BREAKING.. ಇಂದು ಮಧ್ಯಾಹ್ನ 2.45ಕ್ಕೆ ಅಪರಾಧಿ ಪ್ರಜ್ವಲ್ ರೇವಣ್ಣಗೆ ಶಿಕ್ಷೆ ಪ್ರಕಟ

ಮನೆಗೆಲಸದ ಮಹಿಳೆ ಮೇಲಿನ ಅ*ತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ಅಪರಾಧಿ ಎಂದು ನಿನ್ನೆ ಬೆಂಗಳೂರಿನ ಜನಪ್ರತಿನಿಧಿ ನ್ಯಾಯಾಲಯವು ತೀರ್ಪು ನೀಡಿತ್ತು. ಇದೀಗ ಇಂದು ಮಧ್ಯಾಹ್ನ 2.45ಕ್ಕೆ ಅಪರಾಧಿ ಪ್ರಜ್ವಲ್ ರೇವಣ್ಣಗೆ ಶಿಕ್ಷೆ ಪ್ರಕಟ ಆಗಲಿದೆ.

author-image
Veenashree Gangani
Prajwal Revanna(4)
Advertisment

    ಮನೆಗೆಲಸದ ಮಹಿಳೆ ಮೇಲಿನ ಅ*ತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ಅಪರಾಧಿ ಎಂದು ಬೆಂಗಳೂರಿನ ಜನಪ್ರತಿನಿಧಿ ನ್ಯಾಯಾಲಯವು ತೀರ್ಪು ನೀಡಿತ್ತು. ಇದೀಗ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಜನಪ್ರತಿನಿಧಿ ನ್ಯಾಯಾಲಯವು ಶಿಕ್ಷೆಯ ಪ್ರಮಾಣದ ಬಗ್ಗೆ ವಾದ ಪ್ರತಿವಾದವನ್ನು ಆಲಿಸಿದೆ. 

    ಇದನ್ನೂ ಓದಿ: 14 ತಿಂಗಳದಿಂದ ಜೈಲುವಾಸ.. ಕುಗ್ಗಿಲ್ಲ, ಕರಗಿಲ್ಲ ಪ್ರಜ್ವಲ್ ರೇವಣ್ಣ ಹೇಗಿದ್ದಾರೆ ನೋಡಿ..!

    prajwal revanna(2)

    ಕನಿಷ್ಟ 10 ವರ್ಷ ಜೈಲು ಶಿಕ್ಷೆ ನೀಡಬೇಕು, ಗರಿಷ್ಠ ಜೀವಾವಧಿ ಶಿಕ್ಷೆ ನೀಡಬೇಕು ಬೇಕು ಅಂತ ಪ್ರಾಸಿಕ್ಯೂಷನ್ ಮನವಿ ಮಾಡಿಕೊಂಡಿದೆ. ಇನ್ನೂ, ಪ್ರಜ್ವಲ್​ ರೇವಣ್ಣ ಅಳುತ್ತಾ, ನಾನು ರೇ*ಪ್​ ಮಾಡಿಲ್ಲ ಅಂತ ಹೇಳಿದ್ದಾರೆ. ಇನ್ನೂ, ಪ್ರಜ್ವಲ್​ ರೇವಣ್ಣ ವಕೀಲೆ ನಳಿನಿ ಮಾಯಾ ಗೌಡ ಕೂಡ ವಾದ ಮಾಡಿದ್ದಾರೆ. ಸದ್ಯ ಜನಪ್ರತಿನಿಧಿ ನ್ಯಾಯಾಲಯವು​ 2.45ಕ್ಕೆ ಶಿಕ್ಷೆ ಮುಂದೂಡಿಕೆ ಮಾಡಿದೆ. 

    ನಿನ್ನೆ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರು ಪ್ರಜ್ವಲ್ ರೇವಣ್ಣ ದೋಷಿ ಎಂದು ತೀರ್ಪು ಪ್ರಕಟಿಸಿದ್ದರು. ತೀರ್ಪು ಹೊರ ಬಿಳುತ್ತಿದ್ದಂತೆಯೇ ಮಾಜಿ ಸಂಸದ ಕೋರ್ಟ್ ಹಾಲ್​​ನಲ್ಲಿಯೇ ಕಣ್ಣೀರು ಇಟ್ಟಿದ್ದರು. 

    Prajwal Revanna

    ಪ್ರಜ್ವಲ್ ರೇವಣ್ಣ ವಿರುದ್ಧ ಒಟ್ಟು ನಾಲ್ಕು ಪ್ರಕರಣಗಳು ದಾಖಲಾಗಿವೆ. ಅದರಲ್ಲಿ ಮನೆ ಕೆಲಸದಾಕೆ ನೀಡಿದ ಪ್ರಕರಣದಲ್ಲಿ ಆರೋಪ ಸಾಬೀತಾಗಿ ಇಂದು ಮಧ್ಯಾಹ್ನ 2.24ಕ್ಕೆ ಶಿಕ್ಷೆ ಪ್ರಕಟವಾಗಲಿದೆ. ಸದ್ಯ ಮೂರು ಪ್ರಕರಣಗಳು ವಿಚಾರಣೆಯ ಹಂತದಲ್ಲಿವೆ. 

    ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

    Prajwal Revanna
    Advertisment