಕ್ಷ ರೂಪಾಯಿಗಳನ್ನು ನಗದು ಮತ್ತು ಬ್ಯಾಂಕ್ ವರ್ಗಾವಣೆಯ ಮೂಲಕ ಸುಲಿಗೆ ಮಾಡಿದ್ದಾಳೆ ಎಂದು ಆರೋಪಿಸಿದ್ದಾರೆ. ರಿಸರ್ವ್ ಬ್ಯಾಂಕಿನ ಹಿರಿಯ ಅಧಿಕಾರಿಗಳೊಂದಿಗೆ ಅವರು ಅದೇ ರೀತಿ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ