Advertisment

ಅಮೇಜಾನ್​ ಕಂಪನಿಯಿಂದ 14 ಸಾವಿರ ಮಂದಿ ಉದ್ಯೋಗಿಗಳಿಗೆ ಗೇಟ್​ಪಾಸ್​.. ಅಸಲಿ ಕಾರಣ ಬಿಚ್ಚಿಟ್ಟ ಸಿಇಒ ಆ್ಯಂಡಿ ಜೆಸ್ಸಿ

ನಾವು ಕೆಲವು ದಿನಗಳ ಹಿಂದೆ ಉದ್ಯೋಗ ಕಡಿತ ಘೋಷಿಸಿದ್ದೇವೆ. ಇದರ ಹಿಂದೆ ಯಾವುದೇ ಆರ್ಥಿಕ ವಿಚಾರವಾಗಲಿ, ಎಐ ವಿಚಾರವಾಗಲಿ ಇಲ್ಲ. ಇದು ಕಂಪ್ಲೀಟ್​ ಆಗಿ ಸ್ಕಿಲ್ಸ್​​ ಮತ್ತು ಇನೋವೇಷನ್​​ಗೆ ಸಂಬಂಧಪಟ್ಟಿದ್ದು ಎಂದರು.

author-image
Ganesh Nachikethu
Andy Jassy
Advertisment

ವಿಶ್ವದ ಅತಿದೊಡ್ಡ ಇ-ಕಾಮರ್ಸ್ ಸಂಸ್ಥೆ ಅಮೇಜಾನ್​. ಈ ಅಮೇಜಾನ್ ಸಂಸ್ಥೆಯೂ ​​​ಬರೋಬ್ಬರಿ 14,000 ಕಾರ್ಪೊರೇಟ್ ಉದ್ಯೋಗಿಗಳನ್ನು ವಜಾಗೊಳಿಸಿದೆ. ಇದಕ್ಕೆ ಮುಖ್ಯ ಕಾರಣ ಎಐ ಅನ್ನೋ ಮಾಗುಗಳು ಕೇಳಿ ಬಂದಿದ್ದವು. ಈ ಬೆನ್ನಲ್ಲೇ ಎಚ್ಚೆತ್ತ ಅಮೇಜಾನ್​​ ಕಂಪನಿ ಸಿಇಒ ಆ್ಯಂಡಿ ಜೆಸ್ಸಿ ಇತ್ತೀಚಿನ ಲೇ ಆಫ್​ ನಿರ್ಧಾರಕ್ಕೆ AI ಆಗಲಿ ಅಥವಾ ವೆಚ್ಚ ಕಡಿಮೆ ಮಾಡೋ ಉದ್ದೇಶ ಆಗಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Advertisment

ಅಮೇಜಾನ್​​ ಕಂಪನಿ ಸಿಇಒ ಆ್ಯಂಡಿ ಜೆಸ್ಸಿ ಹೇಳಿದ್ದೇನು?

ನಾವು ಕೆಲವು ದಿನಗಳ ಹಿಂದೆ ಉದ್ಯೋಗ ಕಡಿತ ಘೋಷಿಸಿದ್ದೇವೆ. ಇದರ ಹಿಂದೆ ಯಾವುದೇ ಆರ್ಥಿಕ ವಿಚಾರವಾಗಲಿ, ಎಐ ವಿಚಾರವಾಗಲಿ ಇಲ್ಲ. ಇದು ಕಂಪ್ಲೀಟ್​ ಆಗಿ ಸ್ಕಿಲ್ಸ್​​ ಮತ್ತು ಇನೋವೇಷನ್​​ಗೆ ಸಂಬಂಧಪಟ್ಟಿದ್ದು ಎಂದರು.

ಅಮೆಜಾನ್ ಕಂಪನಿ ದಿನೇ ದಿನೇ ಬೆಳೆಯುತ್ತಾ ದೊಡ್ಡದಾಗುತ್ತಿದೆ. ಇದರಿಂದ ನಿರ್ಧಾರ ಪ್ರಕ್ರಿಯೆಗಳು ವಿಳಂಬವಾಗುವ ಮತ್ತು ಅಧಿಕಾರಿ ಪ್ರಭಾವ ಹೆಚ್ಚಾಗುವ ಅಪಾಯ ಇದೆ. ಅದನ್ನು ತಪ್ಪಿಸಲು ಈ ಕ್ರಮ ಅಗತ್ಯವಾಯಿತು ಎಂದರು. 

ಸದ್ಯ ಅಮೆಜಾನ್​ನಲ್ಲಿ ಒಟ್ಟು 1.55 ಮಿಲಿಯನ್ (1,550,000)​ ಉದ್ಯೋಗಿಗಳು ಇದ್ದಾರೆ. ಕಾರ್ಪೋರೆಟ್ ಉದ್ಯೋಗಿಗಳಿಗೆ ಹೋಲಿಸಿದರೆ ಶೇಕಡಾ 10ರಷ್ಟು ಮಾತ್ರ ಅಮೆಜಾನ್ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕುತ್ತಿದೆ. ಅಮೆಜಾನ್ ಕಂಪನಿಯಲ್ಲಿ ಈ ಬಾರಿ ಒಟ್ಟು 14 ಸಾವಿರ ಮಂದಿಗೆ ಗೇಟ್​ ಪಾಸ್ ನೀಡಲಾಗುತ್ತಿದೆ. 2022ಕ್ಕೆ ಹೋಲಿಸಿದರೆ ಇದು ಅತ್ಯಂತ ದೊಡ್ಡ ಉದ್ಯೋಗ ಕಡಿತವಾಗಿದೆ. 

Advertisment

ಕಳೆದ ಎರಡು ವರ್ಷಗಳಿಂದ ಅಮೆಜಾನ್ ಕಮ್ಯುನಿಕೇಶನ್ ಮತ್ತು ಪಾಡ್​ಕಾಸ್ಟಿಂಗ್​ನಲ್ಲಿ ಸಣ್ಣ ಉದ್ಯೋಗಗಳನ್ನು ಕಡಿತ ಮಾಡುತ್ತ ಬರುತ್ತಿದೆ. ಕಂಪನಿ ಈ ವಾರದಿಂದ ಉದ್ಯೋಗಗಳನ್ನು ಕಡಿತ ಮಾಡುತ್ತಿದ್ದು, ಇದರಲ್ಲಿ ಹೆಚ್​ಆರ್​ (Human Resources), People Experience ಮತ್ತು  Technology ಡಿಪಾರ್ಟ್​ಮೆಂಟ್​ನವರು ಹೆಚ್ಚು ಇದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ: 51 ಸಾವಿರ ಮಂದಿಗೆ ಕೇಂದ್ರ ಸರ್ಕಾರಿ ಉದ್ಯೋಗ.. ಪ್ರಧಾನಿ ಮೋದಿಯಿಂದಲೇ ನೇಮಕಾತಿ ಪತ್ರ ವಿತರಣೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Layoff CEO Andy Jassy Amazon
Advertisment
Advertisment
Advertisment